ETV Bharat / international

ಟ್ರಂಪ್ ವಿರುದ್ಧ ದೋಷಾರೋಪಣೆ: ಕ್ರಿಮಿನಲ್ ಆರೋಪ ಹೊತ್ತ ಮೊದಲ ಯುಎಸ್ ಮಾಜಿ ಅಧ್ಯಕ್ಷ

ನೀಲಿ ಚಿತ್ರ ತಾರೆಯೊಬ್ಬರಿಗೆ ಹಣ ನೀಡಿದ ಗಂಭೀರ ಆರೋಪದಡಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಮ್ಯಾನ್‌ಹ್ಯಾಟನ್ ಗ್ರ್ಯಾಂಡ್ ಜ್ಯೂರಿ ದೋಷಾರೋಪಣೆ ಮಾಡಿದೆ.

Donald Trump
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್
author img

By

Published : Mar 31, 2023, 8:13 AM IST

ವಾಷಿಂಗ್ಟನ್(ಯುಎಸ್​ಎ): 2016ರ ಅಧ್ಯಕ್ಷೀಯ ಚುನಾವಣೆಗೂ ಮುನ್ನ ನೀಲಿ ತಾರೆಯೊಬ್ಬರಿಗೆ ಮಾಹಿತಿ ಗೌಪ್ಯವಾಗಿಡುವಂತೆ ಸೂಚಿಸಿ ಹಣ ನೀಡಿರುವ ಆರೋಪದ ಮೇಲೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ನ್ಯೂಯಾರ್ಕ್ ಗ್ರ್ಯಾಂಡ್ ಜ್ಯೂರಿ ಗುರುವಾರ ದೋಷಾರೋಪಣೆ ಮಾಡಿದೆ. ಹೀಗಾಗಿ ಡೊನಾಲ್ಡ್ ಟ್ರಂಪ್ ಅಮೆರಿಕ ಇತಿಹಾಸದಲ್ಲಿಯೇ ಕ್ರಿಮಿನಲ್ ಆರೋಪಗಳನ್ನು ಹೊತ್ತ ಮೊದಲ ಮಾಜಿ ಅಧ್ಯಕ್ಷ ಎಂಬ ಅಪಕೀರ್ತಿಗೆ ಪಾತ್ರರಾಗಿದ್ದಾರೆ.

ಗೌಪ್ಯತೆ ಕಾಪಾಡಲು ದುಡ್ಡು: ಮ್ಯಾನ್‌ಹ್ಯಾಟನ್ ಜಿಲ್ಲಾ ವಕೀಲರ ಕಚೇರಿಯಿಂದ ಮೊಹರು ಸಲ್ಲಿಸಿದ ಅಪರಾಧದ ದೋಷಾರೋಪಣೆಯನ್ನು ಮುಂಬರುವ ದಿನಗಳಲ್ಲಿ ಪ್ರಕಟಿಸಲಾಗುವುದು. ವರದಿಗಳ ಪ್ರಕಾರ, ಟ್ರಂಪ್ ಈ ಹಿಂದೆ ಪೋರ್ನ್ ಸ್ಟಾರ್ ಸ್ಟಾರ್ಮಿ ಡೇನಿಯಲ್ ಅವರೊಂದಿಗೆ ಸಂಬಂಧ ಹೊಂದಿದ್ದರು ಎನ್ನಲಾಗಿದೆ. 2016ರ ಚುನಾವಣೆ ವೇಳೆ ಈ ಸಂಬಂಧ ಬಹಿರಂಗಪಡಿಸುವುದನ್ನು ತಡೆಯಲು ಟ್ರಂಪ್ ಆಕೆಗೆ 1,30,000 ಡಾಲರ್ ನೀಡಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ.

ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದಂತೆ, "ಅಲ್ವಿನ್ ಬ್ರಾಗ್ ಮತ್ತು ಅವರ ತನಿಖಾ ತಂಡ ನಟಿ ಸ್ಟಾರ್ಮಿ ಡೇನಿಯಲ್ಸ್‌ಗೆ ಪಾವತಿಸಿದ ಹಣದ ಬಗ್ಗೆ ಪುರಾವೆಗಳನ್ನು ಕೇಳಿತ್ತು. ಆಗ ಟ್ರಂಪ್ ಮಾರ್-ಎ-ಲಾಗೊ, ಅವರ ಫ್ಲೋರಿಡಾ ಮನೆ ಮತ್ತು ಖಾಸಗಿ ಕ್ಲಬ್‌ನಲ್ಲಿದ್ದರು. ಪ್ರಕರಣದಲ್ಲಿ ಟ್ರಂಪ್ ಪರ ವಕೀಲರಾದ ಸುಸಾನ್ ನೆಚೆಲೆಸ್ ಮತ್ತು ಜೋಸೆಫ್ ಟಕೋಪಿನಾ ಹೇಳಿಕೆಯಲ್ಲಿ, "ತಮ್ಮ ಕಕ್ಷಿದಾರನನ್ನು ದೋಷಾರೋಪಣೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಅವರು ಯಾವುದೇ ಅಪರಾಧ ಮಾಡಿಲ್ಲ. ನಾವು ನ್ಯಾಯಾಲಯದಲ್ಲಿ ಈ ರಾಜಕೀಯ ಕಾನೂನು ಕ್ರಮದ ವಿರುದ್ಧ ತೀವ್ರವಾಗಿ ಹೋರಾಡುತ್ತೇವೆ" ಎಂದು ಅವರು ಹೇಳಿದರು.

ಆರೋಪ ನಿರಾಕರಿಸಿದ ಟ್ರಂಪ್: ನೀಲಿತಾರೆ ಡೇನಿಯಲ್ಸ್ ಜತೆಗಿನ ಸಂಬಂಧವನ್ನು ಡೊನಾಲ್ಡ್​ ಟ್ರಂಪ್ ನಿರಾಕರಿಸಿದ್ದಾರೆ. ತನಿಖೆ ಮಾಡುವವರು ರಾಜಕೀಯಪ್ರೇರಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ಮ್ಯಾನ್‌ಹ್ಯಾಟನ್ ಗ್ರ್ಯಾಂಡ್ ಜ್ಯೂರಿಯು ಟ್ರಂಪ್​ ಚುನಾವಣೆಯ ಮೊದಲು ಮಾಡಿದ ಪಾವತಿಗಳಿಗೆ ಸಂಬಂಧಿಸಿದಂತೆ ರಿಪಬ್ಲಿಕನ್‌ನ ಐತಿಹಾಸಿಕ ದೋಷಾರೋಪಣೆಯನ್ನು ಗುರುವಾರ ಶ್ವೇತಭವನಕ್ಕೆ ಕಳುಹಿಸಿದ್ದಾರೆ. ಟ್ರಂಪ್ ಮತ್ತೆ ಅಧಿಕಾರ ಪಡೆಯಲು ಆಶಿಸುತ್ತಿರುವ ಸಂದರ್ಭದಲ್ಲಿ ಇದು ಅವರಿಗೆ ತೊಡಕಾಗಿದೆ.

'ರಾಜಕೀಯ ಕಿರುಕುಳ': ಮ್ಯಾನ್‌ಹ್ಯಾಟನ್ ಜಿಲ್ಲಾ ಅಟಾರ್ನಿ ಆಲ್ವಿನ್ ಬ್ರಾಗ್ ಅವರ ಕಚೇರಿಯು ನ್ಯೂಯಾರ್ಕ್‌ನಲ್ಲಿ ವಿಚಾರಣೆಗಾಗಿ ಗುರುವಾರ ಸಂಜೆ ಟ್ರಂಪ್ ಅವರ ವಕೀಲರನ್ನು ಸಂಪರ್ಕಿಸಿದೆ. ಟ್ರಂಪ್ ಅವರು ದೋಷಾರೋಪಣೆಯನ್ನು "ರಾಜಕೀಯ ಕಿರುಕುಳ ಮತ್ತು ಚುನಾವಣಾ ಹಸ್ತಕ್ಷೇಪ" ಎಂದು ಟೀಕಿಸಿದರು. ಪ್ರಾಸಿಕ್ಯೂಟರ್‌ಗಳು ಮತ್ತು ಅವರ ವಿರೋಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಅವರ ಪ್ರತಿಸ್ಫರ್ಧಿ ಅಧ್ಯಕ್ಷ ಜೋ ಬೈಡನ್‌ಗೆ ಹಿನ್ನೆಡೆಯಾಗುತ್ತದೆ" ಎಂದು ಕಿಡಿಕಾರಿದರು.

ದೋಷಾರೋಪಣೆಗೆ ಒಳಗಾದ ಟ್ರಂಪ್ ಪರ ವಕೀಲರು, "2024ರ ಪ್ರಚಾರವನ್ನು ದಾರಿತಪ್ಪಿಸುವ ಗುರಿ ಹೊಂದಿರುವ ಪ್ರತೀಕಾರವೆಂದು" ಅವರು ಖಂಡಿಸಿದರು. ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಉನ್ನತ ರಿಪಬ್ಲಿಕನ್ ಕೆವಿನ್ ಮೆಕಾರ್ಥಿ, ದೋಷಾರೋಪಣೆಯು ದೇಶವನ್ನು "ಸರಿಪಡಿಸಲಾಗದಂತೆ ಹಾನಿಗೊಳಿಸಿದೆ" ಎಂದು ಹೇಳಿದರು.

ಇದು ಮಾಜಿ ಅಧ್ಯಕ್ಷರ ಮೇಲಿನ ಮೂರು ಪ್ರಮುಖ ತನಿಖೆಗಳಲ್ಲಿ ಮೊದಲನೆಯದು. ಟ್ರಂಪ್ ಅವರು ಜಾರ್ಜಿಯಾದಲ್ಲಿ 2020ರ ಚುನಾವಣೆಗೆ ಸಂಬಂಧಿಸಿದಂತೆ ಮತ್ತು ವಾಷಿಂಗ್ಟನ್‌ನಲ್ಲಿ ಜನವರಿ 6, 2021 ರಂದು ಅಮೆರಿಕ ಸಂಸತ್ ಮೇಲೆ ಟ್ರಂಪ್ ಬೆಂಬಲಿಗರಿಂದ ದಾಳಿ ಬಗ್ಗೆ ಅಪರಾಧ ತನಿಖೆಗಳನ್ನು ಎದುರಿಸುತ್ತಿದ್ದಾರೆ. 2024 ರ ಚುನಾವಣೆಯಲ್ಲಿ ರಿಪಬ್ಲಿಕನ್ ಅಭ್ಯರ್ಥಿಯಾಗಲು ಮುಂಚೂಣಿಯಲ್ಲಿರುವ ಟ್ರಂಪ್, ಎಲ್ಲಾ ತನಿಖೆಗಳನ್ನು ರಾಜಕೀಯ ಕಿರುಕುಳ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಟ್ರಂಪ್‌ರನ್ನು ಬಂಧಿಸಿದ್ರೆ ಚುನಾವಣೆಯಲ್ಲಿ ಅವರಿಗೆ ಪ್ರಚಂಡ ಗೆಲುವು: ಎಲಾನ್ ಮಸ್ಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.