ಪನಾಮ: ವಿಶ್ವದ ಪ್ರಮುಖ ವ್ಯಾಪಾರ ಮಾರ್ಗಗಳಲ್ಲಿ ಒಂದಾದ ಪನಾಮ ಕಾಲುವೆಗೂ ಬರದ ಬಿಸಿ ತಟ್ಟಿದೆ. ಕಳೆದ ವರ್ಷ ಶುರುವಾದ ತೀವ್ರ ಬರಗಾಲವು ಶೇ.36ರಷ್ಟು ಹಡಗು ಸಂಚಾರವನ್ನು ತಗ್ಗಿಸಿದೆ. ಇದರಿಂದ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಆರ್ಥಿಕ ಹೊಡೆತ ಬೀಳಲಿದ್ದು, ಇದನ್ನು ಎದುರಿಸಿ ಬೇಕಾದ ಪರಿಸ್ಥಿತಿಗೆ ಮಧ್ಯ ಅಮೆರಿಕದ ರಾಷ್ಟ್ರ ಸಿದ್ಧವಾಗಿವೆ.
ಬರಗಾಲದಿಂದ ಪನಾಮ ಕಾಲುವೆ ಹಡಗು ಸಂಚಾರದಲ್ಲಿ ಬುಧವಾರ ಮತ್ತಷ್ಟು ತಗ್ಗಿಸಲಾಗಿದೆ. ಕಾಲುವೆ ಅಧಿಕಾರಿಗಳು ಪ್ರಕಾರ, ನೀರಿನ ಮಟ್ಟದ ಕಡಿಮೆಯಾಗಿದ್ದರಿಂದ ಈ ಹಿಂದೆ ಅಂದಾಜು 200 ಮಿಲಿಯನ್ ಡಾಲರ್ನಷ್ಟು ಆರ್ಥಿಕ ಹೊಡೆತ ಬಿದ್ದಿತ್ತು. ಈಗ 2024ರಲ್ಲಿ ಇದರ ಹೊಡೆತವು 500 ಮಿಲಿಯನ್ನಿಂದ 700 ಮಿಲಿಯನ್ ಡಾಲರ್ಗೂ ತಲುಪಲಿದೆ.
ತೀವ್ರವಾದ ಬರಗಾಲವು 50 ಮೈಲಿ ಕಡಲ ಮಾರ್ಗದಲ್ಲಿ ಅಸ್ತವ್ಯಸ್ತತೆ ಉಂಟುಮಾಡಿದೆ. ದೋಣಿಗಳ ದಟ್ಟನೆಗೂ ಕಾರಣವಾಗುತ್ತಿದೆ. ಅಲ್ಲದೇ, ಅಂತಾರಾಷ್ಟ್ರೀಯ ಹಡಗು ಸಾಗಣೆಗೆ ಈ ಕಾಲುವೆಯ ವಿಶ್ವಾಸಾರ್ಹತೆಯ ಮೇಲೆಯೇ ಅನುಮಾನಗಳನ್ನು ಹುಟ್ಟು ಹಾಕಿದೆ. ಜಾಗತಿಕ ವ್ಯಾಪಾರದ ಮೇಲೆ ಅದರ ಪ್ರಭಾವದ ಬಗ್ಗೆ ಕಳವಳವನ್ನೂ ಹಚ್ಚಿಸಿದೆ.
ಪನಾಮ ಕಾಲುವೆ ನಿರ್ವಾಹಕರಾದ ರಿಕೌರ್ಟೆ ವಾಸ್ಕ್ವೆಜ್ ಬುಧವಾರ, ದೈನಂದಿನ ಹಡಗು ಸಂಚಾರದಲ್ಲಿ 24ಕ್ಕೆ ಕಡಿತಗೊಳಿಸುವುದಾಗಿ ಹೇಳಿದ್ದರು. ಈಗಾಗಲೇ ಕಳೆದ ವರ್ಷ ಸಾಮಾನ್ಯ ಸಮಯದಲ್ಲಿ ದಿನಕ್ಕೆ 38 ಹಡಗು ಕ್ರಾಸಿಂಗ್‌ಗಳನ್ನು ಕಡಿಮೆ ಮಾಡಲಾಗಿತ್ತು. ಈ ನಿರ್ಧಾರದ ಮೂಲಕ ನೀರಿನ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲಿದ್ದೇವೆ ಎಂಬ ಸಂದೇಶವನ್ನು ದೇಶವು ಕಳುಹಿಸುವುದು ಅತ್ಯಗತ್ಯ ಎಂದು ತಿಳಿಸಿದ್ದಾರೆ.
ಹಣಕಾಸಿನ ವರ್ಷದ ಮೊದಲ ತ್ರೈಮಾಸಿಕದಲ್ಲಿ ಮಾರ್ಗವು ಹಿಂದಿನ ವರ್ಷದ ಅದೇ ಅವಧಿಗಿಂತ ಶೇ.20ರಷ್ಟು ಕಡಿಮೆ ಸರಕುಗಳು ಮತ್ತು 791 ಹಡಗುಗಳ ಸಂಚಾರದಲ್ಲಿ ಕಡಿಮೆಯಾಗಿದೆ. ಇದು ದೇಶದ ಕಡಲ ಸಂಚಾರದಲ್ಲಿ ಗಮನಾರ್ಹ ಕಡಿತ. ಆದರೆ, ಹೆಚ್ಚು ದಕ್ಷತೆಯ ನೀರಿನ ನಿರ್ವಹಣೆ ಮತ್ತು ನವೆಂಬರ್‌ನಲ್ಲಿ ಹೆಚ್ಚಿದ ಮಳೆಯು ಮುಂದಿನ ಮಳೆಗಾಲದ ಆರಂಭದ ಏಪ್ರಿಲ್ ಅಂತ್ಯದವರೆಗೆ ಪ್ರತಿದಿನ 24 ಹಡಗುಗಳು ಹಾದುಹೋಗುವಷ್ಟು ನೀರಿನ ಮಟ್ಟವು ಹೆಚ್ಚಿರುವುದನ್ನು ಖಚಿತಪಡಿಸಿಕೊಳ್ಳಲು ಅನುವು ಮಾಡಿಕೊಟ್ಟಿದೆ ಎಂದು ಅವರು ಇದೇ ವೇಳೆ ವಿವರಿಸಿದ್ದಾರೆ.
ಈ ಬರ ಪರಿಸ್ಥಿತಿಕ್ಕೆ 'ಇಎಲ್ ನಿನೊ' (ಪಶ್ಚಿಮ ಪೆಸಿಫಿಕ್‌ನಲ್ಲಿ ಹೆಚ್ಚಿನ ಗಾಳಿಯ ಒತ್ತಡ ಮತ್ತು ಪೂರ್ವ ಪೆಸಿಫಿಕ್‌ನಲ್ಲಿ ಕಡಿಮೆ ಗಾಳಿಯ ಒತ್ತಡ) ಹವಾಮಾನ ವಿದ್ಯಮಾನ ಮತ್ತು ಹವಾಮಾನ ಬದಲಾವಣೆಗೆ ಕಾರಣವೆಂದು ಪನಾಮ ಕಾಲುವೆ ಅಧಿಕಾರಿ ತಿಳಿಸಿದ್ದಾರೆ. ಇದು ಕಾಲುವೆಯ ಕಾರ್ಯಾಚರಣೆಗಳು ಮತ್ತು ಮಾನವ ಬಳಕೆ ಎರಡಕ್ಕೂ ಹೊಸ ನೀರಿನ ಮೂಲಗಳನ್ನು ಹುಡುಕುವುದು ಪನಾಮಕ್ಕೆ ತುರ್ತು ಎಚ್ಚರಿಕೆಯ ಸಂದೇಶವಾಗಿದೆ.
ಪನಾಮ ಕಾಲುವೆಗೆ ನೀರು ತುಂಬಿಸುವ ಸರೋವರಗಳೇ 4 ದಶಲಕ್ಷಕ್ಕೂ ಹೆಚ್ಚು ಜನರಿರುವ ದೇಶದ ಶೇ.50ಕ್ಕಿಂತ ಹೆಚ್ಚು ಜನರಿಗೆ ನೀರನ್ನು ಒದಗಿಸುತ್ತವೆ. ಹೀಗಾಗಿ ನೀರಿನ ಸಮಸ್ಯೆಯು ಕಾಲುವೆಗೆ ಅಷ್ಟೇ ಅಲ್ಲ, ರಾಷ್ಟ್ರೀಯ ಸಮಸ್ಯೆಯಾಗಿದೆ. ನಾವು ಇಡೀ ದೇಶಾದ್ಯಂತ ಈ ಸಮಸ್ಯೆಯನ್ನು ಪರಿಹರಿಸಬೇಕಾಗಿದೆ ಎಂದು ವಾಸ್ಕ್ವೆಜ್ ಹೇಳಿದ್ದಾರೆ.
ಇದನ್ನೂ ಓದಿ: ಚೀನಾದಲ್ಲಿನ ಕಾರ್ಖಾನೆಯನ್ನು $221 ಮಿಲಿಯನ್ಗೆ ಮಾರಾಟ ಮಾಡಿದ ಹ್ಯುಂಡೈ