ETV Bharat / international

Sudan War: ಒಮಡ್ರುಮನ್​ ನಗರದ ಮೇಲೆ ವೈಮಾನಿಕ ದಾಳಿ; 22 ಜನರು ಸಾವು - ಸುಡಾನ್​ನಲ್ಲಿ ಸಶಸ್ತ್ರ ಸಂಘರ್ಷಣೆ

ಸುಡಾನ್​ನಲ್ಲಿ ಸಶಸ್ತ್ರ ಸಂಘರ್ಷ ಮುಂದುವರೆದಿದ್ದು, ಭೀಕರ ದಾಳಿಯಲ್ಲಿ 22 ಜನರು ಮೃತಪಟ್ಟಿದ್ದಾರೆ.

ಸುಡಾನ್​ನಲ್ಲಿ ಸಶಸ್ತ್ರ ಸಂಘರ್ಷ
ಸುಡಾನ್​ನಲ್ಲಿ ಸಶಸ್ತ್ರ ಸಂಘರ್ಷ
author img

By

Published : Jul 9, 2023, 2:14 PM IST

ಖಾರ್ಟೌಮ್(ಸುಡಾನ್​): ರಾಜಧಾನಿ ಖಾರ್ಟೂಮ್‌ನ ವಿವಿಧ ಪ್ರದೇಶಗಳಲ್ಲಿ ಹೋರಾಟನಿರತ ಸುಡಾನ್ ಸಶಸ್ತ್ರ ಪಡೆಗಳು (ಎಸ್‌ಎಎಫ್) ಮತ್ತು ಅರೆಸೇನಾ ಕ್ಷಿಪ್ರ ಬೆಂಬಲ ಪಡೆಗಳ (ಆರ್‌ಎಸ್‌ಎಫ್) ನಡುವೆ ಹಿಂಸಾತ್ಮಕ ಘರ್ಷಣೆಗಳು ಮುಂದುವರಿದಿವೆ. ಒಮಡ್ರುಮನ್​ ನಗರದ ಮೇಲೆ ವೈಮಾನಿಕ ದಾಳಿ ನಡೆದಿದ್ದು, ಕನಿಷ್ಠ 22 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಆರೋಗ್ಯ ಸಚಿವಾಲಯದ ಹೇಳಿಕೆಯ ಪ್ರಕಾರ, ಒಮಡ್ರುಮನ್​ ನಗರದ ವಸತಿ ಪ್ರದೇಶದಲ್ಲಿ ಶನಿವಾರ ದಾಳಿ ನಡೆದಿದೆ. ದಾಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಗಾಯಗೊಂಡಿದ್ದಾರೆ ಎಂದು ತಿಳಿಸಿದೆ.

ಖಾರ್ಟೂಮ್‌ನಲ್ಲಿ ಕಳೆದ ತಿಂಗಳು ನಡೆದ ವೈಮಾನಿಕ ದಾಳಿಯು 5 ಮಕ್ಕಳನ್ನು ಸೇರಿ 17 ಮಂದಿಯ ಜೀವವನ್ನು ಬಲಿ ಪಡೆದಿತ್ತು. ಶನಿವಾರ ನಡೆದ ದಾಳಿಗೆ ಸಂಬಂಧಿಸಿ ಇಬ್ಬರು ಒಮಡ್ರುಮನ್ ನಿವಾಸಿಗಳ ಪ್ರಕಾರ, ದಾಳಿ ನಡೆಸಿದ ದುಷ್ಕರ್ಮಿಗಳನ್ನು ಗುರುತಿಸುವುದು ಕಷ್ಟಕರವಾಗಿತ್ತು. ಈ ಪ್ರದೇಶದಲ್ಲಿ ಆರ್‌ಎಸ್‌ಎಫ್ ಸಿಬ್ಬಂದಿ ಸೇನಾ ವಿಮಾನಗಳಿಂದ ವಾಡಿಕೆಯಂತೆ ದಾಳಿ ನಡೆಸುತ್ತಿದ್ದಾರೆ. ಅರೆಸೈನಿಕ ಗುಂಪು ಡ್ರೋನ್‌ಗಳು ಮತ್ತು ವಿಮಾನ ವಿರೋಧಿ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ಪ್ರತೀಕಾರ ತೀರಿಸಿಕೊಂಡಿದೆ ಎಂದಿದ್ದಾರೆ.

ಆರೋಗ್ಯ ಸಚಿವಾಲಯದಂತೆ, ಏಪ್ರಿಲ್ 15ರಂದು ಪ್ರಾರಂಭವಾದ ಹಿಂಸಾಚಾರದಲ್ಲಿ ಇದುವರೆಗೆ ಒಟ್ಟು 1,133 ಜನರು ಮೃತಪಟ್ಟಿದ್ದಾರೆ. ಸುಮಾರು 2.9 ಮಿಲಿಯನ್ ಜನರು ಸ್ಥಳಾಂತರಗೊಂಡಿದ್ದಾರೆ. ಈ ಪೈಕಿ ಸುಮಾರು 7,00,000 ಜನರು ಹತ್ತಿರದ ರಾಷ್ಟ್ರಗಳಿಗೆ ವಲಸೆ ಹೋಗುತ್ತಿದ್ದಾರೆ.

ಮೊದಲು ಮಿಲಿಟರಿ ಮತ್ತು ಆರ್‌ಎಸ್‌ಎಫ್ ನಡುವೆ ಉದ್ವಿಗ್ನತೆ ಉಂಟಾಗಿದ್ದು ನಂತರ ಸಂಘರ್ಷವು ಭುಗಿಲೆದ್ದಿದೆ. ಕಾದಾಡುತ್ತಿರುವ ಪಕ್ಷಗಳ ನಡುವೆ ಸೌದಿ ಮತ್ತು ಅಮೆರಿಕ ಮಧ್ಯಸ್ಥಿಕೆಯಲ್ಲಿ ಹಲವಾರು ಕದನ ವಿರಾಮ ಒಪ್ಪಂದಗಳು ನಡೆದಿದ್ದು ಹಿಂಸಾಚಾರವನ್ನು ಕೊನೆಗೊಳಿಸಲು ವಿಫಲವಾಗಿವೆ.

ಹೋರಾಟ ಮುಂದುವರಿದಂತೆ ಬಹ್ರಿಯ ನಿವಾಸಿಗಳು ನಿರಂತರ ನೀರಿನ ಕೊರತೆಯಿಂದ ಬಳಲುವಂತಾಗಿದೆ. ದಕ್ಷಿಣ ಖಾರ್ಟೂಮ್​ನಲ್ಲಿ ಆಹಾರದ ಕೊರತೆ ಎದುರಾಗಿದೆ. ಯುಎನ್ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) ಸೋಮವಾರ ನೀಡಿದ ವರದಿಯಲ್ಲಿ, ಪ್ರಸ್ತುತ ಸುಡಾನ್​ನ ಬಿಕ್ಕಟ್ಟು ಈಗಾಗಲೇ ಭೀಕರ ಆಹಾರ ಅಭದ್ರತೆ ಸೃಷ್ಟಿಸಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದಲ್ಲಿ ಆಹಾರ ಕ್ಷಾಮ ಎದುರಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.

ಇದನ್ನೂ ಓದಿ: Sudan War: ಸುಡಾನ್​ನಲ್ಲಿ ಮುಂದುವರಿದ ಸಶಸ್ತ್ರ ಸಂಘರ್ಷ; ಆಹಾರ ಕ್ಷಾಮದ ಭೀತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.