ಕೀವ್ (ಉಕ್ರೇನ್): ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಆರಂಭವಾಗಿ ಒಂದು ವರ್ಷ ಸಮೀಪಿಸುತ್ತಿದ್ದು, ಉಕ್ರೇನ್ ಮೇಲೆ ರಷ್ಯಾದ ದಾಳಿ ಮುಂದುವರೆದಿದೆ. ಇದೀಗ ಹೊಸದಾಗಿ ರಷ್ಯಾ ಕ್ಷಿಪಣಿ ಮತ್ತು ಸ್ವಯಂ ಸ್ಫೋಟಿಸುವ ಡ್ರೋನ್‌ಗಳ ದಾಳಿಯ ಪ್ರಾರಂಭಿಸಿದೆ ಎಂದು ಉಕ್ರೇನ್ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ವೈಮಾನಿಕ ದಾಳಿಯ ಸೈರನ್‌ಗಳು ದೇಶಾದ್ಯಂತ ಮೊಳಗಿವೆ ಎಂದೂ ಹೇಳಲಾಗಿದೆ. ಆದರೆ, ಸದ್ಯಕ್ಕೆ ಸಾವು - ನೋವಿನ ವರದಿಯಾಗಿಲ್ಲ.
-
Kyiv residents in Kyiv subway - it is used as a bomb shelter during air raid alerts. pic.twitter.com/pAaRjnccWG
— Anton Gerashchenko (@Gerashchenko_en) January 26, 2023 " class="align-text-top noRightClick twitterSection" data="
">Kyiv residents in Kyiv subway - it is used as a bomb shelter during air raid alerts. pic.twitter.com/pAaRjnccWG
— Anton Gerashchenko (@Gerashchenko_en) January 26, 2023Kyiv residents in Kyiv subway - it is used as a bomb shelter during air raid alerts. pic.twitter.com/pAaRjnccWG
— Anton Gerashchenko (@Gerashchenko_en) January 26, 2023
ಉಕ್ರೇನ್ಗೆ ಸುಧಾರಿತ ಯುದ್ಧ ಟ್ಯಾಂಕ್‌ಗಳನ್ನು ಕಳುಹಿಸುವುದಾಗಿ ಜರ್ಮನಿ ಮತ್ತು ಅಮೆರಿಕ ಬುಧವಾರವಷ್ಟೇ ಘೋಷಣೆ ಮಾಡಿವೆ. ಇದರ ಬೆನ್ನಲ್ಲೇ ಉಕ್ರೇನ್ ಮೇಲೆ ರಷ್ಯಾ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಮೂಲಕ ಹೊಸ ದಾಳಿ ಶುರು ಮಾಡಿದೆ. ಆದರೆ, ಈ ಕ್ಷಿಪಣಿಗಳು ಮತ್ತು ಡ್ರೋನ್‌ಗಳು ತಮ್ಮ ದಾಳಿಯ ಗುರಿಗಳನ್ನು ಹೊಡೆದುರುಳಿಸಿದ ತಕ್ಷಣಕ್ಕೆ ಯಾವುದೇ ಮಾಹಿತಿ ಹೊರ ಬಿದ್ದಿಲ್ಲ.
ಇದನ್ನೂ ಓದಿ: ಯುದ್ಧದಲ್ಲಿ ಮೃತಪಟ್ಟವರ ಶವಗಳನ್ನ ಉಕ್ರೇನ್ಗೆ ಮರಳಿಸಿದ ರಷ್ಯಾ
ರಷ್ಯಾ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಮೂಲಕ ದಾಳಿ ಆರಂಭವಾಗುತ್ತಿದ್ದಂತೆ ಕೀವ್ ನಿವಾಸಿಗಳು ಸುರಂಗ ಮಾರ್ಗದಲ್ಲಿ ಆಶ್ರಯ ಪಡೆದರು. ಸುರಂಗ ಮಾರ್ಗವನ್ನು ವಾಯು ದಾಳಿ ಸಮಯದಲ್ಲಿ ಬಾಂಬ್ ಆಶ್ರಯವಾಗಿ ಬಳಸಲಾಗುತ್ತದೆ. ಈ ಕುರಿತ ಟ್ವೀಟ್ ಮಾಡಿರುವ ಉಕ್ರೇನ್‌ನ ಆಂತರಿಕ ವ್ಯವಹಾರಗಳ ಸಚಿವರ ಸಲಹೆಗಾರ ಆಂಟನ್ ಗೆರಾಶ್ಚೆಂಕೊ, ಈ ಸುರಂಗ ಮಾರ್ಗದ ಬಳಿಯ ಚಿತ್ರಗಳನ್ನೂ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ರಷ್ಯಾ ಮತ್ತು ಉಕ್ರೇನ್ ಯುದ್ಧದ ಭೀಕರತೆ: 4 ತಿಂಗಳ ಬಳಿಕ ಬಿಡುಗಡೆಯಾದ ಯೋಧನ ಅಂದು, ಇಂದಿನ ಸ್ಥಿತಿ
ಇದೇ ವೇಳೆ, ಝೈಟೊಮಿರ್ ಮತ್ತು ಕೈವ್ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಯು ಪಡೆಯು ಮೂರು ರಷ್ಯಾದ ಕ್ಷಿಪಣಿಗಳನ್ನು ಹೊಡೆದುರುಳಿಸಿದೆ. ಅಲ್ಲದೇ, ಒಟ್ಟಾರೆ ಕೀವ್ ಮೇಲೆ ರಷ್ಯಾ 15 ಕ್ಷಿಪಣಿಗಳನ್ನು ಉಡಾಯಿಸಿತ್ತು. ಈ ಎಲ್ಲ ಕ್ಷಿಪಣಿಗಳನ್ನು ಹೊಡೆದುರುಳಿಸಲಾಯಿತು ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಯ ಅವರ ಮಾಜಿ ವಕ್ತಾರ ಲುಲಿಯಾ ಮೆಂಡೆಲ್ ಸಹ ಟ್ವೀಟ್ ಮಾಡಿದ್ದಾರೆ. ಇಷ್ಟೇ ಅಲ್ಲ, ಇಂದು ನನ್ನ ಪತ್ನಿಗೆ 'ಗುಡ್ ಮಾರ್ನಿಂಗ್' ಬದಲಿಗೆ ರಷ್ಯಾ ಕ್ಯಾಸ್ಪಿಯನ್ ಸಮುದ್ರದಿಂದ ಕ್ರೂಸ್ ಕ್ಷಿಪಣಿಗಳನ್ನು ಉಡಾಯಿಸಿತು ಎಂಬ ಮಾಹಿತಿ ನೀಡಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಉಕ್ರೇನ್ಗೆ ಅಮೆರಿಕ, ಜರ್ಮನಿ ಸಹಾಯ: ರಷ್ಯಾ ಮತ್ತು ಉಕ್ರೇನ್ ಯುದ್ಧವು 2022ರ ಫೆಬ್ರವರಿ 24ರಂದು ಆರಂಭವಾಗಿದ್ದು, ಇದೀಗ 12ನೇ ತಿಂಗಳಿಗೆ ಪ್ರವೇಶಿಸಿದೆ. ಯುದ್ಧದಲ್ಲಿ ಉಕ್ರೇನ್ಗೆ ನೆರವಾಗುವ ನಿಟ್ಟಿನಲ್ಲಿ ಜರ್ಮನಿ ಮತ್ತು ಅಮೆರಿಕ ಸುಧಾರಿತ ಯುದ್ಧ ಟ್ಯಾಂಕ್‌ಗಳನ್ನು ಕಳುಹಿಸುವುದಾಗಿ ಪ್ರಕಟಿಸಿವೆ. ಅಮೆರಿಕ ತನ್ನ 31 ಎಂ1 ಅಬ್ರಾಮ್ಸ್ ಟ್ಯಾಂಕ್‌ಗಳನ್ನು ಕಳುಹಿಸುತ್ತದೆ ಎಂದು ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಅಲ್ಲದೇ, ಎರಡು ಉಕ್ರೇನ್ ಟ್ಯಾಂಕ್ ಬೆಟಾಲಿಯನ್ಗಳು ಅಥವಾ ಒಟ್ಟು 62 ಟ್ಯಾಂಕ್‌ಗಳನ್ನು ಸಜ್ಜುಗೊಳಿಸಲು ಯುರೋಪಿಯನ್ ಮಿತ್ರರಾಷ್ಟ್ರಗಳು ಒಪ್ಪಿಕೊಂಡಿವೆ ಎಂದು ಬೈಡನ್ ತಿಳಿಸಿದ್ದಾರೆ.
ಮತ್ತೊಂದೆಡೆ ಈ ಭಾರೀ ಶಸ್ತ್ರಾಸ್ತ್ರಗಳು ಉಕ್ರೇನಿಯನ್ ಮಿಲಿಟರಿ ಕಮಾಂಡರ್‌ಗಳು ಪ್ರತಿದಾಳಿಗಳನ್ನು ಸಕ್ರಿಯಗೊಳಿಸುತ್ತಿವೆ. ಸಾವು - ನೋವುಗಳನ್ನು ಕಡಿಮೆ ಮಾಡುತ್ತವೆ. ಜೊತೆಗೆ ಕ್ಷೀಣಿಸುತ್ತಿರುವ ಯುದ್ಧ ಸಾಮಗ್ರಿ ಸರಬರಾಜುಗಳನ್ನು ಪುನಃಸ್ಥಾಪಿಸಲು ನೆರವಾಗಲಿವೆ ಎಂದು ಹೇಳಲಾಗುತ್ತಿದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅಮೆರಿಕ ಮತ್ತು ಜರ್ಮನಿಯ ನೆರವನ್ನು ಸ್ವಾಗತಿಸಿದ್ದಾರೆ.
ಇದನ್ನೂ ಓದಿ: ಕೀವ್ ಬಳಿ ಹೆಲಿಕಾಪ್ಟರ್ ಅಪಘಾತ: ಉಕ್ರೇನ್ ಗೃಹ ಸಚಿವರ ಸಾವು