ETV Bharat / international

ರಷ್ಯಾದ Luna-25 ಚಂದ್ರಯಾನ ನೌಕೆಯಲ್ಲಿ ತಾಂತ್ರಿಕ ದೋಷ

author img

By

Published : Aug 20, 2023, 9:12 AM IST

Russia's Luna-25 spacecraft: ರಷ್ಯಾ ಚಂದ್ರನಲ್ಲಿಗೆ ಕಳುಹಿಸಿದ ಬಾಹ್ಯಾಕಾಶ ನೌಕೆ ಲೂನಾ-25 ಲ್ಯಾಂಡಿಂಗ್‌ಪೂರ್ವ ಪ್ರಕ್ರಿಯೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.

Luna 25
ಲೂನಾ -25 ಬಾಹ್ಯಾಕಾಶ ನೌಕೆ

ಮಾಸ್ಕೋ (ರಷ್ಯಾ): ಈ ತಿಂಗಳ ಆರಂಭದಲ್ಲಿ ಉಡಾವಣೆಯಾದ ರಷ್ಯಾದ 'ಲೂನಾ-25' ಎಂಬ ಬಾಹ್ಯಾಕಾಶ ನೌಕೆಯಲ್ಲಿ ಚಂದ್ರನ ಕಕ್ಷೆ ತಲುಪಲು ಸಿದ್ಧತೆ ನಡೆಸುತ್ತಿದ್ದ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡಿದೆ ಎಂದು ರಷ್ಯಾ ಬಾಹ್ಯಾಕಾಶ ಸಂಸ್ಥೆ 'ರೋಸ್ಕೋಸ್ಮಾಸ್' ತಿಳಿಸಿದೆ. ಗಗನ ನೌಕೆಯು ಪೂರ್ವಲ್ಯಾಂಡಿಂಗ್ ಕಕ್ಷೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾಗ ತಾಂತ್ರಿಕ ದೋಷ ಉದ್ಭವಿಸಿತು. ತಜ್ಞರು ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ ಎಂದು ರೋಸ್ಕೋಸ್ಮಾಸ್ ಟೆಲಿಗ್ರಾಮ್ ಪೋಸ್ಟ್​​ನಲ್ಲಿ ಮಾಹಿತಿ ನೀಡಿದೆ.

ಕುತೂಹಲದ ಸಂಗತಿಯೆಂದರೆ, ಜುಲೈ 14ರಂದು ಉಡಾವಣೆಗೊಂಡು ಆಗಸ್ಟ್ 6ರಂದು ಚಂದ್ರನ ಕಕ್ಷೆ ತಲುಪಿದ ಭಾರತದ ಚಂದ್ರಯಾನ-3 ನೌಕೆಯಂತೆ ಲೂನಾ-25 ಅದೇ ಸಮಯದಲ್ಲಿ ಮತ್ತು ಅದೇ ಸಾಮಾನ್ಯ ಪ್ರದೇಶದಲ್ಲಿಯೇ ಇಳಿಯಲಿದೆ ಎಂದು ರಷ್ಯಾ ಹೇಳಿತ್ತು. ಭಾರತೀಯ ಬಾಹ್ಯಾಕಾಶ ನೌಕೆಗೂ ಮುಂಚಿತವಾಗಿಯೇ ರಷ್ಯಾದ ಬಾಹ್ಯಾಕಾಶ ನೌಕೆಯನ್ನು ಸೋಮವಾರ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲು ಸಮಯ ನಿಗದಿಪಡಿಸಲಾಗಿತ್ತು.

ಚಂದ್ರನ ದಕ್ಷಿಣ ಧ್ರುವದಲ್ಲೇನಿದೆ?: ಚಂದ್ರನ ದಕ್ಷಿಣ ಧ್ರುವ ವಿಜ್ಞಾನಿಗಳಿಗೆ ಆಸಕ್ತಿದಾಯಕ ಪ್ರದೇಶ. ಚಂದ್ರನಲ್ಲಿ ಘನೀಕರಣಗೊಂಡಿರುವ ನೀರು ಮತ್ತು ಅಮೂಲ್ಯ ಅಂಶಗಳ ಕುರಿತು ಅನ್ವೇಷಣೆ ನಡೆಸಲು ಉದ್ದೇಶಿಸಲಾಗಿದೆ. ಬಂಡೆಗಳಲ್ಲಿನ ಹೆಪ್ಪುಗಟ್ಟಿದ ನೀರನ್ನು ಭವಿಷ್ಯದ ರಾಕೆಟ್ ಇಂಧನವಾಗಿ ಪರಿವರ್ತಿಸಬಹುದು.

ರೋಸ್ಕೊಸ್ಮೊಸ್ ಬಾಹ್ಯಾಕಾಶ ನೌಕೆಯಿಂದ ತೆಗೆದ ಚಂದ್ರನ ದಕ್ಷಿಣ ಗೋಳಾರ್ಧದಲ್ಲಿರುವ ಮೂರನೇ ಅತಿದೊಡ್ಡ ಝೀಮನ್ ಕುಳಿ ಇರುವ ಚಿತ್ರಗಳನ್ನು ರೋಸ್ಕೋಸ್ಮಾಸ್ ಹಂಚಿಕೊಂಡಿದೆ. ಈ ಕುಳಿಯು 190 ಕಿ.ಮೀ (118 ಮೈಲುಗಳು) ವ್ಯಾಸ ಹೊಂದಿದೆ ಹಾಗೂ 8 ಕಿ.ಮೀ (ಐದು ಮೈಲುಗಳು) ಆಳವಾಗಿದೆ.

ಆ.10ರಂದು ಲೂನಾ-25 ನೌಕೆಯನ್ನು ರಷ್ಯಾದ ವೊಸ್ಟೊಚ್ನಿ ಬಾಹ್ಯಾಕಾಶ ನಿಲ್ದಾಣದಿಂದ ಉಡಾವಣೆ ಮಾಡಲಾಗಿತ್ತು. ಈ ಹಿಂದೆ ಇದ್ದ ಸೋವಿಯತ್ ಒಕ್ಕೂಟದ ಅವಧಿಯಲ್ಲಿ ರಷ್ಯಾದ ಕೊನೆಯ ಚಂದ್ರಯಾನ ಲೂನಾ-24 ಅನ್ನು 1976ರಲ್ಲಿ ಚಂದ್ರನಲ್ಲಿಗೆ ಕಳುಹಿಸಲಾಗಿತ್ತು. ಇದು ಸುಮಾರು 170 ಗ್ರಾಂ ಚಂದ್ರನ ಮಾದರಿಗಳನ್ನು ಸಂಗ್ರಹಿಸಿ ಯಶಸ್ವಿಯಾಗಿ ಭೂಮಿಗೆ ತಲುಪಿಸಿತ್ತು. 47 ವರ್ಷಗಳ ಬಳಿಕ ಆ.10ರಂದು ರಷ್ಯಾ ತನ್ನ ಲೂನಾ-25 ಲ್ಯಾಂಡರ್ ಮಿಷನ್ ಮೂಲಕ ಮತ್ತೆ ಚಂದ್ರನತ್ತ ತೆರಳಿದೆ.

ಈವರೆಗೆ ಕೇವಲ ಮೂರು ದೇಶಗಳು ಮಾತ್ರ ಚಂದ್ರನ ಮೇಲೆ ಯಶಸ್ವಿಯಾಗಿ ತನ್ನ ಬಾಹ್ಯಕಾಶ ನೌಕೆಯನ್ನು ಇಳಿಸಿವೆ. ಅವುಗಳಲ್ಲಿ ಸೋವಿಯತ್​ ಒಕ್ಕೂಟ, ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಮತ್ತು ಚೀನಾ ಸೇರಿವೆ. ಭಾರತ ಮತ್ತು ರಷ್ಯಾ ಚಂದ್ರನ ದಕ್ಷಿಣ ಧ್ರುವದಲ್ಲಿ ಇದೇ ಮೊದಲ ಬಾರಿಗೆ ಬಾಹ್ಯಾಕಾಶ ನೌಕೆ ಇಳಿಸುವ ಮಹೋನ್ನತ ಗುರಿ ಹೊಂದಿವೆ.

ಉಕ್ರೇನ್ ಆಕ್ರಮಣದ ಬಳಿಕ ರಷ್ಯಾ ಮೇಲೆ ವಿಧಿಸಲಾದ ಕಠಿಣ ನಿರ್ಬಂಧಗಳಿಂದಾಗಿ ಪಾಶ್ಚಿಮಾತ್ಯ ತಂತ್ರಜ್ಞಾನ ಪ್ರವೇಶಕ್ಕೆ ಅಡ್ಡಿಯಾಗಿದೆ. ಇದು ಬಾಹ್ಯಾಕಾಶ ಸಂಶೋಧನೆಯ ಮೇಲೆ ಪರಿಣಾಮ ಬೀರುತ್ತಿದೆ. ಲೂನಾ-25 ಮೂಲಕ ಆರಂಭದಲ್ಲಿ ಸಣ್ಣ ಚಂದ್ರನ ರೋವರ್ ಸಾಗಿಸಲು ಉದ್ದೇಶಿಸಲಾಗಿತ್ತು. ಆದರೆ ಸುಧಾರಿತ ವಿಶ್ವಾಸಾರ್ಹತೆಗಾಗಿ ನೌಕೆಯ ತೂಕ ಕಡಿಮೆ ಮಾಡಲು ಆ ಯೋಜನೆಯನ್ನು ಕೈಬಿಡಲಾಯಿತು ಎಂದು ತಿಳಿದುಬಂದಿದೆ.

ಇದನ್ನೂ ಓದಿ: Luna-25: 47 ವರ್ಷದ ಬಳಿಕ ಚಂದ್ರನಲ್ಲಿಗೆ ಹಾರಿದ ರಷ್ಯಾ ನೌಕೆ; ಚಂದ್ರಯಾನ-3 ಜೊತೆಗೇ ಇಳಿಯಬಹುದು ಲ್ಯಾಂಡರ್!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.