ETV Bharat / international

ರಣನೀತಿಯನ್ನೇ ಬದಲಾಯಿಸಿತೇ ರಷ್ಯಾ?: ಪುಟಿನ್ ಮುಂದಿನ ನಡೆ ಏನು? - ರಷ್ಯಾ ಅಧ್ಯಕ್ಷ ಪುಟಿನ್​

ಅಧ್ಯಕ್ಷ ಪುಟಿನ್​ ಉಕ್ರೇನ್​ ಮೇಲಿನ ಮಹತ್ವಾಕಾಂಕ್ಷೆಯನ್ನು ಬದಲಾಯಿಸಿದ್ದಾರೆ ಎನ್ನಲಾಗಿದೆ. 2014 ರಿಂದ ಪ್ರತ್ಯೇಕತಾವಾದಿಗಳ ಕೈಯಲ್ಲಿರುವ ಡಾನ್​ಬಾಸ್​ ಪ್ರದೇಶವನ್ನು ಸ್ವಾಯತ್ತಗೊಳಿಸುವತ್ತ ಚಿತ್ತ ಹರಿಸಿರುವ ರಷ್ಯಾ, ಆ ಕಡೆಯೇ ಗಮನಕೇಂದ್ರೀಕರಿಸಿದೆ.

Russia Ukraine War
ರಣನೀತಿಯನ್ನೇ ಬದಲಾಯಿಸಿತೇ ರಷ್ಯಾ?: ಪುಟಿನ್ ಮುಂದಿನ ನಡೆ ಏನು?
author img

By

Published : Mar 26, 2022, 9:07 AM IST

ಮಾಸ್ಕೋ(ರಷ್ಯಾ): ಉಕ್ರೇನ್​ ಮೇಲೆ ಯುದ್ಧ ಸಾರಿರುವ ರಷ್ಯಾ ಪಡೆಗಳು ಕೀವ್​​​ ವಶಪಡಿಸಿಕೊಳ್ಳುವ ತಮ್ಮ ಲಕ್ಷ್ಯವನ್ನ ತಕ್ಷಣಕ್ಕೆ ಬದಲಿಸಿದ್ದು, ಹೊಸ ಯುದ್ಧ ನೀತಿಯನ್ನು ಹೆಣೆದಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಈ ನಡುವೆ ತನ್ನ ರಣನೀತಿ ಬದಲಿಸಿರುವ ರಷ್ಯಾ ಡಾನ್​ಬಾಸ್​ ಪ್ರದೇಶವನ್ನು ವಿಮೋಚನೆ ಮಾಡುವ ಗುರಿ ಹೊಂದಿದ್ದು, ಅಲ್ಲಿ ದಾಳಿಯನ್ನು ತೀವ್ರಗೊಳಿಸಿದೆ.

ಈ ನಡುವೆ ಆಶ್ಚರ್ಯಕರ ರೀತಿಯಲ್ಲಿ ತನ್ನ ನಡೆಯನ್ನು ಬದಲಾಯಿಸಿಕೊಂಡಿದೆ. ಉಕ್ರೇನ್​​ ಸೈನಿಕರ ಪ್ರತಿರೋಧ ರಷ್ಯಾ ಪಡೆಗಳ ಮಂದಗತಿಯ ಕಾರ್ಯಾಚರಣೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಪುಟಿನ್​ ಉಕ್ರೇನ್​ ಮೇಲಿನ ಮಹತ್ವಾಕಾಂಕ್ಷೆಯನ್ನು ಬದಲಾಯಿಸಿದ್ದಾರೆ ಎನ್ನಲಾಗಿದೆ. 2014 ರಿಂದ ಪ್ರತ್ಯೇಕತಾವಾದಿಗಳ ಕೈಯಲ್ಲಿರುವ ಡಾನ್​ಬಾಸ್​ ಪ್ರದೇಶವನ್ನು ಸ್ವಾಯತ್ತಗೊಳಿಸುವತ್ತ ಚಿತ್ತ ಹರಿಸಿರುವ ರಷ್ಯಾ, ಆ ಕಡೆ ಹೆಚ್ಚಿನ ಗಮನಕೊಡುತ್ತಿದೆ.

ಈ ನಡುವೆ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾಕ್ಕೆ ಯುದ್ಧ ನಿಲ್ಲಿಸುವಂತೆ ಮನವಿ ಮಾಡಿದ್ದು, ಮತ್ತೊಮ್ಮೆ ಮಾತುಕತೆಗೆ ಆಹ್ವಾನ ನೀಡಿದ್ದಾರೆ. ಮತ್ತೊಂದೆಡೆ ಉಕ್ರೇನ್​​​​​​​ಗೆ ಅಮೆರಿಕ, ಇಂಗ್ಲೆಂಡ್​- ಫ್ರಾನ್ಸ್ ಸೇರಿದಂತೆ ಇತರ ರಾಷ್ಟ್ರಗಳು ಶಸ್ತ್ರಾಸ್ತ್ರ ಸರಬರಾಜನ್ನು ಹೆಚ್ಚಿಸಿವೆ.

ರಷ್ಯಾ-ಉಕ್ರೇನ್ ಯುದ್ಧದ ಪ್ರಮುಖ ಬೆಳವಣಿಗೆಗಳು

  • ಉಕ್ರೇನಿಯನ್ ವೈದ್ಯಕೀಯ ಸೌಲಭ್ಯಗಳ ಮೇಲೆ ರಷ್ಯಾದ ಪಡೆಗಳು ಕನಿಷ್ಠ 34 ದಾಳಿಗಳನ್ನು ಮಾಡಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ
  • ಅಮೆರಿಕ ಅಧ್ಯಕ್ಷ ಜೋ ಬೈಡನ್​ ಪೋಲೆಂಡ್‌ನಲ್ಲಿರುವ ಅಮೆರಿಕನ್​ ಪಡೆಗಳನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು
  • ಮರಿಯುಪೋಲ್​​ ಥಿಯೇಟರ್​​ ಮೇಲೆ ರಷ್ಯಾ ನಡೆಸಿದ ವೈಮಾನಿಕ ದಾಳಿಯಲ್ಲಿ 300 ಮೃತಪಟ್ಟಿದ್ದಾರೆ ಎಂದು ಉಕ್ರೇನ್​ ಹೇಳಿದೆ
  • ಹಲವು ರಷ್ಯನ್​ ಉದ್ಯೋಗಿಗಳು ಕೆಲಸ ಬಿಟ್ಟಿದ್ದು, ಉಕ್ರೇನ್ ಮೇಲಿನ ದಾಳಿ ಬೆಂಬಲಿಸಲು ನಿರಾಕರಿಸಿದ್ದಾರೆ
  • ರಷ್ಯಾದ ಶಕ್ತಿ ಬಲ ಹೀನಗೊಳಿಸಲು ಅಮೆರಿಕ- ಐರೋಪ್ಯ ಒಕ್ಕೂಟಗಳು ನಿರ್ಧರಿಸಿವೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.