ETV Bharat / international

ರಷ್ಯಾ-ಉಕ್ರೇನ್ ಮಧ್ಯೆ ಶಾಂತಿ ಸಂಧಾನ: ಭಾರತದತ್ತ ಜಗತ್ತಿನ ಚಿತ್ತ! - ಏರುತ್ತಿರುವ ಇಂಧನ ಬೆಲೆಗಳು

ರಷ್ಯಾ ಮತ್ತು ಉಕ್ರೇನ್ ತಟಸ್ಥ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ಹೊಂದಲು ಆಸಕ್ತಿ ವ್ಯಕ್ತಪಡಿಸಿದರೆ, ಭಾರತವು ಎರಡೂ ಕಡೆಗಳಲ್ಲಿ ವಿಶ್ವಾಸಾರ್ಹತೆಯೊಂದಿಗೆ ಪ್ರಬಲ ಸಂಧಾನಕಾರನಾಗಲಿದೆ ಎಂದು ದಿ ಹೆರಿಟೇಜ್‌ನಲ್ಲಿರುವ ಏಷ್ಯನ್ ಸ್ಟಡೀಸ್ ಸೆಂಟರ್‌ನ ನಿರ್ದೇಶಕರಾಗಿರುವ ಜೆಫ್ ಎಂ. ಸ್ಮಿತ್ ಹೇಳಿದ್ದಾರೆ.

ರಷ್ಯಾ-ಉಕ್ರೇನ್ ಮಧ್ಯೆ ಶಾಂತಿ ಸಂಧಾನ: ಭಾರತದತ್ತ ಜಗತ್ತಿನ ಚಿತ್ತ!
Experts looking at Indias possible role in brokering peace between Russia and Ukraine
author img

By

Published : Nov 7, 2022, 11:58 AM IST

ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಈ ವಾರ ಮಾಸ್ಕೋಗೆ ಭೇಟಿ ನೀಡಲಿದ್ದು, ರಷ್ಯಾ ಮತ್ತು ಉಕ್ರೇನ್ ನಡುವೆ ಶಾಂತಿ ಸ್ಥಾಪನೆಗಾಗಿ ಒತ್ತಡ ಹೇರುವಲ್ಲಿ ಭಾರತದ ಸಂಭವನೀಯ ಪಾತ್ರವನ್ನು ಹಲವಾರು ರಾಜತಾಂತ್ರಿಕರು ಮತ್ತು ವಿದೇಶಾಂಗ ನೀತಿ ತಜ್ಞರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಸಮಯ ಬಂದಾಗ ಭಾರತವು ಶಾಂತಿ ಸ್ಥಾಪನೆಯ ಪ್ರಯತ್ನಗಳಲ್ಲಿ ಯಾವ ಪಾತ್ರ ವಹಿಸುತ್ತದೆ ಎಂಬುದರ ಕುರಿತು ಭಾರತ ಸರ್ಕಾರದೊಳಗಿನ ಅಧಿಕಾರಿಗಳು ಈಗಾಗಲೇ ಚರ್ಚಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಯುದ್ಧಭೂಮಿಯಲ್ಲಿ ತಾನು ಮೇಲುಗೈ ಹೊಂದಿರುವುದಾಗಿ ಉಕ್ರೇನ್ ಭಾವಿಸಿದೆ. ಮತ್ತೊಂದೆಡೆ, ರಷ್ಯಾ ಕೂಡ ಉಕ್ರೇನ್​ನೊಂದಿಗೆ ಮಾತನಾಡುವ ಯಾವುದೇ ಮನಸ್ಥಿತಿಯಲ್ಲಿಲ್ಲ.

ಆದಾಗ್ಯೂ ಯುದ್ಧದ ಕಾರಣದಿಂದಾಗಿ ಏರುತ್ತಿರುವ ಇಂಧನ ಬೆಲೆಗಳು ಉಕ್ರೇನ್‌ನಲ್ಲಿ ಜೀವನವನ್ನು ನಿಜವಾಗಿಯೂ ಶೋಚನೀಯಗೊಳಿಸಿವೆ. ಹೀಗಾಗಿ ಯಾವುದೋ ಒಂದು ಒಪ್ಪಂದ ಅಥವಾ ಕದನ ವಿರಾಮ ಏರ್ಪಡಬಹುದು ಎಂದು ತಜ್ಞರು ನಿರೀಕ್ಷಿಸುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸೇರಿ ಉಕ್ರೇನ್ ಮತ್ತು ರಷ್ಯಾ ನಡುವೆ ಶಾಂತಿ ಮಾತುಕತೆ ನಡೆಸುವ ಬಗ್ಗೆ ಮಾತನಾಡಿದ್ದರು. ಈ ಕಲ್ಪನೆಯು ಕಾರ್ಯರೂಪಕ್ಕೆ ಬರದಿದ್ದರೂ, ಭಾರತವು ಎರಡೂ ರಾಷ್ಟ್ರಗಳೊಂದಿಗೆ ಮಾತು ಆರಂಭಿಸುವ ಸಂಭಾವ್ಯ ಶಾಂತಿಯ ಸಂಧಾನಕಾರ ಎಂದು ಜಗತ್ತು ಪರಿಗಣಿಸುತ್ತಿದೆ.

ರಷ್ಯಾ ಮತ್ತು ಉಕ್ರೇನ್ ತಟಸ್ಥ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ಹೊಂದಲು ಆಸಕ್ತಿ ವ್ಯಕ್ತಪಡಿಸಿದರೆ, ಭಾರತವು ಎರಡೂ ಕಡೆಗಳಲ್ಲಿ ವಿಶ್ವಾಸಾರ್ಹತೆಯೊಂದಿಗೆ ಪ್ರಬಲ ಸಂಧಾನಕಾರನಾಗಲಿದೆ ಎಂದು ದಿ ಹೆರಿಟೇಜ್‌ನಲ್ಲಿರುವ ಏಷ್ಯನ್ ಸ್ಟಡೀಸ್ ಸೆಂಟರ್‌ನ ನಿರ್ದೇಶಕರಾಗಿರುವ ಜೆಫ್ ಎಂ. ಸ್ಮಿತ್ ಹೇಳಿದ್ದಾರೆ.

ಪ್ರಧಾನಿ ಮೋದಿ ಅವರು ಅಧ್ಯಕ್ಷ ಪುಟಿನ್ ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಅವರು ರಷ್ಯಾದೊಂದಿಗೆ ನೇರವಾಗಿ ಮಾತನಾಡಬಹುದು ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ಹೇಳುತ್ತಿವೆ.

ಆದಾಗ್ಯೂ ಭಾರತವು ರಷ್ಯಾದಿಂದ ತೈಲ ಖರೀದಿ ಮುಂದುವರೆಸಿರುವುದು ಮತ್ತು ರಷ್ಯಾದ ವಿರುದ್ಧ ನಿರ್ಣಯಗಳನ್ನು ಬೆಂಬಲಿಸಲು ನಿರಾಕರಿಸಿದ್ದು ಉಕ್ರೇನ್ ಮತ್ತು ಅಮೆರಿಕವನ್ನು ಕೆರಳಿಸಿದೆ. ರಷ್ಯಾವನ್ನು ಟೀಕಿಸುತ್ತಿದ್ದರೆ ಸಾಧಿಸುವುದು ಏನೂ ಇಲ್ಲ. ಕನಿಷ್ಠ ಪಕ್ಷ ಸಾರ್ವಜನಿಕವಾಗಿ ತಟಸ್ಥವಾಗಿದ್ದರೆ ಯುದ್ಧ ಕೊನೆಗೊಳಿಸುವ ಪ್ರಯತ್ನಗಳಲ್ಲಿ ಪ್ರಯೋಜನವಾಗಬಹುದು ಎಂದು ಭಾರತ ನಂಬಿದೆ ಎನ್ನಲಾಗಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ, ಭಾರತದ ವಿದೇಶಾಂಗ ನೀತಿ ಹಾಡಿ ಹೊಗಳಿದ ಪುಟಿನ್​.. ಚೀನಾಕ್ಕೂ ಬೆಂಬಲ, ಅಮೆರಿಕ ವಿರುದ್ಧ ಕಿಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.