ETV Bharat / international

ಕಾಳಿ ಮಾತೆಗೆ ಅಪಮಾನ: ಭಾರತದ ಕ್ಷಮೆ ಕೋರಿದ ಉಕ್ರೇನ್ - etv bharat kannada

ಹಿಂದೂ ದೇವತೆ ಕಾಳಿ ಮಾತೆಯನ್ನು ಟ್ವಿಟರ್​ನಲ್ಲಿ ಕೆಟ್ಟದಾಗಿ ತೋರಿಸಿದ ನಂತರ ಉಕ್ರೇನ್ ಭಾರತದ ಕ್ಷಮೆ ಕೇಳಿದೆ.

Respect unique Indian culture: Ukraine apologises for Kali post that irked Indians

author img

By

Published : May 2, 2023, 4:00 PM IST

ನವದೆಹಲಿ : ಹಿಂದೂ ದೇವತೆ ಕಾಳಿ ಮಾತೆಯನ್ನು ಅವಮಾನಕರವಾಗಿ ಚಿತ್ರಿಸಿದ ನಂತರ ಉಕ್ರೇನ್​​ನ ರಕ್ಷಣಾ ಇಲಾಖೆಯು ಭಾರತೀಯರ ಕ್ಷಮೆ ಯಾಚಿಸಿದೆ. ಈ ಬಗ್ಗೆ ಉಕ್ರೇನ್​ನ ಉಪ - ವಿದೇಶಾಂಗ ಸಚಿವೆ ಎಮಿನೆ ಝೆಪ್ಪರ್ ಟ್ವೀಟ್​ ಮಾಡಿದ್ದು, ಉಕ್ರೇನ್ ಭಾರತದ ವಿಶಿಷ್ಟ ಸಂಸ್ಕೃತಿಯನ್ನು ಗೌರವಿಸುತ್ತದೆ ಹಾಗೂ ಉಕ್ರೇನ್ - ರಷ್ಯಾ ಯುದ್ಧದ ವಿಚಾರದಲ್ಲಿ ಭಾರತವು ಉಕ್ರೇನ್​​ಗೆ ಬೆಂಬಲ ನೀಡಿದ್ದನ್ನು ಗೌರವಿಸುತ್ತೇವೆ ಎಂದು ಹೇಳಿದ್ದಾರೆ.

  • We regret @DefenceU depicting #Hindu goddess #Kali in distorted manner. #Ukraine &its people respect unique #Indian culture&highly appreciate🇮🇳support.The depiction has already been removed.🇺🇦is determined to further increase cooperation in spirit of mutual respect&💪friendship.

    — Emine Dzheppar (@EmineDzheppar) May 1, 2023 " class="align-text-top noRightClick twitterSection" data=" ">

ಉಕ್ರೇನ್ ರಕ್ಷಣಾ ಸಚಿವಾಲಯವು ಹಿಂದೂ ದೇವತೆ ಕಾಳಿ ಮಾತೆಯನ್ನು ಅಪಮಾನಕರ ರೀತಿಯಲ್ಲಿ ಬಿಂಬಿಸಿದ್ದಕ್ಕೆ ನಾವು ವಿಷಾದಿಸುತ್ತೇವೆ. ಉಕ್ರೇನ್ ಮತ್ತು ಅದರ ಜನರು ಅನನ್ಯ ಭಾರತೀಯ ಸಂಸ್ಕೃತಿಯನ್ನು ಗೌರವಿಸುತ್ತಾರೆ ಮತ್ತು ಭಾರತ ನೀಡಿರುವ ಬೆಂಬಲವನ್ನು ಪ್ರಶಂಸಿಸುತ್ತಾರೆ. ಚಿತ್ರಣವನ್ನು ಈಗಾಗಲೇ ತೆಗೆದುಹಾಕಲಾಗಿದೆ. ಪರಸ್ಪರ ಗೌರವ ಮತ್ತು ಸ್ನೇಹಗಳನ್ನು ಇನ್ನಷ್ಟು ಹೆಚ್ಚಿಸಲು ಉಕ್ರೇನ್ ಉತ್ಸುಕವಾಗಿದೆ ಎಂದು ಟ್ವೀಟ್ ಮಾಡಲಾಗಿದೆ.

ಉಕ್ರೇನ್​ನ ರಕ್ಷಣಾ ಸಚಿವಾಲಯವು ಎರಡು ಚಿತ್ರಗಳನ್ನು ಪೋಸ್ಟ್ ಮಾಡಿತ್ತು. ಒಂದು ಮೋಡ ಕವಿದ ಆಕಾಶದ ಚಿತ್ರವಾಗಿತ್ತು. ಮತ್ತೊಂದರಲ್ಲಿ ಒಂದು ಕಾಲದ ಹಾಲಿವುಡ್ ತಾರೆ ಮರ್ಲಿನ್ ಮನ್ರೋ ಅವರ ಚಿತ್ರ ಪೋಸ್ಟ್ ಮಾಡಲಾಗಿತ್ತು. ಆದರೆ ಮರ್ಲಿನ್ ಮನ್ರೋ ಅವರ ಚಿತ್ರವನ್ನು ಗ್ರಾಫಿಕ್ಸ್​ ಮೂಲಕ ಮಾರ್ಪಡಿಸಿ ಅದಕ್ಕೆ ಕಾಳಿ ಮಾತೆಯ ಮುಖ ಅಂಟಿಸಲಾಗಿತ್ತು ಹಾಗೂ ಕೊರಳಲ್ಲಿ ತಲೆ ಬುರುಡೆಗಳ ಮಾಲೆಯನ್ನು ಹಾಕಲಾಗಿತ್ತು. ಈ ಚಿತ್ರದ ಕೇಶರಾಶಿ ಮಾತ್ರ ಮನ್ರೋ ಅವರದೇ ಆಗಿತ್ತು. ಇದಕ್ಕೆ ವರ್ಕ್ ಆಫ್ ಆರ್ಟ್ ಎಂದು ಕ್ಯಾಪ್ಷನ್ ನೀಡಲಾಗಿತ್ತು.

ಉಕ್ರೇನ್ ಸರ್ಕಾರಿ ಇಲಾಖೆಯ ಈ ಟ್ವೀಟ್​ನಿಂದ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಇಂಥ ಚಿತ್ರ ಹಾಕುವ ಮೂಲಕ ಉಕ್ರೇನ್ ಭಾರತೀಯರ ಧಾರ್ಮಿಕ ಭಾವನೆಗಳಿಗೆ ಘಾಸಿ ಮಾಡಿದೆ ಎಂದು ನೆಟಿಜೆನ್​ಗಳು ಆರೋಪಿಸಿದ್ದಾರೆ. ತಮ್ಮ ದೇಶಕ್ಕೆ ಸಹಾಯ ನೀಡಬೇಕೆಂದು ಕೇಳಿಕೊಂಡು, ಉಕ್ರೇನ್​ನ ಉಪ - ವಿದೇಶಾಂಗ ಸಚಿವೆ ಎಮಿನೆ ಝೆಪ್ಪರ್ ಕಳೆದ ತಿಂಗಳು ಭಾರತಕ್ಕೆ ಬಂದಿದ್ದನ್ನು ನೆನಪಿಸಿ ನೆಟಿಜೆನ್​ಗಳು ತಮ್ಮ ಆಕ್ರೋಶ ಹೊರಹಾಕಿದ್ದರು. ಝೆಪ್ಪರ್ ಆವಾಗ ಭಾರತವನ್ನು ವಿಶ್ವಗುರು ಎಂದು ಶ್ಲಾಘಿಸಿದ್ದರು. ಈ ವಿಷಯದಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮಧ್ಯ ಪ್ರವೇಶಿಸಬೇಕೆಂದು ಕೆಲ ಟ್ವಿಟರ್​ ಬಳಕೆದಾರರು ಆಗ್ರಹಿಸಿದ್ದಾರೆ. ಕಾಳಿ ಮಾತೆಯನ್ನು ಕೆಟ್ಟದಾಗಿ ತೋರಿಸುವ ಈ ಮಾನಹಾನಿಕರ ಪೋಸ್ಟ್ ಅನ್ನು ದಯವಿಟ್ಟು ಗಮನಿಸಿ ಎಂದು ಒಬ್ಬ ಬಳಕೆದಾರರು ಟ್ವೀಟ್ ಮಾಡಿದ್ದಾರೆ.

20 ಸಾವಿರ ರಷ್ಯಾ ಸೈನಿಕರ ಸಾವು ಸಾಧ್ಯತೆ: ಉಕ್ರೇನ್‌ನಲ್ಲಿ ಕೇವಲ ಐದು ತಿಂಗಳ ಹೋರಾಟದಲ್ಲಿ 20,000 ಕ್ಕೂ ಹೆಚ್ಚು ರಷ್ಯಾದ ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು 80,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಮೆರಿಕದ ಗುಪ್ತಚರ ಅಧಿಕಾರಿಗಳು ಅಂದಾಜಿಸಿದ್ದಾರೆ. ಪೂರ್ವ ದಿಕ್ಕಿನ ಸಣ್ಣ ನಗರವಾದ ಬಖ್ಮುತ್‌ಗಾಗಿ ನಡೆದ ಭೀಕರ ಯುದ್ಧದಲ್ಲಿ ಹೆಚ್ಚಿನ ಸೈನಿಕರು ಸಾವನ್ನಪ್ಪಿದ್ದಾರೆ. ಇದನ್ನು ಶೀಘ್ರದಲ್ಲೇ ವಶಪಡಿಸಿಕೊಳ್ಳುವುದಾಗಿ ರಷ್ಯಾ ಪದೇ ಪದೇ ಹೇಳುತ್ತಿದೆ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬಿ ಸೋಮವಾರ ಹೇಳಿದರು.

ಇದನ್ನೂ ಓದಿ : ವಿಶ್ವದ ಆರ್ಥಿಕ ಬೆಳವಣಿಗೆಯಲ್ಲಿ ಭಾರತ, ಚೀನಾ ಸಿಂಹಪಾಲು: ಐಎಂಎಫ್ ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.