ಹೈದರಾಬಾದ್ (ತೆಲಂಗಾಣ): ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವಿಟರ್ ಖಾತೆ ಮರು ಸ್ಥಾಪಿಸಬೇಕೇ ಎಂದು ಪ್ರಶ್ನಿಸಿ ಟ್ವಿಟರ್‌ನ ಹೊಸ ಮುಖ್ಯಸ್ಥ ಎಲೋನ್ ಮಸ್ಕ್ ಟ್ವೀಟ್ ಮಾಡಿ, ಸಮೀಕ್ಷೆ ಆರಂಭಿಸಿದ್ದಾರೆ.
2021ರ ಜನವರಿ 6ರಂದು ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಘೋಷಣೆ ವೇಳೆ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಕ್ಯಾಪಿಟೋಲ್ ಮೇಲೆ ದಾಳಿ ಮಾಡಿದ್ದರು. ಇದಕ್ಕೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಟ್ರಂಪ್ ಟ್ವಿಟರ್ ಖಾತೆಯನ್ನು ಶಾಶ್ವತವಾಗಿ ಅಮಾನತುಗೊಳಿಸಲಾಗಿದೆ. ಇದೀಗ 2024ರ ಚುನಾವಣೆಯಲ್ಲಿ ಮತ್ತೊಮ್ಮೆ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ.
-
Reinstate former President Trump
— Elon Musk (@elonmusk) November 19, 2022 " class="align-text-top noRightClick twitterSection" data="
">Reinstate former President Trump
— Elon Musk (@elonmusk) November 19, 2022Reinstate former President Trump
— Elon Musk (@elonmusk) November 19, 2022
ಇದರ ಬೆನ್ನಲ್ಲೇ, ಟ್ವಿಟರ್‌ನ ಹೊಸ ಮುಖ್ಯಸ್ಥ ಎಲೋನ್ ಮಸ್ಕ್, ಟ್ವಿಟರ್ ಮಾಜಿ ಅಧ್ಯಕ್ಷ ಟ್ರಂಪ್ ಅವರನ್ನು ಮರುಸ್ಥಾಪಿಸಬೇಕು. 'ಹೌದು ಅಥವಾ ಇಲ್ಲ' ಎಂದು ಟ್ವೀಟ್ ಮಾಡಿ ಎಂದು ಟ್ವೀಟಿಸಿದ್ದಾರೆ. ಅಲ್ಲದೇ, ಜನರ ಧ್ವನಿ, ದೇವರ ಧ್ವನಿ ಎಂಬ ಅರ್ಥ ಕೊಡುವ 'ವೋಕ್ಸ್ ಪಾಪುಲಿ, ವೋಕ್ಸ್ ಡೀ' ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ. ಟೆಕ್ ಬಿಲಿಯನೇರ್ ಆಗಿರುವ ಮಸ್ಕ್ ತಮ್ಮ ಟ್ವಿಟರ್ನಲ್ಲಿ 116 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.
ಇದನ್ನೂ ಓದಿ: ಟ್ವಿಟರ್ ಹೊಸ ಖಾತೆ: 90 ದಿನಗಳವರೆಗೆ 'ಬ್ಲೂ ಟಿಕ್ ಚಂದಾದಾರಿಕೆ ಸೇವೆ'ಗೆ ಅನುಮತಿಯಿಲ್ಲ