ETV Bharat / international

ಸಿರಿಯಾ, ಟರ್ಕಿ ಭೂಕಂಪದಲ್ಲಿ 5000 ಜನರು ಸಜೀವ ಸಮಾಧಿ: 7 ದಿನ ರಾಷ್ಟ್ರೀಯ ಶೋಕಾಚರಣೆ

author img

By

Published : Feb 7, 2023, 7:18 AM IST

Updated : Feb 7, 2023, 10:43 AM IST

ಟರ್ಕಿ ಮತ್ತು ಸಿರಿಯಾದಲ್ಲಿ ಪ್ರಬಲ ಭೂಕಂಪನ- ಒಂದೇ ದಿನದಲ್ಲಿ ಮೂರು ಬಾರಿ ಕಂಪನ- ಸಾವಿರಾರು ಜನರು ಭೂಗರ್ಭದಲ್ಲಿ ಸಮಾಧಿ- ಟರ್ಕಿಯ ಭೂಕಂಪನದ ಕಹಿ ಇತಿಹಾಸ- ಭೌಗೋಳಿಕವಾಗಿಯೇ ಅಪಾಯಕಾರಿ ಸ್ಥಳದಲ್ಲಿ ದೇಶ

powerful-quake-rocks-turkey-and-syria
ಸಿರಿಯಾ, ಟರ್ಕಿ ಭೂಕಂಪನ

ಡಮಾಸ್ಕಸ್: 24 ಗಂಟೆಯಲ್ಲಿ ತ್ರಿವಳಿ ಪ್ರಬಲ ಭೂಕಂಪನದಿಂದಾಗಿ ಛಿದ್ರವಾಗಿರುವ ಸಿರಿಯಾ, ಟಿರ್ಕಿಯಲ್ಲಿ ಸಾವು ರಣಕೇಕೆ ಹಾಕಿದೆ. ಕಂಪನಕ್ಕೆ ಮಧ್ಯಪ್ರಾಚ್ಯ ರಾಷ್ಟ್ರಗಳ 5000ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಕಟ್ಟಡಗಳು ಧರಾಶಾಯಿಯಾಗಿವೆ. ಅವಶೇಷಗಳಡಿ ಜನರು ಸಿಲುಕಿದ್ದು, ಸಾವಿನ ಸಂಖ್ಯೆ 10 ಸಾವಿರ ತಲುಪುವ ಸಾಧ್ಯತೆ ಇದೆ.

ಭೂಕಂಪನದಿಂದಾಗಿ ಟರ್ಕಿಯೊಂದರಲ್ಲೇ 2370 ಜನರು ಸಾವನ್ನಪ್ಪಿದ್ದರೆ, ಸಿರಿಯಾದಲ್ಲಿ ಕನಿಷ್ಠ 1400 ಮಂದಿ ಸಮಾಧಿಯಾಗಿದ್ದಾರೆ. ಇಂಧನ ಪೈಪ್‌ಲೈನ್‌ಗಳು ಮತ್ತು ತೈಲ ಸಂಸ್ಕರಣಾಗಾರಗಳಲ್ಲಿ ಬೆಂಕಿ ಹೊತ್ತಿಕೊಂಡು ವ್ಯಾಪಕ ಹಾನಿ ಸಂಭವಿಸಿದೆ. ಸೋಮವಾರ ಮುಂಜಾನೆ ಉಭಯ ದೇಶಗಳ ಗಡಿ ಪ್ರದೇಶದಲ್ಲಿ 7.8 ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ.

ಭೂಕಂಪನಕ್ಕೆ ಸಾಲಾಗಿ ಉರುಳಿಬಿದ್ದ ಕಟ್ಟಡಗಳು
ಭೂಕಂಪನಕ್ಕೆ ಸಾಲಾಗಿ ಉರುಳಿಬಿದ್ದ ಕಟ್ಟಡಗಳು

ರಕ್ಷಣಾ ಕಾರ್ಯಾಚರಣೆ ವೇಳೆ ನಡುಗಿದ ಭೂಮಿ: ಸೋಮವಾರ ಮುಂಜಾನೆ ಸಂಭವಿಸಿದ ಭೂಕಂಪನದಲ್ಲಿ ಸಿಲುಕಿದ ಜನರನ್ನು ರಕ್ಷಣೆ ಮಾಡುವ ಕಾರ್ಯ ನಡೆಯುತ್ತಿದ್ದರೆ, ಕೆಲ ಗಂಟೆಗಳ ಬಳಿಕ ಮತ್ತೆ ಧರೆ ನಡುಗಿದೆ. ರಿಕ್ಟರ್​ ಮಾಪಕದಲ್ಲಿ ಅದು 7.6 ರಷ್ಟು ತೀವ್ರತೆ ದಾಖಲಾಗಿತ್ತು. ಬಳಿಕ ಮತ್ತೊಂದು ಬಾರಿ 6.5 ರಷ್ಟು ತೀವ್ರತೆಯಲ್ಲಿ ನಡುಕ ಉಂಟಾಗಿತ್ತು. 24 ಗಂಟೆಗಳ ಅವಧಿಯಲ್ಲಿ 3 ಬಾರಿ ಪ್ರಬಲವಾಗಿ ಭೂಮಿ ಕಂಪಿಸಿದರೆ, 145 ಕ್ಕೂ ಹೆಚ್ಚು ಬಾರಿ ಲಘುವಾಗಿ ಭೂಮಿ ನಡುಗಿದೆ.

ಟರ್ಕಿಯಲ್ಲಿ ಸಾವಿನ ಸಂಖ್ಯೆ 2,379 ಕ್ಕೆ ಏರಿದೆ. ಮೂರು ಪ್ರಬಲ ಭೂಕಂಪನದಲ್ಲಿ 14,483 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇದರ ಬಳಿಕ 145 ಬಾರಿ ಲಘುವಾಗಿ ಭೂಮಿ ನಡುಗಿದೆ. ಸಿರಿಯಾದಲ್ಲಿ ಸರ್ಕಾರಿ ಮತ್ತು ಬಂಡುಕೋರರ ಹಿಡಿತದಲ್ಲಿರುವ ಪ್ರದೇಶಗಳಲ್ಲಿ 1,444 ಕ್ಕಿಂತ ಅಧಿಕ ಜನರು ಸಾವನ್ನಪ್ಪಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಅವಶೇಷಗಳಡಿ ಸಿಲುಕಿದ ತನ್ನ ಮಾಲೀಕನ ರಕ್ಷಣೆಗೆ ಕಣ್ಣೀರಿಟ್ಟ ಶ್ವಾನ
ಅವಶೇಷಗಳಡಿ ಸಿಲುಕಿದ ತನ್ನ ಮಾಲೀಕರ ರಕ್ಷಣೆಗೆ ಕಣ್ಣೀರಿಟ್ಟ ಶ್ವಾನ

ಎಲ್ಲೆಲ್ಲಿ ಕಂಪಿಸಿದೆ ಭೂಮಿ: ಕಹ್ರಮನ್ಮರಸ್, ಗಾಜಿಯಾಂಟೆಪ್, ಸ್ಯಾನ್ಲಿಯುರ್ಫಾ, ದಿಯಾರ್ಬಕಿರ್, ಅದಾನ, ಅಡಿಯಾಮಾನ್, ಮಲಾತ್ಯ, ಉಸ್ಮಾನಿಯ, ಹಟೇ ಮತ್ತು ಕಿಲಿಸ್ ಸೇರಿದಂತೆ ಟರ್ಕಿಯ 10 ಪ್ರಾಂತ್ಯಗಳು, ಸಿರಿಯಾದ ಉತ್ತರ ಅಲೆಪ್ಪೊ, ಹಮಾ, ಲಟಾಕಿಯಾ ಮತ್ತು ಟಾರ್ಟಸ್ ಪೀಡಿತ ಪ್ರದೇಶಗಳಲ್ಲಿ ಭೂಮಿ ಕಂಪಿಸಿದೆ. ಟರ್ಕಿ, ಸಿರಿಯಾ ಮಾತ್ರವಲ್ಲದೇ, ಲೆಬನಾನ್​, ಜೋರ್ಡಾನ್​, ಇರಾಕ್​, ಜಾರ್ಜಿಯಾ, ಸೈಪ್ರೆಸ್​, ಆರ್ಮೆನಿಯಾ ದೇಶಗಳಲ್ಲೂ ಭೂಕಂಪನದ ಅನುಭವವಾಗಿದೆ.

ಎರಡೂ ದೇಶಗಳಲ್ಲಿ ಭೂಕಂಪದಿಂದ ಮೂಲಸೌಕರ್ಯಗಳಿಗೆ ತೀವ್ರ ಹಾನಿಯನ್ನುಂಟಾಗಿದೆ. ಟರ್ಕಿಯ ಕಿಲಿಸ್ ಪ್ರಾಂತ್ಯದಲ್ಲಿ ನೈಸರ್ಗಿಕ ಅನಿಲ ಪೈಪ್‌ಲೈನ್‌ಗಳು ಛಿದ್ರಗೊಂಡಿವೆ. ಇಂಧನಕ್ಕೆ ಬೆಂಕಿ ಕೊತ್ತಿಕೊಂಡು ದೊಡ್ಡ ಜ್ವಾಲೆ ಉಂಟಾಗಿದೆ. ಯಾವುದೇ ಪ್ರಾಣಹಾನಿ ಉಂಟಾಗದಿದ್ದರೂ, ಭಾರೀ ನಷ್ಟ ತಂದಿದೆ.

ಸಿರಿಯಾದ ಬನಿಯಾಸ್ ನಗರದಲ್ಲಿನ ಸಂಸ್ಕರಣಾಗಾರದಲ್ಲಿನ ವಿದ್ಯುತ್ ಘಟಕದ ಚಿಮಣಿಯಲ್ಲಿ ಬಿರುಕು ಉಂಟಾಗಿದೆ. ಹೀಗಾಗಿ ಕನಿಷ್ಠ 48 ಗಂಟೆಗಳ ಕಾಲ ಮುಚ್ಚಬೇಕಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ರೈಲು ಸಂಚಾರವನ್ನೂ ನಿಲ್ಲಿಸಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದರು.

ಅವಶೇಷಗಳಡಿ ಸಿಕ್ಕಿಬಿದ್ದವರ ರಕ್ಷಣಾ ಕಾರ್ಯಾಚರಣೆ

ಟರ್ಕಿಯ ಭೂಕಂಪನದ ಕಹಿ ಇತಿಹಾಸ: ಟರ್ಕಿ ಭೌಗೋಳಿಕವಾಗಿ ಅಪಾಯಕಾರಿ ಪ್ರದೇಶದಲ್ಲಿದೆ. 4 ಶಿಲಾಪದರ ಸಂಧಿಸುವ ಸ್ಥಳದಲ್ಲಿ ದೇಶವಿದೆ. ಭೂಮಿಯ ಹೊರಕವಚ ರೂಪಿಸುವ ಭೂ ದ್ರವ್ಯರಾಶಿಗಳು ಇಲ್ಲಿ ಚಲಿಸುತ್ತಿರುತ್ತವೆ. ಪರಸ್ಪರ ಕೂಡಿಕೊಳ್ಳುವ ಇಂಥ ಪದರಗಳಲ್ಲಿ ತಿಕ್ಕಾಟ ಸಾಮಾನ್ಯ. ಇದರಿಂದಾಗಿ ಭೂಕಂಪನ ಉಂಟಾಗುತ್ತದೆ. ಮಧ್ಯಪ್ರಾಚ್ಯ ದೇಶದಲ್ಲಿ 1784 ರಲ್ಲಿ ಉಂಟಾದ 7.5 ತೀವ್ರತೆಯ ಕಂಪನದಲ್ಲಿ 10 ಸಾವಿರ ಜನರು ಬಲಿಯಾಗಿದ್ದರೆ, 1881 ರಲ್ಲಿ 7900, 1840 ರಲ್ಲಿ 10 ಸಾವಿರ, 1939 ರಲ್ಲಿ 32700, 1999 ರಲ್ಲಿ 17000 ಜನರು ಅವಶೇಷಗಳಿಡ ಸಮಾಧಿಯಾಗಿದ್ದರು.

4ನೇ ಸಲ ನಡುಗಿದ ಭೂಮಿ, 7 ದಿನ ಶೋಕಾಚರಣೆ: ಟರ್ಕಿಯಲ್ಲಿ ಇಂದು ಮತ್ತೊಮ್ಮೆ ಭೂಮಿ ಗಡಗಡ ನಡುಗಿದೆ. ನಿನ್ನೆಯಿಂದ 4ನೇ ಸಲ ಕಂಪನ ಉಂಟಾಗಿದೆ. ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದ ಮಧ್ಯೆಯೂ ಪ್ರಕೃತಿಯ ಮುನಿಸು ಮಾತ್ರ ನಿಂದಿಲ್ಲ. ಟರ್ಕಿಯಲ್ಲಿ ಸಾವಿನ ಸಂಖ್ಯೆ ವಿಪರೀತ ಏರಿಕೆ ಕಾಣುತ್ತಿದ್ದು, ಅಲ್ಲಿನ ಸರ್ಕಾರ 7 ದಿನ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದೆ.

ಓದಿ: ಟರ್ಕಿ, ಸಿರಿಯಾದಲ್ಲಿ ಭೀಕರ ಭೂಕಂಪ: ಮಲಗಿದ್ದಲ್ಲೇ ಸಜೀವ ಸಮಾಧಿಯಾದ 640ಕ್ಕೂ ಅಧಿಕ ಜನ! ಕ್ಷಣ ಕ್ಷಣಕ್ಕೆ ಹೆಚ್ಚಾಗುತ್ತಿರುವ ಸಾವಿನ ಸಂಖ್ಯೆ

Last Updated : Feb 7, 2023, 10:43 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.