ಜಿನೀವಾ: ಪೋಲಿಯೋ ಮುಕ್ತವಾಗಿದ್ದರೂ ಭಾರತದಲ್ಲಿ ಕೆಲ ದಿನಗಳ ಹಿಂದಷ್ಟೇ ಒಳಚರಂಡಿ ನೀರಿನಲ್ಲಿ ಪೋಲಿಯೋ ವೈರಸ್ ಕಂಡು ಬಂದು ಸುದ್ದಿಯಾಗಿತ್ತು. ಇದೀಗ ಲಂಡನ್ನಲ್ಲೂ ಕೂಡ ಒಳಚರಂಡಿ ನೀರಿನಲ್ಲಿ ವೈರಸ್ ಪತ್ತೆಯಾಗಿದೆ. ಇದು ಆ ದೇಶ ಪೋಲಿಯೋ ಮುಕ್ತವಾದ 2 ದಶಕಗಳ ಬಳಿಕ ಇದೇ ಮೊದಲ ಬಾರಿಗೆ ಮತ್ತೆ ವೈರಸ್ ಗೋಚರವಾಗಿದೆ.
ಒಳಚರಂಡಿ ನೀರಿನ ಮಾದರಿ ಸಂಗ್ರಹಿಸಿ ನಡೆಸಿದ ಪರೀಕ್ಷೆಯಲ್ಲಿ ಪೋಲಿಯೋ ವೈರಸ್ ಮಾದರಿ ಕಂಡು ಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಬ್ರಿಟಿಷ್ ಆರೋಗ್ಯ ಅಧಿಕಾರಿಗಳು ಬುಧವಾರ ಹೇಳಿದ್ದಾರೆ. ಈ ಬಗ್ಗೆ ಹೆಚ್ಚಿನ ವಿಶ್ಲೇಷಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಎರಡು ದಶಕಗಳ ಹಿಂದೆ ಮಾರಕ ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿದ ಬ್ರಿಟನ್‌ನಲ್ಲಿ ಯಾವುದೇ ಮಾನವ ಪೋಲಿಯೊ ಪ್ರಕರಣಗಳು ಈವರೆಗೂ ಕಂಡುಬಂದಿಲ್ಲ.
ಲಸಿಕೆ ಪಡೆದವರಲ್ಲಿ ಕಂಡುಬರುವ ಟೈಪ್ 2 ಪೋಲಿಯೊ ವೈರಸ್ (VDPV2) ಬ್ರಿಟನ್ ರಾಜಧಾನಿಯಲ್ಲಿನ ಪರಿಸರದಲ್ಲಿ ಕಂಡುಬಂದಿದೆ ಎಂದು ವಿಶ್ವಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. ಈ ವೈರಸ್ ಈಗ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಮಾತ್ರ ಅಸ್ತಿತ್ವದಲ್ಲಿದೆ.
ಇದನ್ನೂ ಓದಿ: ಅಸ್ಸೋಂನಲ್ಲಿ ಮಳೆ, ಪ್ರವಾಹಕ್ಕೆ 107 ಜನ ಸಾವು; ಪರಿಸ್ಥಿತಿ ಮೇಲೆ ತೀವ್ರ ನಿಗಾ- ಪ್ರಧಾನಿ ಮೋದಿ