ಪಾಕಿಸ್ತಾನ/ಮುಲ್ತಾನ್: ಧರ್ಮ ನಿಂದನೆಯ ಸುಳ್ಳು ಆರೋಪದ ಮೇಲೆ ಕಳೆದ ಆರು ವರ್ಷಗಳಿಂದ ಜೈಲಿನಲ್ಲಿದ್ದ ಬಹಾವುದ್ದೀನ್ ಜಕಾರಿಯಾ ವಿಶ್ವವಿದ್ಯಾಲಯದ ಮಾಜಿ ಉಪನ್ಯಾಸಕ ಜುನೈದ್ ಹಫೀಜ್ಗೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶನಿವಾರ ಮರಣದಂಡನೆ ವಿಧಿಸಿದೆ.
ಬಹಾವುದ್ದೀನ್ ಜಕಾರಿಯಾ ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಸಾಹಿತ್ಯ ವಿಭಾಗದಲ್ಲಿ ಸಂದರ್ಶಕ ಉಪನ್ಯಾಸಕರಾಗಿದ್ದ ಹಫೀಜ್ ಅವರನ್ನು ಧರ್ಮ ನಿಂದನೆಯ ಆರೋಪದ ಮೇಲೆ ಮಾರ್ಚ್ 23, 2013 ರಂದು ಬಂಧಿಸಿಲಾಗಿತ್ತು. ಈ ಪ್ರಕರಣದ ತನಿಖೆ 2014ರಿಂದ ಆರಂಭಗೊಂಡಿತ್ತು.
ಸದ್ಯ ಪ್ರಕರಣದ ತೀರ್ಪು ಪ್ರಕಟಿಸಿರುವ ಮುಲ್ತಾನ್ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಸೆಕ್ಷನ್ 295-ಬಿ ಅಡಿ ಜೀವಾವಧಿ ಶಿಕ್ಷೆ ,10 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ಸೆಕ್ಷನ್ 295-ಎ ಅಡಿಯಲ್ಲಿ 1,00,000 ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ.