ETV Bharat / international

ನಾಪತ್ತೆಯಾಗಿದ್ದ ನೇಪಾಳ ವಿಮಾನ 6 ಗಂಟೆಗಳ ಬಳಿಕ ಪತ್ತೆ - ನಾಪತ್ತೆಯಾಗಿದ್ದ ವಿಮಾನ ಪತ್ತೆ

ನಾಪತ್ತೆಯಾಗಿದ್ದ ನೇಪಾಳದ ವಿಮಾನ ಸುಮಾರು ಆರು ಗಂಟೆಗಳ ಬಳಿಕ ಲಾಮ್ಚೆ ನದಿಯ ಸಮೀಪ ಪತ್ತೆಯಾಗಿದೆ..

nepal plane that went missing found
ನಾಪತ್ತೆಯಾಗಿದ್ದ ವಿಮಾನ ಪತ್ತೆ
author img

By

Published : May 29, 2022, 4:44 PM IST

Updated : May 29, 2022, 5:15 PM IST

ಕಠ್ಮಂಡು (ನೇಪಾಳ) : ಏಕಾಏಕಿ ನಾಪತ್ತೆಯಾಗಿದ್ದ ನೇಪಾಳದ ವಿಮಾನ ಸುಮಾರು ಆರು ಗಂಟೆಗಳ ಬಳಿಕ ಪತ್ತೆಯಾಗಿದೆ. ನಾಲ್ವರು ಭಾರತೀಯರು ಸೇರಿದಂತೆ 22 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ತಾರಾ ಏರ್‌ 9-ಎನ್​ಎಇಟಿ ವಿಮಾನವು ಇಂದು ಬೆಳಗ್ಗೆ 9:55ಕ್ಕೆ ಪೋಖರಾದಿಂದ ಜೋಮ್‌ಸಮ್‌ಗೆ ಟೇಕ್ ಆಫ್ ಆದ ಬಳಿಕ ಸಂಪರ್ಕ ಕಳೆದುಕೊಂಡಿತ್ತು.

ಮುಸ್ತಾಂಗ್​ ಜಿಲ್ಲೆಯ ಕೋವಾಂಗ್ ಗ್ರಾಮದ ಲಾಮ್ಚೆ ನದಿಯ ಸಮೀಪ ಈ ವಿಮಾನವು ಪತನಗೊಂಡಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ನೇಪಾಳದ ಸೇನೆ ವಿಮಾನ ಪತನವಾದ ಸ್ಥಳದತ್ತ ದೌಡಾಯಿಸಿದೆ ಎಂದು ಸೇನೆಯ ವಕ್ತಾರ ನಾರಾಯಣ ಸಿಲ್ವಾಲ್​ ತಿಳಿಸಿದ್ದಾರೆ.

ಪೋಖರಾದಿಂದ ಜೋಮ್‌ಸಮ್‌ಗೆ ಕೇವಲ 15 ನಿಮಿಷಗಳಲ್ಲಿ ವಿಮಾನ ಸಂಚರಿಸಬಹುದಾಗಿದೆ. ಪೋಖರಾದಿಂದ ಟೇಕ್​ ಆಫ್​ ಆದ ಕೆಲ ನಿಮಿಷದಲ್ಲೇ ಲೇಟೆಪಾಸ್ ಪ್ರದೇಶದಲ್ಲಿ ತನ್ನ ಸಂಪರ್ಕ ಕಳೆದುಕೊಂಡಿತ್ತು. ಇದರ ಪತ್ತೆಯಾಗಿ ಈ ಮಾರ್ಗದಲ್ಲಿ ಎರಡು ಖಾಸಗಿ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿತ್ತು.

ಈ ವಿಮಾನದಲ್ಲಿ ನಾಲ್ವರು ಭಾರತೀಯರು ಮತ್ತು ಮೂವರು ಜಪಾನ್ ಪ್ರಜೆಗಳು, ಇಬ್ಬರು ಜರ್ಮನ್​ ಪ್ರಜೆಗಳು ಮತ್ತು 13 ನೇಪಾಳದ ಪ್ರಜೆಗಳಾಗಿದ್ದರು. ಜತೆಗೆ ಮೂವರು ವಿಮಾನದ ಸಿಬ್ಬಂದಿ ಸೇರಿದಂತೆ 22 ಮಂದಿ ಪ್ರಯಾಣಿಕರಿದ್ದರು. ಆದರೆ, ಸಾವು-ನೋವಿನ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ: ನಾಲ್ವರು ಭಾರತೀಯರು ಸೇರಿದಂತೆ 22 ಜನರಿದ್ದ ನೇಪಾಳದ ವಿಮಾನ ನಾಪತ್ತೆ

Last Updated : May 29, 2022, 5:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.