ETV Bharat / international

'ಉದ್ಯೋಗ ಕಡಿತ'ದ ಕಳವಳದ ನಡುವೆ ಉದ್ಯೋಗಿಗಳೊಂದಿಗೆ ಮಸ್ಕ್​ ಚಾಟ್​

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲೋನ್​ ಮಸ್ಕ್ ಅವರು ಟ್ವಿಟರ್​ ಬಳಕೆದಾರರ ಸಂಖ್ಯೆಯನ್ನು ಒಂದು ಬಿಲಿಯನ್​ಗೆ ತಲುಪಿಸುವ ಬಯಕೆ ಹೊಂದಿದ್ದಾರೆ. ಈ ಅಂಕಿ ಅಂಶವು ಪ್ರಸ್ತುತ ಬಳಕೆದಾರರ ಸಂಖ್ಯೆಗಿಂತ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ. ಆದರೆ ಉದ್ಯೋಗ ಕಡಿತಗೊಳಿಸುವುದಾಗಿ ಹೇಳಿಕೆ ಬೆನ್ನಲ್ಲೇ ಅವರು ತಮ್ಮ ನೌಕರರೊಂದಿಗೆ ಮಾತುಕತೆ ನಡೆಸಿದ್ದಾರೆ.

Musk announced Twitter job cut  Musk to buy Twitter  Musk meet Twitter employees  ಉದ್ಯೋಗ ಕಡಿತಗೊಳಿಸುವುದಾಗಿ ಹೇಳಿಕೆ ನೀಡಿದ ಮಸ್ಕ್​ ಟ್ವಿಟ್ಟರ್​ ಖರೀದಿ ಮಾಡಿದ ಎಲೋನ್​ ಮಸ್ಕ್​ ಉದ್ಯೋಗಸ್ಥರ ಜೊತೆ ಮಾತುಕತೆ ನಡೆಸಿದ ಎಲೋನ್​ ಮಸ್ಕ್​
ಕಳವಳ ನಡುವೆ ಮಸ್ಕ್​ ಉದ್ಯೋಗಿಗಳೊಂದಿಗೆ ಚಾಟ್
author img

By

Published : Jun 17, 2022, 9:46 AM IST

ನ್ಯೂಯಾರ್ಕ್: ಟೆಸ್ಲಾ ಸಿಇಒ ಎಲೋನ್​​ ಮಸ್ಕ್ ಗುರುವಾರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟ್ವಿಟರ್‌ನ ಉದ್ಯೋಗಿಗಳೊಂದಿಗೆ ಸಂವಹನ ನಡೆಸಿದರು. ಕಂಪನಿಯಲ್ಲಿ ಸಂಭಾವ್ಯ ವಜಾಗೊಳಿಸುವಿಕೆ ಉದ್ದೇಶಿಸಿ ಮಾತನಾಡಿದ ಅವರು, ಪ್ರಸ್ತುತ ಆದಾಯಕ್ಕಿಂತ ವೆಚ್ಚಗಳು ಜಾಸ್ತಿಯಾಗಿವೆ ಎಂದು ಹೇಳಿದರು.

ಇದು ತುಂಬಾ ಒಳ್ಳೆಯ ಪರಿಸ್ಥಿತಿ ಅಲ್ಲ. ನಂಬಿಕೆ ನಂಬಿಕೆಯಂತೆಯೇ ಇರುತ್ತದೆ. ನಾನು ಹೇಳುವುದರಲ್ಲಿ ಅಕ್ಷರಶಃ ಅರ್ಥವಿದೆ. ಒಬ್ಬರ ನಿಜವಾದ ಭಾವನೆಗಳು ಅಥವಾ ಉದ್ದೇಶಗಳನ್ನು ಹೇಳುವ ಅಥವಾ ಬರೆಯುವ ಮೂಲಕ ಅರ್ಥಮಾಡಿಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಉದ್ಯೋಗಿಗಳೊಂದಿಗಿನ ಸಭೆಯಲ್ಲಿ ಮಸ್ಕ್​ ಹೇಳಿದರು ಎಂದು ಟ್ವಿಟರ್‌ನ ಬ್ರ್ಯಾಂಡ್ ಅನುಭವಿ ಮತ್ತು ಎಂಗೇಜ್ಮೆಂಟ್​ ಜಾಗತಿಕ ಮುಖ್ಯಸ್ಥರಾದ ನೋಲಾ ವೈನ್‌ಸ್ಟೈನ್ ಟ್ವೀಟ್​ ಮಾಡಿದ್ದಾರೆ.

ವರದಿಗಳ ಪ್ರಕಾರ, ಎಲೋನ್​​ ಮಸ್ಕ್ ತಮ್ಮ ಟ್ವಿಟರ್ ಬಳಕೆದಾರರನ್ನು ಶತಕೋಟಿಗೆ ತಲುಪಲು ಬಯಸುತ್ತಿದ್ದಾರೆ. ಈ ಅಂಕಿ ಅಂಶವು ಪ್ರಸ್ತುತ ಬಳಕೆದಾರರ ಸಂಖ್ಯೆಗಿಂತ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ. ಟ್ವಿಟರ್ ಅನ್ನು ಮನುಷ್ಯರು ಮಾತ್ರ ಬಳಸುವುದನ್ನು ನೋಡಲು ಬಯಸುತ್ತೇನೆ ಎಂದು ಅವರು ಹೇಳಿದ್ದಾರೆ.

ಓದಿ: ಶೇ.10ರಷ್ಟು ಉದ್ಯೋಗ ಕಡಿತಕ್ಕೆ ಮಸ್ಕ್​ ನಿರ್ಧಾರ.. ಕುಸಿತಕಂಡ ಷೇರು ಬೆಲೆ!

ಟ್ವಿಟರ್ ಶೇ. 20ರಷ್ಟು ಸ್ಪ್ಯಾಮ್ ಖಾತೆಗಳನ್ನು ಹೊಂದಿತ್ತು ಎಂದು ಮಸ್ಕ್ ಆರೋಪಿಸಿದ್ದರು. ಆದರೆ ಟ್ವಿಟರ್ ಅವರ ಆರೋಪವನ್ನು ನಿರಾಕರಿಸಿತ್ತು. ಕೇವಲ ಶೇ.5 ರಷ್ಟು ಮಾತ್ರ ಸ್ಪ್ಯಾಮ್ ಖಾತೆಗಳನ್ನು ಹೊಂದಿದೆ ಎಂದು ಸ್ಪಷ್ಟನೆ ಕೂಡಾ ನೀಡಿತ್ತು. ಟ್ವಿಟರ್‌ನಲ್ಲಿರುವ ಪ್ರತಿಯೊಬ್ಬರೂ ತಮ್ಮ ನಿಜವಾದ ಹೆಸರನ್ನು ಬಳಸಬೇಕೆಂದು ನಾನು ಬಯಸುತ್ತೇನೆ ಎಂದು ಇದರ ಅರ್ಥವಲ್ಲ. ಗುಪ್ತನಾಮಗಳು ಜನರು ತಮ್ಮ ರಾಜಕೀಯ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಅವಕಾಶ ಮಾಡಿಕೊಡುತ್ತವೆ ಅಂತಾ ಸಭೆಯಲ್ಲಿ ಅವರು ಸ್ಪಷ್ಟಪಡಿಸಿದರು ಎಂದು ಮಾಧ್ಯಮವೊಂದು ವರದಿ ಮಾಡಿದೆ.

ವರದಿಗಳ ಪ್ರಕಾರ, ಮಸ್ಕ್ ಅವರು ಟಿಕ್‌ಟಾಕ್‌ನಂತಹ ಚೀನೀ ಅಪ್ಲಿಕೇಶನ್‌ಗಳನ್ನು ಸಹ ಹೊಗಳಿದ್ದಾರೆ. ಜನರನ್ನು ಕಾರ್ಯನಿರತವಾಗಿಡಲು ಮತ್ತು 'ಬೋರಿಂಗ್' ಆಗದಂತೆ ಮಾಡಲು ಟಿಕ್‌ಟಾಕ್ ಉತ್ತಮ ವೇದಿಕೆಯಾಗಿದೆ ಎಂದು ಅವರು ಹೇಳಿದರು. WeChat ಅಪ್ಲಿಕೇಶನ್ ಟ್ವಿಟರ್‌ಗೆ ಉತ್ತಮ ಮಾದರಿಯಾಗಬಹುದು ಎಂದು ಮಸ್ಕ್ ಇದೇ ವೇಳೆ ಅಭಿಪ್ರಾಯಪಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.