ETV Bharat / international

'Modi ji Thali':ಅಮೆರಿಕ ಭೇಟಿಗೂ ಮುನ್ನ ನ್ಯೂಜೆರ್ಸಿ ರೆಸ್ಟೋರೆಂಟ್‌ನಲ್ಲಿ 'ಮೋದಿ ಜಿ ಥಾಲಿ' ಬಿಡುಗಡೆ

author img

By

Published : Jun 12, 2023, 9:08 AM IST

ಪ್ರಧಾನಿ ನರೇಂದ್ರ ಮೋದಿಯವರು ಈ ತಿಂಗಳ 21-22 ರಂದು ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಅವರ ಭೇಟಿಯ ಮುನ್ನವೇ ನ್ಯೂಜೆರ್ಸಿ ರೆಸ್ಟೋರೆಂಟ್‌ನಲ್ಲಿ 'ಮೋದಿ ಜಿ ಥಾಲಿ' ಸಿದ್ಧಪಡಿಸಲಾಗಿದೆ.

Modi ji Thali
Modi ji Thali

ನ್ಯೂಜೆರ್ಸಿ(ಅಮೆರಿಕ): ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿಗೂ ಮುನ್ನ ನ್ಯೂಜೆರ್ಸಿ ರೆಸ್ಟೋರೆಂಟ್‌ನಲ್ಲಿ 'ಮೋದಿ ಜಿ ಥಾಲಿ' ಸಿದ್ಧಪಡಿಸಲಾಗಿದೆ. ಪ್ರಧಾನಿ ಮೋದಿ ಅವರು ಅಮೆರಿಕಕ್ಕೆ ಆಗಮಿಸಲಿದ್ದು ಅದಕ್ಕೂ ಮೊದಲೇ ನ್ಯೂಜೆರ್ಸಿ ಮೂಲದ ರೆಸ್ಟೊರೆಂಟ್‌ನವರು ವಿಶೇಷವಾದ 'ಮೋದಿ ಜಿ ಥಾಲಿ'ಯನ್ನು ರೆಡಿ ಮಾಡಿದ್ದಾರೆ.

  • #WATCH | A New Jersey-based restaurant launches 'Modi Ji' Thali for PM Narendra Modi's upcoming State Visit to the US. Restaurant owner Shripad Kulkarni gives details on the Thali. pic.twitter.com/XpOEtx9EDg

    — ANI (@ANI) June 11, 2023 " class="align-text-top noRightClick twitterSection" data=" ">

ಅಧ್ಯಕ್ಷ ಜೋ ಬೈಡನ್ ಮತ್ತು ಪ್ರಥಮ ಮಹಿಳೆ ಜಿಲ್ ಬೈಡನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಅವರು ಅಮೆರಿಕ ಪ್ರವಾಸವನ್ನು ಇದೇ ತಿಂಗಳಿನಲ್ಲಿ ಕೈಗೊಂಡಿದ್ದಾರೆ. ಇವರ ಆಹ್ವಾನದ ಮೇಲೆ ಜೂನ್ 22 ರಂದು ಮೋದಿಯವರು ರಾಜ್ಯ ಭೋಜನಕೂಟದಲ್ಲಿ ಆತಿಥ್ಯ ನೀಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಎರಡನೇ ಬಾರಿಗೆ ಅಮೆರಿಕ ಕಾಂಗ್ರೆಸ್‌ನ ಜಂಟಿ ಸಭೆಯನ್ನು ಉದ್ದೇಶಿಸಿ ಮಾತನಾಡುವ ಮೊದಲ ಭಾರತೀಯ ಪ್ರಧಾನಿಯಾಗಲಿದ್ದಾರೆ.

ಇನ್ನು ಈ ಬೃಹದಾಕಾರದ 'ಮೋದಿ ಜಿ ಥಾಲಿ'ಯನ್ನು ಬಾಣಸಿಗ ಶ್ರೀಪಾದ್ ಕುಲಕರ್ಣಿ ಅವರು ವೈವಿಧ್ಯಮಯ ಭಕ್ಷ್ಯಗಳಿಂದ ಸಿದ್ಧಪಡಿಸಿದ್ದಾರೆ. ಈ ಮೋದಿ ಜಿ ಥಾಲಿಯಲ್ಲಿನ ಖಾದ್ಯಗಳನ್ನು ನೋಡುವುದಾದರೆ, ಖಿಚಡಿ, ರಸಗುಲ್ಲಾ, ಸರ್ಸೋ ಡಾ ಸಾಗ್, ಮತ್ತು ದಮ್ ಆಲೂದಿಂದ ಕಾಶ್ಮೀರಿ, ಇಡ್ಲಿ, ಧೋಕ್ಲಾ, ಚಾಚ್ ಮತ್ತು ಪಾಪಡ್​ವರೆಗೆ ಎಲ್ಲಾ ರುಚಿಕರ ಪದಾರ್ಥಗಳು ಇರುತ್ತದೆ.

2019 ರಲ್ಲಿ ವಿಶ್ವಸಂಸ್ಥೆ ಭಾರತ ಸರ್ಕಾರದ ಶಿಫಾರಸಿನ ನಂತರ 2023 ರ ವರ್ಷವನ್ನು 'ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷ' ವೆಂದು ಘೋಷಿಸಿದೆ. ಈ ಘೋಷಣೆಯ ಉದ್ದೇಶವನ್ನು ಆಚರಿಸಲು ಮತ್ತು ಸಿರಿಧಾನ್ಯಗಳ ಪ್ರಾಮುಖ್ಯತೆ ಮತ್ತು ಅದರ ಕುರಿತಾದ ಜಾಗೃತಿ ಮೂಡಿಸಲು ನ್ಯೂಜೆರ್ಸಿ ರೆಸ್ಟೋರೆಂಟ್‌ ಧಾನ್ಯಗಳನ್ನೇ ಬಳಸಿ ಈ ಔತಣ ಸಿದ್ದಪಡಿಸಿದೆ.

ಇದೇ ರೀತಿ ರೆಸ್ಟೋರೆಂಟ್​ ಮಾಲೀಕರು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರಿಗೆ ಎಂದೇ ವಿಶೇಷವಾದ ಮತ್ತೊಂದು ಥಾಲಿಯನ್ನು ಶೀಘ್ರದಲ್ಲೇ ಪ್ರಾರಂಭಿಸಲು ಯೋಜಿಸಿದ್ದಾರೆ. ಇನ್ನು ರೆಸ್ಟೋರೆಂಟ್​ಗಳು ಪ್ರಧಾನಿ ಮೋದಿಯವರಿಗೆ ಥಾಲಿ ಅರ್ಪಿಸಿರುವುದು ಇದೇ ಮೊದಲಲ್ಲ.

ಕಳೆದ ವರ್ಷ, ಸೆಪ್ಟೆಂಬರ್ 17 ರಂದು ಪ್ರಧಾನಿ ಮೋದಿಯವರ ಜನ್ಮದಿನದ ಮೊದಲು, ದೆಹಲಿ ಮೂಲದ ರೆಸ್ಟೋರೆಂಟ್ 56 ಇಂಚಿನ ನರೇಂದ್ರ ಮೋದಿ ಥಾಲಿ ಎಂಬ ಥಾಲಿ ಪ್ರಾರಂಭಿಸಿತ್ತು. ದೆಹಲಿಯ ಕೊನಾಟ್ ಪ್ಲೇಸ್ನಲ್ಲಿರುವ ಎಆರ್ಡಿಒಆರ್ 2.1 ಎಂಬ ರೆಸ್ಟೋರೆಂಟ್ 56 ವಸ್ತುಗಳನ್ನು ಹೊಂದಿರುವ ದೊಡ್ಡ ಗಾತ್ರದ ಥಾಲಿಯನ್ನು ಪ್ರಸ್ತುತ ಪಡಿಸಿತು, ಗ್ರಾಹಕರು ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರವನ್ನು ಆಯ್ಕೆ ಮಾಡಬಹುದಾಗಿತ್ತು.

ಜೂನ್ 22 ರಂದು, ಏಳು ಸಾವಿರಕ್ಕೂ ಹೆಚ್ಚು ಭಾರತೀಯ ಅಮೆರಿಕನ್ನರು ಶ್ವೇತಭವನದ ಬಳಿ ಸೇರಲಿದ್ದು, ಅಧ್ಯಕ್ಷ ಬೈಡನ್​ ಮತ್ತು ಪ್ರಥಮ ಮಹಿಳೆ ಜಿಲ್​ ಬೈಡನ್​ 21-ಗನ್ ಸೆಲ್ಯೂಟ್ ಮೂಲಕ ಮೋದಿ ಅವರನ್ನು ಸ್ವಾಗತಿಸಲಿದ್ದಾರೆ. ಅಮೆರಿಕದಲ್ಲಿ ಪ್ರಧಾನಿ ಮೋದಿ ವಾಷಿಂಗ್ಟನ್‌ನ ಜಾನ್ ಎಫ್ ಕೆನಡಿ ಸೆಂಟರ್‌ನಲ್ಲಿ ಯುಎಸ್ ಉನ್ನತ ಕಂಪನಿಗಳ ಅಧ್ಯಕ್ಷ ಮತ್ತು ಸಿಇಒಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಜೊತೆಗೆ DC ಯ ರೊನಾಲ್ಡ್ ರೇಗನ್ ಸೆಂಟರ್‌ನಲ್ಲಿ ಭಾರತೀಯ ವಲಸೆಗಾರರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪ್ರಧಾನಿ ಮೋದಿಯವರು ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದು, ಅವರು ಹೋದಲ್ಲೆಲ್ಲಾ ಭಾರತೀಯ ವಲಸಿಗರಿಂದ ಪ್ರೀತಿ ಮತ್ತು ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.

ಇದನ್ನೂ ಓದಿ: Pakistan Political crisis ಸೇನೆಯ ಬೆಂಬಲ ಸಿಗದೆ ಇಮ್ರಾನ್​ ಖಾನ್​ಗೆ ಹತಾಶೆ: ಬಿಲಾವಲ್ ಭುಟ್ಟೊ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.