ETV Bharat / international

ದಟ್ಟ ಮಂಜಿಗೆ ಬೃಹತ್​ ಸರಣಿ ಅಪಘಾತ: 7 ಮಂದಿ ಸಾವು, 25ಕ್ಕೂ ಹೆಚ್ಚು ಮಂದಿಗೆ ಗಾಯ

author img

By ETV Bharat Karnataka Team

Published : Oct 24, 2023, 2:12 PM IST

ಈ ಬೃಹತ್​ ಸರಣಿ ಅಪಘಾತದಲ್ಲಿ 158ಕ್ಕೂ ಹೆಚ್ಚು ವಾಹನಗಳು ನಜ್ಜುಗುಜ್ಜಾಗಿ, ಸಟ್ಟುಕರಕಲಾಗಿವೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

Massive Vehicle crash in louisiana due to Super Fog
ಸರಣಿ ಅಪಘಾತಕ್ಕೆ ಸುಟ್ಟು ಕರಕಲಾದ ವಾಹನಗಳು

ನ್ಯೂ ಓರ್ಲಿಯನ್ಸ್( ಅಮೆರಿಕ)​: ಯುನೈಟೆಡ್​ ಸ್ಟೇಟ್ಸ್​​​​​ನ ನ್ಯೂ ಓರ್ಲಿಯನ್ಸ್​ನಲ್ಲಿ ಸೋಮವಾರ ಆವರಿಸಿದ್ದ ಜೌಗು ಪ್ರದೇಶದ ಬೆಂಕಿಯ ಹೊಗೆ ಹಾಗೂ ದಟ್ಟ ಮಂಜಿನಿಂದಾಗಿ ರಸ್ತೆ ಕಾಣದೇ ಬೃಹತ್ ಪ್ರಮಾಣದ​ ಸರಣಿ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ವಾಹನಗಳಿಗೆ ಹೊತ್ತಿಕೊಂಡ ಬೆಂಕಿ ಹಾಗೂ ಹೊಗೆಯಿಂದಾಗಿ ಕನಿಷ್ಠ ಏಳು ಮಂದಿ ಸಾವನಪ್ಪಿದ್ದಾರೆ ಎಂದು ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸರಣಿ ಅಪಘಾತದಲ್ಲಿ ಸುಮಾರು 158 ವಾಹನಗಳು ನಜ್ಜುಗುಜ್ಜಾಗಿದ್ದು, ಹಲವು ವಾಹನಗಳು ಸುಟ್ಟುಕರಕಲಾಗಿವೆ. ನ್ಯೂ ಓರ್ಲಿಯನ್ಸ್​ನ ವಾಯವ್ಯ 55 ಇಂಟರ್​ಸ್ಟೇಟ್​ ಹೆದ್ದಾರಿಯಲ್ಲಿ ಬೆಳಗ್ಗೆ 9 ಗಂಟೆ ಹೊತ್ತಿಗೆ ದಟ್ಟ ಮಂಜು ಆವರಿಸಿತ್ತು. ಹೀಗಾಗಿ ವಾಹನ ಚಾಲಕರಿಗೆ ರಸ್ತೆ ಕಾಣದಂತಾಗಿತ್ತು. ಈ ಪರಿಣಾಮ ಸರಣಿ ಅಪಘಾತಗಳು ಸಂಭವಿಸಿವೆ. ಈ ದುರ್ಘಟನೆಯಲ್ಲಿ 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಲೂಸಿಯಾನ ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ. ​

ನ್ಯೂ ಓರ್ಲಿಯನ್ಸ್​ ಪೊಲೀಸರ ಪ್ರಕಾರ, ಉತ್ತರ ಮತ್ತು ದಕ್ಷಿಣ ದಿಕ್ಕಿನ ಮಾರ್ಗಗಳಲ್ಲೂ ವಾಹನಗಳು ಅಪಘಾತಗೊಂಡಿವೆ. ಅವುಗಳಲ್ಲಿ ಕೆಲವು ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಎಲ್ಲ ವಾಹನಗಳು ಒಂದರ ಹಿಂದೆ ಒಂದರಂತೆ ಸಿಕ್ಕಿಹಾಕಿಕೊಂಡಿದ್ದು, ಅದರಲ್ಲಿ ವಿಷಕಾರಿ ದ್ರವವನ್ನು ಸಾಗಿಸುತ್ತಿದ್ದ ಟ್ಯಾಂಕರ್​ ಟ್ರಕ್ ವೊಂದನ್ನು ಅಲ್ಲಿಂದ ಬೇರ್ಪಡಿಸಲಾಗುತ್ತಿದೆ. ಈ ಮೂಲಕ ಆಗುವ ಮತ್ತಷ್ಟು ಅಪಾಯವನ್ನು ತಡೆಯಲಾಗುತ್ತಿದೆ. ಇನ್ನು ಟ್ರಾಫಿಕ್​​​​​​ ಒಳಗೆ ಸಿಲುಕಿಕೊಂಡಿರುವವರನ್ನು ಕಾಪಾಡುವ ಕಾರ್ಯಾಚರಣೆ ನಡೆಯುತ್ತಿದ್ದು, ಸಾವು ನೋವುಗಳು ಹೆಚ್ಚಾಗುವ ಸಾಧ್ಯೆತಯಿದೆ. ತಮ್ಮ ಕುಟುಂಬದ ಸದಸ್ಯರು ಕಾಣೆಯಾಗಿರುವಂತಹವರು ಏಜೆನ್ಸಿಯನ್ನು ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.

ಸ್ಟೇಟ್​ ಪೊಲೀಸ್​ ಫೇಸ್​ಬುಕ್​ ಪೇಜ್​ನಲ್ಲಿ ದುರ್ಘಟನೆಯ ವೈಮಾನಿಕ ಚಿತ್ರಗಳನ್ನು ಹೊಂಚಿಕೊಳ್ಳಲಾಗಿದೆ. ಚಿತ್ರಗಳಲ್ಲಿ ರಸ್ತೆಯಲ್ಲಿ ಹಲವು ವಾಹನಗಳು ಒಂದೆಡೆ ರಾಶಿ ಬಿದ್ದಂತೆ, ಒಂದರ ಹಿಂದೆ ಒಂದು ಅಪಘಾತಗೊಂಡು, ಬಹುತೇಕ ವಾಹನಗಳು ಸುಟ್ಟು ಕರಕಲಾದಂತೆ ಕಾಣುತ್ತಿವೆ. ಸದ್ಯ ಹೆದ್ದಾರಿಯನ್ನು ಮುಚ್ಚಲಾಗಿದ್ದು, ವಾಹನ ಸವಾರರು ಪರ್ಯಾಯ ಮಾಗರ್ವನ್ನು ಆಯ್ದುಕೊಳ್ಳುವಂತೆ ಪೊಲೀಸರು ತಿಳಿಸಿದ್ದಾರೆ.

ಲೂಸಿಯಾನದ ಬ್ಯಾಟನ್​ ರೂಜ್​ ಕಡೆಗೆ ಮಿಸ್ಸಿಸ್ಸಿಪ್ಪಿ ನದಿ ಕಣಿವೆಯಾದ್ಯಂತ ಜೌಗು ಪ್ರದೇಶದಲ್ಲಿ ಕಾಣಿಸಿಕೊಂಡ ಬೆಂಕಿಯ ಹೊಗೆ ಹಾಗೂ ಗಾಳಿಯಲ್ಲಿ ತೇವಾಂಶದಿಂದ ದಟ್ಟ ಮಂಜು ಆವರಿಸಿದೆ ಎಂದು ನ್ಯೂ ಓರ್ಲಿಯನ್ಸ್​ ರಾಷ್ಟ್ರೀಯ ಹವಾಮಾನ ಇಲಾಖೆಯ ಅಧಿಕಾರಿ ಟೈಲರ್​ ಸ್ಟಾನ್​ಫೀಲ್ಡ್​ ತಿಳಿಸಿದ್ದಾರೆ. ಸೋಮವಾರ ಮುಂಜಾನೆ 3 ಗಂಟೆಯಿಂದಲೇ ಮಂಜು ಆವರಿಸಲಾರಂಭಿಸಿದ್ದು, ಸೂರ್ಯೋದಯದ ಹೊತ್ತಿಗೆ ದಟ್ಟವಾಗಿತ್ತು.

ಇದನ್ನೂ ಓದಿ : ಪಶ್ಚಿಮ ಕಾಂಗೋದಲ್ಲಿ ದೋಣಿಯೊಳಗೆ ಅಗ್ನಿ ದುರಂತ... 16 ಮಂದಿ ದಹನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.