ETV Bharat / international

ಶ್ರೀಲಂಕಾದ ಮಕ್ಕಳಲ್ಲಿ ಹೆಚ್ಚಿದ ಅಪೌಷ್ಟಿಕತೆ: ತುರ್ತು ಆಹಾರ ಭದ್ರತಾ ಕ್ರಮಗಳಿಗೆ ಮನವಿ - ವಿದೇಶಿ ವಿನಿಮಯದ ಕೊರತೆ

ಶ್ರೀಲಂಕಾವು ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿದ್ದು ಅಲ್ಲಿನ ಮಕ್ಕಳನ್ನು ಅಪೌಷ್ಟಿಕತೆ ಕಾಡುತ್ತಿದೆ.

malnutrition
ಅಪೌಷ್ಟಿಕತೆ
author img

By

Published : Dec 2, 2022, 9:57 AM IST

ಕೊಲಂಬೊ: ಶ್ರೀಲಂಕಾದ ಮಕ್ಕಳಲ್ಲಿ ಅಪೌಷ್ಟಿಕತೆಯ ಪ್ರಮಾಣ ಹೆಚ್ಚುತ್ತಿದೆ. ದೇಶದಲ್ಲಿ ಉಂಟಾಗಿರುವ ಹಣಕಾಸಿನ ಕೊರತೆಯೇ ಇದಕ್ಕೆ ಮುಖ್ಯ ಕಾರಣ. ಗಂಭೀರ ಸಮಸ್ಯೆ ಪರಿಹರಿಸಲು ಆಹಾರ ಭದ್ರತೆಗೆ ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯವಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವಾಲಯದ ಕುಟುಂಬ ಆರೋಗ್ಯ ಬ್ಯೂರೋದ ನಿರ್ದೇಶಕಿ ಡಾ.ಚಿತ್ರಮಾಲಿ ಡಿ ಸಿಲ್ವಾ, ಶ್ರೀಲಂಕಾವು ತನ್ನ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವ ಕಾರಣ ಮಕ್ಕಳಲ್ಲಿ ತೀವ್ರ ಅಪೌಷ್ಟಿಕತೆ ಕಂಡುಬರುತ್ತಿದೆ. ಈ ವರ್ಷ ಇದರ ಪ್ರಮಾಣ ಶೇಕಡಾ 1.1 ರಿಂದ 1.4 ಕ್ಕೇರಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಉತ್ತರ-ಮಧ್ಯ ಪೊಲೊನ್ನರುವಾ ಮತ್ತು ದಕ್ಷಿಣ ಜಿಲ್ಲೆಗಳಾದ ಗಾಲೆ ಮತ್ತು ಮಾತಾರಾವುದಲ್ಲಿ ಹೆಚ್ಚು ಅಪೌಷ್ಟಿಕತೆ ಕಂಡುಬಂದಿದ್ದು, ಒಟ್ಟು 18,420 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. 2022 ರಲ್ಲಿ ಕಡಿಮೆ ತೂಕದ ಮಕ್ಕಳ ಶೇಕಡಾವಾರು ಪ್ರಮಾಣ 15.3 ರಷ್ಟಿದೆ. ಆದ್ರೆ, 2021 ರಲ್ಲಿ ಶೇ 12.2 ರಷ್ಟಿತ್ತು ಎಂದು ಅವರು ಮಾಹಿತಿ ನೀಡಿದರು.

ಇದನ್ನೂ ಓದಿ: ಅಮರಾವತಿಯಲ್ಲಿ ಅಪೌಷ್ಟಿಕತೆ: ಮೂರೇ ತಿಂಗಳಲ್ಲಿ 49 ಮಕ್ಕಳ ಮರಣ ಮೃದಂಗ!

ಅಪೌಷ್ಟಿಕತೆ ತಡೆಯಲು ಆಹಾರ ಭದ್ರತೆ ಕಾಪಾಡಿಕೊಳ್ಳಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ದಾನಿಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟು ಸಹಾಯ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಶ್ರೀಲಂಕಾದಲ್ಲಿ ಕನಿಷ್ಠ 56,000 ಮಕ್ಕಳು ಪ್ರಸ್ತುತ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು UN ವಿಶ್ವ ಆಹಾರ ಕಾರ್ಯಕ್ರಮ (WFP) ಹೇಳಿದ ಕೆಲವೇ ದಿನಗಳ ಬಳಿಕ ಆರೋಗ್ಯ ಸಚಿವಾಲಯ ಈ ಕುರಿತು ತಿಳಿಸಿದೆ. ಡಬ್ಲ್ಯೂಎಫ್​ಪಿ ಪ್ರಕಟಿಸಿದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಶೇ. 32 ರಷ್ಟು ಕುಟುಂಬಗಳ ಆಹಾರ ಪದ್ಧತಿ ಅಸುರಕ್ಷಿತವಾಗಿದೆ. ಶೇ. 68ರಷ್ಟು ಕುಟುಂಬಗಳು ಕಡಿಮೆ ಆಹಾರ ಸೇವಿಸುತ್ತಿವೆ ಎಂದಿದೆ.

ಇದನ್ನೂ ಓದಿ: ದಕ್ಷಿಣ ಭಾರತದ ಮಕ್ಕಳ ಅಪೌಷ್ಟಿಕತೆ ಪ್ರಮಾಣದಲ್ಲಿ ಕರ್ನಾಟಕ ಮೊದಲು.. ವರದಿಯಲ್ಲಿ ಬಹಿರಂಗ

22 ಮಿಲಿಯನ್ ಜನರಿರುವ ಶ್ರೀಲಂಕಾದಲ್ಲಿ ವರ್ಷದ ಆರಂಭದಲ್ಲಿ ವಿದೇಶಿ ವಿನಿಮಯದ ಕೊರತೆ ಉಂಟಾಗಿ ಆರ್ಥಿಕ ಮತ್ತು ರಾಜಕೀಯ ಪ್ರಕ್ಷುಬ್ಧತೆಗೆ ಕಾರಣವಾಯಿತು. ಪರಿಣಾಮ ಅಗತ್ಯ ವಸ್ತುಗಳ ಕೊರತೆ ತಲೆದೋರಿತು. ದೇಶವು ಅಗತ್ಯ ಇಂಧನ, ರಸಗೊಬ್ಬರ, ಔಷಧಿ ಸೇರಿದಂತೆ ಪ್ರಮುಖ ಆಮದುಗಳನ್ನು ಬೇಡಿಕೆೆಗೆ ಅನುಗುಣವಾಗಿ ಪಡೆಯಲು ಇನ್ನೂ ಸಾಧ್ಯವಾಗುತ್ತಿಲ್ಲ.

ಇದನ್ನೂ ಓದಿ: ಏಷ್ಯಾದ ಜನರ ಮೇಲೆ ಕೊರೊನಾ ಪ್ರಭಾವ.. ಅಪೌಷ್ಠಿಕತೆ ಮೇಲೆ ಬೆಳಕು ಚೆಲ್ಲಿದ ವಿಶ್ವಸಂಸ್ಥೆ ವರದಿ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.