ETV Bharat / international

ಲಂಡನ್​ನ ಟ್ರಾಫಲ್ಗರ್ ಸ್ಕ್ವೇರ್​ನಲ್ಲಿ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದಿಂದ ಆಚರಣೆ - Diwali celebration

ಲಂಡನ್​ನ ಟ್ರಾಫಲ್ಗರ್ ಸ್ಕ್ವೇರ್​ನಲ್ಲಿ ನಿನ್ನೆ (ಭಾನುವಾರ) ಸಂಭ್ರಮದಿಂದ ದೀಪಾವಳಿ ಹಬ್ಬದ ಆಚರಣೆ ಮಾಡಲಾಯಿತು. ಲಂಡನ್ ಮೇಯರ್ ಸಾದಿಕ್ ಖಾನ್ ಅವರು ಕಾರ್ಯಕ್ರಮ ಆಯೋಜಿಸಿದ್ದಾರೆ.

Diwali celebration
ಲಂಡನ್​ನ ಟ್ರಾಫಲ್ಗರ್ ಸ್ಕ್ವೇರ್​ನಲ್ಲಿ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದಿಂದ ಆಚರಣೆ
author img

By ETV Bharat Karnataka Team

Published : Oct 30, 2023, 7:34 AM IST

ಲಂಡನ್ (ಯುಕೆ): ಲಂಡನ್ ಮೇಯರ್ ಸಾದಿಕ್ ಖಾನ್ ಭಾನುವಾರ ಟ್ರಾಫಲ್ಗರ್ ಸ್ಕ್ವೇರ್‌ನಲ್ಲಿ ವಾರ್ಷಿಕ ದೀಪಾವಳಿ ಆಚರಣೆ ಆಯೋಜಿಸಿದ್ದಾರೆ. ನಿನ್ನೆ (ಭಾನುವಾರ) ಮಧ್ಯಾಹ್ನ 1ರಿಂದ ಸಂಜೆ 7 ರವರೆಗೆ (ಸ್ಥಳೀಯ ಕಾಲಮಾನ) ನಡೆದ ಉಚಿತ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾರತೀಯ ಸಾಂಪ್ರದಾಯಿಕ ನೃತ್ಯಗಳು, ಸಂಗೀತ, ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಭಾರತದ ವಿವಿಧ ಭಾಗಗಳ ಖಾದ್ಯಗಳು ಹಬ್ಬದ ಮೆರಗನ್ನು ಹೆಚ್ಚಿಸಿದವು.

Diwali celebration
ಭಾರತೀಯ ಸಾಂಪ್ರದಾಯಿಕ ನೃತ್ಯ

ಗಮನಸೆಳೆದ ವಿವಿಧ ಪ್ರದರ್ಶನಗಳು: ಲಂಡನ್‌ನ ಹಿಂದೂ, ಸಿಖ್ ಮತ್ತು ಜೈನ ಸಮುದಾಯವರಿಂದ ನಡೆದ ವಿವಿಧ ಪ್ರದರ್ಶನಗಳು ಗಮನ ಸೆಳೆದವು. ಯೋಗ ಕಾರ್ಯಾಗಾರಗಳು, ಬೊಂಬೆ ಪ್ರದರ್ಶನಗಳನ್ನು ವೀಕ್ಷಿಸಿದ ಜನರು ಸಂತಸಪಟ್ಟರು. ಸಾದಿಕ್ ಖಾನ್ ಅವರು ಈ ಕಾರ್ಯಕ್ರಮವನ್ನು ದೀಪಾವಳಿಯ ಸಾಂಕೇತಿಕವಾಗಿ ಕತ್ತಲೆಯ ಮೇಲೆ ಬೆಳಕಿನ ವಿಜಯವನ್ನು ಸಾಕಾರಗೊಳಿಸಿದ್ದಾರೆ ಎಂದು ಭಾಗವಹಿಸಿದ್ದ ಜನರು ಶ್ಲಾಘಿಸಿದ್ದಾರೆ.

Diwali celebration
ನೃತ್ಯ ಪ್ರದರ್ಶನ

ಸ್ಥಳೀಯ ನಿವಾಸಿ, ಶಿಕ್ಷಕ ಜೇಮ್ಸ್ ಅವರು ಮೊದಲ ಬಾರಿಗೆ ದೀಪಾವಳಿಯನ್ನು ಆಚರಿಸಿದರು. ''ದೀಪಾವಳಿಯನ್ನು ಅದ್ಭುತವಾದ ಹಬ್ಬ ಎಂದು ಕರೆದಿದ್ದಾರೆ. "ದೀಪಾವಳಿ ಹಬ್ಬವು ವಿಭಿನ್ನ ಅನುಭವವನ್ನು ನೀಡಿದೆ. ಲಂಡನ್‌ನಲ್ಲಿರುವ ಪ್ರತಿಯೊಬ್ಬರೂ ಈ ಅದ್ಭುತ ಹಬ್ಬವನ್ನು ಆಚರಿಸಲು ಒಗ್ಗೂಡಿದ್ದಾರೆ. ನಾನು ನೃತ್ಯವನ್ನು ಪ್ರೀತಿಸುತ್ತೇನೆ. ರಾಮ ಮತ್ತು ಸೀತೆಯ ಕಥೆಯ ಮರು ನಿರ್ಮಾಣಗಳನ್ನು ಸಹ ಇಷ್ಟಪಡುತ್ತೇನೆ. ಒಂದು ಜಾಗತಿಕ ಸಮುದಾಯವಾಗಿ ಒಟ್ಟಿಗೆ ಹಬ್ಬದ ಕ್ಷಣವನ್ನು ಅನುಭವಿಸುವುದು ತುಂಬಾ ಸುಂದರವಾಗಿದೆ" ಎಂದು ಅವರು ತಿಳಿಸಿದ್ದಾರೆ.

Diwali celebration
ದೀಪಾವಳಿ ಹಿನ್ನೆಲೆ ಭಾರತೀಯ ಸಾಂಪ್ರದಾಯಿಕ ನೃತ್ಯ

ಕಲಾವಿದರು ಜಾನಪದ ಹಾಡುಗಳನ್ನು ಜನ ಮನ ಸಳೆದರು. ಬಾಲಿವುಡ್ ಹಾಡುಗಳಾದ 'ಜೈ ಹೋ' ಮತ್ತು 'ಜೋ ಹೈ ಅಲ್ಬೆಲಾ' ಹಾಡುಗಳಿಗೆ ನೃತ್ಯ ಮಾಡಿದರು. ದೀಪಾವಳಿ ಆಚರಣೆಯಲ್ಲಿ ಪಾಲ್ಗೊಂಡಿದ್ದ ಜನರು ಭಾರತೀಯ ಆಹಾರ ಸವಿದು ಖುಷಿಪಟ್ಟಿದ್ದಾರೆ.

Diwali celebration
ಸಂಗೀತ ಕಾರ್ಯಕ್ರಮ

ದೀಪಾವಳಿ ಆಚರಣೆಯಿಂದ ಮೈಮನ ರೋಮಾಂಚನ: ಭಾರತೀಯ ಮೂಲದ ಹುಡುಗಿಯೊಬ್ಬಳು ಮಾತನಾಡಿ, "ಇದೇ ಮೊದಲ ಬಾರಿಗೆ ನಾನು ಭಾರತದ ಹೊರಗೆ ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದೇನೆ. ಇದು ಅದ್ಭುತವಾಗಿದೆ. ಇಲ್ಲಿಗೆ ಬಂದು ಹಬ್ಬದ ಆಚರಣೆಯಲ್ಲಿ ತೊಡಗಿರುವುದು ತುಂಬಾ ಒಳ್ಳೆಯ ಅನುಭವವಾಗಿದೆ. ನಾವೆಲ್ಲರೂ ಹೊಸ ಜನರನ್ನು ಭೇಟಿಯಾಗುವುದು ಕೂಡ ಸಂತಸಕ್ಕೆ ಕಾರಣವಾಗಿದೆ. ನಾನು ಭಾರತೀಯ ಆಹಾರಕ್ಕಾಗಿ ಹಂಬಲಿಸುತ್ತಿದ್ದೆ. ಸದ್ಯ ಈ ಆಹಾರ ಸವಿದಿರುವುದು ಖಷಿ ನೀಡಿದೆ. ದೀಪಾವಳಿ ಹಬ್ಬದ ಆಚರಣೆಯು ಮೈಮನ ರೋಮಾಂಚನಗೊಳಿಸಿದೆ'' ಎಂದು ಹೇಳಿದ್ದಾರೆ.

ಟ್ರಾಫಲ್ಗರ್ ಸ್ಕ್ವೇರ್‌ನಲ್ಲಿ ನಡೆದ ದೀಪಾವಳಿ ಆಚರಣೆಯಲ್ಲಿ ಭಾಗವಹಿಸಿದ ಭಾರತೀಯ ಮೂಲದ ಹುಡುಗನೊಬ್ಬ ಮಾತನಾಡಿ, "ಭಾರತೀಯರಲ್ಲದ ಲಂಡನ್‌ನವರು ಬೆಳಕಿನ ಹಬ್ಬ ಆಚರಿಸುವುದನ್ನು ನೋಡಲು ನಮಗೆ ಸಂತೋಷವಾಗುತ್ತದೆ. ವಿದೇಶದಲ್ಲಿ ದೀಪಾವಳಿ ಹಬ್ಬದ ಆಚರಣೆಯು ಅದ್ಭುತ ಅನುಭವವನ್ನು ಕೊಟ್ಟಿದೆ'' ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ದೀಪಾವಳಿ ಆಚರಣೆಯಲ್ಲಿ ಭಾಗವಹಿಸಿದ್ದ ಸ್ಥಳೀಯ ನಿವಾಸಿ ವಿವಿಯನ್ ಅವರು, "ದೀಪಾವಳಿಯು ಬೆಳಕಿನ ಹಬ್ಬವಾಗಿದೆ. ಟ್ರಾಫಲ್ಗರ್ ಸ್ಕ್ವೇರ್‌ನಲ್ಲಿ ಆಚರಣೆ ಮಾಡುತ್ತಿರುವುದು ನನ್ನ ಮೊದಲ ದೀಪಾವಳಿ. ನಾನು ಈ ಹಬ್ಬವನ್ನು ನಿಜವಾಗಿಯೂ ತುಂಬಾ ಆನಂದಿಸಿದೆ. ನಾನು ನನ್ನ ಸ್ನೇಹಿತನೊಂದಿಗೆ ಇಲ್ಲಿಗೆ ಬಂದಿದ್ದೇನೆ. ನಾನು ನೃತ್ಯ ಮಾಡಲು ಇಷ್ಟಪಡುತ್ತೇನೆ. ಇಲ್ಲಿನ ವಾತಾವರಣವು ಅದ್ಭುತವಾಗಿದೆ. ಇಲ್ಲಿನ ಜನರು ಕೂಡ ತುಂಬಾ ಸ್ನೇಹಪರರಾಗಿದ್ದಾರೆ" ಎಂದು ತಿಳಿಸಿದ್ದಾರೆ. ಈ ವರ್ಷ, ಭಾರತದಲ್ಲಿ ದೀಪಾವಳಿಯನ್ನು ನವೆಂಬರ್ 12ರ (ಭಾನುವಾರ) ಆಚರಿಸಲಾಗುತ್ತದೆ.

ಇದನ್ನೂ ಓದಿ: ಮತ್ತೊಮ್ಮೆ ಚೀನಾ ಹಡಗಿನ ಕಾರ್ಯಾಚರಣೆಗೆ ಅನುಮತಿ ನೀಡಿದ ಶ್ರೀಲಂಕಾ; ಭಾರತದ ತೀವ್ರ ಆಕ್ಷೇಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.