ವಿಶ್ವಸಂಸ್ಥೆ : ಕಳೆದ ತಿಂಗಳು ಟರ್ಕಿಯಲ್ಲಿ ಸಂಭವಿಸಿದ ಭೀಕರ ಭೂಕಂಪದ ನಂತರ ಅಲ್ಲಿನ ಜನರು ತಮ್ಮದು ಎನ್ನುವ ಎಲ್ಲವನ್ನು ಕಳೆಕೊಂಡು, ಆಹಾರ ಸೇರಿದಂತೆ ಇನ್ನಿತರ ಮೂಲ ಸೌಲಭ್ಯಗಳ ಸಮಸ್ಯೆ ಎದುರಿಸಿದ್ದರು. ಈ ಸಂದರ್ಭದಲ್ಲಿ ವಿಶ್ವ ಆಹಾರ ಕಾರ್ಯಕ್ರಮದ (ಡಬ್ಲ್ಯುಎಫ್‌ಪಿ) ಪರಿಹಾರ ಕಾರ್ಯಾಚರಣೆಗಳ ನೇತೃತ್ವವನ್ನು ಭಾರತ ಮೂಲದ ಕವಿಲ್ಮದಂ ರಾಮಸ್ವಾಮಿ ಪಾರ್ವತಿ ಅವರು ವಹಿಸಿದ್ದರು. ಇದೀಗ ವಿಶ್ವಸಂಸ್ಥೆಯ (ಯುಎನ್) ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಅವರು ತಜಕಿಸ್ತಾನದಲ್ಲಿ ವಿಶ್ವಸಂಸ್ಥೆಯ ರೆಸಿಡೆಂಟ್ ಕೋಆರ್ಡಿನೇಟರ್ ಆಗಿ ಕವಿಲ್ಮದಂ ರಾಮಸ್ವಾಮಿ ಪಾರ್ವತಿ ಅವರನ್ನು ನೇಮಿಸಿದ್ದಾರೆ. ಪ್ರಧಾನ ಕಾರ್ಯದರ್ಶಿ ಗುಟೆರೆಸ್ ಅವರ, ವಕ್ತಾರರಾದ ಸ್ಟೀಫನ್ ಡುಜಾರಿಕ್ ಅವರು ಬುಧವಾರ ನಿವಾಸಿ ಸಂಯೋಜಕರಾಗಿ ಕವಿಲ್ಮದಂ ರಾಮಸ್ವಾಮಿ ಪಾರ್ವತಿ ಅವರನ್ನು ನೇಮಕವನ್ನು ಘೋಷಿಸಿದರು.
ವಿಶ್ವಸಂಸ್ಥೆಯು ತನ್ನ ಗುರಿಯನ್ನು ನಮ್ಮ 130 ನಿವಾಸಿ ಸಂಯೋಜಕರಲ್ಲಿ ಪೂರ್ಣ ಲಿಂಗ ಸಮಾನತೆಯನ್ನು ಇಟ್ಟುಕೊಂಡಿದೆ ಎಂದು ಯುಎನ್ ಹೇಳಿದೆ. ಯುಎನ್ ಪ್ರಕಾರ ಟರ್ಕಿಯಲ್ಲಿ ಭೂಕಂಪದ ನಂತರ ತಕ್ಷಣವೇ ಸಾವಿರಾರು ಜನರಿಗೆ ಆಹಾರದ ನೆರವು ನೀಡಲು ತುರ್ತು ಪ್ರತಿಕ್ರಿಯನ್ನು ಪಾರ್ವತಿ ಅವರು ಮುನ್ನಡೆಸಿದರು. ಬ್ರಿಟನ್‌ನ ಕ್ರಾನ್‌ಫೀಲ್ಡ್ ವಿಶ್ವವಿದ್ಯಾನಿಲಯದಲ್ಲಿ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಿಂದ ಸಾಂಸ್ಥಿಕ ಪ್ರದರ್ಶನ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಈ ಹಿಂದೆ ಲೈಬೀರಿಯಾದಲ್ಲಿ ಡಬ್ಲ್ಯುಎಫ್‌ಪಿಯ ನಿರ್ದೇಶಕರಾಗಿ ಮತ್ತು ಅಫ್ಘಾನಿಸ್ತಾನದಲ್ಲಿ ಉಪ ನಿರ್ದೇಶಕರಾಗಿ ತಮ್ಮ ಕಾರ್ಯವನ್ನು ಸರ್ಮಥವಾಗಿ ನಿರ್ವಹಿಸಿದ್ದರು. ಪಾರ್ವತಿ ಅವರು ತಮ್ಮ 30 ವರ್ಷಗಳ ವೃತ್ತಿಜೀವನದ ಅವಧಿಯಲ್ಲಿ ಪ್ರಪಂಚದ ಹಸಿವನ್ನು ಕೊನೆಗೊಳಿಸಲು ಸಾಕಷ್ಟು ಕೊಡುಗೆ ನೀಡಿದ್ದಾರೆ.
ವಿಶ್ವ ಸಂಸ್ಥೆಯ ಹಲವಾರು ವಲಯಗಳಲ್ಲಿ ಕೊಡುಗೆ : ಯುನೈಟೆಡ್ ನೇಷನ್ ರೆಸಿಡೆಂಟ್ ಕೋಆರ್ಡಿನೇಟರ್ ಆಗಿ ನೇಮಕಗೊಳ್ಳುವ ಮೊದಲು, ಪಾರ್ವತಿ ಅವರು ವಿಶ್ವಸಂಸ್ಥೆಯ ವಿಶ್ವ ಆಹಾರ ಕಾರ್ಯಕ್ರಮದ ಪತ್ರಿನಿಧಿಯಾಗಿ ಮತ್ತು ದೇಶದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಅತ್ಯಂತ ದುರ್ಬಲ ಜನರ ಆಹಾರ ಮತ್ತು ಪೌಷ್ಟಿಕಾಂಶದ ಅಗತ್ಯಗಳನ್ನು ಪರಿಹರಿಸಿ, ಭೂಕಂಪ ಪೀಡಿತ ಜನರಿಗೆ ತುರ್ತು ನೆರವು ನೀಡುವ ಸರ್ಕಾರದ ಪ್ರಯತ್ನಗಳಿಗೆ ಬೆಂಬಲವಾಗಿ ಯುಎನ್ ಹಲವಾರು ವಲಯಗಳಲ್ಲಿ ಕೊಡುಗೆ ನೀಡಿದ್ದಾರೆ.
ತಮ್ಮ ವೈವಿಧ್ಯಮಯ ಪಾತ್ರಗಳ ಮೂಲಕ ಕಾರ್ಯ ನಿರ್ವಹಿಸಿರುವ ಪಾರ್ವತಿ ಅವರು ರಾಷ್ಟ್ರೀಯ ಸರ್ಕಾರಗಳು ವಿಶ್ವಸಂಸ್ಥೆಯ ಏಜಿನ್ಸಿಗಳ ಮತ್ತು ಅಂತಾರಾಷ್ಟ್ರೀಯ ಮಾನವೀಯ ಅಭಿವೃದ್ಧಿ ಕಾರ್ಯದಲ್ಲಿ ಶ್ರಮಿಸಿದ್ದು, ಏಷ್ಯಾ ಪೆಸಿಫಿಕ್ ಮತ್ತು ಪಶ್ಚಿಮ ಆಫ್ರಿಕಾದಲ್ಲಿ ಡಬ್ಲ್ಯುಎಫ್‌ಪಿಯಾಗಿ ಪ್ರಾದೇಶಿಕ ಮತ್ತು ಜಾಗತಿಕ ಪ್ರಧಾನ ಕಚೇರಿಯೊಂದಿಗೆ ಕೆಲಸ ಮಾಡಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಪಾರ್ವತಿ ಅವರು ತಮ್ಮ ಅನುಭವ ಕಾರ್ಯತಂತ್ರದ ಯೋಜನೆ, ಕಾರ್ಯಕ್ಷಮತೆ, ಅಪಾಯ ನಿರ್ವಹಣೆ, ಜನರಿಗೆ ಸೇವೆ, ಸಂಘರ್ಷ ವಿಶ್ಲೇಷಣೆ ಮತ್ತು ಮಾನವೀಯ ಪ್ರವೇಶ ಮಾತುಕತೆಗಳ ಮೇಲೆ ಕೇಂದ್ರೀಕರಿಸಿ ಉತ್ತಮ ಸಮಾಜದ ನಿರ್ಮಿಸಲು ಸರ್ಮಥಿನೀಯ ಕ್ರಮಗಳನ್ನು ತೆಗೆದುಕೊಂಡಿದ್ದಾರೆ ಎಂದು ಯುಎನ್ ಹೇಳಿದೆ.
ಇದನ್ನೂ ಓದಿ :190ಕ್ಕೂ ಹೆಚ್ಚು ವಿಶ್ವ ನಾಯಕರು ಬರೆದಿರುವ ಪತ್ರದಲ್ಲೇನಿದೆ..?