ETV Bharat / international

ಬೆಲ್ಟ್ ಅಂಡ್ ರೋಡ್ ಪ್ರಾಜೆಕ್ಟ್​ನಿಂದ ಹೊರಬರಲು ಇಟಲಿ ಚಿಂತನೆ: ಇಕ್ಕಟ್ಟಿನಲ್ಲಿ ಚೀನಾ! - ಚೀನಾ ಮತ್ತು ಇಟಲಿ ನಡುವಿನ ವ್ಯಾಪಾರ

ಚೀನಾದ ಮಹತ್ವಾಕಾಂಕ್ಷಿ ಯೋಜನೆಯಾದ ಬೆಲ್ಟ್​ ಅಂಡ್​ ರೋಡ್​ ಪ್ರಾಜೆಕ್ಟ್​​ನಿಂದ ಇಟಲಿ ಹಿಂದೆ ಸರಿಯುವ ಸಾಧ್ಯತೆಯಿದೆ,

China touts the benefits of its 'Belt and Road

author img

By ETV Bharat Karnataka Team

Published : Sep 5, 2023, 4:50 PM IST

ಬೀಜಿಂಗ್ : ರೋಮ್​​ನ ಸಂದೇಹಗಳ ಹೊರತಾಗಿಯೂ, ಬೀಜಿಂಗ್ ನೇತೃತ್ವದ ಬೆಲ್ಟ್ ಅಂಡ್ ರೋಡ್ ಉಪಕ್ರಮದ ಅಡಿಯಲ್ಲಿ ಇಟಲಿಯೊಂದಿಗಿನ ಸಹಕಾರವು ಫಲಪ್ರದವಾಗಿದೆ ಮತ್ತು ಇದರ ಮೂಲಕ ಉತ್ತಮ ಗುಣಮಟ್ಟದ ಇಟಾಲಿಯನ್ ಉತ್ಪನ್ನಗಳು ಚೀನಾದ ಸಾವಿರಾರು ಮನೆಗಳನ್ನು ಪ್ರವೇಶಿಸಿವೆ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿದ್ದಾರೆ. "ಪ್ರಾಚೀನ ಸಿಲ್ಕ್ ರೂಟ್​​ ಕಾಲದಿಂದ ಸಾಂಪ್ರದಾಯಿಕವಾಗಿ ಮುಂದುವರಿದುಕೊಂಡು ಬಂದಿರುವ ಸಾವಿರ ವರ್ಷಗಳ ನಮ್ಮ ಸ್ನೇಹ ಉಳಿದುಕೊಂಡಿದೆ" ಎಂದು ವಾಂಗ್ ಸೋಮವಾರ ಬೀಜಿಂಗ್​ಗೆ ಭೇಟಿ ನೀಡಿದ ಇಟಲಿಯ ಉಪ ಪ್ರಧಾನಿ ಆಂಟೋನಿಯೊ ತಜಾನಿ ಅವರಿಗೆ ತಿಳಿಸಿದರು.

"ಕಳೆದ ಐದು ವರ್ಷಗಳಲ್ಲಿ, ಚೀನಾ ಮತ್ತು ಇಟಲಿ ನಡುವಿನ ವ್ಯಾಪಾರ ಪ್ರಮಾಣವು 50 ಬಿಲಿಯನ್ ಡಾಲರ್​ನಿಂದ ಸುಮಾರು 80 ಬಿಲಿಯನ್ ಡಾಲರ್​ಗೆ ಏರಿಕೆಯಾಗಿದೆ ಮತ್ತು ಚೀನಾಕ್ಕೆ ಇಟಲಿಯ ರಫ್ತು ಸುಮಾರು ಶೇಕಡಾ 30 ರಷ್ಟು ಹೆಚ್ಚಾಗಿದೆ" ಎಂದು ವಾಂಗ್ ಹೇಳಿದರು.

2019 ರಲ್ಲಿ ಇಟಲಿಯು ಚೀನಾದ ಬೆಲ್ಟ್ ಅಂಡ್ ರೋಡ್​ಗೆ ಸೇರಿದ ಮೊದಲ ಪ್ರಮುಖ ಪಾಶ್ಚಿಮಾತ್ಯ ರಾಷ್ಟ್ರವಾಯಿತು. ಬೆಲ್ಟ್ ಅಂಡ್ ರೋಡ್​ ಇದು ಜಾಗತಿಕ ವ್ಯಾಪಾರ ಮತ್ತು ಮೂಲಸೌಕರ್ಯ ಉಪಕ್ರಮವಾಗಿದೆ. ಇದು ಸಹಸ್ರಮಾನಗಳ ಹಿಂದೆ ಸಾಮ್ರಾಜ್ಯಶಾಹಿ ಚೀನಾ ಮತ್ತು ಪಶ್ಚಿಮವನ್ನು ಸಂಪರ್ಕಿಸಿದ ಹಳೆಯ ಸಿಲ್ಕ್ ರೂಟ್ ರಸ್ತೆಯ ಕಲ್ಪನೆಯನ್ನು ಆಧರಿಸಿದೆ. 2019 ರಲ್ಲಿ ಇಟಲಿ ಈ ಯೋಜನೆಯ ಪಾಲುದಾರನಾಗಲು ಸಹಿ ಹಾಕಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಈ ಯೋಜನೆಯಲ್ಲಿ ತನ್ನ ಸದಸ್ಯತ್ವವನ್ನು ಮುಂದುವರಿಸುವ ಬಗ್ಗೆ ಇಟಲಿ ಉತ್ಸುಕವಾಗಿಲ್ಲ.

ಚೀನಾ ಭೇಟಿಗೆ ತೆರಳುವ ಮುನ್ನ ಮಾತನಾಡಿದ ಇಟಲಿಯ ಉಪ ಪ್ರಧಾನಿ ಆಂಟೋನಿಯೊ ತಜಾನಿ, ಬೆಲ್ಟ್ ಅಂಡ್ ರೋಡ್ ಉಪಕ್ರಮದಿಂದ ದ್ವಿಪಕ್ಷೀಯ ವ್ಯಾಪಾರ ಸುಧಾರಿಸಿಲ್ಲ ಎಂದು ಹೇಳಿದ್ದರು. "ಸಿಲ್ಕ್ ರೋಡ್ ನಾವು ನಿರೀಕ್ಷಿಸಿದ ಫಲಿತಾಂಶಗಳನ್ನು ನೀಡಿಲ್ಲ. ಇದರ ಬಗ್ಗೆ ನಾವು ಮೌಲ್ಯಮಾಪನ ಮಾಡುತ್ತಿದ್ದೇವೆ. ಇದರಲ್ಲಿ ನಮ್ಮ ಪಾಲುದಾರಿಕೆಯನ್ನು ಮುಂದುವರಿಸಬೇಕೆ ಅಥವಾ ಬೇಡವೇ ಎಂಬುದನ್ನು ಸಂಸತ್ತು ನಿರ್ಧರಿಸಲಿದೆ" ಎಂದು ಅವರು ಹೇಳಿದ್ದರು.

ಮಾರ್ಚ್ 2024 ರಲ್ಲಿ ಮುಕ್ತಾಯಗೊಳ್ಳುವ ಈ ಒಪ್ಪಂದದಿಂದ ಔಪಚಾರಿಕವಾಗಿ ಹಿಂದೆ ಸರಿಯಲು ಇಟಲಿಗೆ ಡಿಸೆಂಬರ್​ವರೆಗೆ ಸಮಯವಿದೆ. ಇಲ್ಲದಿದ್ದರೆ, ಅದನ್ನು ಮತ್ತೆ ಐದು ವರ್ಷಗಳವರೆಗೆ ವಿಸ್ತರಿಸಲಾಗುವುದು. ಒಂದೊಮ್ಮೆ ಅಂಡ್ ರೋಡ್​ ಯೋಜನೆಯಿಂದ ಇಟಲಿ ಹಿಂದೆ ಸರಿದಲ್ಲಿ ಬೀಜಿಂಗ್​ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಮುಖಭಂಗ ಎದುರಾಗಲಿದೆ.

ಚೀನಾ ಮತ್ತು ಇಟಲಿ ಪರಸ್ಪರ ಗೌರವ, ಮುಕ್ತತೆ ಮತ್ತು ಸಹಕಾರದ ಮೂಲಕ ಪರಸ್ಪರ ಹೊಂದಿಕೆಯಾಗುವ ಸರಿಯಾದ ಕ್ರಮಕ್ಕೆ ಬದ್ಧವಾಗಿರಬೇಕು ಎಂದು ವಾಂಗ್ ತಜಾನಿಗೆ ತಿಳಿಸಿದರು. ಹೊಸ ಸಂದರ್ಭಗಳು ಮತ್ತು ಹೊಸ ಅವಕಾಶಗಳ ಹಿನ್ನೆಲೆಯಲ್ಲಿ ಚೀನಾ ಎರಡೂ ಕಡೆಯವರೊಂದಿಗೆ ಮುಕ್ತತೆ ಮತ್ತು ಗೆಲುವಿಗೆ ಬದ್ಧವಾಗಿರಲಿದೆ ಎಂದು ವಾಂಗ್ ಒತ್ತಿ ಹೇಳಿದರು.

ಇದನ್ನೂ ಓದಿ : ಮಿಲಿಟರಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಕಿಮ್ ಜಾಂಗ್ ಪುತ್ರಿ; ಉತ್ತರಾಧಿಕಾರಿಯಾಗಲಿದ್ದಾರಾ 11 ವರ್ಷದ ಜು-ಎ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.