ETV Bharat / international

ಅಮೆರಿಕ- ಇರಾನ್‌ ಮಹತ್ವದ ಒಪ್ಪಂದ; ಪರಸ್ಪರ ಕೈದಿಗಳ ಬಿಡುಗಡೆ

Iran releases five prisoners: ಅಮೆರಿಕದ ಐವರು ಕೈದಿಗಳನ್ನು ಇರಾನ್‌ ಬಿಡುಗಡೆಗೊಳಿಸಿದೆ.

author img

By ANI

Published : Sep 19, 2023, 1:07 PM IST

Iran
5 ಕೈದಿಗಳನ್ನು ಬಿಡುಗಡೆ ಮಾಡಿದ ಇರಾನ್​

ಟೆಹರಾನ್ (ಇರಾನ್): ಇರಾನ್ ತಮ್ಮ ಜೈಲಿನಲ್ಲಿ ಇರಿಸಿಕೊಂಡಿದ್ದ ಐವರು ಅಮೆರಿಕನ್ನರನ್ನು ಬಿಡುಗಡೆ ಮಾಡಿದೆ. ಆರೋಪಿಗಳನ್ನು ತಪ್ಪು ಮಾಹಿತಿಯಿಂದ ಬಂಧಿಸಲಾಗಿತ್ತು. ಇದೀಗ ಬಿಡುಗಡೆಗೊಳಿಸಲಾಗಿದ್ದು, ವಿಮಾನದ ಮೂಲಕ ವಾಪಸಾಗುತ್ತಿದ್ದಾರೆ. ಮಹತ್ವದ ಒಪ್ಪಂದಂತೆ ಬಿಡುಗಡೆ ಪ್ರಕ್ರಿಯೆ ನಡೆದಿದೆ.

ಸೋಮವಾರ ಮಧ್ಯಾಹ್ನ ಟೆಹ್ರಾನ್​ ವಿಮಾನ ನಿಲ್ದಾಣದಿಂದ ಕೈದಿಗಳನ್ನು ಕತಾರ್​ ಸರ್ಕಾರಿ ಜೆಟ್​ನಲ್ಲಿ ದೋಹಾಕ್ಕೆ ಕರೆದುಕೊಂಡು ಹೋಗಲಾಗಿದೆ.​ ವಿಮಾನದಲ್ಲಿ ಕತಾರಿ ರಾಯಭಾರಿ ಇದ್ದರು. ಕೈದಿಗಳ ಇಬ್ಬರು ಸಂಬಂಧಿಕರೂ ಜೊತೆಗಿದ್ದರು. ಅಧಿಕೃತ ಮಾಧ್ಯಮ ವರದಿ ಪ್ರಕಾರ, ಬಿಡುಗಡೆಯಾದವರಲ್ಲಿ ಎಮಾದ್​ ಶಾರ್ಗಿ, ಮೊರಾದ್​ ತಹಬಾಜ್​ ಮತ್ತು ಸಿಯಾಮಕ್​ ನಮಾಜಿ ಇದ್ದು ಇವರೆಲ್ಲರೂ ಇರಾನ್‌ನಲ್ಲಿ 5 ವರ್ಷ ಜೈಲುವಾಸ ಅನುಭವಿಸಿದ್ದರು.

ಸಿಯಾಮಕ್ ನಮಾಜಿಯನ್ನು 2015ರಿಂದ ಬಂಧಿಸಲಾಗಿತ್ತು. ಬಿಡುಗಡೆಯಾದ ಐವರಲ್ಲಿ ಮಾಹಿತಿ ಇರುವ ಮೂವರಲ್ಲಿ ಸಿಯಾಮಕ್​ ನಮಾಜಿ ಬಿಟ್ಟರೆ ಇನ್ನಿಬ್ಬರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಸಿಯಾಮಕ್​ ನಮಾಜಿ ಅವರ ತಾಯಿ ಎಫಿ ನಮಾಜಿ ಮತ್ತು ಮೊರಾದ್ ತಹಬಾಜ್ ಅವರ ಪತ್ನಿ ವಿದಾ ತಹಬಾಜ್ ಈ ಹಿಂದೆ ಇರಾನ್‌ನಿಂದ ದೋಹಾಗೆ ಹೊರಹೋಗಲು ಸಾಧ್ಯವಾಗಿರಲಿಲ್ಲ. ಆದರೆ ಈಗ ಅವರು ತಮ್ಮ ಕುಟುಂಬದವರೊಂದಿಗೆ ಒಂದಾಗಲಿದ್ದು ಅಮೆರಿಕದ ವಾಷಿಂಗ್ಟನ್‌ಗೆ​ ಪ್ರಯಾಣಿಸುತ್ತಾರೆ. ಅಮೆರಿಕ ಪ್ರಜೆಯಾಗಿದ್ದ ಸಿಯಾಮಕ್​ ನಮಾಜಿಯು ಇರಾನ್​ನಲ್ಲಿ ದೀರ್ಘಾವಧಿಯಲ್ಲಿ ವ್ಯಾಪಾರದ ಪ್ರವಾಸದಲ್ಲಿದ್ದುದರಿಂದ 2015 ರಲ್ಲಿ ವೈರಿ ರಾಷ್ಟ್ರದೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ಆತನನ್ನು ಬಂಧಿಸಲಾಗಿತ್ತು.

ವಿಶ್ವಸಂಸ್ಥೆಗೆ ಇರಾನ್ ಸಲ್ಲಿಸಿದ ಹೇಳಿಕೆಯಲ್ಲಿ, ಮೂರನೇ ಪಕ್ಷದ ಸರಕಾರದಿಂದ ಮಧ್ಯಸ್ಥಿಕೆಯಲ್ಲಿ ಮಾನವೀಯ ಸಹಕಾರ ಒಪ್ಪಂದದ ಭಾಗವಾಗಿ ಇರಾನ್​ ಮತ್ತು ಅಮೆರಿಕ ಪರಸ್ಪರ 5 ಕೈದಿಗಳನ್ನು ಪರಸ್ಪರ ಬಿಡುಗಡೆಗೊಳಿಸಲು ಒಪ್ಪಿಕೊಂಡಿವೆ ಎಂದಿದೆ.

ಇರಾನ್‌ನಿಂದ ಒಟ್ಟು 35,999 ನಿರಾಶ್ರಿತರು ಅಫ್ಘಾನಿಸ್ತಾನಕ್ಕೆ: ಮಾರ್ಚ್​ -ಏಪ್ರಿಲ್ ತಿಂಗಳ ಅವಧಿಯಲ್ಲಿ ನೆರೆಯ ಇರಾನ್‌ನಿಂದ ಒಟ್ಟು 35,999 ನಿರಾಶ್ರಿತರು ಅಫ್ಘಾನಿಸ್ತಾನಕ್ಕೆ ಮರಳಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು. ವರ್ಷಗಳ ಕಾಲ ಇರಾನ್‌ನಲ್ಲಿ ನೆಲೆಸಿದ್ದ ಆಫ್ಘನ್ ನಿರಾಶ್ರಿತರು ಮಾರ್ಚ್​ ತಿಂಗಳಿನಲ್ಲಿ ತಾಯ್ನಾಡಿಗೆ ಮರಳಿದ್ದರು. ನಿರಾಶ್ರಿತರನ್ನು ತಮ್ಮ ದೇಶಕ್ಕೆ ಇರಾನ್‌ನಿಂದ ಹಿಂದಿರುಗಿಸುವ ಪ್ರಕ್ರಿಯೆ ಮುಂದುವರೆದಿದೆ ಎಂದು ಸುದ್ದಿ ಸಂಸ್ಥೆಯೊಂದು ಸ್ಥಳೀಯ ಮಾಧ್ಯಮವನ್ನು ಉಲ್ಲೇಖಿಸಿ ವರದಿ ಮಾಡಿತ್ತು.

ಇದನ್ನು ಓದಿ: Pakistan: ಇರಾನ್‌ನೊಂದಿಗಿನ ಬಹುಕೋಟಿ ವೆಚ್ಚದ ಅನಿಲ ಪೂರೈಕೆ ಒಪ್ಪಂದ ಕೈಬಿಟ್ಟ ಪಾಕಿಸ್ತಾನ; ಅಮೆರಿಕದ ಒತ್ತಡ ಕಾರಣ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.