ETV Bharat / international

ಇಂಡೋನೇಷ್ಯಾದಲ್ಲಿ ಭೀಕರ ಭೂಕಂಪ: ಮೃತರ ಸಂಖ್ಯೆ 318ಕ್ಕೆ ಏರಿಕೆ

author img

By

Published : Nov 27, 2022, 7:19 AM IST

ನವೆಂಬರ್ 21ರ ಮಧ್ಯಾಹ್ನ ಇಂಡೋನೇಷ್ಯಾದ ಪ್ರಮುಖ ದ್ವೀಪವಾದ ಜಾವಾದಲ್ಲಿ ರಿಕ್ಟರ್ ಮಾಪಕದಲ್ಲಿ 5.6 ತೀವ್ರತೆಯ ಭೂಕಂಪ ಸಂಭವಿಸಿತ್ತು.

Indonesia Earthquake
ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ

ಜಕಾರ್ತ: ಇಂಡೋನೇಷ್ಯಾದ ಪಶ್ಚಿಮ ಜಾವಾ ಪ್ರಾಂತ್ಯದಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ 318 ಕ್ಕೆ ಏರಿದೆ. ಇನ್ನೂ 14 ಮಂದಿ ನಾಪತ್ತೆಯಾಗಿದ್ದಾರೆ ಎಂದು ದೇಶದ ವಿಪತ್ತು ನಿರ್ವಹಣಾ ಏಜೆನ್ಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರಿ ಮಳೆ ಮುನ್ಸೂಚನೆ: ಭೂಕಂಪದಿಂದ ಸಿಯಾಂಜೂರ್ ಜಿಲ್ಲೆಯಲ್ಲಿ 7,729 ಜನರು ಗಾಯಗೊಂಡಿದ್ದು, 58,049 ಮನೆಗಳು ನಾಶವಾಗಿವೆ. 73,693 ಜನರನ್ನು ಸ್ಥಳಾಂತರಿಸಲಾಗಿದೆ. ಸಂತ್ರಸ್ತರ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಗೆ ಶನಿವಾರ ಮಳೆ ಅಡ್ಡಿಪಡಿಸಿತು. ಮುಂದಿನ ಮೂರು ದಿನಗಳಲ್ಲಿ ಸಿಯಾಂಜೂರ್ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ ಎಂದು ದೇಶದ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ನ. 21ರ ಮಧ್ಯಾಹ್ನ ಇಂಡೋನೇಷ್ಯಾದ ಪ್ರಮುಖ ದ್ವೀಪವಾದ ಜಾವಾದಲ್ಲಿ 5.6 ತೀವ್ರತೆಯ ಭೂಕಂಪ ಸಂಭವಿಸಿತ್ತು. ಈ ಭೂಕಂಪವು ರಾಜಧಾನಿ ಜಕಾರ್ತಾದಿಂದ ಆಗ್ನೇಯಕ್ಕೆ 75 ಕಿ.ಮೀ ದೂರದಲ್ಲಿರುವ ಸಿಯಾಂಜೂರ್‌ನಲ್ಲಿ ಮತ್ತು 10 ಕಿ.ಮೀ ಆಳದಲ್ಲಿ ಸಂಭವಿಸಿತ್ತು. ಅದರ ಪರಿಣಾಮ ಇನ್ನೂ ಕಡಿಮೆಯಾಗಿಲ್ಲ.

ಇದನ್ನೂ ಓದಿ: ಭೀಕರ ಭೂಕಂಪಕ್ಕೆ ಇಂಡೋನೇಷ್ಯಾ ತತ್ತರ: ಮೃತರ ಸಂಖ್ಯೆ 162ಕ್ಕೆ ಏರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.