ಟೊರೊಂಟೊ(ಕೆನಡಾ) : 21 ವರ್ಷದ ಭಾರತೀಯ ವಿದ್ಯಾರ್ಥಿಯನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ದುಷ್ಕರ್ಮಿಗಳು ಯಾರೇ ಆಗಿದ್ರೂ ಸಹ ಬಿಡುವುದಿಲ್ಲ ಎಂದು ಪೊಲೀಸರು ಭರವಸೆ ನೀಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಏನಿದು ಘಟನೆ: ಕಾರ್ತಿಕ್ ವಾಸುದೇವ್ ವ್ಯಾಸಂಗ್ ಮಾಡುತ್ತಲೇ ಹೊಸ ಜೀವನವನ್ನು ಆರಂಭಿಸಲು ಜನವರಿ 4 ರಂದು ಕೆನಾಡಕ್ಕೆ ತೆರಳಿದ್ದರು. ಅಲ್ಲಿ ಸೆನೆಕಾ ಕಾಲೇಜಿನಲ್ಲಿ ಮೊದಲ ಸೆಮಿಸ್ಟರ್ ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್ ಓದುತ್ತಿದ್ದರು. ಮಧ್ಯಾಹ್ನ ಕಾಲೇಜ್ ಮುಗಿಸಿಕೊಂಡು ರೆಸ್ಟೋರೆಂಟ್ವೊಂದರಲ್ಲಿ ಪಾರ್ಟ್ ಟೈಮ್ ಜಾಬ್ ಗಿಟ್ಟಿಸಿಕೊಂಡಿದ್ದರು. ಕಾಲೇಜ್ ಮುಗಿದ ಬಳಿಕ ರೂಮ್ಗೆ ತೆರಳಿದ್ದಾರೆ. ಏಪ್ರಿಲ್ 7 ರ ಸಂಜೆ ಕೆಲಸಕ್ಕೆ ತೆರಳಲು ಲೋಕಲ್ ಸಬ್ವೇ ರೈಲ್ವೆ ಸ್ಟೇಷನ್ನಲ್ಲಿ ನಿಂತಿದ್ದಾರೆ. ಈ ವೇಳೆ ದುಷ್ಕರ್ಮಿಯೊಬ್ಬ ತಾನು ತಂದಿದ್ದ ಗನ್ನಿಂದ ಮನ ಬಂದಂತೆ ಗುಂಡು ಹಾರಿಸಿ ಪರಾರಿಯಾಗಿದ್ದಾನೆ.
-
Grieved by this tragic incident. Deepest condolences to the family. https://t.co/guG7xMwEMt
— Dr. S. Jaishankar (@DrSJaishankar) April 8, 2022 " class="align-text-top noRightClick twitterSection" data="
">Grieved by this tragic incident. Deepest condolences to the family. https://t.co/guG7xMwEMt
— Dr. S. Jaishankar (@DrSJaishankar) April 8, 2022Grieved by this tragic incident. Deepest condolences to the family. https://t.co/guG7xMwEMt
— Dr. S. Jaishankar (@DrSJaishankar) April 8, 2022
ಗಂಭೀರವಾಗಿ ಗಾಯಗೊಂಡ ಕಾರ್ತಿಕ್ಗೆ ಅಲ್ಲಿದ್ದ ಅರೆ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚಿಕಿತ್ಸೆ ಫಲಿಸದೇ ಕಾರ್ತಿಕ್ ಸಾವನ್ನಪ್ಪಿದರು. ಪೊಲೀಸರು ಕಾರ್ತಿಕ್ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಘಟನೆ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಸ್ಥಳೀಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದರು. ಈ ವೇಳೆ ವ್ಯಕ್ತಿಯೊಬ್ಬ ಗನ್ ಹಿಡಿದುಕೊಂಡು ಹೋಗುತ್ತಿರುವುದು ಸೆರೆಯಾಗಿದೆ. ಆದಷ್ಟು ಬೇಗ ಆರೋಪಿಯನ್ನು ಸೆರೆ ಹಿಡಿಯುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.
ಓದಿ: ವಿದ್ಯಾರ್ಥಿ ಅಪಹರಿಸಿ, ಲೈಂಗಿಕ ದೌರ್ಜನ್ಯ ಎಸಗಿ ಪರಾರಿಯಾಗಿದ್ದ ಆರೋಪಿಗಳ ಮೇಲೆ ಪೊಲೀಸರಿಂದ ಫೈರಿಂಗ್
ಪೋಷಕರ ಅಳಲು: ಅವನು ಹೊಸ ಜೀವನ ಆರಂಭಿಸಲು ಇಷ್ಟಪಟ್ಟಿದ್ದ. ಅದರಂತೆ ಜನವರಿ 4ರಂದು ಕೆನಾಡಕ್ಕೆ ತೆರಳಿದ್ದನು. ವ್ಯಾಸಂಗ ಮಾಡುತ್ತಲೇ ಪಾರ್ಟ್ ಟೈಮ್ ಜಾಬ್ ಮಾಡುತ್ತಿದ್ದನು. ಆದ್ರೆ ದುಷ್ಕರ್ಮಿ ದಾಳಿಗೆ ನನ್ನ ಮಗ ಬಲಿಯಾಗಿದ್ದಾನೆ ಅಂತಾ ತಿಳಿದಿರಲಿಲ್ಲ. ನನ್ನ ಮಗನನ್ನು ಟಾರ್ಗೆಟ್ ಮಾಡಿದ್ದು, ಏಕೆ ಎಂದು ನೊಂದ ಪೋಷಕರ ಪ್ರಶ್ನೆಯಾಗಿದೆ.
ಸಂತಾಪ: ಗುಂಡಿನಿಂದ ಸಾವನ್ನಪ್ಪಿರುವ ಕಾರ್ತಿಕ್ಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ದುರಂತ ಘಟನೆಯಿಂದ ದುಃಖಿತನಾಗಿದ್ದೇನೆ. ಮಗನನ್ನು ಕಳೆದುಕೊಂಡ ಆ ಕುಟುಂಬಕ್ಕೆ ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವೆ ಎಂದು ಜೈಶಂಕರ್ ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.
ಟೊರೊಂಟೊದಲ್ಲಿನ ಭಾರತೀಯ ಕಾನ್ಸುಲೇಟ್ ಜನರಲ್ ಟ್ವೀಟ್‌ನಲ್ಲಿ, ಟೊರೊಂಟೊದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಭಾರತೀಯ ವಿದ್ಯಾರ್ಥಿ ಕಾರ್ತಿಕ್ ವಾಸುದೇವ್ ಅವರ ದುರದೃಷ್ಟಕರ ಹತ್ಯೆಯಿಂದ ನಾವು ಆಘಾತಕ್ಕೊಳಗಾಗಿದ್ದೇವೆ ಮತ್ತು ದುಃಖಿತರಾಗಿದ್ದೇವೆ. ನಾವು ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದು, ಕುಟುಂಬಕ್ಕೆ ಅಗತ್ಯವಿರುವ ಎಲ್ಲ ಸಹಾಯವನ್ನು ಒದಗಿಸುತ್ತೇವೆ ಎಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.