ETV Bharat / international

ಪರಸ್ಪರರ ವಿರುದ್ಧ ಕಾವಲು ಕಾಯುವ ಬದಲು ಸಹಕಾರ ಬಲಪಡಿಸೋಣ: ಚೀನಾ - ಭಾರತೀಯ ರಾಯಭಾರಿ ಪ್ರದೀಪ್ ಕುಮಾರ್ ರಾವತ್ ಅವರು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಭೇಟಿಯಾಗಿದ್ದಾರೆ

ಎರಡೂ ಕಡೆಯವರು ಪರಸ್ಪರರ ವಿರುದ್ಧ ಕಾವಲು ಕಾಯುವ ಬದಲು ಸಹಕಾರವನ್ನು ಬಲಪಡಿಸಬೇಕು ಮತ್ತು ಸುಧಾರಿಸಬೇಕು. ಒಬ್ಬರನ್ನೊಬ್ಬರು ಅನುಮಾನಿಸುವ ಬದಲು ಪರಸ್ಪರ ನಂಬಿಕೆಯಿಂದ ಇರಬೇಕು- ಚೀನಾ

Indian envoy Rawat meets Chinese FM Wang

author img

By

Published : Jun 23, 2022, 6:36 PM IST

ಬೀಜಿಂಗ್ (ಚೀನಾ): ಭಾರತೀಯ ರಾಯಭಾರಿ ಪ್ರದೀಪ್ ಕುಮಾರ್ ರಾವತ್ ಅವರು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಇಂದು ಬೀಜಿಂಗ್‌ನಲ್ಲಿ ಭೇಟಿಯಾದರು. 14ನೇ ಬ್ರಿಕ್ಸ್ ಶೃಂಗಸಭೆಗೂ ಮುನ್ನ ಹಾಗು ಪೂರ್ವ ಲಡಾಖ್‌ನಲ್ಲಿ ಕಳೆದ ಎರಡು ವರ್ಷಗಳ ಮಿಲಿಟರಿ ಬಿಕ್ಕಟ್ಟಿನ ಬಗ್ಗೆ ಇಬ್ಬರೂ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಈ ಭೇಟಿಯ ಕುರಿತು ಚೀನಾ ವಿದೇಶಾಂಗ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ. ಚೀನಾ ಮತ್ತು ಭಾರತದ ಸಾಮಾನ್ಯ ಹಿತಾಸಕ್ತಿಗಳು ಭಿನ್ನಾಭಿಪ್ರಾಯಗಳನ್ನು ಮೀರಿಸುತ್ತವೆ ಎಂದು ವಾಂಗ್ ಹೇಳಿದ್ದಾರೆ. ಎರಡೂ ಕಡೆಯವರು ಪರಸ್ಪರರ ವಿರುದ್ಧ ಕಾವಲು ಕಾಯುವ ಬದಲು ಸಹಕಾರವನ್ನು ಬಲಪಡಿಸಬೇಕು ಮತ್ತು ಸುಧಾರಿಸಬೇಕು. ಒಬ್ಬರನ್ನೊಬ್ಬರು ಅನುಮಾನಿಸುವ ಬದಲು ಪರಸ್ಪರ ನಂಬಿಕೆಯಿಂದ ಇರಬೇಕು ಎಂದಿದ್ದಾರೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಕಳೆದ ಮಾರ್ಚ್‌ನಲ್ಲಿ ವಾಂಗ್ ಭಾರತಕ್ಕೆ ಭೇಟಿ ನೀಡಿದ್ದು, ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಜೊತೆ ಮಾತುಕತೆ ನಡೆಸಿದ್ದರು.

ಇದನ್ನೂ ಓದಿ: ಪ್ರಧಾನಿ ಮೋದಿಯೊಂದಿಗೆ ಯೋಗ ಮಾಡಿದ್ದ ಬಾಲಕಿಯ ತಾಯಿ ಆತ್ಮಹತ್ಯೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.