ETV Bharat / international

ಬ್ಲ್ಯಾಕ್​ ಸೀ ಮೂಲಕ ಆಹಾರ ಧಾನ್ಯಗಳ ಸಾಗಣೆಗೆ ವಿಶ್ವಸಂಸ್ಥೆಯನ್ನು ಭಾರತ ಬೆಂಬಲಿಸುತ್ತದೆ: ರುಚಿರಾ ಕಾಂಬೋಜ್ - ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್

ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಅವರು ಕಪ್ಪು ಸಮುದ್ರದ ಮೂಲಕ ಬೇರೆ ದೇಶಗಳಿಗೆ ಆಹಾರ ಧಾನ್ಯಗಳ ಸಾಗಣೆ ಮುಂದುವರಿಸಲು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರ ಪ್ರಯತ್ನಗಳನ್ನು ಭಾರತ ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ.

Ruchira Kamboj
ರುಚಿರಾ ಕಾಂಬೋಜ್
author img

By

Published : Aug 4, 2023, 6:52 AM IST

Updated : Aug 4, 2023, 8:00 AM IST

ನ್ಯೂಯಾರ್ಕ್ (ಅಮೆರಿಕ) : ಕಪ್ಪು ಸಮುದ್ರದ ಧಾನ್ಯ ಉಪಕ್ರಮವನ್ನು (Black Sea Grain Initiative) (ಕಪ್ಪು ಸಮುದ್ರದ ಮೂಲಕ ಬೇರೆ ದೇಶಗಳಿಗೆ ಆಹಾರ ಧಾನ್ಯಗಳ ಸಾಗಣೆ) ಮುಂದುವರೆಸುವಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮಾಡಿದ ಪ್ರಯತ್ನಗಳನ್ನು ಭಾರತ ಬೆಂಬಲಿಸುತ್ತದೆ ಎಂದು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಹೇಳಿದ್ದಾರೆ.

  • #WATCH | Ruchira Kamboj, India's Permanent Representative to UN says, "India supports the efforts of the UN Secretary-General in continuing the Black Sea Grain Initiative and hopes for an early resolution to the present impasse. Recent developments in this matter have not helped… pic.twitter.com/WSSoCm9mR4

    — ANI (@ANI) August 3, 2023 " class="align-text-top noRightClick twitterSection" data=" ">

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಬೋಜ್, "ಕಪ್ಪು ಸಮುದ್ರದ ಧಾನ್ಯ ಉಪಕ್ರಮವನ್ನು ಮುಂದುವರಿಸುವಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರ ಪ್ರಯತ್ನಗಳನ್ನು ಭಾರತ ಬೆಂಬಲಿಸುತ್ತದೆ ಮತ್ತು ಪ್ರಸ್ತುತ ಬಿಕ್ಕಟ್ಟಿಗೆ ಶೀಘ್ರ ಪರಿಹಾರವನ್ನು ನಿರೀಕ್ಷಿಸುತ್ತದೆ" ಎಂದು ಹೇಳಿದರು. ಬಳಿಕ, ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನಕ್ಕಾಗಿ ಮತ್ತು ಈ ಪ್ರಮುಖ ವಿಷಯದ ಮೇಲೆ ಗಮನ ಕೇಂದ್ರೀಕರಿಸಿದ್ದಕ್ಕಾಗಿ ಅವರು ಅಮೆರಿಕವನ್ನು ಶ್ಲಾಘಿಸಿದರು.

"ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಪರಿಹಾರ ಕಂಡುಕೊಳ್ಳಲು ನಾವು ಒಟ್ಟಾಗಿ ಕೆಲಸ ಮಾಡಬೇಕು. ನಮ್ಮ ಭವಿಷ್ಯವನ್ನು ನಿರ್ಮಿಸಲು ಶಾಂತಿ, ಸಹಕಾರ ಮತ್ತು ಬಹುಪಕ್ಷೀಯತೆಯನ್ನು ಆಯ್ಕೆ ಮಾಡುವುದು ಅವಶ್ಯಕ. ಜಾಗತಿಕ ವ್ಯವಸ್ಥೆಯನ್ನು ಕಾಪಾಡಲು ಅಂತಾರಾಷ್ಟ್ರೀಯ ವಾಸ್ತುಶಿಲ್ಪ ಮತ್ತು ಆಡಳಿತ ವ್ಯವಸ್ಥೆಗಳನ್ನು ಬಲಪಡಿಸಬೇಕು. ಆದ್ದರಿಂದ, ಜಾಗತಿಕ ಕಾನೂನು ಮತ್ತು ಮೌಲ್ಯಗಳು ಹಂಚಿಕೆಯ ಜವಾಬ್ದಾರಿಯಾಗಿರಬೇಕು" ಎಂದು ಕಾಂಬೋಜ್ ಸಲಹೆ ನೀಡಿದರು.

ಹೆಚ್ಚುತ್ತಿರುವ ಆಹಾರ ಧಾನ್ಯದ ಕೊರತೆಯನ್ನು ಪರಿಹರಿಸಲು ನಾವು ಪ್ರಸ್ತುತ ನಿರ್ಬಂಧಗಳನ್ನು ಮೀರಿ ಹೋಗಬೇಕಾಗಿದೆ. ಭಾರತವು ಸಮಕಾಲಿನ ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ಸಂಪೂರ್ಣವಾಗಿ ಬದ್ಧವಾಗಿದೆ. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಭಾರತವು ಆಹಾರ ಭದ್ರತೆಯನ್ನು ಬಲಪಡಿಸಲು ತನ್ನ ನೆರೆಹೊರೆಯ ದೇಶಗಳು, ಆಫ್ರಿಕಾ ಸೇರಿದಂತೆ ಹಲವಾರು ದೇಶಗಳಿಗೆ ಸಾವಿರಾರು ಮೆಟ್ರಿಕ್ ಟನ್ ಗೋಧಿ, ಅಕ್ಕಿ, ಬೇಳೆ ಕಾಳುಗಳ ರೂಪದಲ್ಲಿ ಆಹಾರದ ಸಹಾಯವನ್ನು ಹೇಗೆ ನೀಡಿತು ಎಂಬುದನ್ನು ನೆನಪಿಸಿಕೊಂಡರು.

ಇದನ್ನೂ ಓದಿ : ಆಫ್ಘನ್​ಗೆ 40 ಸಾವಿರ ಮೆಟ್ರಿನ್​ ಟನ್​ ಗೋಧಿ, 32 ಟನ್​ ವೈದ್ಯಕೀಯ ನೆರವು: ವಿಶ್ವಸಂಸ್ಥೆಗೆ ಭಾರತ ಮಾಹಿತಿ

ಅಫ್ಘಾನಿಸ್ತಾನದಲ್ಲಿ ಹದಗೆಡುತ್ತಿರುವ ಮಾನವೀಯ ಪರಿಸ್ಥಿತಿಯ ದೃಷ್ಟಿಯಿಂದ ಭಾರತವು ಅಫ್ಘಾನಿಸ್ತಾನದ ಜನರಿಗೆ 50,000 ಮೆಟ್ರಿಕ್ ಟನ್ ಗೋಧಿಯನ್ನು ನೀಡಿದೆ. ಅಂತೆಯೇ, ಭಾರತವು 10,000 ಟನ್ ಅಕ್ಕಿ ಮತ್ತು ಗೋಧಿಯ ಒಳಗೊಂಡಂತೆ ಮ್ಯಾನ್ಮಾರ್‌ಗೆ ತನ್ನ ಮಾನವೀಯ ಬೆಂಬಲವನ್ನು ಮುಂದುವರೆಸಿದೆ. ಪಕ್ಕದ ಶ್ರೀಲಂಕಾಕ್ಕೆ ಸಹ ಕಷ್ಟದ ಸಮಯದಲ್ಲಿ ಆಹಾರ ಸೇರಿದಂತೆ ಇತರ ಸಹಾಯ ಮಾಡಿದೆ. ನಮ್ಮ ಸಹಕಾರವು ನೆರೆಹೊರೆಯ ವಿದೇಶಾಂಗ ನೀತಿಯ ಆದ್ಯತೆಗೆ ಅನುಗುಣವಾಗಿರುತ್ತವೆ. ಭಾರತವು 'ವಸುದೇವ ಕುಟುಂಬಕಂ' ಎಂಬ ನೀತಿಯಲ್ಲಿ ದೃಢವಾದ ನಂಬಿಕೆ ಇಟ್ಟುಕೊಂಡಿದ್ದು, ಜಗತ್ತನ್ನು ಒಂದು ದೊಡ್ಡ ಅಂತರ್​ ಸಂಪರ್ಕಿತ ಕುಟುಂಬವಾಗಿ ನೋಡುತ್ತದೆ ಎಂದು ಅವರು ಹೇಳಿದರು.

ಇದನ್ನೂ ಓದಿ : ಪ್ರಜಾಪ್ರಭುತ್ವದ ಬಗ್ಗೆ ನಮಗೆ ಯಾರೂ ಕಲಿಸಿಕೊಬೇಕಿಲ್ಲ: ವಿಶ್ವಕ್ಕೆ ಭಾರತದ ಸಂದೇಶ

ಇನ್ನು ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮಾನವೀಯ ಬಿಕ್ಕಟ್ಟುಗಳಿಗೆ ಕಾರಣವಾಗದಂತೆ ಆಹಾರ, ರಸಗೊಬ್ಬರಗಳು ಮತ್ತು ವೈದ್ಯಕೀಯ ಉತ್ಪನ್ನಗಳ ಜಾಗತಿಕ ಸರಬರಾಜನ್ನು ರಾಜಕೀಯ ರಹಿತಗೊಳಿಸಲು ಭಾರತ ಬದ್ಧವಾಗಿದೆ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಉಲ್ಲೇಖಿಸಿದರು.

Last Updated : Aug 4, 2023, 8:00 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.