ETV Bharat / international

ಲಂಡನ್ ತಲುಪಿದ ಮಾಜಿ ಪ್ರಧಾನಿ ಶೆಹಬಾಜ್: ಪಾಕಿಸ್ತಾನ್ ಮುಸ್ಲಿಂ ಲೀಗ್ ಮುಖ್ಯಸ್ಥರೊಂದಿಗೆ ಸಭೆ ನಿಗದಿ - ಇಸ್ಲಾಮಾಬಾದ್

ಪಾಕಿಸ್ತಾನದ ಮಾಜಿ ಪ್ರಧಾನಿ ಶೆಹಬಾಜ್ ಷರೀಫ್ ಅವರು ಲಂಡನ್‌ಗೆ ತಲುಪಿದ್ದು, ಅಲ್ಲಿ ಅವರು ತಮ್ಮ ಸಹೋದರ ಮತ್ತು ಪಾಕಿಸ್ತಾನ್ ಮುಸ್ಲಿಂ ಲೀಗ್ (ಎನ್) ಮುಖ್ಯಸ್ಥ ನವಾಜ್ ಷರೀಫ್ ಅವರನ್ನು ಭೇಟಿಯಾಗಲಿದ್ದಾರೆ ಎಂದು ವರದಿಯಾಗಿದೆ.

Etv Bharat
Etv Bharat
author img

By

Published : Aug 21, 2023, 2:29 PM IST

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಶೆಹಬಾಜ್ ಷರೀಫ್ ಅವರು ಲಂಡನ್‌ಗೆ ತಲುಪಿದ್ದಾರೆ. ಮುಂಬರುವ ಸಾರ್ವತ್ರಿಕ ಚುನಾವಣೆ ಸೇರಿದಂತೆ ಇತರ ಪ್ರಮುಖ ವಿಷಯಗಳ ಕುರಿತು ಚರ್ಚಿಸಲು ಅವರು ತಮ್ಮ ಸಹೋದರ ಮತ್ತು ಪಾಕಿಸ್ತಾನ್ ಮುಸ್ಲಿಂ ಲೀಗ್ (ಎನ್) ಮುಖ್ಯಸ್ಥ ನವಾಜ್ ಷರೀಫ್ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ ಎಂದು ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.

ಈ ಬಗ್ಗೆ ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವ ಮರಿಯುಮ್ ಔರಂಗಜೇಬ್ ಅವರು ಸಾಮಾಜಿಕ ಮಾಧ್ಯಮ ಎಕ್ಸ್​​(ಟ್ವಿಟರ್) ಪೋಸ್ಟ್‌ ಮಾಡಿದ್ದಾರೆ. ಪೋಸ್ಟ್​​ನಲ್ಲಿ ಅವರು ಪಾಕಿಸ್ತಾನ್ ಮುಸ್ಲಿಂ ಲೀಗ್ ಅಧ್ಯಕ್ಷರು ಯುಕೆಯಲ್ಲಿ ತಂಗಿರುವ ಸಮಯದಲ್ಲಿ ಭೇಟಿಯಾಗಲಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಮಾಜಿ ಪ್ರಧಾನಿ ಶೆಹಬಾಜ್ ಷರೀಫ್ ಅವರು ಇಂದು ಲಾಹೋರ್‌ನಿಂದ ಲಂಡನ್‌ಗೆ ತೆರಳಲಿದ್ದಾರೆ. ಅವರು ಲಂಡನ್‌ನಲ್ಲಿ ಪಕ್ಷದ ನಾಯಕರಾದ ಮುಹಮ್ಮದ್ ನವಾಜ್ ಷರೀಫ್ ಅವರನ್ನು ಭೇಟಿಯಾಗಲಿದ್ದಾರೆ ಎಂದು ಹೇಳಿದ್ದಾರೆ.

ಮಾಜಿ ಪಿಎಂ ಶೆಹಬಾಜ್ ಲಾಹೋರ್‌ನಿಂದ ಕತಾರ್ ಏರ್‌ವೇಸ್ ವಿಮಾನದಲ್ಲಿ ಹೊರಟರು. ನವಾಜ್ ಷರೀಫ್ ಅವರ ವಾಪಸಾತಿ ಮತ್ತು ಅವರು ಸಿಲುಕಿರುವ ಪ್ರಕರಣಗಳ ಸ್ಥಿತಿಗತಿಗಳು ಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆಯಿದೆ. ಇಬ್ಬರು ಸಹೋದರರು ಪಕ್ಷದ ವರಿಷ್ಠರು ಪಾಕಿಸ್ತಾನಕ್ಕೆ ಮರಳಲು ದಿನಾಂಕವನ್ನು ನಿಗದಿಪಡಿಸುವ ನಿರೀಕ್ಷೆಯಿದೆ ಎನ್ನಲಾಗಿದೆ.

ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾದ ನಂತರ ನವಾಜ್ ಷರೀಫ್ ಲಂಡನ್‌ನಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ನವೆಂಬರ್ 2019ರಲ್ಲಿ ದೇಶವನ್ನು ತೊರೆದಿದ್ದರು. ಪಾಕಿಸ್ತಾನದಲ್ಲಿ ಅವರು ಅನೇಕ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಇತ್ತೀಚೆಗೆ, ಶೆಹಬಾಜ್ ಷರೀಫ್ ಅವರು ಸೆಪ್ಟೆಂಬರ್‌ನಲ್ಲಿ ಪಾಕಿಸ್ತಾನಕ್ಕೆ ಹಿಂತಿರುಗುತ್ತಾರೆ. ಪಾಕಿಸ್ತಾನ್ ಮುಸ್ಲಿಂ ಲೀಗ್ (ಎನ್)ನ ಚುನಾವಣಾ ಪ್ರಚಾರವನ್ನು ಮುನ್ನಡೆಸುತ್ತಾರೆ ಮತ್ತು ಚುನಾವಣೆಯಲ್ಲಿ ಪಕ್ಷವು ವಿಜಯಶಾಲಿಯಾದರೆ ನಾಲ್ಕನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ ಎಂದು ಹೇಳಿದ್ದರು.

ಮುಂದಿನ ತಿಂಗಳು ನವಾಜ್​ ಶರೀಫ್ ಪಾಕಿಸ್ತಾನಕ್ಕೆ ವಾಪಸ್: ಖಾಸಗಿ ನ್ಯೂಸ್ ಕಾರ್ಯಕ್ರಮವೊಂದರ ಸಂದರ್ಶನದಲ್ಲಿ ಮಾಜಿ ಪಿಎಂ ಷರೀಫ್ ಅವರು ಸರ್ಕಾರ ಅಧಿಕಾರ ವಹಿಸಿಕೊಂಡ ತಕ್ಷಣ ತಮ್ಮ ಹಿರಿಯ ಸಹೋದರ ನವಾಜ್ ಅವರನ್ನು ಭೇಟಿ ಮಾಡಲು ಲಂಡನ್‌ಗೆ ತೆರಳುವುದಾಗಿ ಹೇಳಿದ್ದರು. ಆದರೆ, ಇತ್ತೀಚೆಗೆ, ಸುಪ್ರೀಂಕೋರ್ಟ್ ತೀರ್ಪು ಮತ್ತು ಆದೇಶಗಳ ಕಾಯಿದೆ 2023 "ಅಸಂವಿಧಾನಿಕ" ಎಂದು ತೀರ್ಪು ನೀಡಿದೆ. ಇದು ತನ್ನ ಜೀವಮಾನದ ಅನರ್ಹತೆಗಳನ್ನು ಪ್ರಶ್ನಿಸಲು ಬಯಸುತ್ತಿರುವ ನವಾಜ್ ಷರೀಫ್ ಅವರ ಎಲ್ಲಾ ಭರವಸೆಗಳಿಗೆ ತಣ್ಣೀರೆರಚಿದೆ ಎಂದು ಇಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.

2018 ರಲ್ಲಿ ಅಲ್-ಅಜೀಜಿಯಾ ಮಿಲ್ಸ್ ಮತ್ತು ಅವೆನ್ ಫೀಲ್ಡ್​ ಭ್ರಷ್ಟಾಚಾರ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ನಂತರ ನವಾಜ್ ಶರೀಫ್ 2019 ರ ನವೆಂಬರ್​ನಿಂದ ಸ್ವಯಂ ನಿರ್ಬಂಧಿತ ದೇಶಭ್ರಷ್ಟರಾಗಿ ​​ಇಂಗ್ಲೆಂಡ್​ನಲ್ಲಿ ವಾಸಿಸುತ್ತಿದ್ದಾರೆ. ವೈದ್ಯಕೀಯ ಚಿಕಿತ್ಸೆಗಾಗಿ ಲಂಡನ್​ಗೆ ತೆರಳುವ ಮುನ್ನ ಅವರು ಅಲ್-ಅಜೀಜಿಯಾ ಮಿಲ್ಸ್ ಪ್ರಕರಣದಲ್ಲಿ ಏಳು ವರ್ಷಗಳ ಜೈಲು ಶಿಕ್ಷೆಗೊಳಗಾಗಿ ಲಾಹೋರ್​​ನ ಕೋಟ್ ಲಖ್ಪತ್ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು.

ಇದನ್ನೂ ಓದಿ: ಮುಂದಿನ ತಿಂಗಳು ನವಾಜ್​ ಶರೀಫ್ ಪಾಕಿಸ್ತಾನಕ್ಕೆ ವಾಪಸ್; ನಿರ್ಗಮಿತ ಪ್ರಧಾನಿ ಶಹಬಾಜ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.