ಸಿಡ್ನಿ( ಆಸ್ಟ್ರೇಲಿಯಾ): ಕಾಂಗರೂಗಳ ನಾಡು ಎಂದೇ ಖ್ಯಾತವಾಗಿರುವ ಆಸ್ಟ್ರೇಲಿಯಾದಲ್ಲಿ ಅತ್ಯಂತ ಅಪರೂಪವಾದ ಬಿಳಿ ಬಣ್ಣದ (ಆಲ್ಬಿನೋ) ಕಾಂಗರೂಗಳು ಕಾಣಿಸಿಕೊಂಡಿದೆ. ಆಸ್ಟ್ರೇಲಿಯಾದ ಮಾರ್ನಿಂಗ್ಟನ್ ಪೆನಿನ್ಸುಲಾದಲ್ಲಿರುವ ಖಾಸಗಿ ವನ್ಯಜೀವಿ ಅಭಯಾರಣ್ಯವಾದ ಪನೋರಮಾ ಅಭಯಾರಣ್ಯವು ತನ್ನ ಫೇಸ್‌ಬುಕ್ ಪುಟದಲ್ಲಿ ಬಿಳಿ ಕಾಂಗರೂಗಳ ಗುಂಪಿನ ಫೋಟೋವನ್ನು ಹಂಚಿಕೊಂಡಿದೆ.
ಆಲ್ಬಿನೋ ಕಾಂಗರೂಗಳ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನೂರಾರು ಲೈಕ್ ಮತ್ತು ಕಮೆಂಟ್ಗಳನ್ನು ಪಡೆದುಕೊಂಡಿದೆ. ನೆಟಿಜನ್ಸ್ಗಳು ಈ ಅಪರೂಪದ ಅಲ್ಬಿನೋ ಕಾಂಗರೂಗಳನ್ನು ನೇರವಾಗಿ ನೋಡುವ ಬಯಕೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಪನೋರಮಾ ಎಂಬ ಗೌಪ್ಯ ಅಭಯಾರಣ್ಯನಲ್ಲಿ ಬಿಳಿ ಬಣ್ಣದ ಕಾಂಗರೂಗಳ ಗುಂಪು ಕಾಣಿಸಿಕೊಂಡಿದ್ದು ಇದೊಂದು ನೈಸರ್ಗಿಕ ವಿದ್ಯಾಮಾನವಾಗಿದೆ.
ಅಲ್ಬಿನೋ ಕಾಂಗರೂಗಲ ಬಗ್ಗೆ ಪನೋರಮಾ ಮೀಸಲು ಅಭಯಾರಣ್ಯದ ಮಾತನಾಡಿದ ಮಾಲೀಕ, ‘‘2012ರಲ್ಲಿ ದಕ್ಷಿಣ ಆಸ್ಟ್ರೇಲಿಯಾದಲ್ಲಿ ಭಾಗದಲ್ಲಿದ್ದ ಈ ಅಪರೂಪದ ಮೂರು ಅಲ್ಬಿನೋ (ಬಿಳಿ) ಕಾಂಗರೂಗಳನ್ನು ರಕ್ಷಣೆ ಮಾಡಿ, ಇಲ್ಲಿಗೆ ತಂದು ಬಿಡಲಾಯಿತು. ಈಗ ಒಟ್ಟು ಒಂಬತ್ತು ಕಾಂಗರೂಗಳು ಮೀಸಲು ಅಭಯಾರಣ್ಯದಲ್ಲಿ ಮುಕ್ತವಾಗಿ ವಾಸುತ್ತಿವೆ’’ ಎಂದು ಹೇಳಿದರು.
- " class="align-text-top noRightClick twitterSection" data="">
ಅಪರೂಪದ ಅಲ್ಬಿನೋ ಕಾಂಗರೂಗಳ ಹೊರತಾಗಿ, ಸುಮಾರು 55 ಎಕರೆ ಪ್ರದೇಶದಲ್ಲಿರುವ ಅಭಯಾರಣ್ಯವು ಇತರ ಅನೇಕ ಕಾಡು ಪ್ರಾಣಿಗಳಿಗೂ ಸಹ ನೆಲೆಯಾಗಿದೆ. ಇವುಗಳಲ್ಲಿ ಚಿಕ್ಕ ಆಡುಗಳು ವಾಲಬೀಸ್, ಅಲ್ಬಕಾಸ್, ಎಮುಗಳು, ಹಸು, ಬಾತುಕೋಳಿ, ನವೀಲು, ಗಿಳಿಗಳು ಇವೆ. ಈ ಪ್ರಾಣಿಗಳಿಗೆ ಕಾಡಿನಲ್ಲಿ ಬೆಳೆಯಲು ಮತ್ತು ಬದುಕಲು ಸುರಕ್ಷಿತ ಮತ್ತು ಅರಾಮದಾಯಕ ವಾತವರಣವನ್ನು ಒದಗಿಸುತ್ತದೆ.
ಆಲ್ಬಿನಿಸಂ ಎಂದರೇನು: ಅಲ್ಬಿನಿಸಂ ಎನ್ನುವುದು ಪ್ರಾಣಿ ಅಥವಾ ಸಸ್ಯದಲ್ಲಿ ಮೆಲನಿನ್ ಜನ್ಮಜಾತ ಅನುಪಸ್ಥಿತಿಯಾಗಿದ್ದು, ಬಿಳಿ ಕೂದಲು, ಬಿಳಿ ಚರ್ಮ ಮತ್ತು ಕಣ್ಣಿನ ಬಣ್ಣ ನೀಲಿಯಾಗಿರುತ್ತದೆ. ಈ ಸ್ಥಿತಿಯು ಪ್ರಾಣಿಗಳಲ್ಲಿ ಅಪರೂಪವಾಗಿ ಕಂಡು ಬರುತ್ತದೆ. ವಿಶೇಷಚವಾಗಿ ಕಾಂಗರೂಗಳಲ್ಲಿ ಆಲ್ಬಿನಿಸಂ ಅಥವಾ ಲ್ಯುಸಿಸಿಂ ನೊಂದಿಗೆ ಹುಟ್ಟುವ ಸಾಧ್ಯತೆ ಪ್ರತಿ 50,000 ಕಾಂಗರೂಗಳಲ್ಲಿ ಒಂದು ಮಾತ್ರ ಹೊಂದಿರುತ್ತದೆ.
ಎರಡು ಜೈವಿಕ ತಂದೆಗಳಿರುವ ಇಲಿಮರಿ ಅಭಿವೃದ್ಧಿದ ವಿಜ್ಞಾನಿಗಳು: ಇಬ್ಬರು ಜೈವಿಕ ತಂದೆಗಳಿರುವ ಇಲಿಯೊಂದನ್ನು ಜಪಾನ್ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಮಾನವರಲ್ಲಿ ಸಂತಾನೋತ್ಪತ್ತಿ ಸಮಸ್ಯೆಗೆ ಚಿಕಿತ್ಸೆ ನೀಡುವಲ್ಲಿ ಈ ಸಂಶೋಧನೆ ಮಹತ್ತರ ಪಾತ್ರ ವಹಿಸಲಿದೆ ಎನ್ನಲಾಗಿದೆ. ಜಪಾನ್‌ನ ಕ್ಯುಶು ಮತ್ತು ಒಸಾಕಾ ವಿಶ್ವವಿದ್ಯಾಲಯಗಳ ವಿಜ್ಞಾನಿಗಳ ನೇತೃತ್ವದ ತಂಡವು ಪುರುಷ ಇಲಿಯ ಚರ್ಮದ ಕೋಶಗಳಿಂದ ಮೊಟ್ಟೆಗಳನ್ನು ಬಳಸಿ ಇಲಿಗಳನ್ನು ತಯಾರಿಸಿದೆ.
ಇಬ್ಬರು ಪುರುಷರು ಒಟ್ಟಿಗೆ ಮಕ್ಕಳ ಪಡೆಯೋ ಭಾಗ್ಯ?: ಹೊಸ ಸಂಶೋಧನೆ ಇಬ್ಬರು ಪುರುಷರು ಒಟ್ಟಿಗೆ ಮಕ್ಕಳನ್ನು ಹೊಂದಲು ಸಹಾಯ ಮಾಡುತ್ತದೆ. ಉದಾಹರಣೆಗೆ X ಕ್ರೋಮೋಸೋಮ್‌ನ ಒಂದು ಪ್ರತಿ ಕಾಣೆಯಾಗಿರುವ ಅಥವಾ ಭಾಗಶಃ ಕಾಣೆಯಾಗಿರುವ ಟರ್ನರ್ ಸಿಂಡ್ರೋಮ್ ಕಾರಣದಿಂದ ಉಂಟಾಗುವ ಬಂಜೆತನದ ತೀವ್ರ ಸ್ವರೂಪಗಳ ಚಿಕಿತ್ಸೆಗಳಲ್ಲಿ ಇದು ಸಹ ಸಹಾಯ ಮಾಡುತ್ತದೆ. ಪುರುಷ ಜೀವಕೋಶಗಳಿಂದ ದೃಢವಾದ ಸಸ್ತನಿ ಅಂಡಾಣುಗಳನ್ನು ತಯಾರಿಸುವ ಮೊದಲ ಪ್ರಕರಣ ಇದಾಗಿದೆ ಎಂದು ಕ್ಯುಶು ವಿಶ್ವವಿದ್ಯಾಲಯದ ಕಟ್ಸುಹಿಕೊ ಹಯಾಶಿ ಹೇಳಿದ್ದಾರೆ.
ಇದನ್ನೂ ಓದಿ: 262 ಕೋಟಿ ನಗದು ಕದಿಯಲು ಯತ್ನ.. ಪೊಲೀಸರ ಗುಂಡಿನ ದಾಳಿಗೆ ಪರಾರಿಯಾದ ದರೋಡೆಕೋರರು, ಇಬ್ಬರು ಸಾವು