ETV Bharat / international

ಅಜೆರ್ಬೈಜಾನ್ ಮತ್ತು ಅರ್ಮೇನಿಯಾ ನಡುವೆ ಹೆಚ್ಚಿದ ಉದ್ವಿಗ್ನತೆ: ಕಾರಣ ಏನು?

author img

By

Published : Jan 23, 2023, 8:14 PM IST

ಅಜೆರ್ಬೈಜಾನ್ ಮತ್ತು ಅರ್ಮೇನಿಯಾ ನಡುವೆ ಎರಡು ವರ್ಷಗಳ ನಂತರ ಮತ್ತೆ ಉದ್ವಿಗ್ನತೆ - ಲಾಚಿನ್ ಕಾರಿಡಾರ್ ಎಂದು ಕರೆಯಲ್ಪಡುವ ಆರು ಕಿಲೋಮೀಟರ್ ರಸ್ತೆಯ ವಿವಾದದ ಕೇಂದ್ರಬಿಂದು - ಯುದ್ಧದ ಬಳಿಕ ಮತ್ತೆ ಬಿಕ್ಕಟ್ಟು

EXPLAINER Tensions high over isolated Azerbaijan region
ಅಜೆರ್ಬೈಜಾನ್ ಮತ್ತು ಅರ್ಮೇನಿಯಾ ನಡುವೆ ಹೆಚ್ಚಿದ ಉದ್ವಿಗ್ನತೆ: ಕಾರಣ ಏನು?

ಮಾಸ್ಕೋ(ರಷ್ಯಾ): ಅಜೆರ್ಬೈಜಾನ್ ಮತ್ತು ಅರ್ಮೇನಿಯಾ ರಸ್ತೆ ವಿವಾದ ಸಂಬಂಧ ಸುಮಾರು 6,800 ಸೈನಿಕರ ಸಾವು ಮತ್ತು ಸುಮಾರು 90,000 ನಾಗರಿಕರನ್ನು ಸ್ಥಳಾಂತರಿಸಿ ಯುದ್ಧವನ್ನು ಕೊನೆಗೊಳಿಸಿದ ಎರಡು ವರ್ಷಗಳ ನಂತರ, ಲಾಚಿನ್ ಕಾರಿಡಾರ್ ಎಂದು ಕರೆಯಲ್ಪಡುವ ಆರು ಕಿಲೋಮೀಟರ್ (ಸುಮಾರು ನಾಲ್ಕು ಮೈಲಿ) ರಸ್ತೆಯ ವಿವಾದದಲ್ಲಿ ದೇಶಗಳ ನಡುವೆ ಮತ್ತೆ ಉದ್ವಿಗ್ನತೆ ಹೆಚ್ಚಾಗಿದೆ. ಅರ್ಮೇನಿಯಾ ಮತ್ತು ಅಜೆರ್ಬೈಜಾನ್​ನ ಜನಾಂಗೀಯ ಅರ್ಮೇನಿಯನ್ ನಾಗೋರ್ನೊ-ಕರಬಾಖ್ ಪ್ರದೇಶದ ನಡುವಿನ ಏಕೈಕ ಭೂ ಸಂಪರ್ಕವಾಗಿರುವ ವೈಂಡಿಂಗ್ ರಸ್ತೆಯನ್ನು ಡಿಸೆಂಬರ್ ಮಧ್ಯಭಾಗದಿಂದ ಪರಿಸರ ಕಾರ್ಯಕರ್ತರು ಎಂದು ಹೇಳಿಕೊಳ್ಳುವ ಪ್ರತಿಭಟನಾಕಾರರು ನಿರ್ಬಂಧಿಸಿದ್ದಾರೆ. ಈ ಮೂಲಕ ನಾಗೋರ್ನೊ-ಕರಾಬಖ್‌ನ 120,000 ಜನರಿಗೆ ಆಹಾರ ಪೂರೈಕೆಗೆ ಬೆದರಿಕೆ ಹಾಕಿದ್ದಾರೆ.

ಈ ವಿವಾದವು ಹೊಸ ಕದನ ಭುಗಿಲೇಳಬಹುದು ಎಂಬ ಆತಂಕವನ್ನು ಹುಟ್ಟುಹಾಕುತ್ತಿದೆ. ಇದು ಅರ್ಮೇನಿಯಾದ ದೀರ್ಘಕಾಲದ ಉತ್ಸಾಹಭರಿತ ರಾಜಕೀಯವನ್ನು ಅಸ್ಥಿರಗೊಳಿಸಬಹುದಾಗಿದೆ. ಅಲ್ಲದೆ, ಇದು ರಷ್ಯಾದ ಸಾಮರ್ಥ್ಯ ಮತ್ತು ಉದ್ದೇಶಗಳ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕುತ್ತಿದೆ, ಅದರ ಶಾಂತಿಪಾಲನಾ ಪಡೆಗಳು ರಸ್ತೆಯನ್ನು ಸುರಕ್ಷಿತವಾಗಿಡುವ ಜವಾಬ್ದಾರಿಯನ್ನು ಹೊಂದಿವೆ.

ವಿವಾದದ ಮೂಲಗಳು: ಯುಎಸ್ ರಾಜ್ಯವಾದ ಡೆಲಾವೇರ್ ಗಿಂತ ಚಿಕ್ಕದಾದ ಪರ್ವತ ನಾಗೋರ್ನೊ-ಕರಬಾಖ್, ಇದು ಅರ್ಮೇನಿಯನ್ನರು ಮತ್ತು ಅಜೆರಿಸ್ ಇಬ್ಬರಿಗೂ ಗಮನಾರ್ಹ ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಇದು ಸೋವಿಯತ್ ಒಕ್ಕೂಟದ ಭಾಗವಾಗಿದ್ದಾಗ ಅಜೆರ್ಬೈಜಾನ್ ಗಣನೀಯ ಪ್ರಮಾಣದ ಸ್ವಾಯತ್ತತೆಯನ್ನು ಹೊಂದಿತ್ತು. ಸೋವಿಯತ್ ಒಕ್ಕೂಟವು ಹದಗೆಡುತ್ತಿದ್ದಂತೆ, ಅರ್ಮೇನಿಯನ್ ಪ್ರತ್ಯೇಕತಾವಾದಿ ಅಶಾಂತಿ ಭುಗಿಲೆದ್ದಿತು, ನಂತರ ಸೋವಿಯತ್ ಒಕ್ಕೂಟ ಕುಸಿತದಿಂದ ಪೂರ್ಣ ಪ್ರಮಾಣದ ಯುದ್ಧವಾಗಿ ಮಾರ್ಪಟ್ಟಿತ್ತು.

1994ರ ಹೋರಾಟದ ಅಂತ್ಯದ ವೇಳೆಗೆ ಅಜೆರಿ ಜನಸಂಖ್ಯೆಯ ಹೆಚ್ಚಿನ ಭಾಗವನ್ನು ಹೊರಹಾಕಲಾಯಿತು. ಈ ವೇಳೆ ಅರ್ಮೇನಿಯಾ ಬೆಂಬಲಿತ ಜನಾಂಗೀಯ ಅರ್ಮೇನಿಯನ್ ಪಡೆಗಳು ನಾಗೋರ್ನೊ-ಕರಬಾಖ್ ಮಾತ್ರವಲ್ಲದೆ ಸುತ್ತಮುತ್ತಲಿನ ಅಜೆರ್ಬೈಜಾನಿ ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸಿದವು. ನಂತರದ ಕಾಲು ಶತಮಾನದವರೆಗೆ, ನಾಗೋರ್ನೊ-ಕರಬಾಖ್ ಒಂದು ಹೆಪ್ಪುಗಟ್ಟಿದ ಸಂಘರ್ಷವಾಗಿ ಪರಿವರ್ತನೆಗೊಂಡಿತ್ತು, ಅರ್ಮೇನಿಯನ್ ಮತ್ತು ಅಜೆರ್ಬೈಜಾನಿ ಪಡೆಗಳು ಜನರು ವಾಸವಿಲ್ಲದ ಪ್ರದೇಶದಲ್ಲಿ ಮುಖಾಮುಖಿಯಾದವು ಮತ್ತು ಆಗಾಗ ಘರ್ಷಣೆಗಳು ನಡೆದವು. ಸೆಪ್ಟೆಂಬರ್ 2020 ರಲ್ಲಿ, ಅಜೆರ್ಬೈಜಾನ್ ಈ ಪ್ರದೇಶವನ್ನು ವಶಪಡಿಸಿಕೊಳ್ಳಲು ಪೂರ್ಣ ಪ್ರಮಾಣದ ದಾಳಿಯನ್ನು ಪ್ರಾರಂಭಿಸಿತು. ಈ ಭೀಕರ ದಾಳಿಯು ಆರು ವಾರಗಳ ಕಾಲ ನಡೆದಿತ್ತು.

ರಷ್ಯಾ ಮಧ್ಯಸ್ಥಿಕೆಯೊಂದಿಗೆ ಯುದ್ಧವು ಕೊನೆಗೊಂಡಿತ್ತು. ಈ ಮೂಲಕ ಅಜರ್ಬೈಜಾನ್ ನಾಗೋರ್ನೊ-ಕರಬಾಖ್ ಕೆಲವು ಭಾಗಗಳು ಮತ್ತು ಈ ಹಿಂದೆ ಅರ್ಮೇನಿಯನ್ನರು ಆಕ್ರಮಿಸಿಕೊಂಡಿದ್ದ ಸುತ್ತಮುತ್ತಲಿನ ಎಲ್ಲಾ ಪ್ರದೇಶಗಳ ಮೇಲೆ ನಿಯಂತ್ರಣವನ್ನು ಮರಳಿ ಪಡೆಯಿತು. ಈ ವೇಳೆ ಲಾಚಿನ್ ಕಾರಿಡಾರ್ ತೆರೆದಿರುವುದನ್ನು ಖಚಿತಪಡಿಸಿಕೊಳ್ಳುವುದು ಸೇರಿದಂತೆ ಶಾಂತಿಯನ್ನು ಕಾಪಾಡಿಕೊಳ್ಳಲು ರಷ್ಯಾ 2,000 ಸೈನಿಕರ ಶಾಂತಿಪಾಲನಾ ಪಡೆಯನ್ನು ಅಲ್ಲಿಗೆ ಕಳುಹಿಸಿತು.

ಪ್ರಸ್ತುತ ವಿವಾದ: ಕಳೆದ ವರ್ಷ ಡಿಸೆಂಬರ್ ಮಧ್ಯದಲ್ಲಿ, ಪರಿಸರ ಕಾರ್ಯಕರ್ತರು ಎಂದು ಹೇಳಿಕೊಳ್ಳುವ ಅಜೆರಿಗಳು ಆರ್ಮೇನಿಯನ್ನರ ಕಾನೂನುಬಾಹಿರ ಗಣಿಗಾರಿಕೆಯನ್ನು ವಿರೋಧಿಸುತ್ತಿರುವುದಾಗಿ ಹೇಳಿ ರಸ್ತೆಯನ್ನು ನಿರ್ಬಂಧಿಸಲು ಮುಂದಾಗಿದ್ದರು. ಈ ಪ್ರತಿಭಟನೆಗಳನ್ನು ಅಜೆರ್ಬೈಜಾನ್ ಆಯೋಜಿಸಿದೆ ಎಂದು ಅರ್ಮೇನಿಯಾ ವಾದಿಸುತ್ತಿದೆ. ಇದಕ್ಕೆ ಪ್ರತಿಯಾಗಿ ಅಜೆರ್ಬೈಜಾನ್​, ಅರ್ಮೇನಿಯನ್ನರು ಕದನವಿರಾಮದ ನಿಯಮಗಳನ್ನು ಉಲ್ಲಂಘಿಸಿ ನಾಗೋರ್ನೊ-ಕರಬಾಖ್​ಗೆ ಲ್ಯಾಂಡ್ ಮೈನ್‌ಗಳನ್ನು ಸಾಗಿಸಲು ಕಾರಿಡಾರ್ ಅನ್ನು ಬಳಸಿದ್ದಾರೆ ಎಂದು ಆರೋಪಿಸಿದೆ.

ಒಂದು ತಿಂಗಳಿಗೂ ಹೆಚ್ಚು ಕಾಲ ನಿರ್ಬಂಧಗಳ ನಂತರ, ನಗೋರ್ನೊ-ಕರಾಬಖ್‌ನಲ್ಲಿ ಆಹಾರದ ಕೊರತೆಯು ಉಂಟಾಗಿದೆ. ಅಕ್ಕಿ, ಪಾಸ್ತಾ, ಬಕ್ವೀಟ್, ಸಕ್ಕರೆ ಮತ್ತು ಸೂರ್ಯಕಾಂತಿ ಎಣ್ಣೆಯ ಸೀಮಿತ ಖರೀದಿಗೆ ಮಾತ್ರ ಅವಕಾಶ ನೀಡುವ ಕೂಪನ್ ವ್ಯವಸ್ಥೆಯನ್ನು ಸ್ಥಳೀಯ ಸರ್ಕಾರ ಶುಕ್ರವಾರ ಜಾರಿಗೆ ತಂದಿದೆ. ಸ್ಥಳೀಯ ಅಧಿಕಾರಿಗಳು ಅಗತ್ಯ ಸರಬರಾಜುಗಳಿಗಾಗಿ ಏರ್‌ಲಿಫ್ಟ್‌ಗೆ ಕರೆ ನೀಡಿದ್ದಾರೆ. ಆದರೆ ಅಜೆರ್ಬೈಜಾನ್ ಈ ಪ್ರದೇಶದ ವಿಮಾನ ನಿಲ್ದಾಣ ಕಾರ್ಯನಿರ್ವಹಿಸಲು ಅನುಮತಿ ನೀಡಿಲ್ಲ.

ಅಜೆರ್ಬೈಜಾನ್ ನಾಗೋರ್ನೊ-ಕರಾಬಖ್‌ಗೆ ಅನಿಲ ಪೂರೈಕೆಯನ್ನು ಕಡಿತಗೊಳಿಸಿದೆ. ಇತ್ತೀಚೆಗೆ ವಿದ್ಯುತ್ ಸರಬರಾಜು ಕಡಿಮೆ ಮಾಡಿದೆ. ಲಚಿನ್ ಕಾರಿಡಾರ್ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ರಷ್ಯಾವನ್ನು ನಿಯೋಜಿಸಲಾಗಿದ್ದರೂ, ಈ ದಿಗ್ಬಂಧನವನ್ನು ಕೊನೆಗೊಳಿಸಲು ಅದು ಯಾವುದೇ ಬಹಿರಂಗ ಕ್ರಮವನ್ನು ತೆಗೆದುಕೊಂಡಿಲ್ಲ.

ಯುರೋಪಿಯನ್ ಸಂಸತ್ತು ರಷ್ಯಾದ ಶಾಂತಿಪಾಲನಾ ಪಡೆಗಳನ್ನು ಯುರೋಪಿನ ಭದ್ರತೆ ಮತ್ತು ಸಹಕಾರ ಸಂಘಟನೆಯ ನಿಯೋಗದಿಂದ ಬದಲಾಯಿಸಲು ಕರೆ ನೀಡಿದೆ. ಈ ವೇಳೆ 2020 ರ ಯುದ್ಧಕ್ಕೂ ಹಿಂದಿನ ದಶಕಗಳಲ್ಲಿ ನಾಗೋರ್ನೊ-ಕರಬಾಖ್​ನ ಬಿಕ್ಕಟ್ಟನ್ನು ಪರಿಹರಿಸಲು ಯುರೋಪಿನ ಭದ್ರತೆ ಮತ್ತು ಸಹಕಾರ ಸಂಘಟನೆ (OSCE) ವಿಫಲವಾಗಿದೆ ಎಂದು ಟೀಕಿಸಿತ್ತು.

ವಿವಾದದ ಪರಿಣಾಮಗಳು: ಉಕ್ರೇನ್​ನಲ್ಲಿನ ಹೋರಾಟದ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಿರುವ ರಷ್ಯಾ, ಲಾಚಿನ್ ಕಾರಿಡಾರ್ ದಿಗ್ಬಂಧನದ ವಿಷಯದಲ್ಲಿ ಕಾದು ನೋಡುವ ತಂತ್ರವನ್ನು ಬಳಸಿದೆ, ಇದು ಅರ್ಮೇನಿಯಾವನ್ನು ಕೆರಳಿಸಿದೆ. ಪ್ರಧಾನಿ ನಿಕೋಲ್ ಪಶಿನ್ಯಾನ್ ಈ ತಿಂಗಳು ರಷ್ಯಾ ನೇತೃತ್ವದ ಸಾಮೂಹಿಕ ಭದ್ರತಾ ಒಪ್ಪಂದ ಸಂಘಟನೆಯ ಮೈತ್ರಿಯ ಮಿಲಿಟರಿ ಅಭ್ಯಾಸ ಆಯೋಜಿಸಲು ಅರ್ಮೇನಿಯಾಗೆ ಅನುಮತಿ ನೀಡಲು ನಿರಾಕರಿಸಿದ್ದರು, ಅರ್ಮೇನಿಯಾದಲ್ಲಿ ರಷ್ಯಾದ ಮಿಲಿಟರಿ ಉಪಸ್ಥಿತಿಯು ಅದರ ಸುರಕ್ಷತೆಯನ್ನು ಖಾತರಿಪಡಿಸುವಲ್ಲಿ ವಿಫಲವಾಗಿದೆ, ಆದರೆ ಇದು ಅರ್ಮೇನಿಯಾಕ್ಕೆ ಭದ್ರತಾ ಬೆದರಿಕೆಗಳನ್ನು ಹೆಚ್ಚಿಸುತ್ತದೆ ಎಂದು ಹೇಳಿದೆ.

ಅರ್ಮೇನಿಯಾ ರಷ್ಯಾದ ಸೇನಾ ನೆಲೆಯನ್ನು ಹೊಂದಿದೆ. 2020 ರ ಯುದ್ಧವನ್ನು ಕೊನೆಗೊಳಿಸುವಲ್ಲಿ ರಷ್ಯಾದ ಪಾಲ್ಗೊಳ್ಳುವಿಕೆಯು ಈ ಪ್ರದೇಶದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಿದ ಮಹತ್ವದ ಸಾಧನೆಯಾಗಿದೆ. ಈ ರಸ್ತೆಯನ್ನು ತೆರೆಯಲು ಬಲವಾದ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ರಷ್ಯಾ ಗಳಿಸಿದ ಗೌರವವನ್ನು ಕಳೆದುಕೊಳ್ಳಬೇಕಾಗುತ್ತದೆ.

ಯುದ್ಧವನ್ನು ಕೊನೆಗೊಳಿಸಲು ರಷ್ಯಾ-ಮಧ್ಯಸ್ಥಿಕೆಯ ಒಪ್ಪಂದಕ್ಕೆ ಪಶಿನ್ಯಾನ್ ಅವರ ಸಮ್ಮತಿಯು ಅರ್ಮೇನಿಯಾದಲ್ಲಿ ವ್ಯಾಪಕವಾಗಿ ಖಂಡನೆ ವ್ಯಕ್ತವಾಗಿದೆ. ವಿರೋಧಿಗಳು ಅವರನ್ನು ದೇಶದ್ರೋಹಿ ಎಂದು ಕರೆದು, ರಾಜೀನಾಮೆಗೆ ಒತ್ತಾಯಿಸಿ ದೊಡ್ಡ ಪ್ರತಿಭಟನೆಗಳನ್ನು ನಡೆಸಿದ್ದರು. ಪ್ರಸ್ತುತ ವಿವಾದವನ್ನು ಪರಿಹರಿಸಲು ವಿಫಲವಾದರೆ, ನಾಗೋರ್ನೊ-ಕರಬಾಖ್​ನ ಅರ್ಮೇನಿಯನ್​ಯನ್ನರು ಏಕಾಂಗಿಯಾಗಿಸಿ ಮತ್ತು ಅಲ್ಲಿ ಅಶಾಂತಿಯನ್ನು ಉಂಟುಮಾಡಬಹುದಾಗಿದೆ. 2018 ರಲ್ಲಿ ದೊಡ್ಡ ಹೋರಾಟಗಳ ನಡುವೆ ಪ್ರಧಾನ ಮಂತ್ರಿಯಾದ ಪಾಶಿನ್ಯಾನ್ ಇಂತಹ ಪ್ರತಿಭಟನೆಗಳ ಸಂಭಾವ್ಯ ಶಕ್ತಿಯ ಬಗ್ಗೆ ತಿಳಿದಿರುತ್ತಾರೆ ಎಂದು ಹೇಳಬಹುದು.

ಇದನ್ನೂ ಓದಿ: ಚೀನಾದಲ್ಲಿ ಒಂದೇ ವಾರ ಕೋವಿಡ್​ನಿಂದ 13 ಸಾವಿರ ಸಾವು.. ಶೇ 80 ಜನತೆಗೆ ವಕ್ಕರಿಸಿದ ಸೋಂಕು!

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.