ಕಾಬೂಲ್(ಅಫ್ಘಾನಿಸ್ತಾನ): ಟರ್ಕಿ, ಸಿರಿಯಾದಲ್ಲಿ ಭೀಕರ ಭೂಕಂಪ ಉಂಟಾಗಿ ನರಮೇಧ ಸೃಷ್ಟಿಸಿತ್ತು. ಇದೀಗ ಅಫ್ಘಾನಿಸ್ತಾನದಲ್ಲೂ ಭೂಮಿ ನಡುಗಿದೆ. ಇಲ್ಲಿನ ಫೈಜಾಬಾದ್‌ನಿಂದ 213 ಕಿಮೀ ದೂರದವರೆಗಿನ ಪೂರ್ವ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ 06:51 ನಿಮಿಷಕ್ಕೆ 4.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿದೆ.
ಫೈಜಾಬಾದ್ ಪ್ರದೇಶದ 105 ಕಿಮೀ ಆಳದಲ್ಲಿ ಭೂಕಂಪನ ಕೇಂದ್ರ ಬಿಂದು ಕಾಣಿಸಿಕೊಂಡಿದೆ. ಇದರ ಉದ್ಧ 72.96 ಕಿಮೀ ಇದ್ದರೆ, 213 ಕಿಮೀ ವ್ಯಾಪ್ತಿಯಲ್ಲಿ ಭೂಕಂಪನದ ಅನುಭವವಾಗಿದೆ ಎಂದು ಟ್ವೀಟ್ ಮೂಲಕ ತಿಳಿಸಿದೆ. ಈವರೆಗೂ ಯಾವುದೇ ಸಾವು ನೋವಿನ ಬಗ್ಗೆ ವರದಿ ಸಿಕ್ಕಿಲ್ಲ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
15 ದಿನಗಳ ಹಿಂದೆ ಕಂಪಿಸಿದ್ದ ಭೂಮಿ: ಇದೇ ಫೈಜಾಬಾದ್ ಪ್ರದೇಶದಲ್ಲಿ 15 ದಿನಗಳ ಹಿಂದೆ ಭೂಕಂಪನ ಉಂಟಾಗಿತ್ತು. ಪೂರ್ವ ಈಶಾನ್ಯದ 267 ಕಿ.ಮೀ ದೂರದಲ್ಲಿ ಮಧ್ಯಾಹ್ನ 4.1 ತೀವ್ರತೆಯ ಭೂಕಂಪ ಸಂಭವಿಸಿತ್ತು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿತ್ತು. 37.73 ಅಕ್ಷಾಂಶ ಮತ್ತು 73.47 ರೇಖಾಂಶದಲ್ಲಿ 245 ಕಿ.ಮೀ ಆಳದಲ್ಲಿ ಭೂಮಿಯಲ್ಲಿ ಕಂಪನದ ಅಲೆಗಳು ಎದ್ದಿದ್ದವು. ಇದೀಗ ಮತ್ತೆ ಫೈಜಾಬಾದ್ ಪ್ರದೇಶದ ಪೂರ್ವ ಪ್ರದೇಶದಲ್ಲಿ ಪ್ರಕೃತಿ ವಿಸ್ಮಯ ನಡೆದಿದೆ.
-
Earthquake of Magnitude:4.3, Occurred on 18-03-2023, 06:51:03 IST, Lat: 37.04 & Long: 72.96, Depth: 105 Km ,Location: 213km E of Fayzabad, Afghanistan for more information Download the BhooKamp App https://t.co/1I9VuZmwYA@Ravi_MoES @Dr_Mishra1966 @ndmaindia @Indiametdept pic.twitter.com/rTpGNsXgYb
— National Center for Seismology (@NCS_Earthquake) March 18, 2023 " class="align-text-top noRightClick twitterSection" data="
">Earthquake of Magnitude:4.3, Occurred on 18-03-2023, 06:51:03 IST, Lat: 37.04 & Long: 72.96, Depth: 105 Km ,Location: 213km E of Fayzabad, Afghanistan for more information Download the BhooKamp App https://t.co/1I9VuZmwYA@Ravi_MoES @Dr_Mishra1966 @ndmaindia @Indiametdept pic.twitter.com/rTpGNsXgYb
— National Center for Seismology (@NCS_Earthquake) March 18, 2023Earthquake of Magnitude:4.3, Occurred on 18-03-2023, 06:51:03 IST, Lat: 37.04 & Long: 72.96, Depth: 105 Km ,Location: 213km E of Fayzabad, Afghanistan for more information Download the BhooKamp App https://t.co/1I9VuZmwYA@Ravi_MoES @Dr_Mishra1966 @ndmaindia @Indiametdept pic.twitter.com/rTpGNsXgYb
— National Center for Seismology (@NCS_Earthquake) March 18, 2023
ತಜಕಿಸ್ಥಾನದಲ್ಲಿ 6.8 ತೀವ್ರತೆಯ ಕಂಪನ: ಫೆಬ್ರವರಿ 23 ರಂದು ತಜಕಿಸ್ಥಾನದಲ್ಲಿ 6.8 ತೀವ್ರತೆಯ ಭೂಕಂಪನ ಸಂಭವಿಸಿತ್ತು ಎಂದು ಅಮೆರಿಕದ ಜಿಯೋಲಾಜಿಕಲ್ ಸರ್ವೇ ತಿಳಿಸಿತ್ತು. ಸುಮಾರು 20.5 ಕಿಮೀ ಆಳದಲ್ಲಿ ಕಂಪನದ ಅಲೆಗಳು ಎದ್ದಿದ್ದವು. ಇದರ ಕೇಂದ್ರಬಿಂದು ಅಫ್ಘಾನಿಸ್ತಾನ ಮತ್ತು ಚೀನಾ ಗಡಿಯಲ್ಲಿರುವ ಅರೆ ಸ್ವಾಯತ್ತ ಪ್ರದೇಶವಾದ ಗೊರ್ನೊ ಬದಕ್ಷನ್ ಪ್ರದೇಶದ ಸಮೀಪದಲ್ಲಿದೆ. ಈ ಪ್ರದೇಶ ವಿರಳ ಜನಸಂಖ್ಯೆ ಮತ್ತು ಎತ್ತರದ ಪಾಮಿರ್ ಪರ್ವಗಳಿಂದ ಕೂಡಿದೆ.
ಭಾರೀ ಅನಾಹುತ ಮಾಡಿದ್ದ "ಸೃಷ್ಟಿ": ಕಳೆದ ವರ್ಷದ ಜೂನ್ನಲ್ಲಿ ಅಫ್ಘಾನಿಸ್ತಾನದ ಪೂರ್ವ ಭಾಗದಲ್ಲಿ 6.1ರ ತೀವ್ರತೆಯಲ್ಲಿ ಭೂಮಿ ಕಂಪಿಸಿ ದೊಡ್ಡ ಅನಾಹುತವನ್ನೇ ಸೃಷ್ಟಿಸಿತ್ತು. ಪೂರ್ವದ ಪ್ರಾಂತ್ಯಗಳಾದ ನಂಗರ್ಹಾರ್ ಮತ್ತು ಖೋಸ್ಟ್‌ಗಳಲ್ಲಿ ಅಪಾರ ಪ್ರಮಾಣದ ಸಾವು ನೋವುಗಳು ವರದಿಯಾಗಿದ್ದವು. ಆಗ್ನೇಯ ಭಾಗದ ನಗರ ಖೋಸ್ಟ್‌ನಿಂದ ಸುಮಾರು 44 ಕಿಮೀ ದೂರದಲ್ಲಿ ಹಾಗೂ 51 ಕಿಮೀ ಆಳದಲ್ಲಿ ಭೂಕಂಪನ ಉಂಟಾಗಿತ್ತು. ಖೋಸ್ಟ್‌ನಲ್ಲಿ ಕನಿಷ್ಠ 25 ಮಂದಿ ಬಲಿಯಾಗಿದ್ದರು. ನಂಗರ್ಹಾರ್ ಪ್ರಾಂತ್ಯದಲ್ಲಿ ಐವರು ಮೃತಪಟ್ಟಿದ್ದರು. ಒಟ್ಟಾರೆ, 920 ಮಂದಿ ಬಲಿಯಾಗಿ 600 ಕ್ಕೂ ಅಧಿಕ ಜನರು ಗಾಯಗೊಂಡಿದ್ದರು ಎಂದು ವಿಪತ್ತು ನಿರ್ವಹಣಾ ಅಧಿಕಾರಿಗಳು ತಿಳಿಸಿದ್ದರು.
ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಭಾರತದ ಭಾಗಗಳವರೆಗೆ ಸುಮಾರು 500 ಕಿಮೀ ಉದ್ದಕ್ಕೂ ಭೂಮಿ ಕಂಪಿಸಿತ್ತು ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿತ್ತು. ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್, ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ಗಳಲ್ಲಿ ಕೂಡ ಭೂಮಿ ನಡುಗಿದ ಅನುಭವವಾಗಿತ್ತು.
ಭೂಕಂಪಕ್ಕೆ ತತ್ತರಿಸಿದ ಟರ್ಕಿ: ಫೆಬ್ರವರಿ ತಿಂಗಳಾರಂಭದಲ್ಲಿ ಟರ್ಕಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿತ್ತು. ಸಾವಿರಾರು ಕಟ್ಟಡಗಳು ಧರೆಗುರುಳಿ, 50 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಕಟ್ಟಡ ನಿರ್ಮಾಣದಲ್ಲಿ ಅಕ್ರಮ ಎಸಗಿದ ಆರೋಪದ ಮೇಲೆ ಟರ್ಕಿ ಸರ್ಕಾರ ಈವರೆಗೆ 184 ಜನರನ್ನು ಬಂಧಿಸಿದೆ. ತನಿಖೆಯನ್ನು ಮತ್ತಷ್ಟು ವಿಸ್ತರಿಸುತ್ತಿರುವುದಾಗಿ ಸರ್ಕಾರ ತಿಳಿಸಿದೆ. ಇತ್ತೀಚೆಗೆ ಟರ್ಕಿಯಲ್ಲದೇ, ತಜಕಿಸ್ತಾನ, ಇಂಡೋನೇಷ್ಯಾ, ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಮಧ್ಯಮ, ಕಡಿಮೆ ಪ್ರಮಾಣದ ಭೂಕಂಪಗಳು ಸಂಭವಿಸುತ್ತಲೇ ಇವೆ.
ಓದಿ: ದಿವಾಳಿಯಾದ ಅಮೆರಿಕ ಬ್ಯಾಂಕ್ಗಳ ನೆರವಿಗೆ ಬಂದ ಉದ್ಯಮಿಗಳು, ಇತರ ಬ್ಯಾಂಕ್ಗಳು!