ETV Bharat / international

ಅರುಣಾಚಲ ಪ್ರದೇಶ, ಅಕ್ಸಾಯ್ ಚಿನ್​ ಪ್ರದೇಶ ತನ್ನದೆಂದ ಚೀನಾ: ಬಿಡುಗಡೆಯಾದ ಹೊಸ 'ಸ್ಟ್ಯಾಂಡರ್ಡ್ ಮ್ಯಾಪ್'ನಲ್ಲಿ ಮಾಹಿತಿ ಬಹಿರಂಗ... - ಎಲ್​ಎಸಿಯನ್ನು ಗೌರವಿಸುವುದು ಅತ್ಯಗತ್ಯ

ಅರುಣಾಚಲ ಪ್ರದೇಶ, ಅಕ್ಸಾಯ್ ಚಿನ್​ ಪ್ರದೇಶವನ್ನು ತನ್ನದೆಂದು ಚೀನಾ ಬಿಂಬಿಸಲು ಮುಂದಾಗಿದೆ. ನಿನ್ನೆ ಬಿಡುಗಡೆಯಾದ ಚೀನಾದ ಹೊಸ 'ಸ್ಟ್ಯಾಂಡರ್ಡ್ ಮ್ಯಾಪ್'ನಲ್ಲಿ ಈ ಮಾಹಿತಿ ಬಹಿರಂಗವಾಗಿದೆ.

China includes Arunachal Pradesh, Aksai Chin in new 'standard map'
ಅರುಣಾಚಲ ಪ್ರದೇಶ, ಅಕ್ಸಾಯ್ ಚಿನ್​ ಪ್ರದೇಶ ತನ್ನದೆಂದ ಚೀನಾ: ಬಿಡುಗಡೆಯಾದ ಹೊಸ 'ಸ್ಟ್ಯಾಂಡರ್ಡ್ ಮ್ಯಾಪ್'ನಲ್ಲಿ ಮಾಹಿತಿ ಬಹಿರಂಗ...
author img

By ETV Bharat Karnataka Team

Published : Aug 29, 2023, 12:19 PM IST

ಬೀಜಿಂಗ್ (ಚೀನಾ): ಚೀನಾ ತನ್ನ "ಸ್ಟ್ಯಾಂಡರ್ಡ್ ಮ್ಯಾಪ್"ನ 2023ರ ಆವೃತ್ತಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಮ್ಯಾಪನಲ್ಲಿ ಅರುಣಾಚಲ ಪ್ರದೇಶ ಹಾಗೂ ಅಕ್ಸಾಯ್ ಚಿನ್ ಪ್ರದೇಶವನ್ನು ಚೀನಾ ತನ್ನ ಪ್ರದೇಶದ ಭಾಗವಾಗಿ ತೋರಿಸಿದೆ.

ಆಗಸ್ಟ್ 28ರಂದು ಬಿಡುಗಡೆಯಾದ ನಕ್ಷೆಯು ದಕ್ಷಿಣ ಟಿಬೆಟ್ ಎಂದು ಚೀನಾ ಹೇಳಿಕೊಳ್ಳುವ ಅರುಣಾಚಲ ಪ್ರದೇಶವನ್ನು ತೋರಿಸುತ್ತದೆ. ಮತ್ತು 1962 ರ ಯುದ್ಧದಲ್ಲಿ ಅಕ್ಸಾಯ್ ಚಿನ್ ತನ್ನ ಭೂಪ್ರದೇಶದ ಭಾಗವಾಗಿ ಆಕ್ರಮಿಸಿಕೊಂಡಿದೆ. ತೈವಾನ್ ಮತ್ತು ವಿವಾದಿತ ದಕ್ಷಿಣ ಚೀನಾ ಸಮುದ್ರವನ್ನು ಹೊಸ ನಕ್ಷೆಯಲ್ಲಿ ಚೀನಾದ ಭೂಪ್ರದೇಶದೊಳಗೆ ಸೇರಿಸಲಾಗಿದೆ. ಒಂಬತ್ತು - ಡ್ಯಾಶ್ ರೇಖೆಯ ಮೇಲೆ ಚೀನಾದ ಹಕ್ಕುಗಳನ್ನು ನಕ್ಷೆಯು ತಿಳಿಸುತ್ತದೆ. ಹೀಗಾಗಿ ದಕ್ಷಿಣ ಚೀನಾ ಸಮುದ್ರದ ಹೆಚ್ಚಿನ ಭಾಗಕ್ಕಾಗಿ ಹಕ್ಕು ಸಾಧಿಸುತ್ತದೆ. ವಿಯೆಟ್ನಾಂ, ಫಿಲಿಪ್ಪಿನ್ಸ್​​, ಮಲೇಷ್ಯಾ ಮತ್ತು ಬ್ರೂನೈ ದಕ್ಷಿಣ ಚೀನಾ ಸಮುದ್ರ ಪ್ರದೇಶಗಳ ಮೇಲೆ ಎಲ್ಲ ಹಕ್ಕುಗಳನ್ನು ಹೊಂದಿದೆ.

ಸಮೀಕ್ಷೆ ಮತ್ತು ಮ್ಯಾಪಿಂಗ್ ಪ್ರಚಾರ ದಿನಾಚರಣೆ: ಝೆಜಿಯಾಂಗ್ ಪ್ರಾಂತ್ಯದ ಡೆಕ್ವಿಂಗ್ ಕೌಂಟಿಯಲ್ಲಿ ಸೋಮವಾರ ನಡೆದ ಸಮೀಕ್ಷೆ ಮತ್ತು ಮ್ಯಾಪಿಂಗ್ ಪ್ರಚಾರ ದಿನಾಚರಣೆ ಮತ್ತು ರಾಷ್ಟ್ರೀಯ ಮ್ಯಾಪಿಂಗ್ ಜಾಗೃತಿ ಪ್ರಚಾರ ಸಪ್ತಾಹದ ಸಂದರ್ಭದಲ್ಲಿ ಚೀನಾದ ನೈಸರ್ಗಿಕ ಸಂಪನ್ಮೂಲ ಸಚಿವಾಲಯವು ಈ ನಕ್ಷೆಯನ್ನು ಬಿಡುಗಡೆ ಮಾಡಿದೆ ಎಂದು ಚೀನಾ ಡೈಲಿ ಪತ್ರಿಕೆ ವರದಿ ಮಾಡಿದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕ್ಸಿ ಜಿನ್‌ಪಿಂಗ್ ಭೇಟಿಯಾದರು. ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆ ಹೊರತಾಗಿ, ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಅವರು, ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗಿನ ಸಂವಾದದಲ್ಲಿ, ಭಾರತ - ಚೀನಾ ನಡುವಿನ ಎಲ್​ಎಸಿ ಉದ್ದಕ್ಕೂ ಇರುವ ಗಡಿ ಪ್ರದೇಶಗಳ ಸಮಸ್ಯೆಗಳ ಬಗ್ಗೆ ಎತ್ತಿ ತೋರಿಸಿದ್ದರು.

ಎಲ್​ಎಸಿ ಗೌರವಿಸುವುದು ಅತ್ಯಗತ್ಯ: "ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡುವುದು ಮತ್ತು ಭಾರತ-ಚೀನಾ ಸಂಬಂಧ ಸಾಮಾನ್ಯೀಕರಣಗೊಳಿಸಲು ಎಲ್​ಎಸಿಯನ್ನು ಗಮನಿಸುವುದು ಮತ್ತು ಗೌರವಿಸುವುದು ಅತ್ಯಗತ್ಯ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು. ಈ ನಿಟ್ಟಿನಲ್ಲಿ ಇಬ್ಬರು ನಾಯಕರು ತಮ್ಮ ಸಂಬಂಧಿತ ಅಧಿಕಾರಿಗಳಿಗೆ ತ್ವರಿತ ಕ್ರಮ ಕೈಗೊಳ್ಳುವುದಕ್ಕೆ ನಿರ್ದೇಶಿಸಲು ಒಪ್ಪಿಕೊಂಡಿದ್ದರು" ಎಂದು ಕ್ವಾತ್ರಾ ಬ್ರಿಕ್ಸ್​​​​​​ ಸಭೆ ವೇಳೆ ಉಭಯ ನಾಯಕರ ಭೇಟಿ ಬಳಿಕ ಈ ಮಾಹಿತಿ ನೀಡಿದ್ದರು.

ಚೀನಾದ ವು ವೆನ್‌ಜಾಂಗ್ ಹೇಳಿದ್ದೇನು?: ಚೈನೀಸ್ ಕಮ್ಯುನಿಸ್ಟ್ ಪಕ್ಷದ ಕೇಂದ್ರ ಪ್ರಚಾರ ವಿಭಾಗದ ಒಡೆತನದ ಆಂಗ್ಲ ಭಾಷೆಯ ದಿನಪತ್ರಿಕೆಯ ಚೈನಾ ಡೈಲಿ ಪ್ರಕಾರ, ಚೀನಾದ ನೈಸರ್ಗಿಕ ಸಂಪನ್ಮೂಲಗಳ ಸಚಿವಾಲಯದ ಮುಖ್ಯ ಯೋಜಕ ವು ವೆನ್‌ಜಾಂಗ್ ಅವರು, ''ಸಮೀಕ್ಷೆ, ಮ್ಯಾಪಿಂಗ್ ಮತ್ತು ಭೌಗೋಳಿಕ ಮಾಹಿತಿಯು ರಾಷ್ಟ್ರದ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಎಲ್ಲಾ ಹಂತಗಳ ಅಗತ್ಯಗಳನ್ನು ಪೂರೈಸುತ್ತದೆ. ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆಯನ್ನು ಬೆಂಬಲಿಸುತ್ತದೆ ಮತ್ತು ಸಹಾಯ ಮಾಡುತ್ತದೆ. ಪರಿಸರ ವಿಜ್ಞಾನ ಮತ್ತು ನಾಗರಿಕತೆಯ ನಿರ್ಮಾಣ. ಮುಂದಿನ ಹಂತವು ಡಿಜಿಟಲ್ ನಕ್ಷೆಗಳು ಮತ್ತು ನ್ಯಾವಿಗೇಷನ್ ಮತ್ತು ಡಿಜಿಟಲ್ ಆರ್ಥಿಕತೆಯ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಭೌಗೋಳಿಕ ಮಾಹಿತಿ ದತ್ತಾಂಶದ ಲಭ್ಯತೆ ವೇಗಗೊಳಿಸಲು ಪೂರಕವಾಗುತ್ತದೆ. ಉದಾಹರಣೆಗೆ ಸ್ಥಳ ಆಧಾರಿತ ಸೇವೆಗಳು, ನಿಖರವಾದ ಕೃಷಿ ಹಾಗೂ ವಿವಿಧ ಸೇವೆಗಳಿಗೆ ನೀಡಲು ಸಾಧ್ಯವಾಗತ್ತದೆ" ಎಂದು ವು ಅವರು ಹೇಳಿದ್ದರು.

ಹಿಂದೆಯೂ ಭಾರತೀಯ ಸ್ಥಳಗಳನ್ನು ಏಕಪಕ್ಷೀಯವಾಗಿ ಮರುನಾಮಕರಣ: ಹತಾಶವಾದ ಬೀಜಿಂಗ್ ಈ ವರ್ಷದ ಏಪ್ರಿಲ್‌ನಲ್ಲಿ ಪರ್ವತ ಶಿಖರಗಳು, ನದಿಗಳು ಮತ್ತು ವಸತಿ ಪ್ರದೇಶಗಳ ಹೆಸರುಗಳನ್ನು ಒಳಗೊಂಡಿರುವ 11 ಭಾರತೀಯ ಸ್ಥಳಗಳನ್ನು ಏಕಪಕ್ಷೀಯವಾಗಿ "ಮರುನಾಮಕರಣ" ಮಾಡಿತ್ತು. ಬೀಜಿಂಗ್ ಇಂತಹ ತಂತ್ರಗಳನ್ನು ಬಳಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ 2017 ಮತ್ತು 2021ರಲ್ಲಿ, ಚೀನಾದ ನಾಗರಿಕ ವ್ಯವಹಾರ ಸಚಿವಾಲಯವು ಇತರ ಭಾರತೀಯ ಸ್ಥಳಗಳನ್ನು ಮರುನಾಮಕರಣ ಮಾಡಿದ್ದು, ಮತ್ತೊಂದು ರಾಜಕೀಯ ಘರ್ಷಣೆಯನ್ನು ಪ್ರಚೋದಿಸಿತ್ತು.

ಸ್ಥಳಗಳ ಮರುನಾಮಕರಣದಿಂದ ವಾಸ್ತವ ಬದಲಾಗೋದಿಲ್ಲ- ಎಂಇಎ ಗರಂ: ಈ ಹಿಂದೆ, ವಿದೇಶಾಂಗ ಸಚಿವಾಲಯದ (ಎಂಇಎ) ಅಧಿಕೃತ ವಕ್ತಾರ ಅರಿಂದಮ್ ಬಾಗ್ಚಿ ಅವರು ಭಾರತದ ಅರುಣಾಚಲ ಪ್ರದೇಶಕ್ಕೆ ಸೇರಿದ ಸ್ಥಳಗಳಲ್ಲಿ ತನ್ನ ಪ್ರಾಬಲ್ಯವನ್ನು ಪ್ರದರ್ಶಿಸುವ ಚೀನಾದ ಪ್ರಯತ್ನದ ಕುರಿತು ಪ್ರತಿಕ್ರಿಯಿಸಿ, ''ಚೀನಾ ಈ ರೀತಿಯ ಪ್ರಯತ್ನ ಮಾಡುತ್ತಿರುವುದು ಇದೇ ಮೊದಲಲ್ಲ. (ಅರುಣಾಚಲ ಪ್ರದೇಶದಲ್ಲಿನ ಪ್ರದೇಶಗಳ ಹೆಸರನ್ನು ಬದಲಾಯಿಸುವುದು) ಮತ್ತು ಅಂತಹ ಯಾವುದೇ ಪ್ರಯತ್ನಗಳನ್ನು ನಾವು ಈಗಾಗಲೇ ಖಂಡಿಸಿದ್ದೇವೆ. ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ನಾವು ಹೇಳಿದ್ದೇವೆ. ಭಾರತದ ಸ್ಥಳಗಳ ಮರುನಾಮಕರಣದಿಂದ ವಾಸ್ತವವನ್ನು ಬದಲಾಯಿಸಲು ಆಗುವುದಿಲ್ಲ'' ಎಂದು ಕಿಡಿಕಾರಿದ್ದರು"

ಇದನ್ನೂ ಓದಿ: ನವದೆಹಲಿಯಲ್ಲಿ ಜಿ20 ಶೃಂಗ: ಅಮೆರಿಕ ಅಧ್ಯಕ್ಷ ಜೋ ಬೈಡನ್​​​​​​​​​​​ ನಾಲ್ಕು ದಿನಗಳ ಭಾರತ ಪ್ರವಾಸ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.