ETV Bharat / international

ಚಂದ್ರಯಾನ-3 ಮಿಷನ್​ಗೂ ತಮಿಳುನಾಡಿಗೆ ಇನ್ನಿಲ್ಲದ ನಂಟು: ಚಂದ್ರಯಾನಕ್ಕೆ ನಾಮಕ್ಕಲ್‌ನಿಂದ ಮಣ್ಣಿನ ಕೊಡುಗೆ...

Chandrayaan-3: 2012ರಿಂದ, ತಮಿಳುನಾಡು ರಾಜಧಾನಿ ಚೆನ್ನೈನಿಂದ ಸುಮಾರು 400 ಕಿಮೀ ದೂರದಲ್ಲಿರುವ ನಾಮಕ್ಕಲ್ ಜಿಲ್ಲೆಯ ಭೂಮಿಯು ಚಂದ್ರನ ಮೇಲ್ಮೈಯನ್ನು ಹೋಲುತ್ತದೆ. ಚಂದ್ರಯಾನ ಮಿಷನ್ ಸಾಮರ್ಥ್ಯದ ಪರೀಕ್ಷೆಗಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ(ಇಸ್ರೋ) ನಾಮಕ್ಕಲ್​ನಿಂದ ಮಣ್ಣನ್ನು ಪೂರೈಸಲಾಗಿದೆ.

Chandrayaan 3
ಚಂದ್ರಯಾನ-3 ಮಿಷನ್​ಗೂ ತಮಿಳುನಾಡಿಗೆ ಇನ್ನಿಲ್ಲದ ನಂಟು: ಚಂದ್ರಯಾನಕ್ಕೆ ನಾಮಕ್ಕಲ್‌ನಿಂದ ಮಣ್ಣಿನ ಕೊಡುಗೆ...
author img

By ETV Bharat Karnataka Team

Published : Aug 23, 2023, 11:29 AM IST

ಚೆನ್ನೈ (ತಮಿಳುನಾಡು): ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ, ಚಂದ್ರಯಾನ-2 ಮಿಷನ್ ನಿರ್ದೇಶಕ ಮಾಯಿಲ್ಸಾಮಿ ಅಣ್ಣಾದೊರೈ ಮತ್ತು ಚಂದ್ರಯಾನ-3 ಯೋಜನಾ ನಿರ್ದೇಶಕ ವೀರಮುತ್ತುವೇಲ್ ಪಿ ಅವರು ತಮಿಳುನಾಡಿನ ವ್ಯಕ್ತಿಗಳು ಇಸ್ರೋ ಕಾರ್ಯಾಚರಣೆಗಳಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಇದರೊಂದಿಗೆ ತಮಿಳುನಾಡಿನ ಮಣ್ಣು ಕೂಡಾ ಚಂದ್ರಯಾನ-3 ಮಿಷನ್‌ಗೆ ಕೊಡುಗೆ ನೀಡಿದೆ.

ಚಂದ್ರನ ಮೇಲ್ಮೈಯಲ್ಲಿರುವ ಮಣ್ಣಿನ ಗುಣಲಕ್ಷಣಗಳನ್ನು ಹೋಲುತ್ತೆ ನಾಮಕ್ಕಲ್​ನ ಮಣ್ಣು: 2012 ರಿಂದ, ತಮಿಳುನಾಡು ರಾಜಧಾನಿ ಚೆನ್ನೈನಿಂದ ಸುಮಾರು 400 ಕಿಮೀ ದೂರದಲ್ಲಿರುವ ನಾಮಕ್ಕಲ್, ಆ ಜಿಲ್ಲೆಯ ಭೂಮಿಯು ಚಂದ್ರನ ಮೇಲ್ಮೈಯನ್ನು ಹೋಲುವುದರಿಂದ, ಚಂದ್ರಯಾನ ಮಿಷನ್ ಸಾಮರ್ಥ್ಯದ ಪರೀಕ್ಷೆಗಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ(ಇಸ್ರೋ) ಮಣ್ಣನ್ನು ಪೂರೈಸಿದೆ. ನಾಮಕ್ಕಲ್ ಮಣ್ಣಿನ ಗುಣಲಕ್ಷಣಗಳು ಒಂದೇ ಆಗಿರುವುದರಿಂದ ಚಂದ್ರನ ಮೇಲ್ಮೈಯಲ್ಲಿ ಮೃದುವಾಗಿ ಇಳಿಯಲು ಲ್ಯಾಂಡರ್ ಮಾಡ್ಯೂಲ್‌ನ ಸಾಮರ್ಥ್ಯವನ್ನು ಪರೀಕ್ಷಿಸಲು ಮತ್ತು ಪರಿಷ್ಕರಿಸಲು ಇದು ಇಸ್ರೋಗೆ ಸಹಾಯಕವಾಗಿದೆ.

ಇಸ್ರೋಗೆ ಮೂರು ಮಣ್ಣನ್ನು ಪೂರೈಸಿದ ತಮಿಳುನಾಡು: ಆದ್ದರಿಂದ ಚಂದ್ರಯಾನ-3 ರ ಲ್ಯಾಂಡರ್ ಮಾಡ್ಯೂಲ್ ಚಂದ್ರನ ಮೇಲೆ ಯಶಸ್ವಿಯಾಗಿ ಮೃದುವಾಗಿ ಇಳಿಯುವ ಉದ್ದೇಶವನ್ನು ಸಾಧಿಸಿದರೆ, ಅದು ತಮಿಳುನಾಡು ರಾಜ್ಯಕ್ಕೂ ಹೆಚ್ಚು ಖುಷಿಯನ್ನು ನೀಡುತ್ತದೆ. ದಕ್ಷಿಣ ರಾಜ್ಯವು ತನ್ನ ಮಹತ್ವಾಕಾಂಕ್ಷೆಯ ಚಂದ್ರನ ಮಿಷನ್‌ಗಳಿಗೆ ಪರೀಕ್ಷೆಗಳನ್ನು ನಡೆಸಲು ಬೆಂಗಳೂರು ಕೇಂದ್ರ ಕಚೇರಿಯ ಇಸ್ರೋಗೆ ಅಗತ್ಯವಾದ ಮಣ್ಣನ್ನು ಪೂರೈಸುತ್ತಿರುವುದು ಇದು ಮೂರನೇ ಬಾರಿಯಾಗಿದೆ.

ಪ್ರೊಫೆಸರ್ ಎಸ್. ಅನ್ಬಳಗನ್ ಮಾಹಿತಿ: ಪೆರಿಯಾರ್ ವಿಶ್ವವಿದ್ಯಾನಿಲಯದ ಭೂವಿಜ್ಞಾನ ವಿಭಾಗದ ನಿರ್ದೇಶಕ, ಪ್ರೊಫೆಸರ್ ಎಸ್ ಅನ್ಬಳಗನ್ ಅವರು, ''ನಾಮಕ್ಕಲ್ ಪ್ರದೇಶದಲ್ಲಿ ಮಣ್ಣು ಹೇರಳವಾಗಿ ಲಭ್ಯವಿದ್ದು, ಇಸ್ರೋಗೆ ಅಗತ್ಯವಿರುವ ಸಂದರ್ಭಕ್ಕೆ ಮಣ್ಣನ್ನು ಕಳುಹಿಸಿ ಕೊಡಲು ಸಾಧ್ಯವಾಯಿತು ಎಂದು ಅವರು ಹೇಳಿದ್ದಾರೆ. ‘ನಾವು ಭೂವಿಜ್ಞಾನದಲ್ಲಿ ಸಂಶೋಧನೆ ನಡೆಸುತ್ತಿದ್ದೇವೆ. ತಮಿಳುನಾಡು ಚಂದ್ರನ ಮೇಲ್ಮೈಯಲ್ಲಿ ಇರುವಂತಹ ಮಣ್ಣನ್ನು ಹೊಂದಿದೆ. ವಿಶೇಷವಾಗಿ ದಕ್ಷಿಣ ಧ್ರುವದಲ್ಲಿರುವ (ಚಂದ್ರನ) ಮಣ್ಣನ್ನು ಹೋಲುತ್ತದೆ. ಚಂದ್ರನ ಮೇಲ್ಮೈಯು 'ಅನಾರ್ತೊಸೈಟ್' ಮಣ್ಣಿನ ಪ್ರಕಾರವಾಗಿದೆ. ಚಂದ್ರ ಪರಿಶೋಧನಾ ಕಾರ್ಯಕ್ರಮವನ್ನು ಘೋಷಿಸಿದ ಕೂಡಲೇ ನಾವು ಇಸ್ರೋಗೆ ಮಣ್ಣನ್ನು ಕಳುಹಿಸಿಕೊಟ್ಟಿದ್ದೇವೆ'' ಎಂದು ಪ್ರೊಫೆಸರ್ ಎಸ್. ಅನ್ಬಳಗನ್ ಹೇಳಿದ್ದಾರೆ.

ಚಂದ್ರಯಾನ-3 ಮಿಷನ್ ಅನ್ವೇಷಿಸದೇ ಇರುವ ಚಂದ್ರನ ದಕ್ಷಿಣ ಧ್ರುವದಲ್ಲಿ ಬಾಹ್ಯಾಕಾಶ ನೌಕೆಯನ್ನು ಸುರಕ್ಷಿತವಾಗಿ ಇಳಿಸುವ ಗುರಿಯನ್ನು ಹೊಂದಿದೆ. ಇದು ಯುನೈಟೆಡ್ ಸ್ಟೇಟ್ಸ್, ಹಿಂದಿನ ಸೋವಿಯತ್ ಒಕ್ಕೂಟ ಮತ್ತು ಚೀನಾದ ನಂತರ ಈ ಗಮನಾರ್ಹ ಸಾಧನೆಯನ್ನು ಸಾಧಿಸಿದ ನಾಲ್ಕನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಲಿದೆ.

"ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ (ISRO) ಸುಮಾರು 50 ಟನ್ ಮಣ್ಣನ್ನು ಕಳುಹಿಸಲಾಗಿದೆ. ಇದು ಚಂದ್ರನ ಮೇಲ್ಮೈಯಲ್ಲಿರುವ ಮಣ್ಣನ್ನು ಹೋಲುತ್ತದೆ" ಎಂದು ಸೇಲಂನಲ್ಲಿರುವ ವಿಶ್ವವಿದ್ಯಾನಿಲಯದಲ್ಲಿ ರಿಮೋಟ್ ಸೆನ್ಸಿಂಗ್ ಮತ್ತು ಅಂತರ್ಜಲ ಪರಿಶೋಧನೆಯಲ್ಲಿ ಪರಿಣತಿ ಹೊಂದಿರುವ ಅನ್ಬಳಗನ್ ಹೇಳಿದ್ದಾರೆ.

ಮುಂದೆಯೂ ಅಗತ್ಯವಿರುವ ಮಣ್ಣನ್ನು ಪೂರೈಸಲು ಸಜ್ಜಾಗಿದ್ದೇವೆ- ಅನ್ಭಜಗನ್: ''ವಿವಿಧ ಪರೀಕ್ಷೆಗಳನ್ನು ಕೈಗೊಂಡ ನಂತರ, ಇಸ್ರೋದ ವಿಜ್ಞಾನಿಗಳು ನಾಮಕ್ಕಲ್ ಪ್ರದೇಶದಲ್ಲಿ ಲಭ್ಯವಿರುವ ಮಣ್ಣು ಚಂದ್ರನ ಮೇಲ್ಮೈಗೆ ಹೊಂದಿಕೆಯಾಗಿದೆ ಎಂದು ದೃಢಪಡಿಸಿದರು. ನಾಮಕ್ಕಲ್ ಸುತ್ತಮುತ್ತಲಿನ ಸೀತಾಂಪೂಂಡಿ ಮತ್ತು ಕುನ್ನಮಲೈ ಗ್ರಾಮಗಳಂತಹ ಸ್ಥಳಗಳಲ್ಲಿ, ಆಂಧ್ರಪ್ರದೇಶ ಮತ್ತು ದೇಶದ ಉತ್ತರ ಭಾಗದ ಕೆಲವು ಪ್ರದೇಶಗಳಲ್ಲಿ ಈ ಮಣ್ಣು ಹೇರಳವಾಗಿ ಲಭ್ಯವಿದೆ'' ಎಂದು ಅನ್ಭಜಗನ್ ಮಾಹಿತಿ ನೀಡಿದರು. "ನಾವು ಅವರ ಅವಶ್ಯಕತೆಗೆ ಅನುಗುಣವಾಗಿ ಇಸ್ರೋಗೆ ಮಣ್ಣನ್ನು ಕಳುಹಿಸುತ್ತಿದ್ದೇವೆ. ಇಸ್ರೋ ವಿಜ್ಞಾನಿಗಳು ನಾವು ಪೂರೈಸಿದ ಮಣ್ಣಿನಲ್ಲಿ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ. ಮುಂದಿನ ಚಂದ್ರಯಾನ-4 ಮಿಷನ್ ಬಂದರೂ ನಾವು ಅಗತ್ಯವಿರುವ ಮಣ್ಣನ್ನು ಪೂರೈಸಲು ಸಜ್ಜಾಗಿದ್ದೇವೆ'' ಎಂದು ಹೇಳಿದರು. (ಪಿಟಿಐ)

ಇದನ್ನೂ ಓದಿ: ಇಸ್ರೋದಿಂದ ಇಂದು ಮಹತ್ವದ ಕಾರ್ಯಾಚರಣೆ.. ಚಂದ್ರನ ಅಂಗಳದಲ್ಲಿ ತ್ರಿವಿಕ್ರಮನ ಪಾದಸ್ಪರ್ಶ.. ಚಂದ್ರಯಾನ ಕೌತುಕಕ್ಕೆ ಕ್ಷಣಗಣನೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.