ETV Bharat / international

ಟ್ವಿಟ್ಟರ್​ ಖರೀದಿಸುವ ಎಲಾನ್​​ ಮಸ್ಕ್​ ಕನಸಿಗೆ ಭಂಗ.. ಇದು ಕ್ರಮಬದ್ಧವಲ್ಲದ ನಿರ್ಧಾರ ಎಂದ ಮಂಡಳಿ

author img

By

Published : Apr 16, 2022, 6:46 AM IST

ಟ್ವಿಟ್ಟರ್​ ಖರೀದಿ ಮಾಡಲು ಮುಂದಾಗಿದ್ದ ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್​ ಮಸ್ಕ್​ಗೆ ಟ್ವಿಟರ್​ ನಿರ್ದೇಶಕರ ಮಂಡಳಿ ಶಾಕ್​ ನೀಡಿದೆ. ಷೇರುದಾರರು ಕ್ರಮಬದ್ಧವಲ್ಲದ ನಿರ್ಧಾರಕ್ಕೆ ಮುಂದಾಗಿದ್ದಾರೆ ಎಂದು ಹೇಳಿದೆ.

twitter
ಟ್ವಿಟರ್

ವಿಶ್ವದ ನಂ.1 ಧನಿಕ ಟೆಸ್ಲಾ ಸಿಇಒ ಎಲಾನ್ ಮಸ್ಕ್​ರ ಟ್ವಿಟ್ಟರ್​ ಖರೀದಿ ಮಾಡುವ ಕನಸಿಗೆ ಹಿನ್ನಡೆ ಉಂಟಾಗಿದೆ. ಟ್ವಿಟ್ಟರ್​ ನಿರ್ದೇಶಕರ ಮಂಡಳಿಯು ಎಲಾನ್​ಮಸ್ಕ್​ ಅವರ ಈ ಆಫರ್​ ಅನ್ನು ಅಧಿಕೃತವಾಗಿ ತಿರಸ್ಕರಿಸಿದೆ. ಅಲ್ಲದೇ, ಟ್ವಿಟ್ಟರ್​ ಮೇಲೆ ಅಧಿಕಾರ ಸ್ಥಾಪನೆಯ ವಿರುದ್ಧ ನಿರ್ಬಂಧವಾಗಿ 'ಷೇರುದಾರರ ಹಕ್ಕುಗಳ ಯೋಜನೆ'ಯನ್ನು ರೂಪಿಸಿದೆ.

ವಿಶ್ವದ ಶ್ರೀಮಂತ ವ್ಯಕ್ತಿಯಾದ ಎಲಾನ್​ ಮಸ್ಕ್ ಟ್ವಿಟರ್​ನಲ್ಲಿ 100 ಪ್ರತಿಶತ ಪಾಲನ್ನು ಖರೀದಿಸುವ ಪ್ರಸ್ತಾಪವನ್ನು ಮುಂದಿಟ್ಟಿದ್ದರು. ಇದಕ್ಕಾಗಿ ಅವರು ನಗದು ಹಣ ಪಾವತಿಗೆ ಸಿದ್ಧ ಎಂದು ಹೇಳಿದ್ದರು. ಆದರೆ, ಇದೀಗ ಟ್ವಿಟರ್​ ಸಂಸ್ಥೆ ಮಸ್ಕ್​ ಅವರ ಈ ಆಫರ್​ಅನ್ನು ತಿರಸ್ಕರಿಸಿದೆ. ನಿರ್ದೇಶಕರ ಮಂಡಳಿಯು ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಅಪೇಕ್ಷಿಸದ, ಕ್ರಮಬದ್ಧವಲ್ಲದ ರೀತಿಯಲ್ಲಿ ಹಕ್ಕುಗಳನ್ನು ಸ್ಥಾಪಿಸಲು ಮುಂದಾದ ಎಲಾನ್​ ಮಸ್ಕ್​ರ ನಿರ್ಧಾರ ಸಮಂಜಸವಲ್ಲ. ಷೇರುದಾರರ ಹಕ್ಕುಗಳ ರಕ್ಷಣೆ ಯೋಜನೆ ರೂಪಿಸಲಾಗುವುದು ಎಂದು ಅದು ತಿಳಿಸಿದೆ.

ಎಲಾನ್​ ಮಸ್ಕ್​ ಟ್ವಿಟ್ಟರ್​ನಲ್ಲಿ ಶೇ.9ರಷ್ಟು ಹೂಡಿಕೆ ಮಾಡಿದ್ದಾರೆ. ಅಲ್ಲದೇ, ಇತ್ತೀಚೆಗಷ್ಟೇ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯತ್ವ ಸ್ಥಾನವನ್ನು ತಿರಸ್ಕರಿಸಿದ್ದರು. ಬಳಿಕ ಪೂರ್ಣವಾಗಿ ಟ್ವಿಟ್ಟರ್​ ಖರೀದಿ ಮಾಡುವೆ. ಇಲ್ಲವಾದರೆ, ಕಂಪನಿಯ ಜೊತೆಗಿನ ನನ್ನ ಸಹಭಾಗಿತ್ವವನ್ನು ಪರಿಶೀಲಿಸುವೆ ಎಂದು ತಿಳಿಸಿದ್ದರು.

ಓದಿ: ಮೂರೇ ದಿನದಲ್ಲಿ ₹4 ಕೋಟಿ ದೇಣಿಗೆ ಸಂಗ್ರಹ: 3 ಲಕ್ಷ ಭಕ್ತರಿಂದ ಶಿರಡಿ ಸಾಯಿಬಾಬಾ ದರ್ಶನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.