ETV Bharat / international

Bill Gates: 'ಈ ಫೋಟೋ ನೋಡಿ ನೀವು ಅಚ್ಚರಿಗೊಂಡಿದ್ದುಂಟೇ?': ಖಾನ್ ಅಕಾಡೆಮಿ ಸಹ-ಸಂಸ್ಥಾಪಕನಿಗೆ ಬಿಲ್‌ ಗೇಟ್ಸ್ ಪ್ರಶ್ನೆ! - ಖ್ಯಾತ ಉದ್ಯಮಿ ಬಿಲ್ ಗೇಟ್ಸ್ ಪಾಡ್‌ಕ್ಯಾಸ್ಟ್​

Bill Gates podcast: ಪಾಡ್‌ಕಾಸ್ಟ್ ಆರಂಭಿಸಿರುವ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರು ತಮ್ಮ ಅತಿಥಿ ಹಾಗು ಖಾನ್ ಅಕಾಡೆಮಿ ಸಂಸ್ಥಾಪಕ ಸಲ್ ಖಾನ್‌ ಅವರಿಗೆ ಕುತೂಹಲಕಾರಿ ಪ್ರಶ್ನೆಗಳನ್ನು ಕೇಳಿದ್ದಾರೆ.

Bill Gates to Khan Academy founder: Do you ever get confused with Salman Khan?
ಬಿಲ್ ಗೇಟ್ಸ್ ಜೊತೆ ಸಲ್ ಖಾನ್‌
author img

By

Published : Aug 14, 2023, 5:39 PM IST

ಸ್ಯಾನ್ ಫ್ರಾನ್ಸಿಸ್ಕೋ: ಇತ್ತೀಚೆಗೆ 'ಅನ್‌ಕನ್‌ಫ್ಯೂಸ್ ಮಿ ವಿತ್ ಬಿಲ್ ಗೇಟ್ಸ್' ಎಂಬ ಪಾಡ್‌ಕಾಸ್ಟ್ ಆರಂಭಿಸಿರುವ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕರಾದ ಬಿಲ್ ಗೇಟ್ಸ್, ಬಾಲಿವುಡ್ ನಟ ಸಲ್ಮಾನ್ ಖಾನ್​ ಅವರ ಫೋಟೋ ಹಿಡಿದು ಖಾನ್ ಅಕಾಡೆಮಿಯ ಸಂಸ್ಥಾಪಕ ಹಾಗೂ ತಮ್ಮ ಅತಿಥಿ ಖ್ಯಾತ ಉದ್ಯಮಿ ಸಲ್ ಖಾನ್​ ಅವರಿಗೆ ಕೆಲವು ಮೋಜಿನ ಪ್ರಶ್ನೆಗಳನ್ನು ಕೇಳಿದರು. ಈ ಪ್ರಶ್ನೆಗಳಿಗೆ ಸಲ್ ಖಾಲ್​ ತಮಾಷೆಯಾಗಿಯೇ ಉತ್ತರಿಸಿದ್ದಾರೆ.

"ನೀವು ಗೂಗಲ್ ಸರ್ಚ್​ನಲ್ಲಿ ಸಲ್ ಖಾನ್ ಅಂತಲೋ ಅಥವಾ ತಮ್ಮ ವೆಬ್​ಸೈಟ್​ಗಳನ್ನೇನಾದರೂ ಹುಡುಕಾಡಿದರೆ, ನಿಮಗೆ ಈ ವ್ಯಕ್ತಿ ಸಿಗಬಹುದು" ಎಂದು ಬಾಲಿವುಡ್​ ನಟ ಸಲ್ಮಾನ್ ಖಾನ್ ಅವರ ಭಾವಚಿತ್ರವನ್ನು ತೋರಿಸಿದ ಗೇಟ್ಸ್, "ನೀವು ಯಾವಾತ್ತಾದರೂ ಇಂತಹ ಘಟನೆ ಕಂಡು ಅಚ್ಚರಿಗೊಳಗಾಗಿದ್ದು ಉಂಟೇ?" ಎಂದರು. ಸಲ್ ಖಾಲ್​ ಮತ್ತು ಸಲ್ಮಾನ್ ಖಾನ್ ಒಂದೇ ಅರ್ಥದಲ್ಲಿ ಕೇಳಿ ಬರುವ ಹೆಸರಾಗಿದ್ದರಿಂದ ಬಿಲ್ ಗೇಟ್ಸ್ ಹೀಗೆ ಪ್ರಶ್ನಿಸಿದ್ದಾರೆ.

ಇದಕ್ಕೆ ಸಲ್ ಖಾನ್ ನಗುತ್ತಾ ಕೆಲವು ಘಟನಾವಳಿಗಳನ್ನು ಮೆಲುಕು ಹಾಕಿದರು. "ನಮ್ಮ ಖಾನ್ ಅಕಾಡೆಮಿಯ ಆರಂಭದ ದಿನಗಳಲ್ಲಿ ಇಂತಹ ಹಲವು ಘಟನೆಗಳು ನಡೆದಿವೆ. ನಾನು ಮಾಡುವ ಪಾಠ ನೋಡಿ ಸಲ್ಮಾನ್ ಖಾನ್ ಅವರ ಎಷ್ಟೋ ಅಭಿಮಾನಿಗಳು ತಪ್ಪಾಗಿ ನನಗೆ ಇ-ಮೇಲ್​ ಮಾಡಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ನಿಮ್ಮನ್ನು ನಾನು ತುಂಬಾ ತುಂಬಾ ಪ್ರೀತಿಸುತ್ತೇನೆ. ಗಣಿತದ ಬಗ್ಗೆ ನೀವು ಇಷ್ಟು ಆಳವಾಗಿ ತಿಳಿದುಕೊಂಡಿದ್ದೀರಿ ಅಂತ ನನಗೆ ಗೊತ್ತೇ ಇರಲಿಲ್ಲ" ಎಂದು ಅವರ ಕೆಲವು ಅಭಿಮಾನಿಗಳಿಂದ ನನಗೆ ಪತ್ರಗಳು ಬಂದಿದ್ದವು. "ಈ ರೀತಿಯ ಹಲವು ಘಟನೆಗಳು ನಡೆದಿವೆ. ಇದಕ್ಕೆಲ್ಲ ಕಾರಣ ಖಾನ್ ಎಂಬ ಹೆಸರು" ಎಂದು ತಮಾಷೆಯಾಡಿದರು.

ಮುಂದುವರೆದು ,ಸಿನಿಮಾಗಳ ಬಗ್ಗೆ ಬಿಲ್ ಗೇಟ್ಸ್ ಕೇಳಲಾದ ಪ್ರಶ್ನೆಗಳಿಗೆ, "ನಾನು ಕೂಡ ಆಗಾಗ ಬಾಲಿವುಡ್​ ಸಿನಿಮಾಗಳನ್ನು ನೋಡುತ್ತಿರುತ್ತೇನೆ. ಆದರೆ, ಹಿಂದಿ ಅಷ್ಟು ಅರ್ಥವಾಗದು. ಆದರೆ, ನನ್ನ ಪತ್ನಿ ಭಾರತದ ಬೆಂಗಾಲಿ ಮೂಲದವರು. ಅವರ ಮಾತೃಭಾಷೆ ಬೆಂಗಾಲಿ. ಅವರು ಹಿಂದಿ ಸಿನಿಮಾಗಳ ಅಪ್ಪಟ ಅಭಿಮಾನಿ. ಹಾಗಾಗಿ ಅವರೊಂದಿಗೆ ಆಗಾಗ್ಗೆ ಕೆಲವು ಸಿನಿಮಾಗಳನ್ನು ನಾನು ನೋಡಿದ್ದುಂಟು" ಎಂದು ಸಲ್ ಖಾನ್‌ ಕೆಲವು ನೆನಪುಗಳನ್ನು ಹಂಚಿಕೊಂಡರು.

ಸಾಲ್ ಖಾನ್ ಪ್ರಸಿದ್ಧ ಅಂತಾರಾಷ್ಟ್ರೀಯ ಖಾನ್ ಅಕಾಡೆಮಿಯ ಸಂಸ್ಥಾಪಕ. ಖಾನ್ ಅಕಾಡೆಮಿ ಬೃಹತ್‌ ಆನ್‌ಲೈನ್ ಶೈಕ್ಷಣಿಕ ಸಂಸ್ಥೆಯಾಗಿದ್ದು ಅಮೆರಿಕನ್ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ವ್ಯವಸ್ಥೆಗೆ ಬೇಕಾದ ಪರಿಕರಗಳನ್ನು ಪೂರೈಸುತ್ತದೆ. ಕಳೆದ ತಿಂಗಳು ತಮ್ಮ ಪಾಡ್‌ಕಾಸ್ಟ್‌ನ ಮೊದಲ ಸಂಚಿಕೆಯನ್ನು ತಜ್ಞರಾದ ಸೇಥ್ ರೋಜೆನ್ ಮತ್ತು ಲಾರೆನ್ ಮಿಲ್ಲರ್ ರೋಜೆನ್ ಅವರೊಂದಿಗೆ ಗೇಟ್ಸ್‌ ನಡೆಸಿದ್ದರು. ಈ ಪಾಡ್‌ಕಾಸ್ಟ್‌​ನಲ್ಲಿ ಆಲ್ಝೈಮರ್ ಕಾಯಿಲೆ (ಮರೆವು) ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳಲಾಗಿತ್ತು.

ಇದನ್ನೂ ಓದಿ: ಯುವ ಉದ್ಯಮಿಗಳು ಪ್ಲಾಸ್ಟಿಕ್‌ ಉತ್ಪಾದನಾ ಕ್ಷೇತ್ರದಲ್ಲಿರುವ ವಿಪುಲ ಅವಕಾಶಗಳತ್ತ ಗಮನಹರಿಸಿ: ಅರವಿಂದ್‌ ಮೆಹ್ತಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.