ETV Bharat / international

ಸಿವಿಲ್ ವಂಚನೆ ಪ್ರಕರಣ: ಡೊನಾಲ್ಡ್ ಟ್ರಂಪ್ ವಿರುದ್ಧ ಸಾಕ್ಷ್ಯ ನೀಡಿದ ನಿವೃತ್ತ ಬ್ಯಾಂಕ್ ಅಧಿಕಾರಿ...

ಸಿವಿಲ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ನಿವೃತ್ತ ಬ್ಯಾಂಕ್ ಅಧಿಕಾರಿಯೊಬ್ಬರು ಸಾಕ್ಷ್ಯ ನೀಡಿದ್ದಾರೆ. ಡೊನಾಲ್ಡ್ ಟ್ರಂಪ್ ಅವರು ಫೈನಾನ್ಸಿಯಲ್​ ಸ್ಟೇಟಮೆಂಟ್ಸ್​ನಲ್ಲಿ ಆಸ್ತಿಗಳ ಮೌಲ್ಯವನ್ನು ಹೆಚ್ಚು ವಂಚನೆ ಮಾಡಿರುವ ಬಗ್ಗೆ ವಿಚಾರಣೆ ಸಂದರ್ಭದಲ್ಲಿ ಮಾಹಿತಿ ಕೊಟ್ಟಿದ್ದಾರೆ.

Trump financial statements
ಸಿವಿಲ್ ವಂಚನೆ ಪ್ರಕರಣ: ಡೊನಾಲ್ಡ್ ಟ್ರಂಪ್ ವಿರುದ್ಧ ಸಾಕ್ಷ್ಯ ನೀಡಿದ ನಿವೃತ್ತ ಬ್ಯಾಂಕ್ ಅಧಿಕಾರಿ...
author img

By PTI

Published : Oct 12, 2023, 8:01 AM IST

ನ್ಯೂಯಾರ್ಕ್: ''ಡೊನಾಲ್ಡ್ ಟ್ರಂಪ್ ಅವರು ಫೈನಾನ್ಸಿಯಲ್​ ಸ್ಟೇಟಮೆಂಟ್ಸ್​ನಲ್ಲಿ ಆಸ್ತಿಗಳ ಮೌಲ್ಯವನ್ನು ಹೆಚ್ಚು ತೋರಿಸಿ, ನೂರಾರು ಮಿಲಿಯನ್ ಡಾಲರ್‌ಗಳನ್ನು ಸಾಲದಲ್ಲಿ ಪಡೆದಿದ್ದಾರೆ. ಅದನ್ನು ನ್ಯಾಯಾಲಯವು ಕೂಡ ಮೋಸ ಎಂದು ಪರಿಗಣಿಸಿದೆ'' ಎಂದು ಮಾಜಿ ಅಧ್ಯಕ್ಷರ ನ್ಯೂಯಾರ್ಕ್ ಸಿವಿಲ್ ವಂಚನೆ ವಿಚಾರಣೆ ವೇಳೆ, ನಿವೃತ್ತ ಬ್ಯಾಂಕ್ ಅಧಿಕಾರಿಯೊಬ್ಬರು ಬುಧವಾರ ಸಾಕ್ಷ್ಯ ಹೇಳಿದ್ದಾರೆ.

''ಟ್ರಂಪ್ ಅವರ ಫೈನಾನ್ಸಿಯಲ್​ ಸ್ಟೇಟಮೆಂಟ್ಸ್​ ಮೂಲಕ ಫ್ಲೋರಿಡಾದ ಡೋರಲ್‌ನಲ್ಲಿರುವ ಅವರ ಗಾಲ್ಫ್ ರೆಸಾರ್ಟ್‌ಗಾಗಿ 2011ರಲ್ಲಿ 125 ಮಿಲಿಯನ್ ಡಾಲರ್​ ಸಾಲಕ್ಕೆ ಮತ್ತು 2012 ರಲ್ಲಿ ಅವರ ಚಿಕಾಗೋ ಹೋಟೆಲ್ ಮತ್ತು ಕಾಂಡೋ ಗಗನಚುಂಬಿ ಕಟ್ಟಡಕ್ಕಾಗಿ 107 ಮಿಲಿಯನ್ ಡಾಲರ್​ ಸಾಲಕ್ಕೆ ಅನುಮೋದನೆ ಪಡೆದಿದ್ದರು'' ಎಂದು ಮಾಜಿ ಡಾಯ್ಚ ಬ್ಯಾಂಕ್ ರಿಸ್ಕ್​ ಮ್ಯಾನೇಜ್​ಮೆಂಟ್​ ಅಧಿಕಾರಿ ನಿಕೋಲಸ್ ಹೈ ಸಾಕ್ಷಿ ಹೇಳಿದ್ದಾರೆ.

''ಆದರೆ, ಟ್ರಂಪ್ ಅವರ ಆಸ್ತಿಗಳ ಬಗ್ಗೆ ಬ್ಯಾಂಕ್ ತನ್ನದೇ ಆದ ಸಂಪೂರ್ಣ ಮೌಲ್ಯಮಾಪನವನ್ನು ನಡೆಸದಿದ್ದರೂ, ಟ್ರಂಪ್ ಟವರ್ ಮತ್ತು ಗಾಲ್ಫ್ ಕೋರ್ಸ್‌ಗಳಂತಹ ಹಿಡುವಳಿಗಳು, ಅವರು ಪಡೆದ ಸಾಲಕ್ಕಿಂತಲೂ ಕಡಿಮೆ ಮೌಲ್ಯವನ್ನು ಹೊಂದಿದ್ದವು. ಟ್ರಂಪ್‌ ಅವರ ಫೈನಾನ್ಸಿಯಲ್​ ಸ್ಟೇಟಮೆಂಟ್ಸ್​ನಿಂದ ಕಡಿಮೆ ಬಡ್ಡಿದರಗಳ ಅಡಿ ದೊಡ್ಡ ಸಾಲಗಳನ್ನು ಪಡೆಯಲು ಸಹಾಯ ಮಾಡಿತು'' ಎಂದು ಹೈಗ್​ ತಿಳಿಸಿದ್ದಾರೆ. ಹೈಗ್​ ಅವರು 2008 ರಿಂದ 2018 ರವರೆಗೆ ಬ್ಯಾಂಕ್‌ನ ಖಾಸಗಿ ಸಂಪತ್ತು ನಿರ್ವಹಣಾ ಘಟಕದ ರಿಸ್ಕ್​ ಗ್ರೂಪ್​ನ ಮುಖ್ಯಸ್ಥರಾಗಿದ್ದರು..

ಈ ಹಿಂದೆ ಕೋರ್ಟ್​ ನೀಡಿದ್ದ ತೀರ್ಪಿನಲ್ಲೇನಿದೆ?: ಮಾಜಿ ಅಧ್ಯಕ್ಷ ಮತ್ತು ಅವರ ಕಂಪನಿಯಾದ ಟ್ರಂಪ್ ಸಂಸ್ಥೆ, ಬ್ಯಾಂಕುಗಳು, ವಿಮಾದಾರರು ಹಾಗೂ ಇತರರಿಗೆ ಒಪ್ಪಂದಗಳನ್ನು ಮಾಡಲು ಮತ್ತು ಸಾಲಗಳನ್ನು ಪಡೆಯಲು ನೀಡಿದ ಫೈನಾನ್ಸಿಯಲ್​ ಸ್ಟೇಟಮೆಂಟ್ಸ್​ ಮೇಲೆ ಟ್ರಂಪ್ ಅವರ ಆಸ್ತಿ ಮತ್ತು ನಿವ್ವಳ ಮೌಲ್ಯದ ಮೌಲ್ಯವನ್ನು ಉತ್ಪ್ರೇಕ್ಷಿಸುವ ಮೂಲಕ ಹಲವು ವರ್ಷಗಳವರೆಗೆ ವಂಚನೆ ಮಾಡಿದ್ದಾರೆ ಎಂದು ಕಳೆದ ತಿಂಗಳು ನ್ಯಾಯಾಧೀಶರು ತೀರ್ಪು ನೀಡಿದ್ದರು.

ವ್ಯವಹಾರಗಳನ್ನು ಕುದುರಿಸಲು ಮತ್ತು ಸಾಲ ಪಡೆಯಲು ಬಳಸಲಾದ ಕಾಗದ ಪತ್ರಗಳಲ್ಲಿ ತಮ್ಮ ಆಸ್ತಿಗಳ ಬೆಲೆಗಳನ್ನು ವಾಸ್ತವಕ್ಕಿಂತ ಅತಿಹೆಚ್ಚು ಪ್ರಮಾಣದಲ್ಲಿ ತೋರಿಸಿ ಮತ್ತು ತಮ್ಮ ನಿವ್ವಳ ಸಂಪತ್ತನ್ನು ವಾಸ್ತವಕ್ಕಿಂತ ಹೆಚ್ಚು ತೋರಿಸಿ ಬ್ಯಾಂಕ್​ಗಳು, ವಿಮಾ ಕಂಪನಿಗಳು, ಇತರರಿಗೆ ಟ್ರಂಪ್ ಹಾಗೂ ಅವರ ಕಂಪನಿಗಳು ಮೋಸ ಮಾಡಿವೆ ಎಂದು ನ್ಯಾಯಾಧೀಶ ಆರ್ಥರ್ ಎಂಗೊರೊನ್ ಹೇಳಿದ್ದಾರೆ.

ಮಾಡಿದ ವಂಚನೆಗೆ ಶಿಕ್ಷೆಯಾಗಿ ಟ್ರಂಪ್ ಅವರ ಕೆಲ ವ್ಯಾಪಾರ ಪರವಾನಗಿಗಳನ್ನು ರದ್ದುಪಡಿಸುವಂತೆ ನ್ಯಾಯಾಧೀಶ ಎಂಗೊರೊನ್ ಆದೇಶವನ್ನು ನೀಡಿದ್ದರು. ಮುಂದಿನ ದಿನಗಳಲ್ಲಿ ನ್ಯೂಯಾರ್ಕ್​ನಲ್ಲಿ ಟ್ರಂಪ್ ಅವರ ಕಂಪನಿಗಳು ವ್ಯಾಪಾರ, ವಹಿವಾಟು ನಡೆಸಲು ಸಾಧ್ಯವಾಗದಂತೆ ಮಾಡಲು ಈ ಶಿಕ್ಷೆಯನ್ನು ವಿಧಿಸಲಾಗಿದೆ. ಅಲ್ಲದೇ ಟ್ರಂಪ್ ಅವರ ಕಂಪನಿಗಳ ವ್ಯವಹಾರಗಳ ಕುರಿತು ಮೇಲ್ವಿಚಾರಣೆ ಮಾಡಲು ನೇಮಿಸಲಾದ ಸ್ವತಂತ್ರ ಮೇಲ್ವಿಚಾರಕರನ್ನು ಮುಂದುವರಿಸುವುದು ಎಂದು ನ್ಯಾಯಾಧೀಶರು ತಿಳಿಸಿದ್ದರು.

ಫೈನಾನ್ಸಿಯಲ್​ ಸ್ಟೇಟಮೆಂಟ್ಸ್​ನಲ್ಲಿನ ಮಾಹಿತಿಯು ಯಾವಾಗಲೂ ನಿಖರವಾಗಿರುವುದಿಲ್ಲ ಎಂದು ಇತ್ತೀಚೆಗೆ ಟ್ರಂಪ್‌ರ ದೀರ್ಘಕಾಲದ ಹಣಕಾಸು ಮುಖ್ಯಸ್ಥ ಅಲೆನ್ ವೈಸೆಲ್‌ಬರ್ಗ್ ಅವರು ನೀಡಿದ್ದ ಸಾಕ್ಷ್ಯದಲ್ಲಿ ಒಪ್ಪಿಕೊಂಡಿದ್ದರು. ಶ್ರೀಮಂತ ಹಾಗೂ ಚಾಣಾಕ್ಷ ರಿಯಲ್ ಎಸ್ಟೇಟ್ ಉದ್ಯಮಿಯಾಗಿ, ಪ್ರಬಲ ರಾಜಕೀಯ ಶಕ್ತಿಯಾಗಿ ಬೆಳೆದ ಟ್ರಂಪ್ ಅವರ ಇಮೇಜ್​ಗೆ ಈ ತೀರ್ಪಿನಿಂದ ಭಾರಿ ಧಕ್ಕೆ ಉಂಟಾಗಿತ್ತು.

ಇದನ್ನೂ ಓದಿ: ಫೋರ್ಬ್ಸ್​ ಅಮೆರಿಕ ಸಿರಿವಂತರ ಪಟ್ಟಿ: ಅಗ್ರಸ್ಥಾನದಲ್ಲಿ ಮಸ್ಕ್​, 2ನೇ ಸ್ಥಾನದಲ್ಲಿ ಬೆಜೋಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.