ಢಾಕಾ (ಬಾಂಗ್ಲಾದೇಶ) : ಸಾರ್ವತ್ರಿಕ ಚುನಾವಣೆಗೆ ಒಂದು ದಿನ ಮುನ್ನವೇ ಇಲ್ಲಿನ ಬಂದರು ನಗರವಾದ ಬೆನಾಪೋಲ್‌ನಿಂದ ಬರುತ್ತಿದ್ದ ಪ್ಯಾಸೆಂಜರ್ ರೈಲಿನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಮೃತರಾಗಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಶಂಕಿತ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಅನುಮಾನ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಸಾರ್ವತ್ರಿಕ ಚುನಾವಣೆಯನ್ನು ಪ್ರಮುಖ ಪ್ರತಿಪಕ್ಷ ಬಿಎನ್‌ಪಿ ಬಹಿಷ್ಕರಿಸಿದೆ.
ಶುಕ್ರವಾರ ರಾತ್ರಿ 9 ಗಂಟೆ ವೇಳೆಗೆ ಪಶ್ಚಿಮ ಬಂಗಾಳ ರಾಜ್ಯದ ಗಡಿಯಲ್ಲಿನ ಪಟ್ಟಣವಾದ ಬೆನಪೋಲ್‌ನಿಂದ ಹೊರಟ ಬೆನಪೋಲ್ ಎಕ್ಸ್‌ಪ್ರೆಸ್‌ನ ನಾಲ್ಕು ಬೋಗಿಗಳಲ್ಲಿ ಢಾಕಾದ ಕಮಲಾಪುರ ರೈಲು ನಿಲ್ದಾಣ ತಲುಪುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. 'ಇದುವರೆಗೆ ನಾಲ್ಕು ಶವಗಳನ್ನು ಪತ್ತೆ ಮಾಡಲಾಗಿದೆ. ಕಾರ್ಯಾಚರಣೆ ಮುಂದುವರೆದಿದೆ' ಎಂದು ಅಗ್ನಿಶಾಮಕ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
-
#WATCH | A passenger train was set on fire in Bangladesh's capital Dhaka yesterday (January 5) ahead of the country's general election this weekend.
— ANI (@ANI) January 6, 2024 " class="align-text-top noRightClick twitterSection" data="
At least four people died aboard the intercity train, reports Reuters quoting local newspaper Dhaka Tribune.
(Source: Reuters) pic.twitter.com/FoFZVsqZ6u
">#WATCH | A passenger train was set on fire in Bangladesh's capital Dhaka yesterday (January 5) ahead of the country's general election this weekend.
— ANI (@ANI) January 6, 2024
At least four people died aboard the intercity train, reports Reuters quoting local newspaper Dhaka Tribune.
(Source: Reuters) pic.twitter.com/FoFZVsqZ6u#WATCH | A passenger train was set on fire in Bangladesh's capital Dhaka yesterday (January 5) ahead of the country's general election this weekend.
— ANI (@ANI) January 6, 2024
At least four people died aboard the intercity train, reports Reuters quoting local newspaper Dhaka Tribune.
(Source: Reuters) pic.twitter.com/FoFZVsqZ6u
ರೈಲಿನ ಸುಮಾರು 292 ಪ್ರಯಾಣಿಕರಲ್ಲಿ ಹೆಚ್ಚಿನವರು ಭಾರತದಿಂದ ತವರಿಗೆ ಮರಳುತ್ತಿದ್ದರು. ರೈಲು ನಿಲ್ದಾಣದ ಸಮೀಪವಿರುವ ಗೋಪಿಬಾಗ್ ಪ್ರದೇಶವ ತಲುಪುತ್ತಿದ್ದಂತೆ ರೈಲಿಗೆ ಬೆಂಕಿ ಹಚ್ಚಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. 'ಕೃತ್ಯ ಎಸಗಿದ ಆರೋಪಿಗಳು ಸಾಮಾನ್ಯ ಪ್ರಯಾಣಿಕರಂತೆ ವೇಷ ಧರಿಸಿರಬಹುದು. ರಾತ್ರಿ 9:07 ರ ಸುಮಾರಿಗೆ ಈ ಬಗ್ಗೆ ತುರ್ತು ಸೇವಾ ಸಂಖ್ಯೆಯಿಂದ ಮಾಹಿತಿ ಸಿಕ್ಕಿತು' ಎಂದು ಢಾಕಾ ರೈಲ್ವೆ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ರೈಲಿನ ಕಿಟಕಿಯ ಮೂಲಕ ಮಧ್ಯವಯಸ್ಕ ವ್ಯಕ್ತಿಯೊಬ್ಬನನ್ನು ಹೊರತರಲು ಯತ್ನಿಸಲಾಯಿತು. ಆದರೆ, ಆತ ತನ್ನ ಹೆಂಡತಿ ಮತ್ತು ಮಕ್ಕಳನ್ನು ರಕ್ಷಿಸಲು ಕೇಳಿಕೊಂಡ. ಬಳಿಕ ಏಕಾಏಕಿ ಬೆಂಕಿ ಆವರಿಸಿಕೊಂಡ ಕಾರಣ ರೈಲಿನಿಂದ ಹೊರಬರಲಾಗದೆ ಮೃತಪಟ್ಟ ಎಂದು ಯುವಕನೊಬ್ಬ ಹೇಳಿಕೊಂಡ ಬಗ್ಗೆ ಸ್ಥಳೀಯ ಖಾಸಗಿ ಸುದ್ದಿ ವಾಹಿನಿಗಳು ವರದಿ ಮಾಡಿವೆ.
ರೈಲಿನಲ್ಲಿ ಕೆಲವು ಭಾರತೀಯ ಪ್ರಜೆಗಳೂ ಪ್ರಯಾಣಿಸುತ್ತಿದ್ದರು ಎಂದು ವರದಿ ಆಗಿದೆ. ಘಟನೆಯಲ್ಲಿ ಎಷ್ಟು ಜನರು ಗಾಯಗೊಂಡಿದ್ದಾರೆ ಎಂಬುದು ಖಚಿತವಾಗಿಲ್ಲ. ಗಾಯಾಳುಗಳನ್ನು ಢಾಕಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.
ಬಾಂಗ್ಲಾದೇಶದಲ್ಲಿ ನಾಳೆ ಭಾನುವಾರ ಸಾರ್ವತ್ರಿಕ ಚುನಾವಣೆಗೆ ಮತದಾನ ನಡೆಯಲಿದೆ. ಇದರ ಮೇಲ್ವಿಚಾರಣೆಗಾಗಿ ಭಾರತದ ಮೂವರು ಸೇರಿದಂತೆ 100 ಕ್ಕೂ ಹೆಚ್ಚು ವಿದೇಶಿ ವೀಕ್ಷಕರು ಢಾಕಾ ತಲುಪಿದ್ದಾರೆ. ಮಧ್ಯಂತರ ಪಕ್ಷೇತರ ತಟಸ್ಥ ಸರ್ಕಾರದ ನೇತೃತ್ವದಲ್ಲಿ ಚುನಾವಣೆ ನಡೆಸುವಂತೆ ಒತ್ತಾಯಿಸಿ ಮಾಜಿ ಪ್ರಧಾನಿ ಖಾಲಿದಾ ಜಿಯಾ ನೇತೃತ್ವದ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಕ್ಷವು (ಬಿಎನ್‌ಪಿ) ಈ ಚುನಾವಣೆಯನ್ನು ಬಹಿಷ್ಕರಿಸುತ್ತಿದೆ.
ಆದರೆ, ಆಡಳಿತಾರೂಢ ಅವಾಮಿ ಲೀಗ್ ನೇತೃತ್ವದ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಸರ್ಕಾರವು ಈ ಬೇಡಿಕೆ ಸ್ವೀಕರಿಸಿಲ್ಲ. ಭಾರತೀಯ ಚುನಾವಣಾ ಆಯೋಗದ ಮೂವರು ಸದಸ್ಯರ ನಿಯೋಗ ಶುಕ್ರವಾರ ಢಾಕಾ ತಲುಪಿದೆ ಎಂದು ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಜನವರಿ 7 ರ ಚುನಾವಣೆಗೆ ಮುಂಚಿತವಾಗಿ ವಿವಿಧ ದೇಶಗಳ 122 ಪ್ರತಿನಿಧಿಗಳು ಇಲ್ಲಿಗೆ ಬರಲಿದ್ದಾರೆ. ಇದನ್ನು ವಿಶ್ವಸಂಸ್ಥೆಯು ಸೂಕ್ಷ್ಮವಾಗಿ ಗಮನಿಸಲಿದೆ ಎಂದು ಹೇಳಿದೆ.
ಇದನ್ನೂ ಓದಿ : ವಂದೇ ಭಾರತ್ ರೈಲು : ಕಾರವಾರದಲ್ಲಿ ಹಾಲಿ - ಮಾಜಿ ಶಾಸಕರ ಬೆಂಬಲಿಗರ ಕಿತ್ತಾಟ