ETV Bharat / international

ಬಸ್​ ಮೇಲೆ ಐಸಿಸ್​ ದಾಳಿ: 11 ಯೋಧರು ಸೇರಿ 13 ಮಂದಿ ಸಾವು - ಸಿರಿಯಾದಲ್ಲಿ ಸೈನಿಕರ ಸಾವು

ಸಿರಿಯಾದಲ್ಲಿ ಐಸಿಸ್​ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಸೈನಿಕರಿದ್ದ ಬಸ್​ ಮೇಲೆ ದಾಳಿ ಮಾಡಿದ್ದು, ದುರ್ಘಟನೆಯಲ್ಲಿ 11 ಸೈನಿಕರು, ಇಬ್ಬರು ನಾಗರಿಕರು ಮೃತಪಟ್ಟು, ಮೂವರು ಗಾಯಗೊಂಡಿದ್ದಾರೆ.

ಸಿರಿಯಾದಲ್ಲಿ ಬಸ್​ ಮೇಲೆ ಐಸಿಸ್​ ದಾಳಿ:
ಸಿರಿಯಾದಲ್ಲಿ ಬಸ್​ ಮೇಲೆ ಐಸಿಸ್​ ದಾಳಿ:
author img

By

Published : Jun 20, 2022, 4:46 PM IST

ಡಮಾಸ್ಕಸ್(ಸಿರಿಯಾ): ಉತ್ತರ ಸಿರಿಯಾದಲ್ಲಿ ಐಸಿಸ್​ ಉಗ್ರರ ಅಟ್ಟಹಾಸಕ್ಕೆ 11 ಸೈನಿಕರು ಸೇರಿದಂತೆ 13 ಜನರು ಮೃತಪಟ್ಟಿದ್ದಾರೆ. ಅಲ್ಲದೇ, ಮೂವರು ಯೋಧರು ಗಾಯಗೊಂಡಿದ್ದಾರೆ. ಬಸ್​ ಮೇಲೆ ಉಗ್ರರು ದಾಳಿ ಮಾಡಿ ಅಟ್ಟಹಾಸ ಮೆರೆದಿದ್ದಾರೆ ಎಂದು ಅಲ್ಲಿನ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.

ಉಗ್ರಗಾಮಿ ಇಸ್ಲಾಮಿಕ್ ಸ್ಟೇಟ್ ಗುಂಪಿನಿಂದ ನಿಯಂತ್ರಿಸಲ್ಪಟ್ಟ ರಕ್ಕಾ ಪ್ರಾಂತ್ಯದಲ್ಲಿ ಈ ದಾಳಿ ಸಂಭವಿಸಿದೆ. ಯೋಧರು ಬಸ್​ನಲ್ಲಿ ಸಂಚರಿಸುತ್ತಿದ್ದ ವೇಳೆ ಬಸ್​ ಗುರಿಯಾಗಿಸಿ ಈ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಬಸ್‌ ಬರುವುದನ್ನೇ ಕಾದು ಮಷಿನ್‌ ಗನ್‌ನಿಂದ ದಾಳಿ ಮಾಡಲಾಗಿದೆಯೇ ಅಥವಾ ಕ್ಷಿಪಣಿ ಬಳಸಿ ಉಡಾಯಿಸಲಾಗಿದೆಯೇ ಎಂಬುದರ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ. ಈ ದಾಳಿಯ ಹಿಂದೆ ಐಸಿಸ್ ಉಗ್ರರ ಕೈವಾಡವಿದೆ ಎಂದು ಹೇಳಲಾಗ್ತಿದೆ. ಕಳೆದ ತಿಂಗಳು ಸಹ ಇದೇ ರೀತಿಯ ದಾಳಿ ನಡೆಸಿ ಜನರ ಪ್ರಾಣ ಹರಣ ಮಾಡಲಾಗಿತ್ತು.

ಭಯೋತ್ಪಾದಕ ದಾಳಿಯಲ್ಲಿ 11 ಸೈನಿಕರು ಮತ್ತು ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ. ಮೂವರು ಯೋಧರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ಕೇಂದ್ರ ಪ್ರಾಂತ್ಯದ ಹೋಮ್ಸ್‌ಗೆ ತೆರಳುತ್ತಿತ್ತು ಎಂದು ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.

ಓದಿ; ಮಧ್ಯೆದಲ್ಲೇ ಸಿಲುಕಿತು 11 ಪ್ರವಾಸಿಗರಿದ್ದ ಕೇಬಲ್ ಕಾರ್​ : ರಕ್ಷಣಾ ಕಾರ್ಯಾಚರಣೆ ಚುರುಕು -Video

ETV Bharat Logo

Copyright © 2024 Ushodaya Enterprises Pvt. Ltd., All Rights Reserved.