ETV Bharat / international

ಚೀನಾದಲ್ಲಿ ಕೋವಿಡ್​​ ಆರ್ಭಟ; ಏಷ್ಯನ್ ಗೇಮ್ಸ್​​ ಮುಂದೂಡಿಕೆ

2022ರ ಸೆಪ್ಟೆಂಬರ್ ತಿಂಗಳಲ್ಲಿ ಚೀನಾದಲ್ಲಿ ಆಯೋಜನೆಗೊಂಡಿದ್ದ ಏಷ್ಯನ್ ಗೇಮ್ಸ್​​ ಇದೀಗ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿದೆ.

Asian Games 2022
Asian Games 2022
author img

By

Published : May 6, 2022, 2:22 PM IST

ಬೀಜಿಂಗ್​: ಚೀನಾದಲ್ಲಿ ಮಹಾಮಾರಿ ಕೋವಿಡ್​ ಸೋಂಕಿತ ಪ್ರಕರಣಗಳಲ್ಲಿ ಗಣನೀಯ ಏರಿಕೆ ಕಂಡು ಬಂದಿದ್ದು, ಏಷ್ಯನ್ ಗೇಮ್ಸ್​ ಕ್ರೀಡಾಕೂಟ ಮುಂದೂಡಿಕೆಯಾಗಿದೆ. ಕ್ರೀಡಾಕೂಟವನ್ನು ಮುಂದೂಡಿರುವುದಕ್ಕೆ ಯಾವುದೇ ನಿರ್ಧಿಷ್ಟ ಕಾರಣಗಳನ್ನು ನೀಡದಿದ್ದರೂ, ಕೋವಿಡ್ ಪ್ರಕರಣಗಳು ತೀವ್ರ ಪ್ರಮಾಣದಲ್ಲಿ ಹೆಚ್ಚಾಗಿರುವುದೇ ಕಾರಣ ಎಂದು ತಿಳಿದು ಬಂದಿದೆ.

19ನೇ ಏಷ್ಯನ್ ಗೇಮ್ಸ್​ ಚೀನಾದ ಹ್ಯಾಂಗ್​ಜೌನಲ್ಲಿ ಸೆಪ್ಟೆಂಬರ್​​ 10ರಿಂದ 25ರವರೆಗೆ ನಡೆಸಲು ನಿರ್ಧರಿಸಲಾಗಿತ್ತು. ಕೋವಿಡ್ ಹೆಚ್ಚಾಗಿರುವ ಕಾರಣ 2023ರವರೆಗೆ ಕ್ರೀಡಾಕೂಟ ಮುಂದೂಡಿಕೆಯಾಗಿದ್ದು, ಹೊಸ ದಿನಾಂಕ ಮುಂದಿನ ದಿನಗಳಲ್ಲಿ ಪ್ರಕಟವಾಗಲಿದೆ. ಕೊರೊನಾ ವೈರಸ್​ ಸೋಂಕು ಸಾಂಕ್ರಾಮಿಕಗೊಳ್ಳುವ ಹಂತ ತಲುಪಿರುವ ಶಾಂಘೈನಿಂದ ಹಾಂಗ್​ಜೌ ನಗರ 200ಕಿಲೋ ಮೀಟರ್​ಗಿಂತಲೂ ಕಡಿಮೆ ಅಂತರದಲ್ಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.