ETV Bharat / international

12 ದಿನಗಳ ವಿರಾಮದ ಬಳಿಕ ಕೀವ್ ಮೇಲೆ ಮತ್ತೆ ಡ್ರೋನ್ ದಾಳಿ ಪ್ರಾರಂಭಿಸಿದ ರಷ್ಯಾ - 12 ದಿನಗಳ ಬ್ರೇಕ್​ ಬಳಿಕ ಕೀವ್ ಮೇಲೆ ಮತ್ತೆ ಡ್ರೋನ್ ದಾಳಿ

ಕೆಲವು ದಿನಗಳ ನಂತರ ಇದೀಗ ರಷ್ಯಾವು ಕೀವ್ ನಗರದ ಮೇಲೆ ಡ್ರೋನ್ ದಾಳಿ ಪ್ರಾರಂಭಿಸಿದೆ ಎಂದು ಉಕ್ರೇನ್ ಮಿಲಿಟರಿ ಅಧಿಕಾರಿ ಹೇಳಿದ್ದಾರೆ.

drone attack
ಡ್ರೋನ್ ದಾಳಿ
author img

By

Published : Jul 3, 2023, 11:28 AM IST

Updated : Jul 3, 2023, 2:18 PM IST

ಕೀವ್ (ಉಕ್ರೇನ್) : ಉಕ್ರೇನ್​ ರಾಜಧಾನಿ ಕೀವ್‌ ನಗರದ ಮೇಲೆ ರಷ್ಯಾ ಮತ್ತೆ ದಾಳಿ ಶುರುಮಾಡಿದೆ. 12 ದಿನಗಳ ನಂತರ ಡ್ರೋನ್‌ ಮೂಲಕ ನಡೆಸಿರುವ ಮೊದಲ ಮಿಲಿಟರಿ ಕಾರ್ಯಾಚರಣೆ ಇದಾಗಿದೆ. ಈ ವೇಳೆ ಸಂಭವಿಸಿದ ಸಾವು-ನೋವು ಅಥವಾ ಹಾನಿಯ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಕೀವ್‌ನ ಮಿಲಿಟರಿ ಆಡಳಿತದ ಮುಖ್ಯಸ್ಥ ಕರ್ನಲ್ ಜನರಲ್ ಸೆರ್ಹಿ ಪಾಪ್ಕೊ ತಿಳಿಸಿದ್ದಾರೆ.

ಗವರ್ನರ್ ಪಾವ್ಲೊ ಕೈರಿಲೆಂಕೊ ನೀಡಿದ ಮಾಹಿತಿ ಪ್ರಕಾರ, ಉಕ್ರೇನ್​ನ ಕೈಗಾರಿಕಾ ನಗರದ ಪೂರ್ವ ಭಾಗದಲ್ಲಿ ತೀವ್ರ ಹೋರಾಟ ಮುಂದುವರಿದಿದೆ. ಪೂರ್ವದಲ್ಲಿರುವ ಡೊನೆಟ್ಸ್ಕ್ ಪ್ರದೇಶದಲ್ಲಿ ಶುಕ್ರವಾರ ಮತ್ತು ಶನಿವಾರ ರಾತ್ರಿ ನಡೆದ ದಾಳಿಯಲ್ಲಿ ಕನಿಷ್ಠ ಮೂವರು ನಾಗರಿಕರು ಮೃತಪಟ್ಟಿದ್ದು, 17 ಮಂದಿ ಗಾಯಗೊಂಡಿದ್ದಾರೆ.

ಉಕ್ರೇನಿಯನ್ ಜನರಲ್ ಸ್ಟಾಫ್ ಡೊನೆಟ್ಸ್ಕ್‌ನ ಮೂರು ಪ್ರದೇಶಗಳಲ್ಲಿ ಮಿಲಿಟರಿ ಸಂಘರ್ಷ ಮುಂದುವರೆದಿದೆ. ಬಖ್ಮುತ್, ಲೈಮನ್ ಮತ್ತು ಮರಿಂಕಾ ನಗರಗಳ ಹೊರವಲಯವು ಯುದ್ಧದ ಹಾಟ್ ಸ್ಪಾಟ್‌ಗಳಾಗಿವೆ. ರಷ್ಯಾದ ಪಡೆಗಳು ಈ ಪ್ರಾಂತ್ಯಗಳ ಮೇಲೆ 82 ಫಿರಂಗಿ, ಡ್ರೋನ್, ಮಾರ್ಟರ್ ಶೆಲ್ ಮತ್ತು ರಾಕೆಟ್ ದಾಳಿ ಪ್ರಾರಂಭಿಸಿದೆ. ಇದರ ಜೊತೆಗೆ, ಉಕ್ರೇನ್‌ನ ದಕ್ಷಿಣ ಖರ್ಸನ್ ಪ್ರದೇಶದಲ್ಲಿ ಶುಕ್ರವಾರ ಮತ್ತು ರಾತ್ರಿ ನಡೆದ ದಾಳಿಯಲ್ಲಿ ಒಂದು ಮಗು ಸೇರಿದಂತೆ ಐವರು ಗಾಯಗೊಂಡಿದ್ದಾರೆ.

ಇದನ್ನೂ ಓದಿ : ರಷ್ಯಾ ವೈಮಾನಿಕ ದಾಳಿಗೆ ಸಿರಿಯಾದಲ್ಲಿ 9 ಮಂದಿ ಬಲಿ, ಹಲವರಿಗೆ ಗಾಯ

ಈ ಮಧ್ಯೆ, ಉಕ್ರೇನ್‌ನ ವಾಯುವ್ಯದಲ್ಲಿರುವ ರಿವ್ನೆ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ದೇಶದ ಉನ್ನತ ಮಿಲಿಟರಿ ಕಮಾಂಡ್ ಮತ್ತು ಪರಮಾಣು ಶಕ್ತಿ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಉಕ್ರೇನ್​ ಉತ್ತರ ಪ್ರದೇಶಗಳ ಭದ್ರತೆ ಮತ್ತು ಅವುಗಳನ್ನು ಬಲಪಡಿಸುವ ನಮ್ಮ ಕ್ರಮಗಳ ಕುರಿತು ಅವರು ಚರ್ಚಿಸಿದ್ದಾರೆ.

ಇದನ್ನೂ ಓದಿ : Nuclear weapons : ವಿನಾಶಕಾರಿ ಹೆಜ್ಜೆ ಇಟ್ಟ ರಷ್ಯಾ: ಉಕ್ರೇನ್​ ಮೇಲೆ ದಾಳಿಗೆ ಪರಮಾಣು ಬಾಂಬ್​ ಸಜ್ಜು?

ರಷ್ಯಾ ಮತ್ತು ಉಕ್ರೇನ್ ಮಧ್ಯೆ ಕಳೆದ ಒಂದು ವರ್ಷಕ್ಕಿಂತಲೂ ಅಧಿಕ ಸಮಯದಿಂದ ಭೀಕರ ಯುದ್ಧ ನಡೆಯುತ್ತಿದೆ. ನೂರಾರು ಮಕ್ಕಳು ಸೇರಿದಂತೆ ಸಾವಿರಾರು ಮಂದಿ ಉಕ್ರೇನಿಯನ್ ನಾಗರಿಕರು ಮತ್ತು ಹತ್ತಾರು ಸಾವಿರ ಸೈನಿಕರು ಮೃತಪಟ್ಟಿದ್ದಾರೆ. ನಿಖರ ಅಂಕಿ-ಅಂಶಗಳನ್ನು ಕ್ರೋಡೀಕರಿಸುವುದು ಕಷ್ಟಕರವಾಗಿದೆ. ಯುದ್ಧದ ಕಾರಣದಿಂದ ಲಕ್ಷಾಂತರ ಜನರು ತಮ್ಮ ಮನೆಗಳನ್ನು ಬಿಟ್ಟು ಪಲಾಯನ ಮಾಡಿರುವ ವರದಿಗಳಿವೆ.

ಇದರ ನಡುವೆ, ಉಕ್ರೇನಿಯನ್ ಅಧ್ಯಕ್ಷ ವ್ಲಾಡಿಮಿರ್ ಜೆಲೆಂಕ್ಸಿ ಅವರು ಒಡೆಸಾದ ಕಪ್ಪು ಸಮುದ್ರದ ಬಂದರು ನಗರಿಗೆ ಭೇಟಿ ನೀಡಿದರು. ಯುದ್ಧ ಎದುರಿಸುವುದಕ್ಕೆ ಬೇಕಿರುವ ನೌಕಾ ಡ್ರೋಣ್‌ಗಳು ಮತ್ತು ಕ್ಷಿಪಣಿ ಕಾರ್ಯಕ್ರಮಗಳ ಕುರಿತು ಅವರು ನೌಕಾದಳದ ಕಮಾಂಡರ್‌ಗಳಿಂದ ವಿವರ ಪಡೆದರು. ಇದೇ ವೇಳೆ ಸೇವೆಯಲ್ಲಿರುವ ಸದಸ್ಯರಿಗೆ ಪ್ರಶಸ್ತಿ ನೀಡಿ, ಗೌರವಿಸಿದರು.

ಇದನ್ನೂ ಓದಿ : Ukraine Russia war: 200 ರಷ್ಯಾ ಸೈನಿಕರ ಸಾವು: ಉಕ್ರೇನ್ ಮಿಲಿಟರಿ ಪ್ರತಿಪಾದನೆ

Last Updated : Jul 3, 2023, 2:18 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.