ETV Bharat / international

ಅಮೆರಿಕದಲ್ಲಿ ಮತ್ತೆ ಗುಂಡಿನ ದಾಳಿ.. ವರ್ಜೀನಿಯಾ ವಿವಿ ವಿದ್ಯಾರ್ಥಿ ಗುಂಡೇಟಿಗೆ ಮೂವರು ಬಲಿ - ವರ್ಜೀನಿಯಾ ವಿಶ್ವವಿದ್ಯಾಲಯದಲ್ಲಿ ಗುಂಡಿನ ದಾಳಿ

ಅಮೆರಿಕದ ವರ್ಜೀನಿಯಾ ರಾಜಧಾನಿಯಲ್ಲಿ ಶೂಟೌಟ್​ ನಡೆದಿದೆ. ಬಂದೂಕುಧಾರಿ ವಿದ್ಯಾರ್ಥಿಯೊಬ್ಬ ಕಾಲೇಜು ಕ್ಯಾಂಪಸ್​ನಲ್ಲಿ ಗುಂಡಿನ ದಾಳಿ ಮಾಡಿದ್ದು, ಮೂವರು ಮೃತಪಟ್ಟಿದ್ದಾರೆ.

3-dead-in-shooting-at-university-of-virginia
ಅಮೆರಿಕದಲ್ಲಿ ಮತ್ತೆ ಗುಂಡಿನ ದಾಳಿ.
author img

By

Published : Nov 14, 2022, 5:39 PM IST

ವರ್ಜೀನಿಯಾ(ಅಮೆರಿಕ): ಅಮೆರಿಕದಲ್ಲಿ ಪಿಸ್ತೂಲು ಸಂಸ್ಕೃತಿಯ ಮೇಲೆ ನಿರ್ಬಂಧ ಹೇರಿದಾಗ್ಯೂ, ಮತ್ತೆ ಗುಂಡಿನ ದಾಳಿ ನಡೆದಿದೆ. ವರ್ಜೀನಿಯಾ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಬಂದೂಕುಧಾರಿ ವಿದ್ಯಾರ್ಥಿಯೊಬ್ಬ ಗುಂಡಿನ ಮಳೆಗರೆದು ಪರಾರಿಯಾಗಿದ್ದಾನೆ. ಘಟನೆಯಲ್ಲಿ ಮೂವರು ಸ್ಥಳದಲ್ಲೇ ಅಸುನೀಗಿದ್ದು, ಇಬ್ಬರು ತೀವ್ರ ಗಾಯಗೊಂಡಿದ್ದಾರೆ. ಇದರಿಂದ ಸೋಮವಾರದ ತರಗತಿಗಳನ್ನು ರದ್ದು ಮಾಡಲಾಗಿದೆ.

ಭಾನುವಾರ ರಾತ್ರಿ 10.30 ರ ಸುಮಾರಿನಲ್ಲಿ ಕಾಲೇಜ್​ ಕ್ಯಾಂಪಸ್​ಗೆ ಬಂದ ವಿದ್ಯಾರ್ಥಿ ಏಕಾಏಕಿ ಗುಂಡಿನ ದಾಳಿ ಮಾಡಿದ್ದಾನೆ. ಮೃತಪಟ್ಟ ಮೂವರು ವಿದ್ಯಾರ್ಥಿಗಳೇ ಎಂದೇ ತಿಳಿದು ಬಂದಿಲ್ಲ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಗುಂಡಿನ ದಾಳಿ ಮಾಡಿದ ವಿದ್ಯಾರ್ಥಿಯನ್ನು ಕ್ರಿಸ್ಟೋಫರ್ ಡಾರ್ನೆಲ್ ಜೋನ್ಸ್ ಜೂನಿಯರ್ ಎಂದು ಗುರುತಿಸಲಾಗಿದೆ. ಗುಂಡಿನ ದಾಳಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಶೂಟೌಟ್​ ಬಳಿಕ ಆತ ಸ್ಥಳದಿಂದ ಪರಾರಿಯಾಗಿದ್ದಾನೆ. ವಿವಿ ಆಡಳಿತ ಮಂಡಳಿ ನೀಡಿದ ದೂರಿನ ಮೇರೆಗೆ ಪೊಲೀಸರು ಹಂತಕನ ಹುಡುಕಾಟ ನಡೆಸುತ್ತಿದ್ದಾರೆ.

ಈ ಬಗ್ಗೆ ಎಲ್ಲ ವಿಶ್ವವಿದ್ಯಾಲಯಗಳಿಗೆ ಸಂದೇಶ ರವಾನಿಸಿರುವ ಪೊಲೀಸರು ಆರೋಪಿ ಕ್ರಿಸ್ಟೋಫರ್ ಡಾರ್ನೆಲ್ ಜೋನ್ಸ್ ಜೂನಿಯರ್ ಬಗ್ಗೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ವರ್ಜೀನಿಯಾ ಪೊಲೀಸರು ತಂಡ ರಚಿಸಿಕೊಂಡು ಹೆಲಿಕಾಪ್ಟರ್‌ಗಳ ಮೂಲಕ ಆರೋಪಿ ಪತ್ತೆ ಕಾರ್ಯ ನಡೆಸುತ್ತಿದ್ದಾರೆ.

ಓದಿ: ಮಹಿಳಾ ಆತ್ಮಾಹುತಿ ದಾಳಿ ಪ್ರಕರಣ... ಸ್ಫೋಟದಲ್ಲಿ ಭಾಗಿಯಾಗಿದ್ದ ಆರೋಪಿ ಸೆರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.