ETV Bharat / international

ಭೀಕರ ಬಸ್ ಅಪಘಾತ: 21 ಮಂದಿ ಸಾವು

author img

By PTI

Published : Oct 4, 2023, 6:48 AM IST

Updated : Oct 4, 2023, 9:17 AM IST

ಇಟಲಿಯ ವೆನಿಸ್ ನಗರದ ಬಳಿ ಬಸ್​​ವೊಂದು ಮೇಲ್ಸೇತುವೆಯಿಂದ ಕೆಳಗೆ ಬಿದ್ದ ಪರಿಣಾಮ 21 ಮಂದಿ ಸಾವನ್ನಪ್ಪಿದ್ದಾರೆ.

21-killed-in-bus-accident-in-italy
ಇಟಲಿಯಲ್ಲಿ ಬಸ್ ಅಪಘಾತ: 21 ಮಂದಿ ಸಾವು

ಇಟಲಿ: ವೆನಿಸ್ ನಗರದ ಬಳಿ ವಿದೇಶಿ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬಸ್ಸೊಂದು 15 ಮೀಟರ್ (50 ಅಡಿ) ಎತ್ತರದ ಮೇಲ್ಸೇತುವೆಯಿಂದ ಕೆಳಗೆ ಬಿದ್ದ ಪರಿಣಾಮ 21 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ. ವೆನಿಸ್​ನ ಉಪ ನಗರವಾದ ಮೆಸ್ಟ್ರೆಯದಲ್ಲಿ ಮಂಗಳವಾರ ಈ ಭಾರೀ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 15 ಮಂದಿ ಬದುಕುಳಿದಿದ್ದಾರೆ. ಬಸ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಮೃತದೇಹಗಳನ್ನು ಹೊರತೆಗೆಯಲು ಹರಸಾಹಸವೇ ಮಾಡಬೇಕಾಯಿತು. ಮೃತರಲ್ಲಿ ಇಬ್ಬರು ಮಕ್ಕಳು, ಐವರು ಉಕ್ರೇನಿಯನ್ನರು ಮತ್ತು ಜರ್ಮನಿಯ ಒಬ್ಬರು ಸೇರಿದ್ದಾರೆ ಎಂದು ವೆನಿಸ್ ಪ್ರಿಫೆಕ್ಟ್ ಮಿಚೆಲ್ ಡಿ ಬಾರಿ ಮಾಹಿತಿ ನೀಡಿದ್ದಾರೆ.

  • #WATCH | At least 21 people died after a city bus carrying tourists to a campground crashed off an overpass near Venice in northern Italy and caught fire, the city's prefect Michele Di Bari said: Reuters pic.twitter.com/rMNjksucn0

    — ANI (@ANI) October 3, 2023 " class="align-text-top noRightClick twitterSection" data=" ">

ವೆನಿಸ್ ಮೇಯರ್ ಲುಯಿಗಿ ಬ್ರುಗ್ನಾರೊ, ’’ಈ ಅಪಘಾತದಿಂದ ಆಘಾತವಾಗಿದೆ ಮತ್ತು ನಗರದಲ್ಲಿ ಈಗಾಗಲೇ ಶೋಕಾಚರಣೆ ಘೋಷಿಸಲಾಗಿದೆ‘‘ ಎಂದು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಬಸ್ ಮೆಸ್ಟ್ರೆ ರೈಲ್ವೆ ಹಳಿಗಳ ಬಳಿ ಅಪಘಾತಕ್ಕೀಡಾಗುವ ಮೊದಲು ಮೇಲ್ಸೇತುವೆಯಿಂದ ಕೆಳಗೆ ಬಿದ್ದಿದೆ. ನಂತರ ಬಸ್​ಗೆ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು ಎಂದು ವರದಿ ಮಾಡಿದೆ. ಇನ್ನು ಮೃತರ ಸಾವಿಗೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಸಂತಾಪ ಸೂಚಿಸಿದ್ದಾರೆ.

ವೆನಿಸ್ ನಗರದ ಕೌನ್ಸಿಲರ್ ರೆನಾಟೊ ಬೊರಾಸೊ ಮಾತನಾಡಿ, ಬಸ್‌ನಲ್ಲಿ 40 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಅವರಲ್ಲಿ 21 ಮಂದಿ ಸಾವನ್ನಪ್ಪಿದ್ದಾರೆ ಮತ್ತು 18 ಮಂದಿ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಗಾಯಗೊಂಡಿರುವ ಹಲವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಹೇಳಿದ್ದಾರೆ. ಬಸ್‌ನಲ್ಲಿ ಫ್ರಾನ್ಸ್, ಕ್ರೊಯೇಷಿಯಾ, ಉಕ್ರೇನ್​ ಮತ್ತು ಜರ್ಮನಿ ದೇಶಕ್ಕೆ ಸೇರಿದ ಪ್ರಯಾಣಿಕರು ಇದ್ದರು ಎಂದು ಇಟಲಿಯ ಸುದ್ದಿ ಸಂಸ್ಥೆ ವರದಿ ಮಾಡಿದೆ.

ವೆನೆಟೊದ ಗವರ್ನರ್ ಲುಕಾ ಜಯಾ ಪ್ರತಿಕ್ರಿಯಿಸಿ, ಅಪಘಾತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಬಸ್ ಹೊಸದು ಮತ್ತು ಎಲೆಕ್ಟ್ರಿಕ್ ವಾಹನವಾಗಿತ್ತು ಎಂದು ಹೇಳಿದರು. ವೆನಿಸ್ ಅಗ್ನಿಶಾಮಕ ತಂಡದ ಕಮಾಂಡರ್ ಮೌರೊ ಲುವೊಂಗೊ ಮಾತನಾಡಿ, ಅಪಘಾತದ ನಂತರ ಬಸ್​ನಲ್ಲಿ ಬೆಂಕಿ ಹೊತ್ತಿಕೊಂಡಿದೆ, ಇದರಿಂದ ಪ್ರಯಾಣಿಕರು ಬೆಂಕಿಯ ಜ್ವಾಲೆಯಲ್ಲಿ ಸಿಲುಕಿದ್ದರು, ಇದೊಂದು ಭಯಾನಕವಾದ ಅಪಘಾತವಾಗಿದೆ. ಕೆಲವರ ಮೃತದೇಹಗಳನ್ನು ಹೊರತೆಗೆಯಲು ಸುಮಾರು ಒಂದು ಗಂಟೆ ಬೇಕಾಯಿತು ಎಂದು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಘಟನೆಯ ಹಲವು ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಇದನ್ನೂ ಓದಿ: ಲಾರಿ, ದ್ವಿಚಕ್ರ ವಾಹನದ ನಡುವೆ ಭೀಕರ ಅಪಘಾತ ಮೂವರ ಸಾವು

Last Updated : Oct 4, 2023, 9:17 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.