ETV Bharat / international

ಯುದ್ಧದಲ್ಲಿ ಡಿಸೆಂಬರ್‌ನಿಂದ ಈವರೆಗೆ 20 ಸಾವಿರ ರಷ್ಯನ್ನರು ಸಾವು: ಅಮೆರಿಕ ಮಾಹಿತಿ - ರಷ್ಯಾ ಉಕ್ರೇನ್ ಸಂಘರ್ಷ ಲೇಟೆಸ್ಟ್​​ ಅಪ್ಡೇಟ್​

ರಷ್ಯಾ ಉಕ್ರೇನ್ ಸಂಘರ್ಷದಲ್ಲಿ ಈವರೆಗೆ 20 ಸಾವಿರ ರಷ್ಯನ್ನರು ಸಾವನ್ನಪ್ಪಿದ್ದಾರೆ ಎಂದು ಯುಎಸ್ ಹೇಳಿದೆ.

Russia  Ukraine war
ರಷ್ಯಾ ಉಕ್ರೇನ್ ಸಂಘರ್ಷ
author img

By

Published : May 2, 2023, 12:59 PM IST

ವಾಷಿಂಗ್ಟನ್ (ಅಮೆರಿಕ): ನ್ಯಾಟೋ ಪಡೆಗಳ ವಿರುದ್ಧದ ಸೇಡಿಗೆ ಶುರುವಾದ ರಷ್ಯಾ ಮತ್ತು ಉಕ್ರೇನ್ ಯುದ್ಧದಲ್ಲಿ ಲಕ್ಷಾಂತರ ಜನ ಜೀವ ಕಳೆದುಕೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ನಡುವೆ ಅಮೆರಿಕದ ಶ್ವೇತಭವನ ರಷ್ಯಾದಲ್ಲಿ 20 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಹೇಳಿದೆ. ರಷ್ಯಾ ಗಡಿಯಲ್ಲಿ ಉಕ್ರೇನ್ ಸೇನೆ ಭೀಕರ ದಾಳಿ ನಡೆಸುತ್ತಿದೆ. ಉಕ್ರೇನ್ ನಡೆಸಿದ ಶೆಲ್ ಮತ್ತು ಕ್ಷಿಪಣಿ ದಾಳಿ ಪರಿಣಾಮ ರಷ್ಯಾ ಗಡಿ ಭಾಗದಲ್ಲಿ ರೈಲು ಹಳಿ ತಪ್ಪಿದೆ ಎನ್ನಲಾಗಿದೆ. ಈ ಘಟನೆಯಲ್ಲಿ 35 ಜನ ಗಂಭೀರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ವರದಿಯಾಗಿಲ್ಲ.

20 ಸಾವಿರ ಜನ ಸಾವು: ಕಳೆದೊಂದು ವರ್ಷದಿಂದ ಉಕ್ರೇನ್-ರಷ್ಯಾ ನಡುವಿನ ಯುದ್ಧ ನಡೆಯುತ್ತಲೇ ಇದೆ. ಪರಿಣಾಮ ಅಮಾಯಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ಈವರೆಗೆ ಎರಡೂ ಕಡೆ ಲಕ್ಷಾಂತರ ಜನರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಪೂರ್ವ ಉಕ್ರೇನ್‌ನಲ್ಲಿ ರಷ್ಯಾದ ಪಡೆಗಳ ಭಾರಿ ದಾಳಿಯನ್ನು ಉಕ್ರೇನ್ ಹಿಮ್ಮೆಟ್ಟಿಸಿದ ಕಾರಣ ರಷ್ಯಾವೊಂದಲ್ಲೇ ಸುಮಾರು 20 ಸಾವಿರಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. 1 ಲಕ್ಷಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಶ್ವೇತಭವನ ಸೋಮವಾರ ಹೇಳಿದೆ.

ಯುದ್ಧ ಭೂಮಿವಾಗಿ ಮಾರ್ಪಟ್ಟಿರುವ ಪೂರ್ವ ಡೊನೆಟ್ಸ್ಕ್ ಪ್ರದೇಶದಲ್ಲಿ ಭೀಕರ ಕದನಗಳು ನಡೆದಿವೆ. ಅಲ್ಲಿ ರಷ್ಯಾವು ಬಖ್ಮುತ್ ನಗರವನ್ನು ಸುತ್ತುವರಿಯಲು ಉಕ್ರೇನಿಯನ್ ಸೈನ್ಯದ ವಿರುದ್ಧ ಹೋರಾಡುತ್ತಿದೆ ಎಂದು ಅಮೆರಿಕನ್ ಗುಪ್ತಚರ ಇಲಾಖೆ ಮಾಹಿತಿಯನ್ನಾಧರಿಸಿ ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬಿ ತಿಳಿಸಿದ್ದಾರೆ. ಡಿಸೆಂಬರ್‌ನಿಂದ ಕೊಲ್ಲಲ್ಪಟ್ಟ ಅರ್ಧದಷ್ಟು ಜನರು ರಷ್ಯಾ ಪಡೆಯವರು. ಅವರಲ್ಲಿ ಅನೇಕರು ರಷ್ಯಾದ ಜೈಲಿನಿಂದ ಬಿಡುಗಡೆಯಾದ ಅಪರಾಧಿಗಳು ಎಂದು ಕಿರ್ಬಿ ವಿವರಿಸಿದ್ದಾರೆ.

ಇದನ್ನೂ ಓದಿ: ಯುದ್ಧದ ಮಧ್ಯೆ ಉಕ್ರೇನ್​ಗೆ ದಿಢೀರ್​ ಭೇಟಿ ನೀಡಿದ ಜೋ ಬೈಡನ್​! ಕಾರಣವೇನು?

ಕ್ಷಿಪಣಿಗಳ ಮಳೆ ಸುರಿಸಿದ ರಷ್ಯಾ: ಇತ್ತೀಚೆಗೆ ಉಕ್ರೇನ್ ಮೇಲೆ ಭೀಕರ ದಾಳಿ ನಡೆಸಲು ರಷ್ಯಾ ಮುಂದಾಗಿತ್ತು. ಅದರಲ್ಲೂ ರಷ್ಯಾದ ಟಾರ್ಗೆಟ್ ಉಕ್ರೇನ್ ರಾಜಧಾನಿ. ರಷ್ಯಾ ಉಡಾಯಿಸಿರುವ ಕ್ಷಿಪಣಿಗಳ ಪೈಕಿ ಎರಡು ಕ್ಷಿಪಣಿಗಳು ಕೀವ್‌ನ ದಕ್ಷಿಣ ಉಮಾನ್‌ ನಗರದ ಮೇಲೆ ಬಿದ್ದಿದೆ. ಅಲ್ಲಿರುವ 9 ಮಹಡಿ ಅಪಾರ್ಟ್‌ಮೆಂಟ್‌ಗೆ ತಗುಲಿ ಸುಮಾರು 25ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿತ್ತು. ರಷ್ಯಾ ದಾಳಿ ನಡೆದ ಮರುದಿನವೇ ಉಕ್ರೇನ್ ಪ್ರತಿದಾಳಿ ಆರಂಭಿಸಿತ್ತು. ಅದರ ಮುಂದವರೆದ ಕ್ರಮವಾಗಿ ಉಕ್ರೇನ್ ಸೇನೆ ಮತ್ತೆ ರಷ್ಯಾದ ಗಡಿಯಲ್ಲಿ ದಾಳಿ ಮಾಡುತ್ತಿದೆ.

ಉಕ್ರೇನಿಯನ್ ಪಡೆಗಳ ಮುಖ್ಯಸ್ಥ ಕರ್ನಲ್ ಜನರಲ್ ಒಲೆಕ್ಸಾಂಡರ್ ಸಿರ್ಸ್ಕಿ, "ಬಖ್ಮುತ್ ಅನ್ನು ವಶಕ್ಕೆ ಪಡೆಯಲು ರಷ್ಯಾ ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. ಆದರೆ ಅದು ಇಲ್ಲಿಯವರೆಗೆ ವಿಫಲವಾಗಿದೆ. ನಗರದ ಕೆಲವು ಭಾಗಗಳಲ್ಲಿ ಶತ್ರುಗಳು ನಮ್ಮ ಘಟಕದ ಮೇಲೆ ಪ್ರತಿದಾಳಿ ನಡೆಸಿದರು" ಎಂದು ಅವರು ಹೇಳಿದರು.

ಇದನ್ನೂ ಓದಿ: Russia Ukraine War: ಪಶ್ಚಿಮ ಉಕ್ರೇನ್‌ನಲ್ಲಿ ರಷ್ಯಾ ಭೀಕರ ವಾಯುದಾಳಿ.. 35 ಮಂದಿ ಬಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.