ETV Bharat / international

ತೈಲ ಟ್ಯಾಂಕರ್​ಗೆ ಡಿಕ್ಕಿ ಹೊಡೆದ ಬಸ್​.. 20 ಪ್ರಯಾಣಿಕರು ಸಜೀವ ದಹನ - ಡಿಎನ್ಎ ಪರೀಕ್ಷೆ

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಬಸ್ ಮತ್ತು ತೈಲ ಟ್ಯಾಂಕರ್ ನಡುವೆ ಡಿಕ್ಕಿಯಾಗಿ ಸುಮಾರು 20 ಜನ ಪ್ರಯಾಣಿಕರು ಸಜೀವ ದಹನಗೊಂಡಿದ್ದಾರೆ.

people killed in bus and oil tanker cras  bus and oil tanker crash in Pakistan  Pakistan bus fire news  ತೈಲ ಟ್ಯಾಂಕರ್​ಗೆ ಡಿಕ್ಕಿ ಹೊಡೆದ ಬಸ್  ಪ್ರಯಾಣಿಕರು ಸಜೀವ ದಹನ  ಪಾಕಿಸ್ತಾನದಲ್ಲಿ ಬಸ್​ಗೆ ಬೆಂಕಿ ಸುದ್ದಿ
ತೈಲ ಟ್ಯಾಂಕರ್​ಗೆ ಡಿಕ್ಕಿ ಹೊಡೆದ ಬಸ್
author img

By

Published : Aug 16, 2022, 1:45 PM IST

ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಭಾರಿ ರಸ್ತೆ ಅಪಘಾತವೊಂದು ನಡೆದಿದೆ. ಮಂಗಳವಾರ ಪ್ರಯಾಣಿಕರ ಬಸ್ ಮತ್ತು ತೈಲ ಟ್ಯಾಂಕರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 20 ಜನರು ಸಜೀವ ದಹನವಾಗಿದ್ದಾರೆ. ಲಾಹೋರ್‌ನಿಂದ ಸುಮಾರು 350 ಕಿ.ಮೀ ದೂರದಲ್ಲಿರುವ ಮುಲ್ತಾನ್‌ನಲ್ಲಿ ಅಪಘಾತ ಸಂಭವಿಸಿದೆ. ಅಪಘಾತದಿಂದ ಹಲವು ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಅತಿ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗ್ತಿದೆ.

ಲಾಹೋರ್‌ನಿಂದ ಕರಾಚಿಗೆ ಹೋಗುತ್ತಿದ್ದ ಬಸ್ ಮತ್ತು ತೈಲ ಟ್ಯಾಂಕರ್ ನಡುವೆ ಡಿಕ್ಕಿ ಸಂಭವಿಸಿದ್ದು, 20 ಜನರು ಮೃತಪಟ್ಟಿದ್ದಾರೆ. ಡಿಕ್ಕಿಯ ನಂತರ ಬಸ್ ಮತ್ತು ಟ್ಯಾಂಕರ್ ಎರಡೂ ಹೊತ್ತಿ ಉರಿದ ಹಿನ್ನೆಲೆ ಪ್ರಯಾಣಿಕರು ವಾಹನದಿಂದ ಹೊರ ಬರದೇ ಸಜೀವ ದಹನವಾಗಿದ್ದಾರೆ ಎಂದು ಬದುಕುಳಿದ ಪ್ರಯಾಣಿಕರು ತಿಳಿಸಿದ್ದಾರೆ. ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಆರು ಜನರನ್ನು ಮುಲ್ತಾನ್‌ನ ನಿಶ್ತಾರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಸಾವಿಗೀಡಾದ ಪ್ರಯಾಣಿಕರ ಹೆಚ್ಚಿನ ದೇಹಗಳು ಸಂಪೂರ್ಣವಾಗಿ ಮತ್ತು ಗುರುತಿಸಲಾಗದಷ್ಟು ಸುಟ್ಟು ಕರಕಲಾಗಿವೆ. ಈ ದೇಹಗಳನ್ನು ಡಿಎನ್ಎ ಪರೀಕ್ಷೆಯ ನಂತರ ಕುಟುಂಬಗಳಿಗೆ ಹಸ್ತಾಂತರಿಸಲಾಗುವುದು. ಅಪಘಾತದ ನಂತರ ಎರಡೂ ವಾಹನಗಳಿಗೆ ಬೆಂಕಿ ಆವರಿಸಿದ್ದು, ರಕ್ಷಣಾ ಮತ್ತು ಅಗ್ನಿಶಾಮಕ ತಂಡಗಳಿಗೆ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳಲು ತುಂಬಾ ಕಷ್ಟಕರವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಪಘಾತದ ಬಗ್ಗೆ ಪಂಜಾಬ್ ಮುಖ್ಯಮಂತ್ರಿ ಸಂತಾಪ ವ್ಯಕ್ತಪಡಿಸಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಪರ್ವೇಜ್ ಇಲಾಹಿ ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡಲು ಸಂಬಂಧಿಸಿದ ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಶನಿವಾರ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಪ್ರಯಾಣಿಕರ ಬಸ್‌ಗೆ ಲೋಡ್ ಟ್ರಕ್ ಡಿಕ್ಕಿ ಹೊಡೆದು ಕನಿಷ್ಠ 13 ಜನರು ಸಾವನ್ನಪ್ಪಿದ್ದರು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಅಪಘಾತ ಸಂಭವಿಸಿದೆ.

ಓದಿ: ಧಗಧಗನೇ ಬೆಂಕಿಯಿಂದ ಹೊತ್ತಿ ಉರಿದ ಬೃಹತ್​ ಹೋಟೆಲ್​.. ಅತಿಥಿಗಳ ರಕ್ಷಣೆ, ಗಾಯಾಳು ಆಸ್ಪತ್ರೆಗೆ ದಾಖಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.