ETV Bharat / international

ಚಾಲಕನಿಲ್ಲದ ಟ್ರಕ್‌ನಲ್ಲಿ ಮಗು ಸೇರಿ 18 ವಲಸಿಗರು ಶವವಾಗಿ ಪತ್ತೆ: ನಾಲ್ವರ ಬಂಧನ - ಟರ್ಕಿಯ ಗಡಿ

ಬಲ್ಗೇರಿಯಾದಲ್ಲಿ ಮಾನವ ಕಳ್ಳ ಸಾಗಣೆ ಪ್ರಕರಣಗಳು ಹೆಚ್ಚುತ್ತಿದ್ದು, ಇದೀಗ ಮತ್ತೆ ಅಕ್ರಮ ವಲಸಿಗರನ್ನು ಸಾಗಿಸುತ್ತಿದ್ದ ಟ್ರಕ್​ ಪತ್ತೆಯಾಗಿದೆ.

18 migrants including child found dead in abandoned truck in Bulgaria
ಚಾಲಕನಿಲ್ಲದ ಟ್ರಕ್‌ನಲ್ಲಿ ಮಗು ಸೇರಿ 18 ವಲಸಿಗರು ಶವವಾಗಿ ಪತ್ತೆ
author img

By

Published : Feb 18, 2023, 10:17 AM IST

ಸೋಫಿಯಾ(ಬಲ್ಗೇರಿಯಾ): ರಾಜಧಾನಿ ಸೋಫಿಯಾದ ಲೋಕೋರ್ಸ್ಕೋ ಗ್ರಾಮದ ಪ್ರದೇಶದಲ್ಲಿ ನಿನ್ನೆ ಮಧ್ಯಾಹ್ನ ಸುಮಾರಿಗೆ ಚಾಲಕನಿಲ್ಲದ ವಲಸಿಗರನ್ನು ಸಾಗಿಸುತ್ತಿದ್ದ ಟ್ರಕ್‌ ಒಂದರಲ್ಲಿ ಮಗು ಸೇರಿದಂತೆ ಕನಿಷ್ಠ 18 ಜನ ಅಫ್​ಘಾನಿಸ್ತಾನದ ವಲಸಿಗರು ಶವವಾಗಿ ಪತ್ತೆಯಾಗಿದ್ದಾರೆ. ಈ ಹಿನ್ನೆಲೆ ಬಲ್ಗೇರಿಯಾ ಪೊಲೀಸರು ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ ಎಂದು ಆಂತರಿಕ ಸಚಿವಾಲಯ ಅಧಿಕಾರಿಗಳು ಇಂದು ತಿಳಿಸಿದ್ದಾರೆ.

ರಸ್ತೆಯಲ್ಲಿ ನಿಂತಿದ್ದ ಟ್ರಕ್​ನ ಸುತ್ತ ಜನ ಸೇರಿದ್ದು, ವಿಷಯ ಬೆಳಕಿಗೆ ಬಂದಿದೆ. ತಕ್ಷಣವೇ ಬಲ್ಗೇರಿಯಾ ಪೊಲೀಸ್​ ಸಿಬನ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಲ್ಗೇರಿಯಾದ ಆಂತರಿಕ ಸಚಿವಾಲಯದ ಪ್ರಕಾರ, 40 ಕ್ಕೂ ಹೆಚ್ಚು ಜನರು ಆ ಟ್ರಕ್​ನೊಳಗೆ ಅಡಗಿಕೊಂಡಿದ್ದರು. ಅದರಲ್ಲಿ 18 ಮಂದಿ ಸಾವನ್ನಪ್ಪಿದ್ದಾರೆ. ಮತ್ತು ಅದರಲ್ಲಿ ಬದುಕುಳಿದವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ.

ಗಾಯಾಳುಗಳನ್ನು ಪಿರೋಗೋವ್, ಸೇಂಟ್ ಅನ್ನಾ ಮತ್ತು ವಿಎಂಎ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ವರದಿಗಳ ಪ್ರಕಾರ ವೈದ್ಯರು ಈಗಾಗಲೇ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಟ್ರಕ್​ ರಸ್ತೆಯಲ್ಲಿ ನಿಂತಿತ್ತಾದರೂ ಯಾವುದೇ ರಸ್ತೆ ಅಪಘಾತವಾಗಿರುವ ಬಗ್ಗೆ ವರದಿಯಾಗಿಲ್ಲ. ಟ್ರಕ್​ ಲಾಕ್​ ಆಗಿದ್ದರಿಂದ ಆಮ್ಲಜನಕದ ಕೊರತೆಯಾಗಿ, ಕೆಲವು ವಲಸಿಗರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಜೊತೆಗೆ ಅದರಲ್ಲಿದ್ದವರು ಕೆಲವು ದಿನ ಆಹಾರವೇ ಇಲ್ಲದೆ ಇದ್ದವರು ಇದ್ದರು ಎಂದು ರಾಷ್ಟ್ರೀಯ ತನಿಖಾ ಸೇವೆಯ ಮುಖ್ಯಸ್ಥ ಬೋರಿಸ್ಲಾವ್ ಸರಫೊವ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಆರಂಭಿಕ ಮಾಹಿತಿಯ ಪ್ರಕಾರ, ಟ್ರಕ್ ಅಕ್ರಮವಾಗಿ ವಲಸಿಗರನ್ನು ಸಾಗಿಸುತ್ತಿತ್ತು. ವಾಸ್ತವವಾಗಿ ಆ ಟ್ರಕ್​ ಮರದ ಟಿಂಬರ್​ಗಳನ್ನು ಸಾಗಿಸುತ್ತಿತ್ತು. ಮರದ ಟಿಂಬರ್​ ಸಾಗಿಸುತ್ತಿದ್ದ ಟ್ರಕ್​ನಲ್ಲಿ ಅಕ್ರಮವಾಗಿ ವಲಸಿಗರನ್ನು ಸಾಗಿಸಲಾಗುತ್ತಿತ್ತು. ಆ ಟ್ರಕ್​ನಲ್ಲಿ 40 ಕ್ಕೂ ಹೆಚ್ಚು ಜನರಿದ್ದು, ಅದರಲ್ಲಿ ಸಾಗಿಸುತ್ತಿದ್ದ ಮರದ ದಿಮ್ಮಿಗಳ ಅಡಿಯಲ್ಲಿ ಗುಪ್ತ ಸ್ಥಳದಲ್ಲಿ ಅಡಗಿಕುಳಿತುಕೊಂಡಿದ್ದರು. ಅಂಕಿಅಂಶಗಳ ಪ್ರಕಾರ, ಅವರಲ್ಲಿ ಇದುವರೆಗೆ 18 ಮಂದಿ ಸಾವನ್ನಪ್ಪಿದ್ದಾರೆ. ಓಡಿಹೋದ ಚಾಲಕರನ್ನು ಗುರುತಿಸಲು ಆಪರೇಟಿವ್ - ಸರ್ಚ್ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.

ಬೆಲ್ಗುರಿಯನ್ ಮಾಧ್ಯಮಗಳ ಪ್ರಕಾರ, ಟ್ರಕ್‌ನಲ್ಲಿ ಸಾವನ್ನಪ್ಪಿದ 18 ವಲಸಿಗರಲ್ಲಿ ಕೆಲವರನ್ನು ಮಗುವನ್ನೂ ಸೇರಿ ಲೋಕೋರ್ಸ್ಕೋ ಗ್ರಾಮದ ಜಮೀನಿನ ಬಳಿ ಚಾಲಕ ಟ್ರಕ್​ ಸಮೇತ ಬಿಟ್ಟು ಹೋಗಿದ್ದಾನೆ. ಇನ್ನು ಐವರು ಮಕ್ಕಳು ಗಾಯಗೊಂಡಿದ್ದು, ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಲಸಿಗರಲ್ಲಿ ಯಾವುದೇ ಮಹಿಳೆಯರು ಇರಲಿಲ್ಲ. ಬಂಧಿಸಿರುವ ನಾಲ್ವರಲ್ಲಿ ಒಬ್ಬ ಆರೋಪಿಯ ಮೇಲೆ ಈಗಾಗಲೇ ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಶಿಕ್ಷೆಗೊಳಪಟ್ಟಿದ್ದಾನೆ ಎಂದು ವರದಿ ಹೇಳಿವೆ.

ಈ ಟ್ರಕ್​ನಲ್ಲಿದ್ದ ವಲಸಿಗರು ನೆರೆಯ ಟರ್ಕಿಯ ಗಡಿಯನ್ನು ಅಕ್ರಮವಾಗಿ ದಾಟಿದ್ದಾರೆ. ಆಗ್ನೇಯ ಬಲ್ಗೇರಿಯಾದ ಯಾಂಬೋಲ್ ನಗರದ ಬಳಿ ಟ್ರಕ್‌ಗೆ ದಿಮ್ಮಿಗಳನ್ನು ಲೋಡ್ ಮಾಡುವ ಮೊದಲು ಎರಡು ದಿನಗಳ ಕಾಲ ಕಾಡಿನಲ್ಲಿ ಅಡಗಿಕೊಂಡಿದ್ದರು. ಐವರು ಮಕ್ಕಳು ಸೇರಿ 34 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಕೆಲವು ಚಿಕಿತ್ಸೆಗೆ ಸ್ಪಂಧಿಸುತ್ತಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: ಗ್ಯಾಸ್ ಟ್ಯಾಂಕರ್ - ಟ್ರಕ್ ಡಿಕ್ಕಿ: ಸ್ಫೋಟದಿಂದ ಹೊತ್ತಿಕೊಂಡ ಬೆಂಕಿ.. ನಾಲ್ವರು ಸಜೀವ ದಹನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.