ETV Bharat / international

ಅಮೆಜಾನ್ ಅರಣ್ಯದಲ್ಲಿ ವಿಮಾನ ಪತನ.. ಒಂದು ಶಿಶು, ಪೈಲಟ್​ಗಳಿಬ್ಬರು ಸೇರಿ 12 ಜನರ ಸಾವು - ಶಿಶು ಸೇರಿದಂತೆ 10 ಮಂದಿ ಪ್ರಯಾಣ

ಬ್ರೆಜಿಲ್‌ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ 12 ಮಂದಿ ಮೃತಪಟ್ಟಿದ್ದಾರೆ. ಅಮೆಜಾನ್ ಪ್ರದೇಶದ ಎಕ್ರೆ​ ರಾಜ್ಯದ ರಾಜಧಾನಿ ರಿಯೊ ಬ್ರಾಂಕೊ ಬಳಿ ಭಾನುವಾರ ಬೆಳಗ್ಗೆ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

12 people die in a plane crash  12 people die in a plane crash in the Brazilian  plane crash in the Brazilian Amazon  ಪೈಲಟ್​ಗಳಿಬ್ಬರು ಸೇರಿ 12 ಜನ ಸಾವು  ಅಮೆಜಾನ್ ಅರಣ್ಯದಲ್ಲಿ ವಿಮಾನ ಪತನ  ವಿಮಾನ ಅಪಘಾತದಲ್ಲಿ 12 ಮಂದಿ ಮೃತ  ಎಕ್ರೆ​ ರಾಜ್ಯದ ರಾಜಧಾನಿ ರಿಯೊ ಬ್ರಾಂಕೊ  ಬ್ರೆಜಿಲ್‌ನ ಅಮೆಜಾನ್ ಅರಣ್ಯದಲ್ಲಿ ಸಣ್ಣ ವಿಮಾನವೊಂದು ಪತನ  ಮೃತರಲ್ಲಿ ಇಬ್ಬರು ಪೈಲಟ್‌ಗಳು  ಶಿಶು ಸೇರಿದಂತೆ 10 ಮಂದಿ ಪ್ರಯಾಣ  ಬ್ರೆಜಿಲ್ ವಿಮಾನ ಅಪಘಾತ
ಅಮೆಜಾನ್ ಅರಣ್ಯದಲ್ಲಿ ವಿಮಾನ ಪತನ
author img

By ETV Bharat Karnataka Team

Published : Oct 30, 2023, 8:25 AM IST

Updated : Oct 30, 2023, 9:14 AM IST

ರಿಯೊ ಬ್ರಾಂಕೊ, ಎಕ್ರೆ: ಬ್ರೆಜಿಲ್‌ನ ಅಮೆಜಾನ್ ಅರಣ್ಯದಲ್ಲಿ ಸಣ್ಣ ವಿಮಾನವೊಂದು ಪತನಗೊಂಡಿದೆ. ಈ ಅಪಘಾತದಲ್ಲಿ ವಿಮಾನದಲ್ಲಿದ್ದ 12 ಮಂದಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ ಇಬ್ಬರು ಪೈಲಟ್‌ಗಳು ಸೇರಿದ್ದಾರೆ. ವಿಮಾನದಲ್ಲಿ ಶಿಶು ಸೇರಿದಂತೆ 10 ಮಂದಿ ಪ್ರಯಾಣಿಕರಿದ್ದರು ಎಂದು ವರದಿಯಾಗಿದೆ.

ಸಿಂಗಲ್​ - ಎಂಜಿನ್ ಸೆಸ್ನಾ ಕಾರವಾನ್ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ರಿಯೊ ಬ್ರಾಂಕೊದ ವಿಮಾನ ನಿಲ್ದಾಣದ ಬಳಿ ಅಪಘಾತಕ್ಕೀಡಾಯಿತು ಎಂದು ಎಕ್ರೆ​ ರಾಜ್ಯ ಸರ್ಕಾರ ಘೋಷಿಸಿತು. ವಿಮಾನ ಪತನಗೊಂಡ ಸ್ಥಳದಲ್ಲಿ ದೊಡ್ಡ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ.

ರಾಜ್ಯದ ರಾಜಧಾನಿ ರಿಯೊ ಬ್ರಾಂಕೊದ ಮುಖ್ಯ ವಿಮಾನ ನಿಲ್ದಾಣದ ಬಳಿ ವಿಮಾನವು ಪತನಗೊಂಡಿದೆ ಎಂದು ಎಕ್ರೆ ಗವರ್ನರ್ ಗ್ಲಾಡ್ಸನ್ ಕ್ಯಾಮೆಲಿ ಅವರ ಪತ್ರಿಕಾ ಕಚೇರಿ ತಿಳಿಸಿದೆ. ವಿಮಾನ ಅಪಘಾತದ ನಂತರ ಅದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಕಾಡಿನಲ್ಲಿ ಬೆಂಕಿ ಹೊತ್ತಿರುವುದು ಕಾಣಬಹುದಾಗಿದೆ.

ಬ್ರೆಜಿಲ್ ವಿಮಾನ ಅಪಘಾತ: ಅಮೆಜಾನ್ ಕಾಡುಗಳಲ್ಲಿ ಇಂತಹ ಅಪಘಾತಗಳು ಆಗಾಗ ಸಂಭವಿಸುತ್ತಿರುತ್ತವೆ. ಕಳೆದ ತಿಂಗಳು ಬ್ರೆಜಿಲ್‌ನ ಅಮೆಜಾನ್ ಕಾಡಿನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ 14 ಜನರು ಸಾವನ್ನಪ್ಪಿದ್ದರು. ಉತ್ತರ ಅಮೆಜಾನ್‌ನ ಬಾರ್ಸಿಲೋಸ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿತ್ತು. ವಿಮಾನದಲ್ಲಿ 12 ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿ ಇದ್ದರು. ಅಪಘಾತಕ್ಕೀಡಾದ ಎಂಬ್ರೇರ್ ಪಿಟಿ-ಎಸ್‌ಒಜಿ ವಿಮಾನವು ಮನೌಸ್‌ನಿಂದ ಹೊರಟಿತ್ತು ಎಂದು ಅಮೆಜಾನಾಸ್ ರಾಜ್ಯ ಗವರ್ನರ್ ವಿಲ್ಸನ್ ಲಿಮಾ ಹೇಳಿದ್ದರು. 12 ಪ್ರಯಾಣಿಕರು ಮತ್ತು ಇಬ್ಬರು ಪೈಲಟ್‌ಗಳ ಸಾವಿನ ಬಗ್ಗೆ ವಿಲ್ಸನ್ ಲಿಮಾ ದುಃಖ ವ್ಯಕ್ತಪಡಿಸಿದ್ದರು.

ಅಮೆಜಾನ್​ ಕಾಡಿನಲ್ಲಿ 40 ದಿನ ಮಕ್ಕಳ ನರಕಯಾತನೆ: ದಟ್ಟವಾದ ಅಮೆಜಾನ್ ಕಾಡಿನಲ್ಲಿ ನಡೆಯುವುದು ವಯಸ್ಕರಿಗೆ ರೋಮಾಂಚನಕಾರಿಯೇ ಸರಿ. ಆದ್ರೆ ಇಂತಹ ಕಡೆ ಏನು ತಿಳಿಯದ ಮಕ್ಕಳು 40 ದಿನ ಒಟ್ಟಿಗೆ ಬದುಕಿ ಬಂದಿದ್ದರು. ಭೀಕರ ವಿಮಾನ ಅಪಘಾತದಲ್ಲಿ ಬದುಕುಳಿದ ನಾಲ್ವರು ಮಕ್ಕಳು ಕಾಡಿನಲ್ಲಿ ಸಿಕ್ಕ ಎಲೆಗಳನ್ನು ತಿಂದು, ಅಮೆಜಾನ್ ಜೌಗು ಪ್ರದೇಶದ ನೀರು ಕುಡಿದು ಪ್ರಾಣ ಉಳಿಸಿಕೊಂಡಿದ್ದರು. ಅವರಲ್ಲಿ 11 ತಿಂಗಳ ಪುಟ್ಟ ಮಗುವೂ ಸೇರಿತ್ತು. ಉಳಿದವರ ವಯಸ್ಸು 13, 9 ಮತ್ತು 4 ವರ್ಷ ವಯಸ್ಸಾಗಿತ್ತು. ಬಹಳ ದಿನಗಳ ನಂತರ ಅವರೆಲ್ಲ ಕಾಡಿನಲ್ಲಿ ಜೀವಂತವಾಗಿರುವುದನ್ನು ನೋಡುವುದು ಒಂದು ಪವಾಡ ಆಗಿತ್ತು.

(ಸಂಪೂರ್ಣ ಸುದ್ದಿಗಾಗಿ ಈ ಲಿಂಕ್​ ಕ್ಲಿಕ್​ ಮಾಡಿ: Plane crash in Amazon: ಅಮೆಜಾನ್​ ಕಾಡಿನಲ್ಲಿ 40 ದಿನ ಮಕ್ಕಳ ನರಕಯಾತನೆ.. ಕಂದಮ್ಮಗಳಿಗೆ ತಾಯಿ ಹೇಳಿದ್ದಳು ಬದುಕುವ ದಾರಿ!)

ಓದಿ: ನಿಲ್ಲದ ಇಸ್ರೇಲ್​ ದಾಳಿ.. ಗಾಜಾಪಟ್ಟಿಯಲ್ಲಿ 8 ಸಾವಿರಕ್ಕೂ ಹೆಚ್ಚು ಸಾವು: ನಿರಾಶ್ರಿತರಿಗೆ ನೆರವಿನ ಹಸ್ತ

Last Updated : Oct 30, 2023, 9:14 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.