ETV Bharat / international

ಕ್ರೀಡಾ ಉದ್ಘಾಟನೆಗೆ ಕಿಕ್ಕರಿದು ಬಂದ ಅಭಿಮಾನಿಗಳು.. ಕಾಲ್ತುಳಿತದಲ್ಲಿ 12 ಜನ ಸಾವು, 80ಕ್ಕೂ ಹೆಚ್ಚು ಜನರಿಗೆ ಗಾಯ - ಮೌನಾಚರಣೆ ನಂತರ ಮುಂದುವರಿದ ಸಮಾರಂಭ

ಶುಕ್ರವಾರ ಮಡಗಾಸ್ಕರ್‌ನ ರಾಜಧಾನಿ ಅಂಟಾನಾನರಿವೊ ಕ್ರೀಡಾಂಗಣದಲ್ಲಿ ಕಾಲ್ತುಳಿತ ಸಂಭವಿಸಿ ಕನಿಷ್ಠ 12 ಜನರು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

12 killed and 80 injured  Madagascar stadium stampede  12 killed and 80 injured in Madagascar stadium  Indian Ocean Island Games  ಕ್ರೀಡಾ ಉದ್ಘಾಟನೆಗೆ ಕಿಕ್ಕರಿದು ಬಂದ ಅಭಿಮಾನಿಗಳು  ಕಾಲ್ತುಳಿತದಲ್ಲಿ 12 ಜನ ಸಾವು  80ಕ್ಕೂ ಹೆಚ್ಚು ಜನರಿಗೆ ಗಾಯ  ಮಡಗಾಸ್ಕರ್‌ನ ರಾಜಧಾನಿ ಅಂಟಾನಾನರಿವೊ ಕ್ರೀಡಾಂಗಣ  ಕಾಲ್ತುಳಿತ ಸಂಭವಿಸಿ ಕನಿಷ್ಠ 12 ಜನರು ಮೃತ  ದುರಂತದ ಬಗ್ಗೆ ಮಾಹಿತಿ ನೀಡಿದ ಪಿಎಂ  ಮೌನಾಚರಣೆ ನಂತರ ಮುಂದುವರಿದ ಸಮಾರಂಭ  ಸಂತಾಪ ವ್ಯಕ್ತಪಡಿಸಿದ ಅಧ್ಯಕ್ಷ
ಕ್ರೀಡಾ ಉದ್ಘಾಟನೆಗೆ ಕಿಕ್ಕರಿದು ಬಂದ ಅಭಿಮಾನಿಗಳು
author img

By ETV Bharat Karnataka Team

Published : Aug 26, 2023, 7:29 AM IST

ಅಂಟಾನಾನರಿವೊ, ಮಡಗಾಸ್ಕರ್: ರಾಜಧಾನಿ ಅಂಟಾನಾನರಿವೊ ಕ್ರೀಡಾಂಗಣದಲ್ಲಿ ದುರ್ಘಟನೆಯೊಂದು ಸಂಭವಿಸಿದೆ. ಶುಕ್ರವಾರ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 12 ಜನರು ಸಾವನ್ನಪ್ಪಿದ್ದು, ಸುಮಾರು 80 ಜನರು ಗಾಯಗೊಂಡಿದ್ದಾರೆ. ಪಿಎಂ ನಟ್ಸೆ ಪ್ರಕಾರ, ಗಾಯಗೊಂಡವರಲ್ಲಿ 11 ಮಂದಿಯ ಸ್ಥಿತಿ ತುಂಬಾ ಗಂಭೀರವಾಗಿದೆ.

ದುರಂತದ ಬಗ್ಗೆ ಮಾಹಿತಿ ನೀಡಿದ ಪಿಎಂ: ಇಂಡಿಯನ್ ಓಷನ್ ಐಲ್ಯಾಂಡ್ ಗೇಮ್ಸ್‌ನ ಉದ್ಘಾಟನಾ ಸಮಾರಂಭವನ್ನು ಮಡಗಾಸ್ಕರ್‌ನ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು. ಹೀಗಾಗಿ ಕ್ರೀಡಾಭಿಮಾನಿಗಳು ರಾಷ್ಟ್ರೀಯ ಕ್ರೀಡಾಂಗಣಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದರು. ಈ ವೇಳೆ, ಸಂಭವಿಸಿದ ಕಾಲ್ತುಳಿತದಲ್ಲಿ 12 ಜನರು ಸಾವನ್ನಪ್ಪಿದ್ದು, ಸುಮಾರು 80 ಮಂದಿ ಗಾಯಗೊಂಡಿದ್ದಾರೆ ಎಂದು ಪಿಎಂ ನಟ್ಸೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಸಂತಾಪ ವ್ಯಕ್ತಪಡಿಸಿದ ಅಧ್ಯಕ್ಷ: ಅಧ್ಯಕ್ಷ ಆಂಡ್ರಿ ರಾಜೋಲಿನಾ ಅವರು ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಂದ ಉಂಟಾದ ಜೀವಹಾನಿಯ ಬಗ್ಗೆ ದುಃಖ ವ್ಯಕ್ತಪಡಿಸಿದರು. ಘಟನೆ ದುರದೃಷ್ಟಕರ ಎಂದು ಬಣ್ಣಿಸಿದ ಅವರು, ಸುಮಾರು 50,000 ಪ್ರೇಕ್ಷಕರು ಕಾರ್ಯಕ್ರಮಕ್ಕೆ ಹಾಜರಾಗಲು ಆಗಮಿಸಿದ್ದ ಬರಿಯಾ ಕ್ರೀಡಾಂಗಣದ ಪ್ರವೇಶ ದ್ವಾರದಲ್ಲಿ ಕಾಲ್ತುಳಿತ ಸಂಭವಿಸಿದೆ. ಹಲವರಿಗೆ ಗಾಯಗಳಾಗಿವೆ. ಈ ವೇಳೆ, ಅಧ್ಯಕ್ಷರೂ ಕ್ರೀಡಾಂಗಣದಲ್ಲಿ ನೆರೆದಿದ್ದ ಜನರೊಂದಿಗೆ ಒಂದು ನಿಮಿಷಗಳ ಕಾಲ ಮೌನಾಚರಣೆ ನಡೆಸಿದರು.

ಮೌನಾಚರಣೆ ನಂತರ ಮುಂದುವರಿದ ಸಮಾರಂಭ: ಮಡಗಾಸ್ಕರ್‌ನ ಕ್ರೀಡಾಂಗಣದಲ್ಲಿ ಕಾಲ್ತುಳಿತಕ್ಕೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮೌನಾಚರಣೆ ನಂತರ ಲೇಸರ್ ಶೋ ಮತ್ತು ಪಟಾಕಿಗಳೊಂದಿಗೆ ಇಂಡಿಯನ್ ಓಷನ್ ಐಲ್ಯಾಂಡ್ ಗೇಮ್ಸ್‌ನ ಉದ್ಘಾಟನಾ ಸಂಭ್ರಮಾಚರಣೆ ಮುಂದುವರೆಯಿತು.

ಕಾಲ್ತುಳಿತ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಬಳಿಕ ಕಾಲ್ತುಳಿತದಲ್ಲಿ ಮೃತಪಟ್ಟವರ ದೇಹಗಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ಮೃತಪಟ್ಟವರ ಗುರುತು ಪತ್ತೆ ಕಾರ್ಯವನ್ನು ಸ್ಥಳೀಯ ಪೊಲೀಸರು ಕೈಗೊಂಡಿದ್ದಾರೆ. ಸುಮಾರು 80ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಗಾಯಗೊಂಡಿದ್ದವರ ಪೈಕಿ 11 ಜನರ ಸ್ಥಿತಿ ಚಿಂತಾಜನಕವಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಭಯವಿದೆ. 2019 ರಲ್ಲಿ ಮಹಾಮಸಿನಾ ಕ್ರೀಡಾಂಗಣದಲ್ಲಿ ನಡೆದ ಇದೇ ರೀತಿಯ ಘಟನೆಯಲ್ಲಿ ಕನಿಷ್ಠ 15 ಜನರು ಸಾವನ್ನಪ್ಪಿದ್ದರು ಎಂದು ತಿಳಿದಿದೆ.

1977 ರಲ್ಲಿ ಇಂಟರ್ನ್ಯಾಷನಲ್ ಒಲಂಪಿಕ್ ಸಮಿತಿಯು ಹಿಂದೂ ಮಹಾಸಾಗರ ದ್ವೀಪದ ಕ್ರೀಡಾಕೂಟವನ್ನು ರಚಿಸಿತು. ಇದು ಮಾರಿಷಸ್, ಸೀಶೆಲ್ಸ್, ಕೊಮೊರೊಸ್, ಮಡಗಾಸ್ಕರ್, ಮಯೊಟ್ಟೆ, ರಿಯೂನಿಯನ್ ಮತ್ತು ಮಾಲ್ಡೀವ್ಸ್‌ನ ಕ್ರೀಡಾಪಟುಗಳನ್ನು ಒಳಗೊಂಡಿದೆ. ಹಿಂದೂ ಮಹಾಸಾಗರ ದ್ವೀಪದ ಆಟಗಳು ಸೆಪ್ಟೆಂಬರ್ 3 ರವರೆಗೆ ಮಡಗಾಸ್ಕರ್‌ನಲ್ಲಿ ನಡೆಯಲಿರುವ ಬಹು - ಶಿಸ್ತಿನ ಸ್ಪರ್ಧೆಯಾಗಿದೆ.

ಓದಿ: ಸುಡಾನ್ ಸಂಘರ್ಷ: 20 ಲಕ್ಷ ಮಕ್ಕಳು ಸ್ಥಳಾಂತರ, ಆಹಾರ ಕ್ಷಾಮ ಹೆಚ್ಚಳ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.