ETV Bharat / international

ಆಫ್ಘನ್​​ಗೆ ಪಾಕ್ ​​​​​ ರಾಜತಾಂತ್ರಿಕರ ಭೇಟಿ ದಿಢೀರ್​ ರದ್ದು.. ಇದು ಉಭಯ ರಾಷ್ಟ್ರಗಳ ಸಂಬಂಧದಲ್ಲಿನ ಬಿರುಕಾ?

ಪಾಕಿಸ್ತಾನ ರಾಜತಾಂತ್ರಿಕರ ಭೇಟಿ ವಿರೋಧಿಸಿ ಅಫ್ಘಾನಿಸ್ತಾನದಲ್ಲಿ ಹೆಚ್ಚುತ್ತಿರುವ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಈ ಪ್ರವಾಸ ರದ್ದುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಅಫ್ಘಾನ್​​ನಲ್ಲಿ ತಾಲಿಬಾನ್​ ಸರ್ಕಾರ ಪುನರ್​​ ಸ್ಥಾಪನೆಯಾಗಲು ಪಾಕಿಸ್ತಾನ ನೆರವು ನೀಡಿತ್ತು. ಹಾಗೂ ಅದರಲ್ಲಿ ಪ್ರಮುಖ ಭೂಮಿಕೆಯನ್ನು ನಿರ್ವಹಣೆ ಮಾಡಿತ್ತು. ಆದರೆ, ಪಾಕ್​​​​ ಎನ್​​ಎಸ್​ಎ ಭೇಟಿಗೆ ಆಫ್ಘನ್​​ನಲ್ಲಿ ಈಗ ಭಾರಿ ವಿರೋಧ ವ್ಯಕ್ತವಾಗುತ್ತಿರುವುದು ಗಮನಿಸಬೇಕಾದ ಅಂಶವಾಗಿದೆ.

ಆಫ್ಘನ್​​ಗೆ ಪಾಕ್​​​​​ ರಾಜತಾಂತ್ರಿಕರ ಭೇಟಿ ದಿಢೀರ್​ ರದ್ದು

author img

By

Published : Jan 19, 2022, 9:13 AM IST

Updated : Jan 19, 2022, 10:01 AM IST

ನವದೆಹಲಿ: ಪಾಕಿಸ್ತಾನಕ್ಕೆ ಭಾರಿ ಮುಖಭಂಗವಾಗಿದೆ. 18-19ಕ್ಕೆ ಅಫ್ಘಾನಿಸ್ತಾನಕ್ಕೆ ಭೇಟಿ ನೀಡಬೇಕಾಗಿದ್ದ ಪಾಕ್​​ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೊಯೀದ್ ಯೂಸುಫ್ ​​​​​​​​​ಅವರ ಕಾಬೂಲ್​ ಭೇಟಿಯನ್ನು ದಿಢೀರ್​ ರದ್ದುಗೊಳಿಸಲಾಗಿದೆ.

ಪಾಕಿಸ್ತಾನ ರಾಜತಾಂತ್ರಿಕರ ಭೇಟಿ ವಿರೋಧಿಸಿ ಅಫ್ಘಾನಿಸ್ತಾನದಲ್ಲಿ ಹೆಚ್ಚುತ್ತಿರುವ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಈ ಪ್ರವಾಸ ರದ್ದುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಅಫ್ಘಾನ್​​ನಲ್ಲಿ ತಾಲಿಬಾನ್​ ಸರ್ಕಾರ ಪುನರ್​​ ಸ್ಥಾಪನೆಯಾಗಲು ಪಾಕಿಸ್ತಾನ ನೆರವು ನೀಡಿತ್ತು. ಹಾಗೂ ಅದರಲ್ಲಿ ಪ್ರಮುಖ ಭೂಮಿಕೆಯನ್ನು ನಿರ್ವಹಣೆ ಮಾಡಿತ್ತು. ಆದರೆ, ಪಾಕ್​​​​ ಎನ್​​ಎಸ್​ಎ ಭೇಟಿಗೆ ಆಫ್ಘನ್​​ನಲ್ಲಿ ಈಗ ಭಾರಿ ವಿರೋಧ ವ್ಯಕ್ತವಾಗುತ್ತಿರುವುದು ಗಮನಿಸಬೇಕಾದ ಅಂಶವಾಗಿದೆ.

ನಿಗದಿಯಾಗಿದ್ದ ಭೇಟಿ ಕೊನೆಗಳಿಗೆಯಲ್ಲಿ ರದ್ದಾಗಿರುವುದು ಪಾಕಿಸ್ತಾನ ಮತ್ತು ತಾಲಿಬಾನ್​ ನಡುವೆ ಹೊಂದಾಣಿಕೆ ಆಗುತ್ತಿಲ್ಲ ಎಂಬ ಅಂಶವನ್ನು ಎತ್ತಿ ತೋರಿಸುತ್ತಿದೆ. ಹಾಗೂ ಇದು ಎರಡೂ ರಾಷ್ಟ್ರಗಳ ನಡುವೆ ಹೆಚ್ಚುತ್ತಿರುವ ಅಂತರವನ್ನು ಪ್ರತಿಬಿಂಬಿಸುತ್ತದೆ. ಅಷ್ಟೇ ಅಲ್ಲ ಇದು ಪಾಕಿಸ್ತಾನದ ಆಂತರಿಕ ಭದ್ರತೆ ಮತ್ತು ಪ್ರಾದೇಶಿಕ ಸ್ಥಿರತೆಯ ಮೇಲೆ ನೇರ ಪರಿಣಾಮಗಳನ್ನು ಹೊಂದಿದೆ ಎಂದು ಇಂಟರ್​​​​ ನ್ಯಾಷನಲ್​​ ಪಾಲಿಟಿಕ್ಸ್, ಆರ್ಗನೈಸೇಶನ್ ಮತ್ತು ನಿರಸ್ತ್ರೀಕರಣ ಕೇಂದ್ರದ (CIPOD) ರಾಜತಾಂತ್ರಿಕತೆ ಮತ್ತು ನಿಶ್ಯಸ್ತ್ರೀಕರಣದ ಪ್ರಾಧ್ಯಾಪಕ ಡಾ ಸ್ವರಣ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಕೆಟ್ಟ ಹವಾಮಾನವೇ ಕಾಬೂಲ್​ ಪ್ರವಾಸ ಮುಂದೂಡಿಕೆಗೆ ಕಾರಣವಂತೆ:

ಕೆಟ್ಟ ಹವಾಮಾನದ ಕಾರಣದಿಂದಾಗಿ ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೊಯೀದ್ ಯೂಸುಫ್ ಅವರ ಕಾಬೂಲ್​ ಭೇಟಿಯನ್ನು ರದ್ದುಗೊಳಿಸಲಾಗಿದೆ ಎಂದು ಪಾಕಿಸ್ತಾನದ ಮೂಲಗಳು ಹೇಳಿವೆ. ಆದಾಗ್ಯೂ ಕೊನೆಗಳಿಗೆಯಲ್ಲಿ ಭೇಟಿ ರದ್ದಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಪಾಕಿಸ್ತಾನವು ಈಗ ತಾಲಿಬಾನ್‌ನಲ್ಲಿ ತನ್ನ ಪ್ರಭಾವವನ್ನು ಕಳೆದುಕೊಳ್ಳುತ್ತಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿ ಒದಗಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಆಫ್ಘನ್​​​​- ತಾಲಿಬಾನ್​ ಸಂಬಂಧ ಹದಗೆಡಲು ಕಾರಣವೇನು?

ತಾಲಿಬಾನ್​ ಸರ್ಕಾರಕ್ಕೆ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿಕೊಡಲು ತಾನು ನೆರವು ನೀಡುವುದಾಗಿ ಪಾಕಿಸ್ತಾನ ಅಭಯ ನೀಡಿತ್ತು. ಆದರೀಗ ಪಾಕ್​ ಆ ಮಾತು ಉಳಿಸಿಕೊಳ್ಳಲು ಸಫಲವಾಗಿಲ್ಲ. ಇದು ಉಭಯ ರಾಷ್ಟ್ರಗಳ ನಡುವಣ ಮನಸ್ಥಾಪಕ್ಕೆ ದಾರಿ ಮಾಡಿಕೊಟ್ಟಿದೆ. ಮುನಿಸು ಇದೇ ರೀತಿ ಮುಂದುವರೆದರೆ ಎರಡು ರಾಷ್ಟ್ರಗಳ ನಡುವೆ ಡುರಾಂಡ್ ಗಡಿರೇಖೆಯಲ್ಲಿ ಉದ್ವಿಗ್ನತೆ ಸೃಷ್ಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ:ರಾಜ್ಯದಲ್ಲಿ ಟೆಸ್ಲಾ ಘಟಕ ಆರಂಭಿಸುವಂತೆ ಜಗತ್ತಿನ ನಂ.1 ಶ್ರೀಮಂತ ಉದ್ಯಮಿಗೆ ಆಹ್ವಾನ ; ಸಚಿವ ನಿರಾಣಿ ಟ್ವೀಟ್‌

Last Updated : Jan 19, 2022, 10:01 AM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.