ETV Bharat / international

ಹೌತಿ ಮಿಲಿಟಿಯ ಹಿಡಿತದಲ್ಲಿರುವ ಮಿಲಿಟರಿ ಶಿಬಿರಗಳ ಮೇಲೆ ಸೌದಿ ವೈಮಾನಿಕ ದಾಳಿ

ಕೆಂಪು ಸಮುದ್ರದ ಬಂದರು ನಗರವಾದ ಜೆಡ್ಡಾದ ಸೌದಿ ಅರಾಮ್ಕೊ ಪೆಟ್ರೋಲಿಯಂ ಉತ್ಪನ್ನಗಳ ವಿತರಣಾ ಟರ್ಮಿನಲ್‌ಗೆ ಸೋಮವಾರ ಹೌತಿ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯಿಂದ ಇಂಧನ ಟ್ಯಾಂಕರ್​ನಲ್ಲಿ ಬೆಂಕಿ ಕಾಣಿಸಿದ ನಂತರ ಸೌದಿ ಈ ದಾಳಿ ನಡೆಸಿದೆ..

author img

By

Published : Nov 27, 2020, 8:02 PM IST

Saudi missile attack
ವೈಮಾನಿಕ ದಾಳಿ

ಸನಾ : ಯೆಮನ್‌ನ ರಾಜಧಾನಿ ಸನಾದಲ್ಲಿ ಸೌದಿ ನೇತೃತ್ವದ ಒಕ್ಕೂಟದ ಯುದ್ಧ ವಿಮಾನಗಳು ಹೌತಿ ಮಿಲಿಟಿಯಾ ಹಿಡಿತದಲ್ಲಿರುವ ಮಿಲಿಟರಿ ಶಿಬಿರಗಳ ಮೇಲೆ ಇಂದು ವೈಮಾನಿಕ ದಾಳಿ ನಡೆಸಿದೆ.

ಕೆಂಪು ಸಮುದ್ರದ ಬಂದರು ನಗರವಾದ ಜೆಡ್ಡಾದ ಸೌದಿ ಅರಾಮ್ಕೊ ಪೆಟ್ರೋಲಿಯಂ ಉತ್ಪನ್ನಗಳ ವಿತರಣಾ ಟರ್ಮಿನಲ್‌ಗೆ ಸೋಮವಾರ ಹೌತಿ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿಯಿಂದ ಇಂಧನ ಟ್ಯಾಂಕರ್​ನಲ್ಲಿ ಬೆಂಕಿ ಕಾಣಿಸಿದ ನಂತರ ಸೌದಿ ಈ ದಾಳಿ ನಡೆಸಿದೆ.

ಹಫಾ, ಅಟ್ಟಾನ್, ಐಬನ್, ಸಾಮ ಮತ್ತು ಜಾರ್ಬನ್ ಪ್ರದೇಶಗಳಲ್ಲಿನ ಹೌತಿ ಮಿಲಿಟರಿ ಶಿಬಿರಗಳನ್ನು ಗುರಿಯಾಗಿಸಿಕೊಂಡು 14 ಬಾರಿ ವೈಮಾನಿಕ ದಾಳಿ ನಡೆಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ಮಧ್ಯೆ ಸೌದಿ ಒಡೆತನದ ಅಲ್ ಅರೇಬಿಯಾ ಟೆಲಿವಿಷನ್ ಸಹ ಈ ಒಕ್ಕೂಟವು ಸನಾದಲ್ಲಿನ ಹೌತಿ ಮಿಲಿಟಿಯಾ ಮಿಲಿಟರಿ ತಾಣಗಳಲ್ಲಿ ಅನೇಕ ವೈಮಾನಿಕ ದಾಳಿಗಳನ್ನು ನಡೆಸಿದೆ ಎಂದು ವರದಿ ಮಾಡಿದೆ.

ಇರಾನ್ ಬೆಂಬಲಿತ ಹೌತಿ ಮಿಲಿಟಿಯಾ ಹಲವಾರು ಉತ್ತರದ ಪ್ರಾಂತ್ಯಗಳ ನಿಯಂತ್ರಣವನ್ನು ವಶಪಡಿಸಿಕೊಂಡಾಗ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ಅಧ್ಯಕ್ಷ ಅಬ್ದು-ರಬ್ಬು ಮನ್ಸೂರ್ ಹಾದಿಯನ್ನು ಸನಾದಿಂದ ಹೊರ ಹಾಕಿದ ನಂತರ 2014ರ ಉತ್ತರಾರ್ಧದಿಂದ ಯೆಮೆನ್ ಅಂತರ್ಯುದ್ಧದಲ್ಲಿ ಸಿಲುಕಿದೆ.

ಸೌದಿ ನೇತೃತ್ವದ ಅರಬ್ ಒಕ್ಕೂಟ 2015ರಲ್ಲಿ ಯೆಮೆನ್ ಸಂಘರ್ಷದಲ್ಲಿ ಮಧ್ಯಪ್ರವೇಶಿಸಿ ಹಾಡಿ ಸರ್ಕಾರವನ್ನು ಬೆಂಬಲಿಸಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.