ಟೆಲ್ ಅವಿವ್, ಇಸ್ರೇಲ್: ಅಮೆರಿಕ, ಯುಎಇ ಮತ್ತು ಇಸ್ರೇಲ್‌ನ ವಿದೇಶಾಂಗ ಮಂತ್ರಿಗಳೊಂದಿಗಿನ ತನ್ನ ಮೊದಲ ಸಭೆ ಫಲಪ್ರದವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು ಇಸ್ರೇಲ್‌ನ ಯೈರ್ ಲ್ಯಾಪಿಡ್, ಯುಎಇ ವಿದೇಶಾಂಗ ಸಚಿವ ಅಬ್ದುಲ್ಲಾ ಬಿನ್ ಜಾಯೆದ್ ಮತ್ತು ಅಮೆರಿಕದ ಆಂಟನಿ ಬ್ಲಿಂಕನ್ ಅವರೊಂದಿಗೆ ನಡೆಸಿರುವ ಸಭೆ ಫಲಪ್ರದವಾಗಿದೆ ಎಂದಿದ್ದಾರೆ.
ಜೊತೆಗೆ ಆರ್ಥಿಕ ಬೆಳವಣಿಗೆ ಮತ್ತು ಜಾಗತಿಕ ಸಮಸ್ಯೆಗಳ ಕುರಿತು ಹೆಚ್ಚು ನಿಕಟವಾಗಿ ಕೆಲಸ ಮಾಡುವ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಜೈಶಂಕರ್ ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.
-
A fruitful first meeting with Israeli APM and FM @YairLapid, UAE FM @ABZayed and US Secretary of State @SecBlinken this evening.
— Dr. S. Jaishankar (@DrSJaishankar) October 18, 2021 " class="align-text-top noRightClick twitterSection" data="
Discussed working together more closely on economic growth and global issues. Agreed on expeditious follow-up. pic.twitter.com/kVgFM0r6hs
">A fruitful first meeting with Israeli APM and FM @YairLapid, UAE FM @ABZayed and US Secretary of State @SecBlinken this evening.
— Dr. S. Jaishankar (@DrSJaishankar) October 18, 2021
Discussed working together more closely on economic growth and global issues. Agreed on expeditious follow-up. pic.twitter.com/kVgFM0r6hsA fruitful first meeting with Israeli APM and FM @YairLapid, UAE FM @ABZayed and US Secretary of State @SecBlinken this evening.
— Dr. S. Jaishankar (@DrSJaishankar) October 18, 2021
Discussed working together more closely on economic growth and global issues. Agreed on expeditious follow-up. pic.twitter.com/kVgFM0r6hs
ಇಸ್ರೇಲ್ನಲ್ಲಿರುವ ಅವರು ಅಲ್ಲಿನ ವಿದೇಶಾಂಗ ಸಚಿವರೊಂದಿಗೆ ಜೊತೆಗೂಡಿ, ಅಮೆರಿಕ ಮತ್ತು ಯುಎಇ ದೇಶಗಳ ವಿದೇಶಾಂಗ ಖಾತೆಯ ಸಚಿವರೊಂದಿಗೆ ವರ್ಚುವಲ್ ಸಭೆ ನಡೆಸಿದ್ದಾರೆ.
ಸಭೆಯಲ್ಲಿ ಹವಾಮಾನ ಬದಲಾವಣೆ, ಇಂಧನ ಸಹಕಾರ, ಕಡಲ ಭದ್ರತೆ ಮತ್ತು ಆರ್ಥಿಕ ಮತ್ತು ರಾಜಕೀಯ ಸಹಕಾರ ವಿಸ್ತರಣೆ ಹಲವಾರು ವಿಷಯಗಳ ಕುರಿತು ಚರ್ಚಿಸಲಾಗಿದೆ ಎಂದು ಅಮೆರಿಕ ರಾಜ್ಯ ವಕ್ತಾರ ನೆಡ್ ಪ್ರೈಸ್ ಸುದ್ದಿಗೋಷ್ಢಿಯಲ್ಲಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: 200ಕ್ಕೂ ಹೆಚ್ಚು ಬಂಡುಕೋರರಿಂದ ಗುಂಡಿನ ದಾಳಿ, 43 ಮಂದಿ ನಾಗರಿಕ ಸಾವು