ETV Bharat / international

ಇಸ್ರೇಲ್ ಕೋವಿಡ್ ಯುದ್ಧ ಗೆದ್ದಿದ್ದು ಹೀಗೆ.. ಇಲ್ಲಿದೆ ಪುಟ್ಟ ರಾಷ್ಟ್ರದ ಯಶಸ್ಸಿನ ಕಥೆ..

author img

By

Published : Apr 27, 2021, 2:34 PM IST

Updated : Apr 27, 2021, 2:44 PM IST

ಫೈಝರ್ ಲಸಿಕೆ ಪಡೆದ ಶೇ.95.8ರಷ್ಟು ಜನರಲ್ಲಿ ಕೋವಿಡ್ ವೈರಸ್​ನಿಂದ ಉಂಟಾಗುವ ಅನಾರೋಗ್ಯಗಳು ಕಡಿಮೆಯಾಗಿವೆ ಎಂದು ಫೆಬ್ರವರಿ 2021ರಲ್ಲಿ ಇಸ್ರೇಲ್​ ಆರೋಗ್ಯ ಸಚಿವಾಲಯ ನಡೆಸಿದ ಅಧ್ಯಯನ ತಿಳಿಸಿದೆ..

Isreal Success Story against COVID19 Pandemic
ಇಸ್ರೇಲ್ ಕೋವಿಡ್ ಯುದ್ದ ಗೆದ್ದಿದ್ದು ಹೇಗೆ

ಹೈದರಾಬಾದ್ : ಇಸ್ರೇಲ್ ತನ್ನ 9 ಮಿಲಿಯನ್ ದೇಶವಾಸಿಗಳಿಗೆ 2020ರ ಡಿಸೆಂಬರ್ 19ರಂದು ಕೋವಿಡ್ ಲಸಿಕೆ ಹಾಕಲು ಪ್ರಾರಂಭಿಸಿತು. ಅಂದಿನಿಂದ, ಜಾಗತಿಕವಾಗಿ ಅತೀ ಹೆಚ್ಚು ಕೋವಿಡ್ ಲಸಿಕೆ ನೀಡಿದ ದೇಶಗಳ ಪೈಕಿ ಇಸ್ರೇಲ್ ಮುಂಚೂಣಿಯಲ್ಲಿದೆ.

ಲಸಿಕೆ ನೀಡಲು ಸರ್ಕಾರದಿಂದ ಕ್ರಿಯಾ ಯೋಜನೆ : ಸಂಭಾವ್ಯ ಕೋವಿಡ್ ಲಸಿಕೆಗಾಗಿ ಉತ್ಪಾದನಾ ಕಂಪನಿಗಳೊಂದಿಗೆ ಇಸ್ರೇಲ್ ಆರಂಭದಲ್ಲೇ ಮಾತುಕತೆ ನಡೆಸಿತ್ತು. ಜೊತೆಗೆ ನವೆಂಬರ್ 2020ರ ಎರಡನೇ ವಾರದಲ್ಲಿ ಫೈಝರ್​ ಕಂಪನಿಯೊಂದಿಗೆ 8 ಮಿಲಿಯನ್‌ಗೆ ಲಸಿಕೆಗಾಗಿ ಒಪ್ಪಂದ ಮಾಡಿಕೊಂಡಿತ್ತು.

ಇಸ್ರೇಲ್ ಕೋವಿಡ್ ಗೆದ್ದ ಕಥೆ :

  • ಲಸಿಕೆ ಹಾಕಲು ಪ್ರಾರಂಭಿಸಿದ ಬಳಿಕ 10 ತಿಂಗಳಲ್ಲಿ ಮೊದಲ ಬಾರಿಗೆ ಇಸ್ರೇಲ್​ನಲ್ಲಿ ಕೋವಿಡ್​ ಸೋಂಕಿನಿಂದ ಯಾವುದೇ ದೈನಂದಿನ ಸಾವು ವರದಿಯಾಗಿಲ್ಲ.
  • ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಮತ್ತು ಇಸ್ರೇಲ್ ಸರ್ಕಾರ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಮಾರ್ಚ್ 2021ರಲ್ಲಿ ಇಸ್ರೇಲ್​ನಲ್ಲಿ 10ಕ್ಕಿಂತ ಕಡಿಮೆ ಕೋವಿಡ್ ಸಾವು ಸಂಭವಿಸಿವೆ. ಜನವರಿಯಲ್ಲಿ 70ಕ್ಕೂ ಹೆಚ್ಚು ದೈನಂದಿನ ಸಾವು ಸಂಭವಿಸುತ್ತಿದ್ದ ಗರಿಷ್ಠ ಮಟ್ಟದಿಂದ ಮಾರ್ಚ್ ಹೊತ್ತಿಗೆ ಸಾವಿನ ಪ್ರಮಾಣ ತುಂಬಾ ಕಡಿಮೆಯಾಗಿದೆ.
  • ಲಸಿಕೆ ಹಾಕಿದ ಪರಿಣಾಮ ಸದ್ಯ, ಇಸ್ರೇಲ್‌ನಲ್ಲಿ ದಿನಕ್ಕೆ 120 ಹೊಸ ಕೋವಿಡ್​ ಪ್ರಕರಣ ದಾಖಲಾಗುತ್ತಿವೆ. ಜನವರಿ ಮಧ್ಯದಲ್ಲಿ ದಿನಕ್ಕೆ 8,000ಕ್ಕೂ ಹೆಚ್ಚು ಪ್ರಕರಣ ವರದಿಯಾಗುತ್ತಿವೆ.
  • ಅಂತಾರಾಷ್ಟ್ರೀಯ ಮಾನದಂಡಗಳಿಗೆ ಹೋಲಿಸಿದರೆ, ಇಸ್ರೇಲ್​ನಲ್ಲಿ ಸೋಂಕಿನ ಪ್ರಮಾಣ ಇನ್ನೂ ಕಡಿಮೆಯಾಗಿದೆ. ದೇಶದಲ್ಲಿ ಪ್ರತಿ ಮಿಲಿಯನ್ ಜನಸಂಖ್ಯೆಯಲ್ಲಿ 15 ಹೊಸ ದೈನಂದಿನ ಪ್ರಕರಣ ವರದಿಯಾಗುತ್ತಿವೆ.
  • ಇಸ್ರೇಲ್​ನಲ್ಲಿ ಕೋವಿಡ್​ ಲಸಿಕೆ ಪಡೆದವರ ಪೈಕಿ ಶೇ. 99.1ರಷ್ಟು 90 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರ ಪಾಲಿದೆ.
  • ಲಸಿಕೆ ಪಡೆದ 60 ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನವರ ಪ್ರಮಾಣ ಶೇ.90ರಷ್ಟಿದೆ. ಇದು ಜಾಗತಿಕವಾಗಿ ಕೋವಿಡ್ ಸಾವಿನ ಪ್ರಮಾಣವನ್ನು ತಡೆಗಟ್ಟಲು ಸಹಕಾರಿಯಾಗಿದೆ.

ಇಸ್ರೇಲ್​ನಲ್ಲಿ ಬಳಕೆಯಾಗುತ್ತಿರುವ ಲಸಿಕೆ ಇದು

  • ಫೈಝರ್ ಮತ್ತು ಬಯೋಟೆಕ್ ಅಭಿವೃದ್ಧಿಪಡಿಸಿದ ಲಸಿಕೆಗಳನ್ನು ಮಾತ್ರ ಇಸ್ರೇಲ್​ನಲ್ಲಿ ಇದುವರೆಗೆ ಬಳಸುತ್ತಿದೆ.
  • ಫೈಝರ್ ಲಸಿಕೆ ಪಡೆದ ಶೇ.95.8ರಷ್ಟು ಜನರಲ್ಲಿ ಕೋವಿಡ್ ವೈರಸ್​ನಿಂದ ಉಂಟಾಗುವ ಅನಾರೋಗ್ಯಗಳು ಕಡಿಮೆಯಾಗಿವೆ ಎಂದು ಫೆಬ್ರವರಿ 2021ರಲ್ಲಿ ಇಸ್ರೇಲ್​ ಆರೋಗ್ಯ ಸಚಿವಾಲಯ ನಡೆಸಿದ ಅಧ್ಯಯನ ತಿಳಿಸಿದೆ.

Last Updated : Apr 27, 2021, 2:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.