ETV Bharat / international

ಇರಾನ್​ನಲ್ಲಿ ಒಂದೇ ದಿನ 63 ಜನರ ಬಲಿ ಪಡೆದ ಕೊರೊನಾ.. ಸಾವಿನ ಸಂಖ್ಯೆ 354

ಚೀನಾ ನಂತರ ಇರಾನ್​ನಲ್ಲಿ ಕೊರೊನಾ ಸೋಂಕು ಹೆಚ್ಚು ಜನರನ್ನು ಬಲಿಪಡೆದಿದೆ.ಇರಾನ್ ರಾಜಧಾನಿ ತೆಹ್ರಾನ್​ನಲ್ಲಿ 256 ಹೊಸ ಪ್ರಕರಣಗಳು ಪತ್ತೆಯಾಗಿವೆ. ಮುಂಜಾಗ್ರತಾ ಕ್ರಮವಾಗಿ ಇರಾನ್​ನಲ್ಲಿ ಶಾಲೆ, ಕಾಲೇಜು, ಹೋಟೆಲ್ ಮತ್ತು ಇತರ ಪ್ರವಾಸಿ, ವಸತಿ ಸೌಕರ್ಯಗಳನ್ನು ಮುಚ್ಚಲಾಗಿದೆ.

Iran announces 63 new virus deaths,ಇರಾನ್​ನಲ್ಲಿ ಒಂದೇ ದಿನ 63 ಜನರನ್ನು ಬಲಿ ಪಡೆದ ಕೊರೊನಾ
ಇರಾನ್​ನಲ್ಲಿ ಒಂದೇ ದಿನ 63 ಜನರನ್ನು ಬಲಿ ಪಡೆದ ಕೊರೊನಾ
author img

By

Published : Mar 11, 2020, 6:19 PM IST

ತೆಹ್ರಾನ್: ಕೊರೊನಾ ವೈರಸ್​ಗೆ ಇರಾನ್​ನಲ್ಲಿ ಒಂದೇ ದಿನ 63 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲೀಗ ಮೃತರ ಸಂಖ್ಯೆ 354ಕ್ಕೆ ಏರಿಕೆಯಾಗಿದೆ.

ವೈದ್ಯಕೀಯ ಫಲಿತಾಂಶಗಳ ಆಧಾರದ ಮೇಲೆ ದೇಶದಲ್ಲಿ 958 ಹೊಸ ಕೋವಿಡ್-19 ಸೋಂಕಿನ ಪ್ರಕರಣಗಳನ್ನು ನಾವು ಗುರುತಿಸಿದ್ದೇವೆ. ಒಟ್ಟು ಪ್ರಕರಣಗಳ ಸಂಖ್ಯೆ 9 ಸಾವಿರ ತಲುಪುತ್ತಿದೆ ಎಂದು ಆರೋಗ್ಯ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

‘ದುರದೃಷ್ಟವಶಾತ್ ಕಳೆದ 24 ಗಂಟೆಗಳಲ್ಲಿ 63 ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಇದರಿಂದಾಗಿ ಒಟ್ಟಾರೆ 354 ಜನ ಪ್ರಾಣ ಕಳೆದುಕೊಂಡಿದ್ದಾರೆ' ಎಂದು ಮಾಹಿತಿ ನೀಡಿದ್ದಾರೆ. ಚೀನಾ ನಂತರ ಇರಾನ್​ನಲ್ಲಿ ಕೊರೊನಾ ಸೋಂಕು ಹೆಚ್ಚು ಜನರನ್ನು ಬಲಿಪಡೆದಿದೆ.

ಇರಾನ್ ರಾಜಧಾನಿ ತೆಹ್ರಾನ್​ನಲ್ಲಿ 256 ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂದು ಮಾಹಿತಿ ನೀಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಇರಾನ್​ನಲ್ಲಿ ಶಾಲೆ, ಕಾಲೇಜು, ಹೋಟೆಲ್ ಮತ್ತು ಇತರ ಪ್ರವಾಸಿ ವಸತಿ ಸೌಕರ್ಯಗಳನ್ನು ಮುಚ್ಚಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.